ಬಹು ನಿರೀಕ್ಷಿತ ಜೇಮ್ಸ್ ಬಾಂಡ್ ಚಿತ್ರ 'ನೋ ಟೈಮ್ ಟು ಡೈ' (No Time To Die) ವಿಶ್ವದಾದ್ಯಂತ ಸೆಪ್ಟೆಂಬರ್ 30 ಅಂದರೆ ಇಂದು ಬಿಡುಗಡೆಯಾಗಿದೆ. ಇದು ನಟ ಡೇನಿಯಲ್ ಕ್ರೇಗ್ (Daniel Craig) ಬ್ರಿಟಿಷ್ ಸ್ಪೈ ಏಜೆಂಟ್ 007 ಆಗಿ ಐದನೇ ಮತ್ತು ಕೊನೆಯ ಚಿತ್ರವಾಗಿದೆ.ಈ ಆ್ಯಕ್ಷನ್ ಸಿನಿಮಾದಲ್ಲಿ ಆಸ್ಕರ್ ವಿಜೇತ ರಾಮಿ ಮಾಲೆಕ್, ಹೊಸ ಎಂಟ್ರಿಯರಾದ ಲಶನಾ ಲಿಂಚ್ ಮತ್ತು ಅನಾ ಡಿ ಅರ್ಮಾಸ್ ಹಾಗೂ ಬಾಂಡ್ ಚಿತ್ರಗಳಲ್ಲಿ ಈ ಹಿಂದೆ ನಟಿಸಿದ್ದ ರಾಲ್ಫ್ ಫಿಯೆನ್ನೆಸ್, ಲೀ ಸೇಡೌಕ್ಸ್, ಬೆನ್ ವಿಷಾ, ಜೆಫ್ರಿ ರೈಟ್ ಇತರ ತಾರೆಯರೊಂದಿಗೆ ಡೇನಿಯಲ್ ಕ್ರೇಗ್ ನಟಿಸಿದ್ದಾರೆ. ಜೇಮ್ಸ್ ಬಾಂಡ್ ಚಲನಚಿತ್ರಗಳು ಆ್ಯಕ್ಷನ್ ಜತೆಗೆ ತಮ್ಮ ಬಿಸಿ ಬಿಸಿ ದೃಶ್ಯಗಳಿಗೂ ಹೆಸರುವಾಸಿಯಾಗಿವೆ.
ಭಾರತದಲ್ಲಿ ಬಿಡುಗಡೆಗೂ ಮುನ್ನ, ಸೆಂಟ್ರಲ್ ಬ್ಯೂರೋ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) 'ನೋ ಟೈಮ್ ಟು ಡೈ' ಸಿನಿಮಾ ವೀಕ್ಷಿಸಿದೆ. ಅಲ್ಲದೆ ಈ ಸಿನಿಮಾದಲ್ಲಿನ ಯಾವುದೇ ದೃಶ್ಯವನ್ನು ಕಡಿತಗೊಳಿಸಿಲ್ಲವಂತೆ. ಅಂದರೆ, ವಿಶ್ವದಾದ್ಯಂತ ಬಿಡುಗಡೆಯಾಗಿರುವ ಈ ಚಿತ್ರ ಚುಂಬನದ ದೃಶ್ಯಗಳನ್ನೂ ಒಳಗೊಂಡಿದ್ದು, CBFC ಈ ದೃಶ್ಯಗಳಿಗೆ ಯಾವುದೇ ಕತ್ತರಿ ಹಾಕಿಲ್ಲವಂತೆ
"ನೋ ಟೈಮ್ ಟು ಡೈ ಚಿತ್ರಕ್ಕೆ ಝೀರೋ ಕಟ್‌ಗಳೊಂದಿಗೆ ರಿಲೀಸ್ ಮಾಡಲು ಒಪ್ಪಿಗೆ ನೀಡಲಾಗಿದೆ. ಚಿತ್ರದಲ್ಲಿ ಕೆಲವು ಹಿಂಸೆ ಮತ್ತು ಕೆಲವು ಹಸಿಬಿಸಿ ದೃಶ್ಯಗಳಿವೆ. ಆದರೆ CBFC ಈ ಬಾರಿ ಯಾವುದೇ ಅಜಾಗರೂಕ ಕಡಿತವನ್ನು ಕೇಳಲಿಲ್ಲ. CBFC ಪರೀಕ್ಷಾ ಸಮಿತಿಯು ಆ ದೃಶ್ಯಗಳ ಸನ್ನಿವೇಶವನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ಮತ್ತು ಕಳೆದ ಬಾರಿಗಿಂತ ಭಿನ್ನವಾಗಿ ಯಾವುದೇ ಅನ್ಯಾಯದ ಬೇಡಿಕೆಗಳನ್ನು ಮಾಡದಿರುವುದಕ್ಕೆ ಸ್ಟುಡಿಯೋ ತುಂಬಾ ಸಂತೋಷವಾಯಿತು'' ಎಂದು ಬಾಲಿವುಡ್ ಹಂಗಾಮ ಮಾಡಿರುವ ವರದಿಯಲ್ಲಿ ಈ ಹೇಳಿಕೆಯನ್ನು ಉಲ್ಲೇಖಿಸಿದೆ.
ಇದನ್ನೂ ಓದಿ: ನಾಳೆ ರಿಲೀಸ್ ಆಗಲಿದೆ No Time to Die: Daniel Craig ನಂತರ ಜೇಮ್ಸ್ ಬಾಂಡ್ ಪಾತ್ರ ಮಾಡೋದು ಯಾರು..?
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ 'ನೋ ಟೈಮ್ ಟು ಡೈ' ಹಲವಾರು ವಿಳಂಬಗಳನ್ನು ಎದುರಿಸಿದೆ. ಇನ್ನು, ಬಾಂಡ್ ಸರಣಿ ಚಿತ್ರಗಳ ಸ್ಟಾರ್ ಡೇನಿಯಲ್ ಕ್ರೇಗ್ ಈ ಸರಣಿಯ ಚಿತ್ರಗಳಿಗೆ ವಿದಾಯ ಹೇಳಿದ್ದು, "ತುಂಬಾ ಭಾವನಾತ್ಮಕವಾಗಿದೆ" ಎಂದು ಹಂಚಿಕೊಂಡಿದ್ದಾರೆ.
"ಇದು ಎಲ್ಲವೂ ಆಗಿದೆ. 16 ವರ್ಷಗಳಿಂದ ನನ್ನ ಜೀವನಕ್ಕೆ ಇದು ತುಂಬಾ ಹತ್ತಿರವಾಗಿದೆ. ಮತ್ತು ಈ ಚಿತ್ರಗಳನ್ನು ಮಾಡುವುದು ನಂಬಲಸಾಧ್ಯವಾಗಿದೆ. ಬಾಂಡ್ ಚಲನಚಿತ್ರಗಳು ಆಗಾಗ್ಗೆ ಮಾಡಲ್ಪಡುವುದಿಲ್ಲ. ಆದ್ದರಿಂದ ಈ ಅವಕಾಶವು ನನ್ನ ವೃತ್ತಿಪರ ವೃತ್ತಿಜೀವನದ ಅತ್ಯಂತ ದೊಡ್ಡ ವಿಷಯವಾಗಿದೆ. ಅಲ್ಲದೆ, ನನ್ನ ಜೀವನದ ದೊಡ್ಡ ವಿಷಯಗಳಲ್ಲಿಯೂ ಒಂದಾಗಿದೆ. ಆದ್ದರಿಂದ ಇದು ತುಂಬಾ ಭಾವನಾತ್ಮಕವಾಗಿದೆ. ನನ್ನ ಷರತ್ತುಗಳ ಮೇರೆಗೆ ನಾನು ಅದನ್ನು ಮುಕ್ತಾಯಗೊಳಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಅದನ್ನು ಮಾಡಲು ನನಗೆ ಅವಕಾಶ ನೀಡಿದ ನಿರ್ಮಾಪಕರಿಗೆ ನಾನು ಕೃತಜ್ಞನಾಗಿದ್ದೇನೆ. ಆದರೆ ನಾನು ಇದನ್ನು ಮಿಸ್ ಮಾಡಿಕೊಳ್ಳುತ್ತೇನೆ'' ಎಂದೂ ಜೇಮ್ಸ್ ಬಾಂಡ್ ಸರಣಿಯ ಚಿತ್ರಗಳಿಂದ ದೂರ ಸರಿಯುತ್ತಿರುವುದರ ಬಗ್ಗೆ ಹಾಲಿವುಡ್ ನಟ ಡೇನಿಯಲ್ ಕ್ರೇಗ್ ಭಾವನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಮುಂದೆ ಬಾಂಡ್ ಸರಣಿ ಸಿನಿಮಾಗಳಲ್ಲಿ ಯಾರು ಹೊಸ ಬಾಂಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಪ್ರಶ್ನೆ ಸಿನಿಪ್ರಿಯರಲ್ಲಿ ಕಾಡುತ್ತಿದೆ. ಈ ಪಾತ್ರಕ್ಕೆ ಈಗಾಗಲೇ ಆಯ್ಕೆ ಮಾಡಲಾಗಿದ್ದು, ಅದು ವೆನಮ್ ಸಿನಿಮಾ ನಾಯಕ ಟಾಮ್ ಹಾರ್ಡಿ ಎಂದೂ ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ