ಕೊನೆಗೂ ಬಿಡುಗಡೆ ಆಯಿತು ಬಹು ನಿರೀಕ್ಷಿತ 'ದಿ ವಿಲನ್'ಸಿನಿಮಾದ ಟೀಸರ್​

news18
Updated:June 29, 2018, 10:49 AM IST
ಕೊನೆಗೂ ಬಿಡುಗಡೆ ಆಯಿತು ಬಹು ನಿರೀಕ್ಷಿತ 'ದಿ ವಿಲನ್'ಸಿನಿಮಾದ ಟೀಸರ್​
news18
Updated: June 29, 2018, 10:49 AM IST
ಓಂ ಸಕಲೇಶಪುರ, ನ್ಯೂಸ್18 ಕನ್ನಡ

ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಚಿತ್ರ, ಕಿಚ್ಚ ಸುದೀಪ್ ಮತ್ತು ಶಿವಣ್ಣ ಜೋಡಿಯಾಗಿರೋ ಬಿಗ್‍ ಬಜೆಟ್​ನ 'ದಿ ವಿಲನ್' ಸಿನಿಮಾ. ಈ ಸಿನಿಮಾದ ಟೀಸರ್​ ಅನ್ನು ನಿನ್ನೆ ಸಂಜೆ  ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದರು. ಕನ್ನಡ ಚಿತ್ರರಂಗವೇ ಕುತೂಹಲದಿಂದ ಕಾದಿದ್ದ ಈ ಟೀಸರ್ ಬಿಡುಗಡೆಯ ಸಂಪೂರ್ಣ ವರದಿ ನಿಮಗಾಗಿ.

ನೂರು ಕೋಟಿ ಬಜೆಟ್, ಪ್ರೇಮ್ ನಿರ್ದೇಶನ, ಚಿತ್ರದಲ್ಲಿ ಫಿಫ್ಟಿ ಪರ್ಸೆಂಟ್‍ಗೂ ಹೆಚ್ಚು ಗ್ರಾಫಿಕ್ಸ್, ಅಭಿನಯ ಚಕ್ರವರ್ತಿ ಜೊತೆ ಕರುನಾಡ ಚಕ್ರವರ್ತಿ... ಹೀಗೆ ಹಲವು ಕಾರಣಗಳಿಗೆ ಕುತೂಹಲದ ತುತ್ತ ತುದಿಯಲ್ಲಿ ನಿಲ್ಲಿಸಿದೆ ಈ 'ವಿಲನ್​' ಸಿನಿಮಾ.

ವಿಶೇಷ ಎಂದರೆ ನಿರ್ದೇಶಕ  ಪ್ರೇಮ್ ಒಂದೇ ಟೀಸರ್ ಬದಲಾಗಿ, ಶಿವಣ್ಣ ಪಾತ್ರಕ್ಕೊಂದು ಹಾಗೂ ಸುದೀಪ್ ಪಾತ್ರಕ್ಕೊಂದು ಟೀಸರ್ ತಯಾರಿಸಿದ್ದರು. ಆದರೆ ಟೀಸರ್​ನಲ್ಲೂ ಯಾರು ವಿಲನ್ ಅನ್ನೋ ಗುಟ್ಟನ್ನು ಬಿಟ್ಟು ಕೊಡಲೇ ಇಲ್ಲ. ಸುದೀಪ್ ದೂರದ ಸರ್ಬಿಯಾದಿಂದಲೇ ಟ್ವಿಟರ್​ನಲ್ಲಿ ಶೂಭ ಹಾರೈಸಿದರೆ, ಶಿವಣ್ಣ, ಪ್ರೇಮ್ ಕೂಡ 'ದಿ ವಿಲನ್' ಟೀಸರ್ ಬಗ್ಗೆ ಖುಷಿಯ ಮಾತುಗಳನ್ನಾಡಿದರು.ಟೀಸರ್ ರಿಲೀಸ್ ನಡೆದಿದ್ದ ಜಿಟಿ ವರ್ಲ್ಡ್​ ಮಾಲ್‍ನಲ್ಲಿ ಕಿಕ್ಕಿರಿದು ತುಂಬಿದ್ದ ಸುದೀಪ್ ಮತ್ತು ಶಿವಣ್ಣ ಅಭಿಮಾನಿಗಳು ತಮ್ಮ ತಮ್ಮ ನೆಚ್ಚಿನ ನಟರ ಸಿನಿಮಾ ಟೀಸರ್ ರಿಲೀಸ್ ಸಂಭ್ರಮದಲ್ಲಿ ಜೈಕಾರ ಹಾಕಿ ಸಂಭ್ರಮಿಸಿದರು.


Loading...

ಟೀಸರ್ ಬಿಡುಗಡೆಗೆ ಬಂದವರು ಹಣ ಕೊಟ್ಟು ಪಡೆದಿದ್ದ ಪಾಸ್​ನಿಂದ ಬಂದ ಹಣವನ್ನು ಸಂಕಷ್ಟದಲ್ಲಿರೋ ನಿರ್ದೇಶಕರಿಗೆ ನೀಡಲಾಯಿತು

 
First published:June 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ