ದುಬೈನಲ್ಲಿ ನಡೆಯಲಿದೆಯಾ ದಿ ವಿಲನ್ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ!​

news18
Updated:July 24, 2018, 5:26 PM IST
ದುಬೈನಲ್ಲಿ ನಡೆಯಲಿದೆಯಾ ದಿ ವಿಲನ್ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ!​
news18
Updated: July 24, 2018, 5:26 PM IST
ಆನಂದ್ ಸಾಲುಂಡಿ, ನ್ಯೂಸ್ 18 ಕನ್ನಡ

ಶಿವಣ್ಣ- ಸುದೀಪ್ ಜೋಡಿಯ `ದಿ ವಿಲನ್ ' ಚಿತ್ರ ತಂಡ ಚಿತ್ರೀಕರಣ ಮುಗಿಸಿದೆ. ಇನ್ನೆರಡು ತಿಂಗಳ ಒಳಗೆ ಚಿತ್ರಮಂದಿರಗಳಿಗೆ ಲಗ್ಗೆಯಿಡೋಕೆ ಸಕಲ ಸಿದ್ಧತೆಗಳೂ ನಡೆದಿವೆ. ಇದರ ನಡುವೆ ದೊಡ್ಡದೊಂದು ಕಾರ್ಯಕ್ರಮ ಮಾಡಿ ಆಡಿಯೋ ಬಿಡುಗೆಡೆ ಮಾಡುವ ಪ್ಲಾನ್​ನಲ್ಲಿದ್ದಾರೆ ನಿರ್ದೇಶಕ ಪ್ರೇಮ್. ಹಾಗಾದರೆ 'ದಿ ವಿಲನ್' ಆಡಿಯೋ ಯಾವಾಗ, ಎಲ್ಲಿ ಮತ್ತು ಯಾರು ರಿಲೀಸ್ ಮಾಡ್ತಾರೆ...? ಆ ಕುರಿತ ಒಂದು ವರದಿ ಇಲ್ಲಿದೆ ಓದಿ.

ಬಹು ನಿರೀಕ್ಷಿತ `ದಿ ವಿಲನ್' ಚಿತ್ರದ ಶೂಟಿಂಗ್​ ಕೊನೆಗೂ ಮುಗಿದಿದೆ. ಸುದೀಪ್ ಹಾಗೂ ಆ್ಯಮಿ ಜಾಕ್ಷನ್ ನಡುವಿನ ಹಾಡನ್ನ ಅರಮನೆ ಮೈದಾನದಲ್ಲಿ ಚಿತ್ರೀಕರಿಸುವುದರೊಂದಿಗೆ  ಚಿತ್ರತಂಡ ಕುಂಬಳಕಾಯಿ ಒಡೆದಿದೆ. ಕಳೆದ ವರ್ಷ ಚಿತ್ರೀಕರಣದ ಆರಂಭಿಸಿದ್ದ 'ದಿ ವಿಲನ್' ತಂಡ ಐದಾರು ಶೆಡ್ಯೂಲ್‍ಗಳು ಸೇರಿ ಒಟ್ಟು 118 ದಿನಗಳ ಕಾಲ ಶೂಟಿಂಗ್ ನಡೆಸಿದೆ. ಸದ್ಯ `ದಿ ವಿಲನ್' ಚಿತ್ರದ ಕೆಲಸ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಹೋಗಿದ್ದು, ಸೆಪ್ಟೆಂಬರ್​ನಲ್ಲಿ ಈ ಸಿನಿಮಾವನ್ನ ತೆರೆಗೆ ತರೋಕೆ ಭರದ ಸಿದ್ಧತೆ ನಡೆಯುತ್ತಿದೆ.

ಇನ್ನು ಚಿತ್ರ ತೆರೆಗೆ ಬರುವ ಮುನ್ನ ಅದ್ಧೂರಿ ಆಡಿಯೋ ರಿಲೀಸ್ ಸಮಾರಂಭ ಮಾಡಿ `ದಿ ವಿಲನ್' ಮೇಲಿನ ಕ್ರೇಜನ್ನ ಮುಗಿಲೆತ್ತರಕ್ಕೇರಿಸೋದು ನಿರ್ದೇಶಕ ಪ್ರೇಮ್ ಐಡಿಯಾ. ಹೀಗಾಗಿ ದೇಶದ ಗಡಿ ದಾಟಿ ದುಬೈ ನೆಲದಲ್ಲಿ ವಿಲನ್ ಆಡಿಯೋ ರಿಲೀಸ್ ಮಾಡಲು ಯೋಚಿಸಲಾಗಿದೆಯಂತೆ.

ಶಿವರಾಜ್‍ಕುಮಾರ್-ಸುದೀಪ್ ಕಾಂಬಿನೇಷನ್ನು, ಜೋಗಿ ಪ್ರೇಮ್ ನಿರ್ದೇಶನ 'ದಿ ವಿಲನ್' ಮೇಲೆ ಕನ್ನಡಿಗರಲ್ಲಿ ಮೌಂಟ್ ಎವರೆಸ್ಟ್​ನಷ್ಟು ನಿರೀಕ್ಷೆ ಹುಟ್ಟಿಸಿದೆ. ದುಬೈನಲ್ಲಿ ಗ್ರ್ಯಾಂಡ್ ಈವೆಂಟ್ ಮಾಡಿ, ದಕ್ಷಿಣ ಭಾರತದ ಸೂಪರ್​ಸ್ಟಾರ್​ ನಟರೊಬ್ಬರನ್ನ ಅತಿಥಿಯಾಗಿ ಕರೆಸಿ, ವಿಲನ್‍ ಸಿನಿಮಾಗಿರೋ ಕ್ರೇಜನ್ನ ಗಡಿರೇಖೆ ದಾಟಿಸೋದು ಪ್ರೇಮ್ ಅವರ ಪ್ಲಾನ್​. ಒಟ್ಟಾರೆ ಅಬ್ಬರ-ಅದ್ಧೂರಿತನಕ್ಕೆ ಇನ್ನೊಂದು ಹೆಸರು ಎಂದೇ ಕರೆಸಿಕೊಳ್ಳೋ ಪ್ರೇಮ್, 'ದಿ ವಿಲನ್' ಆಡಿಯೋ ರಿಲೀಸ್ ವಿಷಯದಲ್ಲೂ ಅದನ್ನ ಮುಂದುವರೆಸಿಕೊಂಡು ಹೋಗಲಿದ್ದಾರೆ ಎನ್ನಬಹುದು.

 
Loading...

 
First published:July 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...