HOME » NEWS » Entertainment » THEATER MIGHT OPEN UP FROM JULY SAYS CENTRAL CABINET MINISTER RMD

ಚಿತ್ರಮಂದಿರ ಎಂದಿನಿಂದ ಓಪನ್?; ಈ ಪ್ರಶ್ನೆಗೆ ಕೇಂದ್ರ ಸಚಿವರು ಕೊಟ್ಟರು ಉತ್ತರ

ಇತ್ತೀಚೆಗೆ ಕೇಂದ್ರ ಸಚಿವರೊಬ್ಬರು ಕೆಲವು ಸಿನಿಮಾ ಪ್ರದರ್ಶಕರ ಜೊತೆ ವಿಡಿಯೋ ಕಾನ್ಫರೆನ್ಸ್​ ನಡೆಸಿದ್ದಾರೆ. ಈ ವೇಳೆ ಸಿನಿಮಾ ಪ್ರದರ್ಶನದ ಕುರಿತು ಮಾತುಕತೆ ನಡೆಸಿದ್ದಾರೆ.

news18-kannada
Updated:June 9, 2020, 1:20 PM IST
ಚಿತ್ರಮಂದಿರ ಎಂದಿನಿಂದ ಓಪನ್?; ಈ ಪ್ರಶ್ನೆಗೆ ಕೇಂದ್ರ ಸಚಿವರು ಕೊಟ್ಟರು ಉತ್ತರ
ಸಾಂದರ್ಭಿಕ ಚಿತ್ರ
  • Share this:
ಎರಡು ತಿಂಗಳ ಲಾಕ್​ಡೌನ್​ ಪೂರ್ಣಗೊಂಡಿದ್ದು, ಈಗ ಅನ್​ಲಾಕ್​ 1.0 ಜಾರಿಗೆ ಬಂದಿದೆ. ಈಗ ಮಾಲ್​, ದೇವಸ್ಥಾನ ಸೇರಿ ಬಹುತೇಕ ಎಲ್ಲವೂ ಪುನರಾರಂಭಗೊಂಡಿವೆ. ಆದರೆ, ಚಿತ್ರಮಂದಿರಗಳಿಗೆ ಬಿದ್ದ ಬೀಗ ಮಾತ್ರ ಇನ್ನೂ ತೆಗೆದಿಲ್ಲ. ಹೀಗಾಗಿ ಥಿಯೇಟರ್​ಗಳು ಎಂದಿನಿಂದ ಓಪನ್​ ಎನ್ನುವ ಪ್ರಶ್ನೆ ಅನೇಕರಲ್ಲಿತ್ತು. ಇದಕ್ಕೆ ಈಗ ಹಿರಿಯ ಕೇಂದ್ರ ಸಚಿವರೊಬ್ಬರು ಉತ್ತರ ನೀಡಿದ್ದಾರೆ.

ದೇಶದಲ್ಲಿ ಕೊರೋನಾ ವೈರಸ್​ ಹೆಚ್ಚುತ್ತಿರುವ ನಡುವೆಯೋ ಎಲ್ಲ ಆರ್ಥಿಕ ಚಟುವಟಿಕೆಗಳಿಗೆ ಅನುವು ಮಾಡಿಕೊಡಲಾಗಿದೆ. ಇನ್ನು, ಜುಲೈನಿಂದ ಚಿತ್ರಮಂದಿರ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ಇತ್ತೀಚೆಗೆ ಕೇಂದ್ರ ಸಚಿವರೊಬ್ಬರು ಕೆಲವು ಸಿನಿಮಾ ಪ್ರದರ್ಶಕರ ಜೊತೆ ವಿಡಿಯೋ ಕಾನ್ಫರೆನ್ಸ್​ ನಡೆಸಿದ್ದಾರೆ. ಈ ವೇಳೆ ಜುಲೈ ತಿಂಗಳಿಂದ ಸಿನಿಮಾ ಪ್ರದರ್ಶನಕ್ಕೆ ಅನುವು ಮಾಡಿಕೊಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಸಿನಿಮಾ ಪ್ರದರ್ಶನದ ವೇಳೆ ಪ್ರೇಕ್ಷಕರು ಕಟ್ಟು ನಿಟ್ಟಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅಲ್ಲದೆ, ಕೇಂದ್ರ ಸರ್ಕಾರ ನೀಡುವ ಎಲ್ಲ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದ್ದಾರೆ. ಇದಕ್ಕೆ ಎಲ್ಲ ಸಿನಿಮಾ ಪ್ರದರ್ಶಕರ ಒಕ್ಕೂಟ ಒಪ್ಪಿಗೆ ಸೂಚಿಸಿದೆ.

ಇದನ್ನೂ ಓದಿ: ನೀಲಿ ತಾರೆ ಆಗಲು 25ನೇ ವಯಸ್ಸಿಗೆ ವೃತ್ತಿಜೀವನವನ್ನೇ ತ್ಯಜಿಸಿದ ಖ್ಯಾತ ಕಾರ್ ರೇಸರ್

ಮೇ 30ರಿಂದ ಭಾರತದಲ್ಲಿ ಪ್ರತಿನಿತ್ಯ 8 ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗಲು ಆರಂಭಿಸಿದವು. ಜೂನ್‌ 3ರಿಂದ ದಿನವೊಂದರಲ್ಲಿ 9 ಸಾವಿರಕ್ಕೂ ಅಧಿಕ ಪ್ರಕರಣಗಳು ಗೋಚರಿಸಲು ಆರಂಭವಾದವು. ಈ ವಾರವೂ ಅದೇ ಟ್ರೆಂಡ್ ಮುಂದುವರೆದಿದೆ.  ಸೋಮವಾರ ಮತ್ತೆ 9,987 ಪ್ರಕರಣಗಳು ಕಂಡುಬಂದಿವೆ. ಇದರಿಂದ ದೇಶದ ಕೊರೋನಾ ವೈರಸ್ ಪೀಡಿತರ ಸಂಖ್ಯೆ 2,66,598ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ಕೇಂದ್ರ ಸರ್ಕಾರ ಚಿತ್ರಮಂದಿರ ಓಪನ್​ ಮಾಡಲು ಮುಂದಾಗಿದೆ.
First published: June 9, 2020, 1:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories