ಮೊದಲು ನಾನು ಯಾರೆಂದು ಗೊತ್ತಿರಲಿಲ್ಲ, ಈಗ ನನ್ನ ಎಂಟ್ರಿಗೆ ಶಿಳ್ಳೆ ಹೊಡೆಯುತ್ತಿದ್ದಾರೆ; ‘ಕೆಜಿಎಫ್​’ ಚಿತ್ರದ ಯಶಸ್ಸಿಗೆ ಯಶ್​ ಖುಷ್​

ಕನ್ನಡ ಚಿತ್ರರಂಗ ಇಷ್ಟು ದಿನ ತೆರೆಮರೆಯ ಕಾಯಿಯಂತಿತ್ತು. ಆದರೆ ಈಗ ನಾವು ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಇದು ಹೀಗೆಯೇ ಮುಂದುವರಿಯಬೇಕು ಎಂದು”  ಆಶಿಸಿದರು ಯಶ್​.

Rajesh Duggumane | news18
Updated:December 26, 2018, 2:09 PM IST
ಮೊದಲು ನಾನು ಯಾರೆಂದು ಗೊತ್ತಿರಲಿಲ್ಲ, ಈಗ ನನ್ನ ಎಂಟ್ರಿಗೆ ಶಿಳ್ಳೆ ಹೊಡೆಯುತ್ತಿದ್ದಾರೆ; ‘ಕೆಜಿಎಫ್​’ ಚಿತ್ರದ ಯಶಸ್ಸಿಗೆ ಯಶ್​ ಖುಷ್​
ಯಶ್​
  • News18
  • Last Updated: December 26, 2018, 2:09 PM IST
  • Share this:
‘ಕೆಜಿಎಫ್​’ ಚಿತ್ರಕ್ಕೆ ಬಾಲಿವುಡ್​ ಮಂದಿ ಮನ ಸೋತಿದ್ದಾರೆ. ಕನ್ನಡದ ಚಿತ್ರವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದಕ್ಕೆ ಯಶ್​ ಖುಷಿ ದುಪಟ್ಟಾಗಿದೆ. ಉತ್ತರ ಭಾರತದ ಅನೇಕರು ಗೂಗಲ್​ನಲ್ಲಿ ಯಶ್​ ಬಗ್ಗೆ ಒಂದಷ್ಟು ಮಾಹಿತಿ ತಿಳಿದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಯಶ್​ ಸಂತಸ ಹಂಚಿಕೊಂಡಿದ್ದಾರೆ.

‘ಶಾರುಖ್​ ಖಾನ್​ ನಟನೆಯ 'ಝೀರೋ' ಚಿತ್ರಕ್ಕಿಂತ ನಮ್ಮ ಸಿನಿಮಾ ಚೆನ್ನಾಗಿ ಓಡುತ್ತಿದೆ ಎಂದು ನಾನು ಹೇಳುವುದಿಲ್ಲ. ಎರಡೂ ಚಿತ್ರಗಳು ಯಶಸ್ಸು ಕಾಣಲಿ ಎಂದೇ ನಾನು ಹಾರೈಸುತ್ತೇನೆ. ಉತ್ತರ ಭಾರತದಿಂದ ಚಿತ್ರಕ್ಕೆ ಇಷ್ಟು ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿರುವುದಕ್ಕೆ ನಿಜಕ್ಕೂ ಖುಷಿಯಾಗುತ್ತಿದೆ. ‘ಕೆಜಿಎಫ್’ ರಿಲೀಸ್​ಗೂ ಮೊದಲು ಯಶ್​ ಯಾರು ಎಂಬುದೇ ಉತ್ತರ ಭಾರತದವರಿಗೆ ಗೊತ್ತಿರಲಿಲ್ಲ. ಆದರೆ, ಈಗ ನನ್ನ ಎಂಟ್ರಿಗೆ ಅವರು ಶಿಳ್ಳೆ ಹೊಡೆಯುತ್ತಿದ್ದಾರೆ. ಇದಕ್ಕಿಂತ ಖುಷಿಯ ವಿಚಾರ ಮತ್ತೇನಿದೆ” ಎಂದು ಯಶ್​ ಪ್ರಶ್ನಿಸಿದ್ದಾರೆ.

ಇದನ್ನು ಓದಿ: 'ಬಾಹುಬಲಿ 2' ದಾಖಲೆಯನ್ನು ಮುರಿಯಲಿದೆ 'ಕೆಜಿಎಫ್'​; ಎಲ್ಲೆಲ್ಲೂ ಅಣ್ತಮ್ಮಂದೇ ಹವಾ  

ಕನ್ನಡ ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಬೇಕು ಎನ್ನುವ ಕನಸು ಯಶ್​ ಅವರದ್ದಾಗಿತ್ತು. ‘ಕೆಜಿಎಫ್​’ ಚಿತ್ರದ ಮೂಲಕ ಕನಸನ್ನು ನನಸು ಮಾಡಿಕೊಂಡ ಖುಷಿಯಲ್ಲಿದ್ದಾರೆ ಅವರು. “ಕನ್ನಡ ಚಿತ್ರರಂಗ ಇಷ್ಟು ದಿನ ತೆರೆಮರೆಯ ಕಾಯಿಯಂತಿತ್ತು. ಆದರೆ ಈಗ ನಾವು ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಇದು ಹೀಗೆಯೇ ಮುಂದುವರಿಯಬೇಕು ಎಂದು”  ಆಶಿಸಿದರು ಯಶ್​.

‘ಕೆಜಿಎಫ್​’ ಡಬ್​ ಸಿನಿಮಾ ಎಂದು ಯಾರೂ ಭಾವಿಸಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು ಯಶ್​. “ನಾವು ಪ್ರತಿ ಭಾಷೆಯಲ್ಲಿ ಡಬ್​ ಮಾಡುವಾಗ ಅಲ್ಲಿನ ಭಾಷಾ ಸಂಸ್ಕೃತಿ, ಪದಗಳ ಉಚ್ಚಾರಣೆ, ಲಿಪ್​ಸಿಂಕ್​ ಇವೆಲ್ಲವನ್ನೂ ಗಮನಿಸಿದ್ದೆವು. ಹಾಗಾಗಿ ‘ಕೆಜಿಎಫ್​’ ಡಬ್ಬಿಂಗ್ ಸಿನಿಮಾ ಎನ್ನುವ ಭಾವನೆ ಯಾರಿಗೂ ಕಾಡಲಿಲ್ಲ” ಎಂದರು ಯಶ್​.

ಇದನ್ನು ಓದಿ: ಒಂದೇ ಚಿತ್ರದಲ್ಲಿ ಯಶ್-ಪ್ರಭಾಸ್; ಖ್ಯಾತ ಬಾಲಿವುಡ್​ ನಿರ್ದೇಶಕನ ಸಿನಿಮಾದಲ್ಲಿ ದಕ್ಷಿಣ ಭಾರತದ ನಟರು?

First published: December 26, 2018, 2:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading