ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೋನಾ ವೈರಸ್ ಸೋಂಕಿನಿಂದಾಗಿ ಎಲ್ಲೆಡೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್ಡೌನ್ ಹಂತ ಹಂತವಾಗಿ ಅನ್ಲಾಕ್ ಆಗುತ್ತಿದ್ದರೂ ಜನರ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿಲ್ಲ. ಬದಲಿಗೆ ದಿನೇ ದಿನೇ ಹೆಚ್ಚತ್ತಿರುವ ಸೋಂಕಿತರ ಸಂಖ್ಯೆಯಿಂದಾಗಿ ಆಸ್ಪತ್ರೆಗಳಿಗೆ ದಾಖಲಾಗುವ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ. ಇದರ ಜೊತೆ ಭಾರತದ ಅರ್ಧದಷ್ಟು ಜನರು ತುತ್ತಾಗಲಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಸರ್ಕಾರದ ಸಮಿತಿ ತಿಳಿಸಿದೆ. ಮುಂದಿನ ಫೆಬ್ರವರಿ ವೇಳೆಗೆ ಈ ಸೋಂಕು ಹೆಚ್ಚಾಗುವ ಸಾಧ್ಯತೆ ಇದ್ದು, ಈ ವೇಳೆ 130 ಕೋಟಿ ಜನರಲ್ಲಿ ಅರ್ಧ ಅಂದರೆ 65 ಕೋಟಿ ಜನರು ನಿಧಾನವಾಗಿ ಸೋಂಕಿಗೆ ತುತ್ತಾಗಲಿದ್ದಾರೆ ಎಂದು ಕೇಂದ್ರ ಸರ್ಕಾರದ ಸಮಿತಿ ತಿಳಿಸಿದೆ. ಸದ್ಯ ಭಾರತದಲ್ಲಿ 7.55ಮಿಲಿಯನ್ ಜನರು ಸೋಂಕಿಗೆ ತುತ್ತಾಗಿದ್ದಾರೆ. ವಿಶ್ವದಲ್ಲಿಯೇ ಅಧಿಕ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗಿರುವ ದೇಶಗಳಲ್ಲಿ ಅಮೆರಿಕದ ನಂತರ ಭಾರತ ಸ್ಥಾನ ಪಡೆದಿದೆ. ಹೀಗಿರುವಾಗಲೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ವೈದ್ಯರಲ್ಲಿ ಕೆಲವರು ಆಗಾಗ ಕೊಂಚ ಮನರಂಜಿಸುತ್ತಿರುತ್ತಾರೆ.
ಹೌದು, ಆಸ್ಪತ್ರೆಗಳಲ್ಲಿ ಕೋವಿಡ್ಗೆ ಚಿಕಿತ್ಸೆ ಪಡೆಯುತ್ತಿರುವರ ಮನರಂಜಿಸಲು ವೈದ್ಯರು ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಈಗಲೂ ಸಹ ಇಎನ್ಟಿ ವೈದ್ಯರೊಬ್ಬರು ಪಿಪಿಇ ಕಿಟ್ ಧರಿಸಿಯೇ ಹೃತಿಕ್ ರೋಷನ್ ಅವರ ವಾರ್ ಸಿನಿಮಾದ ಗುಂಗ್ರು ಟೂಟ್ ಗಯಿ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ.
ಅಸ್ಸಾಂನ ವೈದ್ಯ ಅನೂಪ್ ಸೇನಾಪತಿ ಮಾಡಿರುವ ಡ್ಯಾನ್ಸ್ನ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಅನೂಪ್ ಅವರ ಸ್ನೇಹಿತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದಾದ ನಂತರ ಅದು ವೈರಲ್ ಆಗಿದೆ.
ಇದನ್ನೂ ಓದಿ: Kiara Advani: ಸೀರೆಯುಟ್ಟು ಸುದ್ದಿಯಾದ ಬಾಲಿವುಡ್ ನಟಿ ಕಿಯಾರಾ..!
ಇನ್ನು ಈ ವಿಡಿಯೋ ನೋಡಿದ ನಟ ಹೃತಿಕ್ ರೋಷನ್, ಅಸ್ಸಾಂಗೆ ಹೋದಾಗ ಅನೂಪ್ ಅವರ ಬಳಿ ಈ ಸ್ಟೆಪ್ಸ್ ಕಲಿಯುವುದಾಗಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ಅವರಂತೆಯೇ ಸ್ಪೆಪ್ಸ್ ಹಾಕುವುದನ್ನು ಕಲಿಯುತ್ತೇನೆಂದು ಹೇಳುತ್ತಲೇ ವೈದ್ಯನ ಉತ್ಸಾಹವನ್ನು ಮೆಚ್ಚುಕೊಂಡಿದ್ದಾರೆ.
ಈ ಹಿಂದೆ ಪಿಪಿಇ ಕಿಟ್ ಧರಿಸುವುದರಿಂದ ಎಷ್ಟು ಬಿಸಿಯಾಗುತ್ತದೆ ಎಂದು ವೈದ್ಯೆಯೊಬ್ಬರು ಹಾಯ್ ಗರ್ಮಿ ಎನ್ನುವ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಸುದ್ದಿಯಾಗಿದ್ದರು.
ಕೋವಿಡ್ ಕೇರ್ನಲ್ಲಿ ಕೆಲಸ ಮಾಡುತ್ತಿರುವ ವೈದ್ಯರ ಈ ಕ್ರಿಯಾಶೀಲತೆಯನ್ನು ನೆಟ್ಟಿಗರು ಮೆಚ್ಚಿಕೊಳ್ಳುತ್ತಿದ್ದಾರೆ. ಕೆಲಸದ ಜೊತೆಗೆ ತಮ್ಮ ರೋಗಿಗಳನ್ನು ರಂಜಿಸಲು ಪ್ರತ್ನಿಸುತ್ತಿರುವ ವೈದ್ಯರನ್ನು ಕೊಂಡಾಡುತ್ತಿದ್ದಾರೆ ಜನರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ