• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Kantara: ಕಾಮಿಡಿ ಆಗೋಯ್ತಾ ಪಂಜುರ್ಲಿ ದೈವದ ಕೂಗು? ಕಾಂತಾರ ನೋಡಿದ್ಮೇಲೆ ಏನ್ ಆಗ್ತಿದೆ ಈ ಜನರಿಗೆ?

Kantara: ಕಾಮಿಡಿ ಆಗೋಯ್ತಾ ಪಂಜುರ್ಲಿ ದೈವದ ಕೂಗು? ಕಾಂತಾರ ನೋಡಿದ್ಮೇಲೆ ಏನ್ ಆಗ್ತಿದೆ ಈ ಜನರಿಗೆ?

ದೈವದ ಕೂಗು ದೈವಕ್ಕೆ ಸೀಮಿತ-ಕಾಮಿಡಿ ಮಾಡ್ಬೇಡಿ!

ದೈವದ ಕೂಗು ದೈವಕ್ಕೆ ಸೀಮಿತ-ಕಾಮಿಡಿ ಮಾಡ್ಬೇಡಿ!

ಕಾಂತಾರ ದೈವದ ಕೂಗಿನ ರೀಲ್ಸ್ ಹೆಚ್ಚು ವೈರಲ್ ಆಗಿದೆ. ಇದನ್ನ ಇನ್ನಷ್ಟು ವೈರಲ್ ಮಾಡೋಕೆ ಫೇಕ್ ಟ್ವಿಟರ್ ಅಕೌಂಟ್ ಮಾಡಿದ್ರಾ? ಗೊತ್ತಿಲ್ಲ. ಆದರೆ ಸಪ್ತಮಿ ಗೌಡ ಹೆಸರಿನ ಜೊತೆಗೆ ಅವರ ಫೋಟೊ ಇರೋ ಅಕೌಂಟ್​ ನಲ್ಲಿಯೇ ಈ ಒಂದು ವೀಡಿಯೋ ಶೇರ್ ಆಗಿದೆ.

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ಕನ್ನಡದ ಕಾಂತಾರ (Kantara movie) ಸಿನಿಮಾದಲ್ಲಿ ಸಾಕಷ್ಟು ವಿಷಯಗಳಿವೆ. ಅವುಗಳಲ್ಲಿ ಪ್ರಮುಖ ಅನಿಸೋದು ಹಾಗೂ ಅಷ್ಟೇ ದೈವ ಭಕ್ತಿ ಮತ್ತು ಭಯ ಹುಟ್ಟಿವ ಇನ್ನೂ ಒಂದು ವಿಷಯ ಇದೆ, ಅದುವೇ ದೈವ ಕೂಗು. ಈ ಕೂಗು ದೇಶ-ವಿದೇಶದಲ್ಲಿ ತನ್ನದೇ (Kantara Viral) ವೈಬ್ರೇಷನ್ ಕ್ರಿಯೇಟ್ ಮಾಡಿದೆ. ಈ ಒಂದು ಕೂಗು ಸಿನಿಮಾ ರಿಲೀಸ್ ಆದ ದಿನದಿಂದಲೂ ಹೆಚ್ಚು ವೈಬ್ ಕ್ರಿಯೆಟ್ ಮಾಡಿದೆ. ಹಾಗಾಗಿಯೇ ದೈವ ಕೂಗನ್ನ ಎಲ್ಲರೂ ಕೂಗಬೇಡಿ, ಕೂಗಿ ಅವಮಾನಿಸಬೇಡಿ ಎಂದು ರಿಷಬ್ (Rishab Shetty) ಶೆಟ್ಟಿ ಮನವಿ ಮಾಡಿದ್ದರು. ಹೀಗಿದ್ದರೂ ಅನೇಕರು ಈ ಪ್ರಯತ್ನ ಮಾಡಿದ್ದೂ ಇದೆ. ಆದರೆ, ಈಗ ಗಂಡ ತನ್ನ ಹೆಂಡ್ತಿಯನ್ನ ಭಯಪಡಿಸಲು ಇಂತಹ ಒಂದು ದೈವ ಕೂಗನ್ನ ಅನುಕರಿಸಿದ್ದಾರೆ. ಆ ವೀಡಿಯೋ ವೈರಲ್ ಆಗಿದೆ. 


ದೈವದ ಕೂಗು ದೈವಕ್ಕೆ ಸೀಮಿತ-ಕಾಮಿಡಿ ಮಾಡ್ಬೇಡಿ!
ಕಾಂತಾರ ಸಿನಿಮಾದ ದೈವದ ಕೂಗು ಎಲ್ಲರಲ್ಲಿ ಒಂದು ಭಯ ಹುಟ್ಟಿಸುತ್ತದೆ. ಅದರ ಬೆನ್ನಲ್ಲಿಯೇ ಭಕ್ತಿ-ಭಾವವನ್ನೂ ಹುಟ್ಟಿಸೋದು ಇದೆ. ಇಂತಹ ಕೂಗು ದೈವಕ್ಕೆ ಮಾತ್ರ ಸೀಮಿತ. ಇದನ್ನ ಎಲ್ಲರೂ ಕೂಗಬೇಡಿ. ಕೂಗಿ ಅವಮಾನಿಸಬೇಡಿ ಎಂದು ರಿಷಬ್ ಕೇಳಿಕೊಳ್ತಾನೇ ಇದ್ದಾರೆ.


The Vibe After Watching Kantara Video now got viral
ದೈವದ ಕೂಗು-ಹೆಂಡ್ತಿ ಹೆದರಿಸೋ ರೀಲ್ಸ್ ಟ್ವಿಟರ್ ಅಲ್ಲಿ ಶೇರ್?


ಆದರೆ ಜನಕ್ಕೆ ಇದು ಅರ್ಥ ಆಗ್ತಾನೇ ಇಲ್ಲ. ಮಕ್ಕಳು ಈ ರೀತಿ ಮಾಡಿದ್ರೆ ಅರ್ಥೈಸಬಹುದು ಆದರೆ ದೊಡ್ಡವರೇ ಈ ರೀತಿ ಮಾಡಿದ್ರೆ ಯಾರು ಹೇಳೋರು. ಅದು ಬಿಡಿ, ಈ ಕೂಗನ್ನ ರೀಲ್ಸ್ ಮಾಡಿರೋದು ಇನ್ನೂ ಒಂದು ದುರಂತವೇ ಸರಿ.


ಹೆಂಡ್ತಿ ಭಯ ಪಡಿಸಲು ದೈವದ ಕೂಗು-ರೀಲ್ಸ್ ವೈರಲ್ !
ಇಂತಹ ಒಂದು ರೀಲ್ಸ್ ಹೆಚ್ಚು ಗಮನ ಸೆಳೆಯುತ್ತಿದೆ. ವೈರಲ್ ಕೂಡ ಆಗುತ್ತಿದೆ. ಕಾಂತಾರ ಸಿನಿಮಾದ ದೈವದ ಕೂಗು ಕೂಗುತ್ತಲೇ, ಮಲಗಿದ ಹೆಂಡ್ತಿಯನ್ನ ಭಯಪಡಿಸೋದೇ ಈ ರೀಲ್ಸ್ ನಲ್ಲಿ ಕಾಣಿಸುತ್ತದೆ. ಅದುವೇ ಈ ರೀಲ್ಸ್ ನ ಕಂಟೆಂಟ್ ಕೂಡ ಆಗಿದೆ.


ದೈವದ ಕೂಗನ್ನು ತುಳುನಾಡಿನ ಜನ ಭಕ್ತಿಯಿಂದಲೇ ಕಾಣುತ್ತಾರೆ. ಆದರೆ ಎಂದಿಗೂ ಅನುಕರಿಸಿ ಅವಮಾನಿಸೋದಿಲ್ಲ. ಕಾಂತಾರ ಸಿನಿಮಾ ಇಲ್ಲಿಯ ಸಂಸ್ಕೃತಿಯನ್ನ ಕಟ್ಟಿಕೊಟ್ಟಿದೆ. ಆದರೆ ಜನ ನೋಡ್ರಿ ಹೇಗಿದ್ದಾರೆ? ವೈರಲ್ ಅನಿಸೋ ಕಂಟೆಂಟ್ ಎತ್ತಿಕೊಂಡು ರೀಲ್ಸ್ ಮಾಡಿದ್ದಾರೆ.


ದೈವದ ಕೂಗು-ಹೆಂಡ್ತಿ ಹೆದರಿಸೋ ರೀಲ್ಸ್ ಟ್ವಿಟರ್ ಅಲ್ಲಿ ಶೇರ್?
ಕಾಂತಾರ ಚಿತ್ರದ ದೈವದ ಕೂಗನ್ನು ಅನುಕರಿಸಿರೋ ಒಂದು ರೀಲ್ಸ್ ಕಳೆದ ಒಂದು ವಾರದಿಂದಲೇ ಹರಿದಾಡುತ್ತಿದೆ. ಎಲ್ಲೆಡೆ ಇದು ಅಷ್ಟೇ ವೈರಲ್ ಆಗುತ್ತಲೂ ಇದೆ. ಇಂತಹ ವೀಡಿಯೋ ಚಿತ್ರದ ನಾಯಕಿ ಸಪ್ತಮಿ ಗೌಡ ಹೆಸರಿನ ಟ್ವಿಟರ್ ಪೇಜ್ನಲ್ಲೂ ಈಗ ಶೇರ್ ಆಗಿದೆ.The Vibe After Watching Kantara ಅನ್ನೂ ಟೈಟಲ್ ಕೂಡ ಈ ಒಂದು ವೀಡಿಯೋಗೆ ಕೊಡಲಾಗಿದೆ. ಆದರೆ, ಇದು ಸಪ್ತಮಿ ಗೌಡ ಹೆಸರಿನ ಟ್ವಿಟರ್ ನಲ್ಲಿಯೇ ಶೇರ್ ಆಗಿದ್ದು, ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.


ಟ್ವಿಟರ್ ನಲ್ಲಿ ಏನೇನೋ ಆಗುತ್ತದೆ-ಇದು ಅದೇನಾ?
ಕಾಂತಾರ ದೈವದ ಕೂಗಿನ ರೀಲ್ಸ್ ಹೆಚ್ಚು ವೈರಲ್ ಆಗಿದೆ. ಇದನ್ನ ಇನ್ನಷ್ಟು ವೈರಲ್ ಮಾಡೋಕೆ ಫೇಕ್ ಟ್ವಿಟರ್ ಅಕೌಂಟ್ ಮಾಡಿದ್ರಾ? ಗೊತ್ತಿಲ್ಲ. ಆದರೆ ಸಪ್ತಮಿ ಗೌಡ ಹೆಸರಿನ ಜೊತೆಗೆ ಅವರ ಫೋಟೋ ಇರೋ ಅಕೌಂಟ್​ ನಲ್ಲಿಯೇ ಈ ಒಂದು ವೀಡಿಯೋ ಶೇರ್ ಆಗಿದೆ.


ಇದನ್ನೂ ಓದಿ: Razia Ram: ಈ ಸೀರಿಯಲ್ ನಾಯಕ ನಿಜ ಜೀವನದಲ್ಲಿ ಡೆಲಿವರಿ ಬಾಯ್​ ಆಗಿದ್ರು! ಅಥರ್ವನ ಬದುಕಿನ ರಿಯಲ್ ಸ್ಟೋರಿ


ಇದನ್ನ ನೋಡಿದ್ರೆ, ರಿಷಬ್ ಶೆಟ್ರ ಮನವಿ ಯಾರಿಗೂ ಇನ್ನೂ ತಲುಪಿಲ್ಲ ಅನಿಸುತ್ತಿದೆ. ದೈವದ ಕೂಗು ಕೂಗಬೇಡಿ, ಕೂಗಿ ಅವಮಾನಿಸಬೇಡಿ ಅಂತಲೇ ಶೆಟ್ರು ಕೇಳಿಕೊಳ್ತಿದ್ದಾರೆ. ಅವರ ಮಾತಿಗೆ ಬೆಲೆನೇ ಇಲ್ವೇನೋ ಎಂದು ಈ ವೀಡಿಯೋ ನೋಡಿದಾಗ ಅನಿಸುತ್ತಿದೆ.

First published: