'ದಿ ವಿಲನ್' ವಿವಾದ : ನಿರ್ದೇಶಕ ಜೋಗಿ ಪ್ರೇಮ್ ವಿರುದ್ಧ ತಿರುಗಿಬಿದ್ದ ಶಿವಣ್ಣ ಅಭಿಮಾನಿಗಳು

news18
Updated:July 4, 2018, 7:53 PM IST
'ದಿ ವಿಲನ್' ವಿವಾದ : ನಿರ್ದೇಶಕ ಜೋಗಿ ಪ್ರೇಮ್ ವಿರುದ್ಧ ತಿರುಗಿಬಿದ್ದ ಶಿವಣ್ಣ ಅಭಿಮಾನಿಗಳು
news18
Updated: July 4, 2018, 7:53 PM IST
-ನ್ಯೂಸ್ 18 ಕನ್ನಡ

ಸ್ಯಾಂಡಲ್​ವುಡ್​ನಲ್ಲಿ ಬಹು ನಿರೀಕ್ಷೆ ಮೂಡಿಸಿರುವ 'ದಿ ವಿಲನ್' ಚಿತ್ರಕ್ಕೆ ವಿವಾದವೊಂದು ಅಂಟಿಕೊಂಡಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಮೊದಲ ಬಾರಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾ ಬಗ್ಗೆ ಶಿವಣ್ಣ ಅಭಿಮಾನಿಗಳು ಗರಂ ಆಗಿದ್ದಾರೆ.

ನಿರ್ದೇಶಕ ಜೋಗಿ ಪ್ರೇಮ್ ಇಬ್ಬರು ನಟರನ್ನು ಸರಿ ಸಮಾನವಾಗಿ ಬಳಸದೇ, ತಾರತಮ್ಯ ಮಾಡಿದ್ದಾರೆ ಎಂಬುದು ಶಿವಣ್ಣ ಅಭಿಮಾನಿಗಳ ಆಕ್ರೋಶವಾಗಿದೆ.

ಇತ್ತೀಚೆಗಷ್ಟೇ 'ದಿ ವಿಲನ್' ಚಿತ್ರದ 2 ಟೀಸರ್ ಬಿಡುಗಡೆಯಾಗಿತ್ತು. ಟೀಸರ್​ನಲ್ಲಿ ಕಿಚ್ಚ ಸುದೀಪ್​ರನ್ನು ಹೈಲೈಟ್ ಮಾಡಿ, ಶಿವಣ್ಣ ಅವರನ್ನು ಸಾಧಾರಣವಾಗಿ ತೋರಿಸಿರುವುದು ಶಿವಣ್ಣ ಫ್ಯಾನ್ಸ್​ಗೆ ರುಚಿಸಿರಲಿಲ್ಲ. ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿ #BoycottTheVillan ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.

ಜೋಗಿ ಪ್ರೇಮ್ ಪ್ರತಿಯೊಂದು ಹಂತದಲ್ಲೂ ಶಿವಣ್ಣ ಅವರನ್ನು ಕಡೆಗಣಿಸಿ 'ದಿ ವಿಲನ್​' ಸಿನಿಮಾವನ್ನು ಹೈಲೆಟ್​ ಮಾಡುತ್ತಿದ್ದಾರೆ. ಹೀಗಾಗಿ ಹ್ಯಾಟ್ರಿಕ್ ಹೀರೋ ಅಭಿಮಾನಿಗಳಿಗೆ ನೋವಾಗಿದ್ದು, ಈ ಚಿತ್ರವನ್ನು ನೋಡಬೇಡಿ ಎಂದು ಅಭಿಯಾನದ ಮೂಲಕ ಶಿವಣ್ಣ ಫ್ಯಾನ್ಸ್​ ಸಾರುತ್ತಿದ್ದಾರೆ.

ಪ್ರೇಮ್ ಈ ಹಿಂದೆ 'ಜೋಗಿ' ಮತ್ತು 'ಜೋಗಯ್ಯ' ಎಂಬ ಚಿತ್ರಗಳನ್ನು ಶಿವಣ್ಣನಿಗಾಗಿ ನಿರ್ದೇಶಿಸಿದ್ದರು. ಆದರೆ ಈ ಬಾರಿ ಮಲ್ಟಿಸ್ಟಾರ್​ ಚಿತ್ರಕ್ಕೆ ಕೈ ಹಾಕಿ ವಿವಾದಕ್ಕೆ ಕಾರಣವಾಗಿದ್ದಾರೆ. ಈ ಕುರಿತು  ಕರುನಾಡ ಚಕ್ರವರ್ತಿ ಅಭಿಮಾನಿಗಳು ಕೇಳಿರುವ 7 ಪ್ರಶ್ನೆಗಳು ಸಾಮಾಜಿ ತಾಣದಲ್ಲಿ ವೈರಲ್ ಆಗುತ್ತಿದ್ದು, ಆ ಪ್ರಶ್ನೆಗಳು ಇಂತಿವೆ.

1 - ದಿ ವಿಲನ್ ಸಿನಿಮಾದ ಎಲ್ಲಾ ಪೋಸ್ಟರ್​ನಲ್ಲಿ ಡಾಕ್ಟರ್ ಎಂಬ ಬಿರುದನ್ನು ಹಾಕದೇ ಇರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಈ ಬಗ್ಗೆ ಅನೇಕ ಬಾರಿ ಹೇಳಿದರೂ ಶಿವರಾಜ್ ಕುಮಾರ್ ಹೆಸರಿನ ಮುಂದೆ 'ಡಾ' ಎಂದು ಬಳಸಿಕೊಂಡಿಲ್ಲ. ಇದೇನಾ ನೀವು ಒಬ್ಬ ಲೆಜೆಂಡ್​ಗೆ ಕೊಡುವ ಮರ್ಯಾದೆ? ಎಂದು ನಿರ್ದೇಶಕ ಪ್ರೇಮ್ ಅವರನ್ನು ಶಿವಣ್ಣ ಫ್ಯಾನ್ಸ್​ ಪ್ರಶ್ನಿಸಿದ್ದಾರೆ.
Loading...

2 - ಏಕೆ ಸಿನಿಮಾದ ಬಹುತೇಕ ಪೋಸ್ಟರ್​ಗಳಲ್ಲಿ ಶಿವಣ್ಣ ಎಡಭಾಗದಲ್ಲಿದ್ದಾರೆ ? ಅವರು ಲೆಜೆಂಡ್ ನಟ ಅನ್ನೋದು ನಿಮಗೆ ಗೊತ್ತಿಲ್ಲವೇ..? ಎಂದು ನಿರ್ದೇಶಕರನ್ನು ಕೇಳಿದ್ದಾರೆ.

3 - ದೀಪಣ್ಣ (ಕಿಚ್ಚ ಸುದೀಪ್)ಗೆ ಮೂರು ಸಾಂಗ್ ನೀಡಿ, ಶಿವಣ್ಣಗೆ ಯಾಕೆ ಬರೀ ಎರಡು ಹಾಡು ನೀಡಲಾಗಿದೆ ? ಡ್ಯಾನ್ಸ್​ ಕಿಂಗ್ ಯಾರು ಅಂತ ನಿಮಗೆ ಗೊತ್ತಾ ? ಎಂದು ಚಿತ್ರದ ಹಾಡಿನಲ್ಲಿ ತಾರತಮ್ಯ ಮಾಡಿದ್ದಾರೆಂದು ಶಿವಣ್ಣ ಫ್ಯಾನ್ಸ್​ ಗರಂ ಆಗಿದ್ದಾರೆ.

4 - ಯಾವಾಗಲೂ ಟ್ವಿಟ್ಟರ್​ನಲ್ಲಿ ದೀಪಣ್ಣ (ಸುದೀಪ್) ಅವರನ್ನು ಮಾತ್ರ ಹೊಗಳುತ್ತಿರುತ್ತೀರಾ? ಯಾಕೆ.. ಬಾಸ್ (ಶಿವಣ್ಣ) ಟ್ವಿಟ್ಟರ್​ನಲ್ಲಿ ಇಲ್ಲ ಅಂತಾನಾ.? ನಾವು ಫ್ಯಾನ್ಸ್ ಇನ್ನೂ ಬದುಕಿದ್ದೇವೆ ಎಂದು ಪ್ರೇಮ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

5 - ಬಾಸ್ (ಶಿವಣ್ಣ)ಗೆ ತಲೆ ತುಂಬಾ ಕೂದಲು ಇದ್ರೂ ಯಾಕೆ ವಿಗ್ ಹಾಕ್ಸಿದ್ದು ? ದೀಪಣ್ಣ (ಕಿಚ್ಚ ಸುದೀಪ್)ಗೆ ಯಾಕೆ ಹೇರ್ ಕಟ್ ಮಾಡ್ಸಿದ್ದು ? ಎಂಬ ಪ್ರಶ್ನೆಯನ್ನು ಜೋಗಿ ಪ್ರೇಮ್ ಮುಂದಿಟ್ಟಿದ್ದಾರೆ ಅಭಿಮಾನಿಗಳು.

6 - ಕ್ಲೈಮ್ಯಾಕ್ಸ್​ ಬದಲಾಯಿಸಿದರೆ ಮಾತ್ರ ನಾವೆಲ್ಲಾ ಫಿಲ್ಮ್ ನೋಡ್ತೀವಿ, ಇಲ್ಲಾ ಅಂದರೆ ದೇವರಾಣೆ ನಾವು ಪ್ರತಿಭಟನೆ ಮಾಡಬೇಕಾಗುತ್ತದೆ. ಆಮೇಲೆ ಎಲ್ಲದಕ್ಕೂ ನೀವೇ ಉತ್ತರ ಕೊಡಬೇಕಾಗುತ್ತದೆ ಎಂದು ನಿರ್ದೇಶಕರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

7- ಸುದೀಪ್ ನಿನ್ನೆ ಮೊನ್ನೆ ಬಂದಿರುವ ಹೀರೋ, ಶಿವಣ್ಣ ಒಬ್ಬರು ಲೆಜೆಂಡ್. ಅದು ನಿಮಗೂ ಗೊತ್ತು ತಾನೇ. ದಯವಿಟ್ಟು ಫ್ಯಾನ್ಸ್​ ಮಧ್ಯೆ ತಂದಿಡಬೇಡಿ ಎಂದು ಶಿವಣ್ಣ ಅಭಿಮಾನಿಗಳು ಜೋಗಿ ಪ್ರೇಮ್​ ಅವರಿಗೆ ಪ್ರತ್ರದ ಮೂಲಕ ತಿಳಿಸಿದ್ದಾರೆ.ಅಲ್ಲದೆ ಈ ಎಲ್ಲ ಪ್ರಶ್ನೆಗಳಿಗೆ ಜೋಗಿ ಪ್ರೇಮ್ ಉತ್ತರಿಸಬೇಕೆಂದು ಹ್ಯಾಟ್ರಿಕ್ ಹೀರೊ ಫ್ಯಾನ್ಸ್ ಕೇಳಿಕೊಂಡಿದ್ದಾರೆ. ಶಿವರಾಜ್ ಕುಮಾರ್ ಅಭಿಮಾನಿಗಳು ಕೇಳಿರುವ ಈ ಏಳು ಪ್ರಶ್ನೆಗಳಿಗೆ ಪ್ರೇಮ್ ಯಾವ ರೀತಿಯಾಗಿ ಉತ್ತರಿಸಲಿದ್ದಾರೆ. ಇಲ್ಲ 'ದಿ ವಿಲನ್'​ ಸಿನಿಮಾದ ಈ ವಿವಾದ ಮತ್ತಷ್ಟು ಬಿಗಡಾಯಿಸಲಿದೆಯೇ ಎಂಬುದನ್ನು ಕಾದು ನೋಡ ಬೇಕಿದೆ.
First published:July 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...