ತೆಲುಗು ನಟ ಬಾಲಯ್ಯ (Balaiah) ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ನಂದಮುರಿ ಬಾಲಕೃಷ್ಣ (Nandamuri Balakrishna) ಅವರ ಸಿನಿಮಾಗಳು ರಿಲೀಸ್ ಆದಾಗಲೆಲ್ಲ ಸಖತ್ ಸುದ್ದಿ ಮಾಡುತ್ತವೆ. ಈಗ ಅವರ ವೀರಸಿಂಹ ರೆಡ್ಡಿ (Veera Simha Reddy) ಸಿನಿಮಾ ರಿಲೀಸ್ ಆಗಿದ್ದು ಇದು ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲದೆ ಕರ್ನಾಟಕದಲ್ಲಿಯೂ ಭರ್ಜರಿ ಪ್ರದರ್ಶನಗಳನ್ನು ಕಾಣುತ್ತಿದೆ. ಹಾಗೆಯೇ ಈ ಸಿನಿಮಾ ರಿಲೀಸ್ ಆದ ಕೂಡಾಲೇ ವಿಜಯ್ ಹಾಗೂ ಅಜಿತ್ ಅವರ ಸಿನಿಮಾಗಳು ಕೂಡಾ ಶೋ ಕಳೆದುಕೊಂಡು ಸೈಲೆಂಟಾಗಿವೆ. ಇನ್ನು ಚಿರಂಜೀವಿ ಅಭಿನಯದ ವಾಲ್ಟೇರ್ ವೀರಯ್ಯ ಸಿನಿಮಾ ಕೂಡಾ ಅಷ್ಟಾಗಿ ಸದ್ದು ಮಾಡಿಲ್ಲ. ಆದರೆ ಬಾಲಯ್ಯ ರೇಂಜ್ ಮಾತ್ರ ಸಖತ್ತಾಗಿದೆ.
ಬಾಲಯ್ಯ ಶೋ ಅರ್ಧದಲ್ಲಿಯೇ ರದ್ದು
ಅಮೆರಿಕಾದ ಥಿಯೇಟರ್ ಒಂದರಲ್ಲಿ ಬಾಲಕೃಷ್ಣ ಅವ್ರ ಲೇಟೆಸ್ಟ್ ರಿಲೀಸ್ ವೀರಸಿಂಹ ರೆಡ್ಡಿ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ತೆಲುಗು ಸಿನಿ ಅಭಿಮಾನಿಗಳು ಭರ್ಜರಿ ಸಂಖ್ಯೆಯಲ್ಲಿ ಸಿನಿಮಾ ನೋಡುವುದಕ್ಕೆ ಥಿಯೇಟರ್ಗೆ ಬಂದಿದ್ದರು.
ಆದರೆ ಥಿಯೇಟರ್ ಮಾಲೀಕ ಸಿನಿಮಾ ಅರ್ಧ ತಲುಪುತ್ತಿದ್ದಂತೆ ಎಲ್ರೂ ಹೊರಗೆ ನಡಿಯಿರಿ, ಸಿನಿಮಾ ಮುಂದೆ ಪ್ರಸಾರ ಆಗಲ್ಲ ಅಂತ ಎಲ್ಲರನ್ನೂ ಹೊರದಬ್ಬಿದ್ದಾನೆ.
ಆಗಿದ್ದೇನು?
ತೆಲುಗು ಅಭಿಮಾನಿಗಳು ಬಾಲಯ್ಯ ಅವರ ಸಿನಿಮಾ ನೋಡೋ ಎಕ್ಸೈಟ್ಮೆಂಟ್ನಲ್ಲಿ ಭರ್ಜರಿ ಶಿಳ್ಳೆ ಹಾಕುತ್ತಾ, ಗದ್ದಲ, ಗಲಾಟೆ ಮಾಡುತ್ತಾ ಟಿಪಿಕಲ್ ಇಂಡಿಯನ್ ಸ್ಟೈಲ್ನಲ್ಲಿ ಸಿನಿಮಾ ನೋಡಿದ್ದಾರೆ. ಇಷ್ಟೂ ಸಾಲದ್ದಕ್ಕೆ ಪೇಪರ್ ಎರಚುತ್ತಾ ಸಿನಿಮಾವನ್ನು ಫುಲ್ ಲೆವೆಲ್ಗೆ ಎಂಜಾಯ್ ಮಾಡುತ್ತಿದ್ದರು. ಇದನ್ನು ನೋಡುತ್ತಲೇ ಇದ್ದ ಥಿಯೇಟರ್ ಮಾಲೀಕ ಸಿಟ್ಟಿಗೆದ್ದು ಶೋ ಕ್ಲೋಸ್ ಮಾಡಿದ್ದಾನೆ.
Balayya mass debbaki USA lo movie aaapi dengaru 🥵🥵🥵🥵#BlockBusterVeeraSimhaReddy pic.twitter.com/2Wjqn9VpMH
— Sat Ntr (@sat_ntr) January 12, 2023
ಚನ್ನಕೇಶವ ರೆಡ್ಡಿ ಎಂಬ ವ್ಯಕ್ತಿ ಬಾಲಯ್ಯ ಅವರ ಸಿನಿಮಾ ಶೋ ಆಯೋಜಿಸಿದ್ದರು ಎನ್ನಲಾಗಿದೆ. ಅವರೇ ಎಲ್ಲಾ ಟಿಕೆಟ್ಳನ್ನೂ ಖರೀದಿಸಿದ್ದರು ಎನ್ನಲಾಗಿದೆ. ಆದರೆ ಪ್ರೇಕ್ಷಕರಿಂದಾಗಿ ಸಿನಿಮಾ ಅರ್ಧದಲ್ಲಿಯೇ ಮೊಟಕಾಗಿದೆ.
ಥಿಯೇಟರ್ನಿಂದ ಹೊರಬಂದ ಜನ
ಥಿಯೇಟರ್ ಮಾಲೀಕ ಎಲ್ಲರನ್ನೂ ಹೊರಗೆ ಕಳಿಸಿ ಶೋ ಬಂದ್ ಮಾಡಿದಾಗ ಅನಿವಾರ್ಯವಾಗಿ ಸಿನಿಪ್ರೇಕ್ಷಕರೆಲ್ಲ ಗೊಣಗುತ್ತಾ ಥಿಯೇಟರ್ನಿಂದ ಹೊರಗೆ ಬಂದಿದ್ದಾರೆ. ಆನ್ಲೈನ್ನಲ್ಲಿ ಹೌಸ್ಫುಲ್ ಎಂದು ಟಿಕೆಟ್ ಸೋಲ್ಡ್ ಔಟ್ ಎಂದು ತೋರಿಸಿದರೂ ಕೂಡಾ ಥಿಯೇಟರ್ ಒಳಗೆ ಎಲ್ಲ ಸೀಟ್ಗಳು ಖಾಲಿ ಇದ್ದವು. ಯಾರಿಗೂ ಸಿನಿಮಾ ನೋಡಲು ಅವಕಾಶವೇ ಸಿಕ್ಕಿಲ್ಲ.
ಇದನ್ನೂ ಓದಿ: Veera Simha Reddy: ವಿಜಯ್, ಅಜಿತ್ ಸಿನಿಮಾಗೆ ಸೆಡ್ಡು ಹೊಡೆದ ಬಾಲಯ್ಯ ಸಿನಿಮಾ! ಫಸ್ಟ್ ಡೇ ಕಲೆಕ್ಷನ್ ಎಷ್ಟು?
ವೀರಸಿಂಹ ರೆಡ್ಡಿ ಸಿನಿಮಾ ಕರ್ನಾಟಕದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ನಂದಮುರಿ ಬಾಲಕೃಷ್ಣ ಅವರ ಸಿನಿಮಾ ಮೊದಲ ದಿನ ಭರ್ಜರಿ ಓಪನಿಂಗ್ ಕಂಡಿದೆ. ಗುರುವಾರ ರಿಲೀಸ್ ಆದ ದಿನವೇ ಸಿನಿಮಾ 32 ಕೋಟಿ ಕಲೆಕ್ಷನ್ ಮಾಡಿದೆ. ತೆಲುಗು ಸಿನಿಮಾ ವಿಜಯ್ ಅಭಿನಯದ ವಾರಿಸು ಹಾಗೂ ಅಜಿತ್ ಅವರ ತುನಿವು ಸಿನಿಮಾದ ಟೋಟಲ್ ಕಲೆಕ್ಷನ್ ಬೀಟ್ ಮಾಡಿ ಮುನ್ನುಗ್ಗುತ್ತಿದೆ.
ವೀರಸಿಂಹ ರೆಡ್ಡಿ ಸಿನಿಮಾ ಸುಮಾರು 67 ಶೇಕಡ ಒಕ್ಯುಪೆನ್ಸಿ ಪಡೆದಿದ್ದು ಸಕ್ಸಸ್ಫುಲ್ ಆಗಿ ಓಡುತ್ತಿದೆ. ವೀರಸಿಂಹ ರೆಡ್ಡಿ ಸಿನಿಮಾ ಮೊದಲ ದಿನ 32 ಕೋಟಿ ಗಳಿಸಿದೆ ಎನ್ನಲಾಗಿದೆ. ವಾರಿಸು ಸಿನಿಮಾ 26.5 ಕೋಟಿ ಗಳಿಸಿದ್ದು ತುನಿವು ಸಿನಿಮಾ ಕೂಡಾ 26 ಕೋಟಿ ಗಳಿಸಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ