'ದಿ ವಿಲನ್​' ವಿವಾದ: ನಿರ್ದೇಶಕ ಪ್ರೇಮ್​ ಸ್ಪಷ್ಟನೆ!

news18
Updated:July 7, 2018, 1:38 PM IST
'ದಿ ವಿಲನ್​' ವಿವಾದ: ನಿರ್ದೇಶಕ ಪ್ರೇಮ್​ ಸ್ಪಷ್ಟನೆ!
news18
Updated: July 7, 2018, 1:38 PM IST
ಆನಂದ್ ಸಾಲುಂಡಿ, ನ್ಯೂಸ್ 18 ಕನ್ನಡ

ಸ್ಯಾಂಡಲ್‍ವುಡ್‍ನಲ್ಲಿ ಸ್ಟಾರ್ ನಟರ ಅಭಿಮಾನಿಗಳು ಪ್ರತಿಷ್ಠೆಗೆ ಬಿದ್ದಂತಿದೆ. ಹೀಗಾಗಿ ಪ್ರತಿಯೊಂದು ವಿಷಯಕ್ಕೂ ಕಿರಿಕ್ ಆಗುತ್ತಲೇ ಇದೆ. ಈಗ 'ದಿ ವಿಲನ್' ಚಿತ್ರದ ವಿವಾದ ಕೂಡ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ. ಹಾಗಾದರೆ 'ದಿ ವಿಲನ್' ವಿವಾದದ ಇಂದಿನ ಅಪ್​ಡೇಟ್ಸ್​ ಏನು ? ಇಲ್ಲಿದೆ ಓದಿ...

ಕನ್ನಡ ಚಿತ್ರರಂಗ ಒಂದು ಕಾಲಕ್ಕೆ ವಿವಾದತೀತ ಚಿತ್ರರಂಗ ಎಂದೇ ಹೆಸರಾಗಿತ್ತು. ಆದರೆ ಈಗ ದಿನಕ್ಕೊಂದು ವಿವಾದ ಹುಟ್ಟುಕೊಳ್ಳುತ್ತಿದೆ. ಸ್ಟಾರ್ ನಟರ ಅಭಿಮಾನಿಗಳು ಪ್ರತಿಷ್ಠೆಗೆ ಬಿದ್ದಿರೋದೆ ಇದಕ್ಕೆ ಕಾರಣ. ಹೀಗಾಗಿ ಸ್ಟಾರ್ ನಟರು ನಾವೆಲ್ಲ ಚೆನ್ನಾಗಿದ್ದೇವೆ ಅಂತ ಎಷ್ಟೇ ಹೇಳಿಕೊಂಡರೂ ವಿವಾದಗಳು ಹನುಮಂತನ ಬಾಲದಂತೆ ಬೆಳೆಯುತ್ತಿವೆ. ಅದರಂತೆ 'ದಿ ವಿಲನ್' ಚಿತ್ರದ ಬಗೆಗಿನ ವಿವಾದ ಕೂಡ ದಿನೇ
ದಿನೇ ಬಿರುಸು ಪಡೆದುಕೊಳ್ಳುತ್ತಿವೆ.

'ದಿ ವಿಲನ್' ಚಿತ್ರತಂಡದಿಂದ ಶಿವರಾಜ್‍ಕುಮಾರ್​ಗೆ ಸರಿಯಾದ ಗೌರವ ಸಿಕ್ಕುತ್ತಿಲ್ಲ, ಅವರನ್ನ ಪೋಸ್ಟರ್​ನಲ್ಲಿ ಸರಿಯಾಗಿ ಬಿಂಬಿಸಿಲ್ಲ. ಅವರಿಗೆ ಅಂತ ಚಿತ್ರಿಸಿರೋ ಟೀಸರ್​ನಲ್ಲಿ ಹೆಚ್ಚು ಕ್ರಿಯೇಟಿವಿಟಿ ಬಳಸಿಲ್ಲ, ಪ್ರೇಮ್ ಮಾತು ಮಾತಿಗೂ ದೀಪಣ್ಣ ಅಂತಾರೆ, ಶಿವಣ್ಣನ ಬಗ್ಗೆ ಮಾತಾಡೋಲ್ಲ. ಹೀಗೆ ಆರೋಪಗಳ ಪಟ್ಟಿ ಮಾಡಿ, ಶಿವರಾಜ್‍ಕುಮಾರ್ ಅಭಿಮಾನಿಗಳು 'ದಿ ವಿಲನ್' ಬಹಿಷ್ಕರಿಸುವುದಾಗಿ ಆನ್‍ಲೈನ್ ಅಭಿಯಾನ ಶುರು ಮಾಡಿದರು.

ಇಂದು ಇದಕ್ಕೆ ಪ್ರತಿಕ್ರಿಯಿಸಿರೋ ನಿರ್ದೇಶಕ ಪ್ರೇಮ್ ಸಿನಿಮಾ ನೋಡಿ ಆಮೇಲೆ ಮಾತಾಡಿ, ಇಲ್ಲಿ ಯಾರಿಗೂ ಅಗೌರವ ತೋರಿಸೋ ಕೆಲಸವಾಗಿಲ್ಲ. ಹಾಗೇನಾದರೂ ಆಗಿದ್ದರೆ ಶಿವಣ್ಣನೇ ಕೇಳುತ್ತಿದ್ದರಲ್ಲವಾ ಅಂತ ಅಭಿಮಾನಿಗಳಿಗೆ ಸಮಾಧಾನ ಮಾಡಲು ಯತ್ನಿಸಿದ್ದಾರೆ.

ಆದರೆ ಅನುರಾಗವಾಗಲಿ, ಅಭಿಮಾನವಾಗಲಿ, ಅದು ಎಲ್ಲೆ ಮೀರಿದಾಗ ಯಾರ ಮಾತು ಕಿವಿಗೆ ಬೀಳಲ್ಲ. ಅದೆ ರೀತಿ ಕೆಲವು ಅಭಿಮಾನಿಗಳು ಅತಿರೇಕವಾಗಿ ವರ್ತಿಸುತ್ತಿದ್ದಾರಾ ಅನ್ನೋದು ಸಾಮಾನ್ಯ ಚಿತ್ರರಸಿಕರ ಪ್ರಶ್ನೆ.
Loading...

 

 
First published:July 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ