HOME » NEWS » Entertainment » THEATRES NOT READY TO REOPEN AMIDST TALKS ZP

ಬಿಗ್ ಸ್ಟಾರ್ಸ್​ಗಳ ಚಿತ್ರಗಳು ಕ್ಯೂನಲ್ಲಿ...ಥಿಯೇಟರ್ ರಿ-ಓಪನ್​ಗೆ ಯಾವಾಗ..?

ಕೆಲ ತಿಂಗಳುಗಳ ಹಿಂದೆ ಶೇ.25 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶದೊಂದಿಗೆ ಚಿತ್ರಮಂದಿರಗಳ ಬಾಗಿಲು ತೆರೆಯುವ ಪ್ರಸ್ತಾಪವೊಂದು ಮುಂದಿಡಲಾಗಿತ್ತು. ಆದರೆ ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗುವ ಚಾನ್ಸ್ ಇದ್ದ ಹಿನ್ನೆಲೆಯಲ್ಲಿ ಅದನ್ನು ಕೈ ಬಿಡಲಾಗಿತ್ತು.

news18-kannada
Updated:September 29, 2020, 4:27 PM IST
ಬಿಗ್ ಸ್ಟಾರ್ಸ್​ಗಳ ಚಿತ್ರಗಳು ಕ್ಯೂನಲ್ಲಿ...ಥಿಯೇಟರ್ ರಿ-ಓಪನ್​ಗೆ ಯಾವಾಗ..?
ಸಾಂದರ್ಭಿಕ ಚಿತ್ರ
  • Share this:
ಕೊರೋನಾ ದಿನೇ ದಿನೆ ಹೆಚ್ಚಾಗ್ತಾನೆ ಇದೆ. ಚೀನಾ ಮೇಡ್ ಈ ವೈರಸ್ ನ ಅಬ್ಬರ ಆರ್ಭಟ ಕಮ್ಮಿಯಾಗ್ತಾನೇ ಇಲ್ಲ. ಹಾಗಂತ ಬದುಕು ನಿಂತ ನೀರಲ್ಲ ಅಲ್ವಾ? ಸೋ.. ಎರಡು ತಿಂಗಳು ಕಟ್ಟುನಿಟ್ಟಿನ ಲಾಕ್ ಡೌನ್ ಮಾಡಿದ್ದ ಸರ್ಕಾರ ನಿಧಾನಕ್ಕೆ ಹಂತವಾಗಿ ಅನ್ ಲಾಕ್ ಮಾಡುತ್ತಾ ಬರುತ್ತಿದೆ. ಸದ್ಯಕ್ಕೆ ಬಹುತೇಕ ಚಟುವಟಿಕೆಗಳು ಪುನಾರಾಂಭವಾಗಿವೆ‌‌. ಆದರೆ ಸಿನಿಮಾ ಮಂದಿರ ಮಾತ್ರ ಇನ್ನೂ ಆರಂಭವಾಗಿಲ್ಲ. ಈಗ ಆಗಬಹುದು, ಆಗ ಆಗಬಹುದು ಅಂತಲೇ ಆರು ತಿಂಗಳು ಕಳೆದು ಹೋಗಿವೆ. ಸದ್ಯ ಅಕ್ಟೊಬರ್ 1 ರಿಂದವಾದರೂ ಚಿತ್ರಮಂದಿರ ರಿ-ಓಪನ್ ಗೆ ಅನುಮತಿ ಸಿಗಬಹುದಾ ಎಂಬ ನಿರೀಕ್ಷೆ ಚಿತ್ರಪ್ರೇಮಿಗಳದ್ದು ಹಾಗೂ ಚಿತ್ರೋದ್ಯಮಿಗಳದ್ದು.

ಅಂದಹಾಗೆ ಗೃಹ ಇಲಾಖೆ ಇಂದು ಸಂಜೆ ವಾರ್ತಾ ಇಲಾಖೆ ಜೊತೆ ಈ ವಿಷಯವಾಗಿ ಚರ್ಚಿಸಲಿದೆ. ಅದಾದ ನಂತರ ಚಿತ್ರಮಂದಿರ ರಿ-ಓಪನ್ ಬಗ್ಗೆ ನಿರ್ಧಾರ ಪ್ರಕಟಿಸಲಿದೆ. ಒಂದು ವೇಳೆ ಸಿನಿಮಾ ಮಂದಿರ ರಿ-ಓಪನ್ ಮಾಡಬಹುದು ಅಂತ ಆದೇಶ ಕೊಟ್ಟರೂ ಸಹ ಅಕ್ಟೊಬರ್ 1 ರಿಂದಲೇ ಥಿಯೇಟರ್ ನಲ್ಲಿ ಸಿನಿಮಾ ಪ್ರದರ್ಶನ ಆರಂಭವಾಗಿ ಬಿಡೋದಿಲ್ಲ. ಅದಕ್ಕೆ ಒಂದಷ್ಟು ಪ್ರೊಸಿಸರ್ಸ್ ಇದಾವೆ. ಅವೆಲ್ಲಾ ಕಂಪ್ಲೀಟ್ ಆಗೋಕೆ 10 ರಿಂದ 15 ದಿನಗಳು ಹಿಡಿಯುತ್ತೆ.

ಹೀಗಾಗಿ ನಾಳೆ ಆದೇಶ ಸಿಕ್ಕರೂ ಸಹ ಅಕ್ಟೊಬರ್ 3ನೇ ವಾರದ ಹೊತ್ತಿಗೆ ಚಿತ್ರಪ್ರದರ್ಶನ ಆರಂಭವಾಗಬಹುದು ಎಂಬುದು ಫಿಲಂ ಚೇಂಬರ್ ಅದ್ಯಕ್ಷ ಜೈರಾಜ್ ಅವರು ತಿಳಿಸಿದ್ದಾರೆ. ಇನ್ನು ಕೆಲ ತಿಂಗಳುಗಳ ಹಿಂದೆ ಶೇ.25 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶದೊಂದಿಗೆ ಚಿತ್ರಮಂದಿರಗಳ ಬಾಗಿಲು ತೆರೆಯುವ ಪ್ರಸ್ತಾಪವೊಂದು ಮುಂದಿಡಲಾಗಿತ್ತು. ಆದರೆ ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗುವ ಚಾನ್ಸ್ ಇದ್ದ ಹಿನ್ನೆಲೆಯಲ್ಲಿ ಅದನ್ನು ಕೈ ಬಿಡಲಾಗಿತ್ತು. ಆದರೆ ಈ ಬಾರಿ ಯಾವ ರೀತಿಯಾಗಿ ಥಿಯೇಟರ್ ಮಾರ್ಗಸೂಚಿ ಹೊರಡಿಸಲಾಗುತ್ತೋ ಎಂಬುದು ನಿರ್ಮಾಪಕರ ಮತ್ತು ಚಿತ್ರಮಂದಿರ ಮಾಲೀಕರ ಕುತೂಹಲ.

ಇನ್ನು ಈಗಾಗಲೇ ಅನೇಕ ಚಿತ್ರಗಳು ಚಿತ್ರೀಕರಣ ಪೂರೈಸಿ ಬಿಡುಗಡೆ ಹೊಸ್ತಿಲಲ್ಲಿ ನಿಂತಿವೆ. ಅವುಗಳಲ್ಲಿ ದುನಿಯಾ ವಿಜಯ್ ನಿರ್ದೇಶನದ ಸಲಗ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರಗಳು ಮುಂಚೂಣಿಯಲ್ಲಿವೆ. ಹಾಗೆಯೇ ಯುವರತ್ನ, ಕೋಟಿಗೊಬ್ಬ-3 ಚಿತ್ರಗಳ ಕೆಲಸಗಳು ಅಂತಿಮ ಹಂತದಲ್ಲಿದೆ. ಹೀಗಾಗಿ ಥಿಯೇಟರ್ ರಿ-ಓಪನ್ ಬೆನ್ನಲ್ಲೇ ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ ಸಿಗುವುದಂತು ಸತ್ಯ.

KL Rahul: ಕನ್ನಡಿಗನ ಕಮಾಲ್: ಸಿಡಿಲಬ್ಬರದ ಒಂದು ಸೆಂಚುರಿಗೆ 8 ದಾಖಲೆಗಳು ಉಡೀಸ್..!
Published by: zahir
First published: September 29, 2020, 4:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading