ಇನ್ನೊಂದು ತಿಂಗಳಿನಲ್ಲಿ ತೆರೆ ಕಾಣಲಿದೆಯಾ ಬಹು ನಿರೀಕ್ಷಿತ ಸಿನಿಮಾ 'ದಿ ವಿಲನ್​'?

Anitha E | news18
Updated:July 7, 2018, 5:44 PM IST
ಇನ್ನೊಂದು ತಿಂಗಳಿನಲ್ಲಿ ತೆರೆ ಕಾಣಲಿದೆಯಾ ಬಹು ನಿರೀಕ್ಷಿತ ಸಿನಿಮಾ 'ದಿ ವಿಲನ್​'?
Anitha E | news18
Updated: July 7, 2018, 5:44 PM IST
ಆನಂದ್ ಸಾಲುಂಡಿ, ನ್ಯೂಸ್ 18 ಕನ್ನಡ

`ದಿ ವಿಲನ್' ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷಿತ ಸಿನಿಮಾ. ಶಿವರಾಜ್​ಕುಮಾರ್ - ಸುದೀಪ್ ನಟನೆ, ಹ್ಯಾಟ್ರಿಕ್ ಡೈರೆಕ್ಟರ್ ಪ್ರೇಮ್ ನಿರ್ದೇಶನದ ಸಿನಿಮಾ ಅನ್ನೋದೆ ಈ ಚಿತ್ರದ ಮೇಲಿನ ಎಲ್ಲ ನಿರೀಕ್ಷೆಗಳಿಗೂ ಕಾರಣ. ಇದೇ ಕಾರಣಕ್ಕಾಗಿ `ದಿ ವಿಲನ್' ಚಿತ್ರ ಯಾವಾಗ ಪ್ರಕಟವಾಯಿತೋ ಆಯಿತೋ ಆಗಲೇ ಚಿತ್ರ ಪ್ರೇಮಿಗಳು ಥಿಯೇಟರ್​ನಲ್ಲಿ ಈ ಚಿತ್ರವನ್ನ ಯಾವಾಗ ನೋಡುತ್ತೀವಪ್ಪಾ ಅಂತ ಕ್ಯಾಲೆಂಡರ್ ನೋಡುತ್ತಾ ಕಾಯುತ್ತಿದ್ದಾರೆ.

ಪ್ರೇಮ್ ನಿರ್ದೇಶನದ ಸಿನಿಮಾ ಅಂದ ಮೇಲೆ  ಅದು ಮೂರು ತಿಂಗಳಲ್ಲಿ ಮುಗಿಯೋ ಚಿತ್ರವಲ್ಲ ಅನ್ನೋದು ನಿಮೆಗೆಲ್ಲರಿಗೂ ಗೊತ್ತು. ಯಾಕಂದರೆ ನಿರ್ದೇಶಕ ಪ್ರೇಮ್ ಯಾವುದೇ ಸಿನಿಮಾ ಮಾಡಲಿ, ಅದೊಂದು ಅದ್ಭುತ ಸಿನಿಮಾವಾಗಬೇಕು ಅಂದುಕೊಳ್ಳುತ್ತಾರೆ. ಅದರಂ ತನುಮನ ಅರ್ಪಿಸಿ ಕೆಲಸ ಮಾಡುತ್ತಾರೆ. ಅದೇ ರೀತಿ 'ದಿ ವಿಲನ್' ಚಿತ್ರವನ್ನ ಒಂದು ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದಾರೆ ಪ್ರೇಮ್. 'ದಿ ವಿಲನ್' ಕೇವಲ ಕನ್ನಡದ ಮಟ್ಟಿಗಲ್ಲ, ದಕ್ಷಿಣ ಭಾರತದ ಮಟ್ಟದಲ್ಲಿ ಸುದ್ದಿ ಮಾಡಬೇಕು ಅನ್ನೋದು ಅವರ ಕನಸು.

ಕನಸು ನನಸಾದಂತೆ, ಪ್ರೇಮ್ ಸಾಕಷ್ಟು ಶ್ರದ್ಧೆ ವಹಿಸಿ, 'ದಿ ವಿಲನ್' ದೃಶ್ಯಗಳನ್ನ ಕಟ್ಟಿದ್ದಾರೆ. ಯಾವುದೆ ರಾಜಿ ಮಾಡಿಕೊಳ್ಳದೆ, ಚಿತ್ರಕ್ಕೆ ಬೇಕಾದ ತಾರಾಗಣವನ್ನ ಒದಗಿಸಿಕೊಂಡು, ದೃಶ್ಯಕ್ಕೆ ತಕ್ಕಂತಹ ಲೊಕೇಷನ್ ಆಯ್ಕೆ ಮಾಡಿಕೊಂಡು, ಯಾವುದೇ ರಾಜಿಯಾಗದೆ ಚಿತ್ರೀಕರಣ  ಮಾಡಿದ್ದಾರೆ. ಹೀಗಾಗಿಯೇ ಲೇಟ್ ಆದರೂ ಲೇಟೆಸ್ಟ್ ಎನ್ನುವಂತೆ, ಅಂದುಕೊಂಡದ್ದಕ್ಕಿಂತ ಅದ್ಭುತವಾಗಿ ಚಿತ್ರದ ಶೂಟಿಂಗ್ ಮುಗಿಸಲಾಗಿದೆ ಅನ್ನೋದು ಪ್ರೇಮ್ ಅಡ್ಡದಿಂದ ಕೇಳಿ ಬರುತ್ತಿರುವ ಮಾತು.

ಸದ್ಯಕ್ಕೆ 'ದಿ ವಿಲನ್' ಚಿತ್ರದ ಎರಡೆರಡು ಟೀಸರ್​ಗಳು ಬಿಡುಗಡೆಯಾಗಿವೆ. ಶಿವಣ್ಣನಿಗೊಂದು, ಸುದೀಪ್‍ಗೊಂದು ಅಂತ ರಿಲೀಸಾಗಿರೋ ಎರಡು ಟೀರ್​ಗಳಿಗೂ ಕನ್ನಡ ಚಿತ್ರ ಪ್ರೇಮಿಗಳು ಅದ್ಭುತ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಎರಡು ಟೀಸರ್​ಗಳಿಗೂ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಸಿಕ್ಕಿರೋದೆ ಇದಕ್ಕೆ ಸಾಕ್ಷಿ. ಮುಂದಿನ ವಾರ `ದಿ ವಿಲನ್' ಚಿತ್ರದ ಒಂದು ಹಾಡು ಬಿಡುಗಡೆಯಾಗಲಿದೆ. ಹೀಗೆ ಒಂದೊಂದೇ ಹಾಡುಗಳನ್ನ ಹೊರಬಿಡುವ ಪ್ಲಾನ್ ಮಾಡಿರುವ ನಿರ್ದೇಶಕ ಪ್ರೇಮ್ ಏನೇ ಆಗಲಿ ವರಮಹಾಲಕ್ಷ್ಮೀ ಹಬ್ಬಕ್ಕೆ `ದಿ ವಿಲನ್' ಚಿತ್ರವನ್ನ ಪ್ರೇಕ್ಷಕರೆದುರು ತಂದೇ ತರುವುದಾಗಿ ಶಪತ ಮಾಡಿದ್ದಾರೆ. ಅಲ್ಲಿಗೆ ವರ್ಷದಿಂದ ಶಬರಿ ಕಾದಂತೆ ಕಾದಿದ್ದ ಸಿನಿರಸಿಕರು `ದಿ ವಿಲನ್' ಚಿತ್ರವನ್ನ ಕಣ್ಣು ತುಂಬಿಕೊಳ್ಳಲು ಇನ್ನು ಕೆಲವು ವಾರಗಳಷ್ಟೇ ಕಾದರೆ ಸಾಕು.

 
Loading...

 
First published:July 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...