• Home
  • »
  • News
  • »
  • entertainment
  • »
  • Actress Vinay Prasad: ವಿನಯ ಪ್ರಸಾದ್ ಮನೆಯಲ್ಲಿ ಕಳ್ಳತನ, ಕಳ್ಳರು ದೋಚಿದ್ದೆಷ್ಟು?

Actress Vinay Prasad: ವಿನಯ ಪ್ರಸಾದ್ ಮನೆಯಲ್ಲಿ ಕಳ್ಳತನ, ಕಳ್ಳರು ದೋಚಿದ್ದೆಷ್ಟು?

ಅಖಿಲಾಂಡೇಶ್ವರಿ ಮನೆಯಲ್ಲಿ ಕಳ್ಳತನ

ಅಖಿಲಾಂಡೇಶ್ವರಿ ಮನೆಯಲ್ಲಿ ಕಳ್ಳತನ

ನಟಿ ವಿನಯ್ ಪ್ರಸಾದ್ ಮನೆಯಲ್ಲಿ ಕಳ್ಳತನ ಆಗಿದೆ. ವಿನಯ್ ಪ್ರಸಾದ್ ಅವರು ಮನೆಗೆ ನುಗ್ಗಿದ ಕಳ್ಳರು ಬೆಡ್ ರೂಮ್‍ನಲ್ಲಿ ಇದ್ದ 7 ಸಾವಿರ ರೂಪಾಯಿ ಕದ್ದು ಪರಾರಿಯಾಗಿದ್ದಾರೆ.

  • News18 Kannada
  • Last Updated :
  • Karnataka, India
  • Share this:

    ಸ್ಯಾಂಡಲ್‍ವುಡ್ (Sandalwood) ನಟಿ ವಿನಯ ಪ್ರಸಾದ್ (Vinay Prasad) 2 ದಶಕಗಳ ಕಾಲ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡದ ಹಲವು ಸಿನಿಮಾಗಳಲ್ಲಿ ನಟಿ ಆಗಿ, ಪೋಷಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಪಾರು ಧಾರಾವಾಹಿಯಲ್ಲಿ (Serial) ಅಖಿಲಾಂಡೇಶ್ವರಿಯಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ. ತಮ್ಮ ಗತ್ತು, ಗಾಂಭಿರ್ಯದಿಂದ ಕನ್ನಡಿಗರ ಮನಸ್ಸು ಗೆಲ್ಲುವಲ್ಲಿ ಯಶಸ್ವಿ ಆಗಿದ್ದಾರೆ. ಅಖಿಲಾ ತನ್ನ ಮಕ್ಕಳನ್ನು ಒಳ್ಳೆ ರೀತಿಯಿಂದ ಬೆಳಸಿ, ಕಂಪನಿ ನಡೆಸಿಕೊಂಡು ಹೋಗುತ್ತಿದ್ದಾರೆ. ಈಗ ನಾವು ನಟಿ ವಿನಯ ಪ್ರಸಾದ್ ಬಗ್ಗೆ ಹೇಳಲು ಹೊರಟಿದ್ದೇವೆ. ವಿನಯ ಪ್ರಸಾದ್ ಮನೆಯಲ್ಲಿ ಕಳ್ಳತನ ಆಗಿದೆಯಂತೆ. ವಿನಯ ಪ್ರಸಾದ ಅವರು ಊರಿಗೆ ಹೋದಾಗ ಕಳ್ಳತನ (Theft) ನಡೆದಿದೆ.


    ವಿನಯ ಪ್ರಸಾದ್ ಮನೆಯಲ್ಲಿ ಕಳ್ಳತನ


    ನಟಿ ವಿನಯ್ ಪ್ರಸಾದ್ ಮನೆಯಲ್ಲಿ ಕಳ್ಳತನ ಆಗಿದೆ. ವಿನಯ್ ಪ್ರಸಾದ್ ಅವರು ಮನೆಗೆ ನುಗ್ಗಿದ ಕಳ್ಳರು ಬೆಡ್ ರೂಮ್‍ನಲ್ಲಿ ಇದ್ದ 7 ಸಾವಿರ ರೂಪಾಯಿ ಕದ್ದು ಪರಾರಿಯಾಗಿದ್ದಾರೆ. ಮನೆಯಲ್ಲಿ ಇನ್ನೂ ಕೆಲವು ಕಾಸ್ಟ್ಲಿ ಐಟಂಗಳು ಮಿಸ್ ಆಗಿರಬಹುದು ಎನ್ನಲಾಗಿದೆ ಕಳ್ಳತನಕ್ಕೆ ಸಂಬಂಧಿಸಿದಂತೆ ನಟಿ ವಿನಯ ಪ್ರಸಾದ್ ಅವರು ನಂದಿನಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


    ಮನೆಯಲ್ಲಿ ಯಾರು ಇಲ್ಲದಾಗ ಘಟನೆ


    ನಟಿ ವಿನಯ್ ಪ್ರಸಾದ್ ಮತ್ತು ಪತಿ ಜ್ಯೋತಿ ಪ್ರಕಾಶ್ ಅವರು ಅಕ್ಟೋಬರ್ 22 ರಂದು ತಮ್ಮ ಸ್ವಂತ ಊರು ಉಡುಪಿಗೆ ಹೋಗಿದ್ದರು. ಅಕ್ಟೋಬರ್ 26ರಂದು ಮನೆಗೆ ವಾಪಸ್ ಆಗಿದ್ದರು. ಆಗ ಮನೆಯಲ್ಲಿ ಕಳ್ಳತನ ನಡೆದಿರುವುದು ತಿಳಿದು ಬಂದಿದೆ. ಆಗ ಮನೆಯಲ್ಲಿದ್ದ ನಗದು ಮಿಸ್ ಆಗಿರುವುದು ಗೊತ್ತಾಗಿದೆ. ಅದಕ್ಕೆ ಪೊಲೀಸರಿಗೆ ದೂರು ನೀಡಿದ್ದಾರೆ.


    ಇದನ್ನೂ ಓದಿ: BBK Season 09: ಬಿಗ್‍ಬಾಸ್ ಮನೆ ಮಂದಿಗೆ ಕಿಚ್ಚ ಕ್ಲಾಸ್, ಕಳೆದ ವಾರದ್ದು ಸೇರಿಸಿ ಸುದೀಪ ಮಾತು!


    ಕಿರುತೆರೆಯಲ್ಲಿ ಮಿಂಚಿರುವ ವಿನಯ ಪ್ರಸಾದ್


    ಸಿನಿಮಾಗಳ ಜೊತೆಗೆ ವಿನಯ ಪ್ರಸಾದ್ ಅವರು ಕಿರುತೆರೆಯಲ್ಲೂ ಮಿಂಚಿದ್ದಾರೆ. ಸಾವಿತ್ರಿ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ವಿನಯ ಪ್ರಸಾದ್ ಅವರು, ಶಕ್ತಿ, ಅನುಪಮಾ, ಬಂಗಾರ, 'ಸ್ತ್ರೀ', ನಂದ ಗೋಕುಲ, ನಿತ್ಯೋತ್ಸವ, ಸುಂದರಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ಮಲಯಾಳಂನಲ್ಲೂ ಸೀರಿಯಲ್‍ಗಳಲ್ಲಿ ನಟಿಸಿದ್ದಾರೆ. ಈಗ ಪಾರು ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ.


    zee kannada serial, kannada serial, paaru serial today episode, paaru serial cast, theft in actress vinay prasad home, ಪಾರು ಧಾರಾವಾಹಿ, ಅಖಿಲಾಂಡೇಶ್ವರಿ ಮನೆಯಲ್ಲಿ ಕಳ್ಳತನ, ಜೀ ಕನ್ನಡ ಧಾರಾವಾಹಿಗಳು, kannada news, karnataka news,
    ಪಾರು ಧಾರಾವಾಹಿ


    ವಿನಯಾ ಪ್ರಸಾದ್ ದಕ್ಷಿಣ ಭಾರತ ಚಿತ್ರರಂಗದ ಪ್ರತಿಭಾನ್ವಿತ ನಟಿ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ತಮ್ಮ ನಟನೆಯಿಂದ ಛಾಪನ್ನು ಮೂಡಿಸಿರುವ ಈ ನಟಿ ಜನಿಸಿದ್ದು ಉಡುಪಿಯಲ್ಲಿ. 1988 ರಲ್ಲಿ `ಮಧ್ವಾಚಾರ್ಯ' ಚಿತ್ರದಿಂದ ಅಭಿನಯ ಆರಂಭಿಸಿದ ಇವರು ಅನಂತನಾಗ್ ರವರ `ಗಣೇಶನ ಮದುವೆ' ಚಿತ್ರದಲ್ಲಿ ಮೊದಲ ಬಾರಿಗೆ ನಟಿಯಾಗಿ ಕಾಣಿಸಿಕೊಂಡರು.


    zee kannada serial, kannada serial, paaru serial today episode, paaru serial cast, theft in actress vinay prasad home, ಪಾರು ಧಾರಾವಾಹಿ, ಅಖಿಲಾಂಡೇಶ್ವರಿ ಮನೆಯಲ್ಲಿ ಕಳ್ಳತನ, ಜೀ ಕನ್ನಡ ಧಾರಾವಾಹಿಗಳು, kannada news, karnataka news,
    ಪಾರು ಧಾರಾವಾಹಿ


    ಇದನ್ನೂ ಓದಿ: SA RI GA MA PA: ಪುನೀತ್ ಮಾಮ ಅಂದ್ರೆ ಇಷ್ಟ! ಅವರು ಬಡವರಿಗೆಲ್ಲಾ ಸಹಾಯ ಮಾಡಿದ್ರು


    ವಿನಯ ಪ್ರಸಾದ್ ವೈಯಕ್ತಿಕ ಜೀವನ
    ವಿನಯಾ ಪ್ರಸಾದ್ ಅವರು ಜಿ ವಿ ಅಯ್ಯರ್ ಅವರ ಸಿನಿಮಾ 'ಮಧ್ವಾಚಾರ್ಯ'ದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ್ದಾರೆ. ಉಡುಪಿಯಲ್ಲಿ ಕೃಷ್ಣ ಭಟ್ ಹಾಗೂ ವತ್ಸಲ ದಂಪತಿಯ ಪುತ್ರಿಯಾಗಿ ವಿನಯ ಪ್ರಸಾದ್ ಜನಿಸಿದರು. ಅಲ್ಲೇ ಓದು ಮುಗಿಸಿದ ಮತ್ತೆ ಹಿಂತಿರುಗಿ ನೋಡದ ವಿನಯಾ ಪ್ರಸಾದ್ ಒಂದಾದ ಮೇಲೆ ಒಂದು ಸಿನಿಮಾಗಳಲ್ಲಿ ನಟಿಸಿದರು.

    Published by:Savitha Savitha
    First published: