ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಸಿನಿಮಾದಲ್ಲಿ ಎಷ್ಟೇ ಬ್ಯುಸಿ ಆಗಿದ್ರೂ ವರ್ಕೌಟ್ (Workout) ಮಿಸ್ ಮಾಡುತ್ತಿರಲಿಲ್ಲ. ಫಿಟ್ನೆಸ್ (Fitness) ಕಾಪಾಡಿಕೊಳ್ಳಲು ಅಪ್ಪು (Appu) ನಿತ್ಯ ಜಿಮ್ಗೆ ಹೋಗಿ ವರ್ಕೌಟ್ ಮಾಡ್ತಿದ್ರು. ಪುನೀತ್ ರಾಜ್‌ಕುಮಾರ್ ಸಮುದ್ರದ ದಡದಲ್ಲಿ ಕಸರತ್ತು ನಡೆಸಿದ್ದು ಹಾಗೂ ಸೈಕ್ಲಿಂಗ್ ಮಾಡಿದ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ಸಖತ್ ವೈರಲ್ ಆಗಿದ್ವು. ಇದೀಗ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ಕೂಡ ಫಿಟ್ನೆಸ್ ಬಗ್ಗೆ ಗಮನಹರಿಸಿದ್ದು, ವರ್ಕೌಟ್ ವಿಡಿಯೋವೊಂದು ವೈರಲ್ ಆಗಿದೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ವರ್ಕೌಟ್
ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಇದೀಗ ಪುನೀತ್ ಹಾದಿಯಲ್ಲೇ ಸಾಗುತ್ತಿದ್ದಾರೆ. ಅಪ್ಪು ಸ್ಟೈಲಿನಲ್ಲಿಯೇ ಜಿಮ್ನಲ್ಲಿ ವರ್ಕೌಟ್ (Workout) ಮಾಡುತ್ತಾ ಬೆವರಿಳಿಸುತ್ತಿದ್ದಾರೆ. ಅಶ್ವಿನಿ ಅವರ ವರ್ಕೌಟ್ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಫಿಟ್ ಆಗಲು ವರ್ಕೌಟ್ ಆರಂಭಿಸಿದ ಅಶ್ವಿನಿ
ಪುನೀತ್ ರಾಜ್‌ಕುಮಾರ್ ನಿಧನ ಬಳಿಕ ಪಿಆರ್‌ಕೆ ಸಂಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೊತ್ತಿದ್ದಾರೆ. ಮಕ್ಕಳ ಜೊತೆಗೆ ಅನೇಕ ಜವಾಬ್ದಾರಿ ಅಶ್ವಿನಿ ಹೆಗಲ ಮೇಲಿದೆ. ಇದೀಗ ಅಶ್ವಿನಿ ಫಿಟ್ ಆಗಲು ವರ್ಕೌಟ್ ಪ್ರಾರಂಭಿಸಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಅಶ್ವಿನಿ ಆ್ಯಕ್ಟೀವ್
ಸ್ಯಾಂಡಲ್ವುಡ್ನಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್, ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಅಷ್ಟೇ ಅಲ್ಲದೇ ಹೊಸ ಸಿನಿಮಾಗೆ ಬೆಂಬಲ ಸೂಚಿಸುವ ಮೂಲಕ ಚಿತ್ರರಂಗದಲ್ಲೂ ಸಕ್ರಿಯರಾಗಿದ್ದಾರೆ. ಅಪ್ಪು ಅಭಿಮಾನಿಗಳು ಆಯೋಜಿಸಿ ಕಾರ್ಯಕ್ರಮಗಳಿಗೂ ಭೇಟಿ ನೀಡಿದ್ದಾರೆ.
View this post on Instagram
ಅಶ್ವಿನಿ ಪುನೀತ್ ರಾಜ್‌ಕುಮಾರ್ ಜಿಮ್ನಲ್ಲಿ ವರ್ಕೌಟ್ ಮಾಡ್ತಿರುವ ವಿಡಿಯೋ ನೋಡಿದ ನೆಟ್ಟಿಗರು ಅಶ್ವಿನಿ ಪ್ರೋತ್ಸಾಹ ನೀಡಿದ್ದಾರೆ. ಮತ್ತೆ ಕೆಲವರು ಒತ್ತಡದಿಂದ ಆಚೆ ಬರಲು ಇದು ಒಳ್ಳೆ ಮಾರ್ಗ ಅಂತ ಸಲಹೆಯನ್ನೂ ನೀಡಿದ್ದಾರೆ. ಅಪ್ಪು ಅವರಂತೆ ವರ್ಕೌಟ್ಗೆ ಇಳಿದಿದ್ದಾರೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಗಂಧದ ಗುಡಿ ಸಿನಿಮಾ ನಿರ್ಮಾಪಕಿ ಅಶ್ವಿನಿ
ಪುನೀತ್ ಆಗಿಯೇ ಕಾಣಿಸಿಕೊಂಡ, ಮೊದಲ ಸಾಕ್ಷ್ಯಚಿತ್ರ ಗಂಧದ ಗುಡಿ (Gandhada Gudi) ಬಿಡುಗಡೆ ಆಗಿ 100 ಪೂರೈಸಿದೆ. ಅಕ್ಟೋಬರ್ 28ರಂದು ವಿಶ್ವದಾದ್ಯಂತ ಬಿಡುಗಡೆ ಆಗಿದ್ದ, ಈ ಸಾಕ್ಷ್ಯಚಿತ್ರಕ್ಕೆ ಅಮೋಘವರ್ಷ ನಿರ್ದೇಶನ ಮಾಡಿದ್ದರು. ಈ ಕನಸಿನ ಪ್ರಾಜೆಕ್ಟ್ ಅನ್ನು ಅಶ್ವಿನಿ ಪುನೀತ್‌ರಾಜ್‌ಕುಮಾರ್ ನಿರ್ಮಿಸಿದ್ದರು. ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ನಿರ್ಮಾಪಕಿ ಅಶ್ವಿನಿ ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
ನಿಜವಾದ ನಾಯಕನ ಗಂಧದಗುಡಿ ಪಯಣ!
100 ದಿನಗಳನ್ನು ಪೂರೈಸಿದ ನಿಜವಾದ ನಾಯಕನ ಗಂಧದಗುಡಿ ಪಯಣ! ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಬರೆದುಕೊಂಡಿದ್ದರು. ಅಪ್ಪು ಅವರ ಕನಸಿನ ಪಯಣವಾಗಿದ್ದ ಈ ಚಿತ್ರವು, ಕರ್ನಾಟಕದ ಅದ್ಭುತ ಕಾಡು ಹಾಗೂ ವನ್ಯಜೀವಿಗಳ ವಿಶೇಷ ಆಚರಣೆ ಎಂದು ಬರೆದಿದ್ದರು.
ಪುನೀತ್ ಹೊಸ ಪ್ರಯತ್ನಕ್ಕೆ ಸಿಗ್ತು ಜಯ
ಗಂಧದ ಗುಡಿ ಸಿನಿಮಾ ಕರ್ನಾಟಕದ ಕಾಡು-ಮೇಡನ್ನು ಪರಿಚಯಿಸುವ ಸಿನಿಮಾ ಆಗಿದೆ. ಅಷ್ಟೇ ನೈಜವಾಗಿ ಅದನ್ನು ನಾಡಿನ ಜನತೆಗೆ ಅರ್ಪಿಸಿದ್ದರು. ಪುನೀತ್ನನ್ನು ತೆರೆಮೇಲೆ ಕಂಡ ಅಭಿಮಾನಿಗಳು ಸಿನಿಮಾವನ್ನು ಅಪ್ಪಿ ಮುದ್ದಾಡಿದ್ರು. ಸ್ಯಾಂಡಲ್‌ವುಡ್ ಸಿನಿಮಾ ಸ್ನೇಹಿತರು, ಆಪ್ತರು ಸಹ ಚಿತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸರಣಿ ಪೋಸ್ಟ್ ಹಂಚಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ