ದಿ ವಿಲನ್​ ಸಿನಿಮಾ ತೆರೆಗೆ ದಿನಾಂಕ ಫಿಕ್ಸ್​: ಆರಂಭವಾಗಲಿದೆ ಅಡ್ವಾನ್ಸ್​ ಟಿಕೆಟ್​ ಬುಕಿಂಗ್​..!

news18
Updated:September 3, 2018, 4:05 PM IST
ದಿ ವಿಲನ್​ ಸಿನಿಮಾ ತೆರೆಗೆ ದಿನಾಂಕ ಫಿಕ್ಸ್​: ಆರಂಭವಾಗಲಿದೆ ಅಡ್ವಾನ್ಸ್​ ಟಿಕೆಟ್​ ಬುಕಿಂಗ್​..!
news18
Updated: September 3, 2018, 4:05 PM IST
ನ್ಯೂಸ್​ 18 ಕನ್ನಡ 

ಜೋಗಿ ಪ್ರೇಮ್, 'ಜೋಗಿ' ಸಿನಿಮಾ ಆದ ಮೇಲೆ ಅಂತಹ ಹಿಟ್ ಕೊಡಲಿಲ್ಲ ಅನ್ನೋದು ಬಿಟ್ಟರೆ, ಅವರ ಹೆಸರಿಗಿರುವ ಕ್ರೇಜ್​ ಮಾತ್ರ ಒಂಚೂರು ಕಮ್ಮಿಯಾಗಿಲ್ಲ. ಹೀಗಾಗಿಯೇ ಅವರ ಬಹು ನಿರೀಕ್ಷಿತ ಸಿನಿಮಾ `ದಿ ವಿಲನ್'ಗೆ ಸಖತ್​ ಕ್ರೇಜ್​ ಇದೆ. ಅದರಲ್ಲೂ ಚಂದನವನದ ದಿಗ್ಗಜರಾದ ಶಿವಣ್ಣ ಹಾಗೂ ಸುದೀಪ್​  ಈ ಸಿನಿಮಾದಲ್ಲಿ ಅಭಿನಯಿಸಿರೋದು ಚಿತ್ರಕ್ಕೆ ಮತ್ತಷ್ಟು ಬಲ ತಂದುಕೊಟ್ಟಿದೆ. ಈ ಎಲ್ಲ ಕಾರಣಗಳಿಂದಾಗಿಯೇ ಪ್ರೇಮ್​ ಅವರ ಈ ಸಿನಿಮಾದಿಂದಾಗಿ ರಾಜ್ಯದಲ್ಲಿ `ದಿ ವಿಲನ್' ಮೇನಿಯಾ ಆರಂಭವಾಗಿದೆ.

ಶಿವಣ್ಣ-ಸುದೀಪ್ ಅಭಿಮಾನಿಗಳು `ದಿ ವಿಲನ್' ರಿಲೀಸ್ ದಿನಾಂಕಕ್ಕಾಗಿ ಪ್ರತಿದಿನ ಕ್ಯಾಲೆಂಡರ್ ನೋಡುವಂತಾಗಿದೆ. ಚಿತ್ರ ಪ್ರೇಮಿಗಳ ಕಾಯುವಿಕೆಗೊಂದು ಕೊನೆ ಬೀಳುವ ಸೂಚನೆಯಂತೆ ` ದಿ ವಿಲನ್' ಚಿತ್ರದ ಎಲ್ಲ ಕೆಲಸಗಳು ಮುಗಿದಿವೆ. ಹಾಗೆ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ಸಹ ಸಿಕ್ಕಾಗಿದೆ. ಸೆನ್ಸಾರ್‍ನಲ್ಲಿ `ಎ' ಸೆರ್ಟಿಫಿಕೇಟ್ ಸಿಕ್ಕಿದ್ದು, ಇದರಿಂದ ಪ್ರೇಮ್​ಗೆ ನಿರಾಶೆಯಾಗಿದೆಯಂತೆ. ಆದರೂ ಸಿನಿಮಾ ಸದ್ಯದಲ್ಲೇ ತೆರೆ ಕಾಣಲಿದ್ದು, ಸದ್ಯದಲ್ಲೇ ಸಿನಿಮಾದ ಅಡ್ವಾನ್ಸ್​ ಟಿಕೆಟ್​ ಬುಕಿಂಗ್​ ದಿನಾಂಕ ಪ್ರಕಟಿಸುವುದಾಗಿ ಪ್ರೇಮ್​ ಟ್ವೀಟ್​ ಮಾಡಿದ್ದಾರೆ.

ಈಗ ಇನ್ನೇನು `ದಿ ವಿಲನ್' ಚಿತ್ರದ ರಿಲೀಸ್​ ದಿನಾಂಕ ಪ್ರಕಟಿಸುವುದು ಒಂದೇ ಬಾಕಿ ಎನ್ನುವ ಹಾಗಿದೆ ಪರಿಸ್ಥಿತಿ.  ಹೀಗಾಗಿ ಚಿತ್ರಪ್ರೇಮಿಗಳು ಈಗಿನಿಂದಲೇ ಸಂಭ್ರಮಾಚರಣೆ ಆರಂಭಿಸಿದ್ದಾರೆ. ಅದಕ್ಕೆ ಮುನ್ನುಡಿಯಾಗಿ ಚನ್ನಪಟ್ಟಣದ ಲಕ್ಷ್ಮಿ ಚಿತ್ರ ಮಂದಿರದಿಂದ ಸಂಭ್ರಮಾಚರಣೆ ಆರಂಭವಾಗಿದ್ದು, ಚಿತ್ರದ ಪೋಸ್ಟರ್​ಗೆ ಆರತಿ ಎತ್ತಿ ಸಂಭ್ರಮಿಸಲಾಗಿದೆ.ಪ್ರೇಮ್ ನಿರ್ದೇಶನದ ಯಾವುದೇ ಸಿನಿಮಾ ತೆರೆ ಕಾಣಲಿ ಮೂರು ದಿನ ಮುನ್ನವೇ ಮುಂಗಡವಾಗಿ ಟಿಕೆಟ್​ ಬುಕಿಂಗ್ ಶುರುವಾಗೋದು ಸಾಮಾನ್ಯ. ಆದರೆ ಈ ಬಾರಿ ಒಂದು ವಾರಕ್ಕೂ ಮುಂಚೆನೇ `ದಿ ವಿಲನ್' ಚಿತ್ರದ ಟಿಕೆಟ್ ಕೊಡಲು ಕೌಂಟರ್ ತೆರೆಯಲಿದೆಯಂಯೆ. ಸದ್ಯದ ಮಾಹಿತಿ ಪ್ರಕಾರ `ದಿ ವಿಲನ್' ಸಿನಿಮಾ ಸೆಪ್ಟೆಂಬರ್ ಮೂರನೇ ವಾರ ತೆರೆಗಪ್ಪಳಿಸೋದು  99% ಖಚಿತ ಎಂದೇ ಹೇಳಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಪ್ರೇಮ್​ ಸಹ ಸಿನಿಮಾ ಸೆಪ್ಟೆಂಬರ್​ನಲ್ಲೇ ತೆರೆ ಕಾಣಲಿದೆ ಎಂದು ತಮ್ಮ ಟ್ವಿಟರ್ ಖಾತೆಯನಲ್ಲಿ ಬರೆದುಕೊಂಡಿದ್ದಾರೆ.

SNEHAKKE INNONDU HESARE KICHCHA!ಗಣೇಶನ ಹಬ್ಬದಿಂದಲೇ ಎಲ್ಲ ಕಡೆ ಟಿಕೆಟ್ ವಿತರಣೆ ಆರಂಭವಾಗಲಿದೆ ಎನ್ನುತ್ತಿವೆ ಬಲ್ಲ ಮೂಲಗಳು. ಅಲ್ಲಿಗೆ ಶಿವಣ್ಣ-ಸುದೀಪ್ ಅಭಿಮಾನಿಗಳಿಗೆ ಹಬ್ಬಕ್ಕೆ ಹೆಚ್ಚುವರಿ ಬೋನಸ್‍ನಂತೆ 'ದಿ ವಿಲನ್' ಟಿಕೆಟ್ ಮುಂಗಡ ಕಾಯ್ದಿರಿಸೋ ಅವಕಾಶ ಸಿಗಬಹುದು.

 

 

 
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...