Puneeth Rajkumar: ಚಂದನವನದಿಂದ ಕಾಣೆಯಾದ `ಬೆಟ್ಟದ ಹೂ’: ಅಣ್ಣಾವ್ರ ಮತ್ತು ಅಪ್ಪು ಸಾವಿನಲ್ಲಿ ಸಾಮ್ಯತೆ!

Puneeth Rajkumar: ಚಿಕ್ಕ ವಯಸ್ಸಿನಿಂದಲೂ ಅಪ್ಪನನ್ನೇ ನೋಡಿ ಕಲಿತ ಅಪ್ಪು, ಹೇಳದೇ , ಕೇಳದೆ  ಇಹಲೋಕ ತ್ಯಜಿಸಿದ್ದಾರೆ. ಡಾ.ರಾಜ್​ಕುಮಾರ್​ ನಿಧನಕ್ಕೂ, ಮಗ ಪುನೀತ್​ ನಿಧನಕ್ಕೂ ಕೆಲ ಸಾಮ್ಯತೆಗಳಿವೆ.

ಡಾ.ರಾಜ್​ಕುಮಾರ್ ಹಾಗೂ ಪುನೀತ್​ ರಾಜ್​ಕುಮಾರ್

ಡಾ.ರಾಜ್​ಕುಮಾರ್ ಹಾಗೂ ಪುನೀತ್​ ರಾಜ್​ಕುಮಾರ್

  • Share this:
`ಚಂದನವನ’ದಿಂದ `ಬೆಟ್ಟದ ಹೂ’ ಕಾಣೆಯಾಗಿದೆ. ನಿನ್ನೆಸ್ಯಾಂಡಲ್​ವುಡ್ ಪವರ್​ ಸ್ಟಾರ್(Sandalwood Power Star)​ ನಮ್ಮನ್ನ ಬಿಟ್ಟು ಬಾರದ ಊರಿಗೆ ಹೊರಟು ಹೋಗಿದ್ದಾರೆ. ಈ ವಿಚಾರ ಯಾರಿಂದಲೂ ಸಹಿಸಿಕೊಳ್ಳಲು ಆಗುತ್ತಿಲ್ಲ. ಡಾ.ರಾಜ್​ಕುಮಾರ್(Dr.Rajkumar)​ ಅಂದರೆ ಕನ್ನಡ ಸಿನಿಮಾ. ಆದರೆ ಅಣ್ಣಾವ್ರ ಕೊನೆಯ ಕುಡಿ ಅಪ್ಪು(Appu) ನಮ್ಮನ್ನೆಲ್ಲ ಬಿಟ್ಟು ಇಹಲೋಕ ತ್ಯಜಿಸಿದ್ದಾರೆ. ದೊಡ್ಮನೆಯ ಮಗ ಈ ರೀತಿ ಮೃತಪಟ್ಟಿರುವುದು,  ಅವರ ಅಭಿಮಾನಿಗಳ(Fans)ನ್ನ ಶೋಕಸಾಗರದಲ್ಲಿ ಮುಳುಗಿಸಿದೆ. ಇಡೀ ಕರ್ನಾಟಕ(Karnataka) ಮರೆಯಾದ ಅಪ್ಪುವಿಗಾಗಿ ಮರುಗುತ್ತಿದೆ.  ಅಪ್ಪು ಇನ್ನೂ ನಮ್ಮ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಅಣ್ಣಾವ್ರು ಹೇಳುತ್ತಿದ್ದಂತೆ ಅಭಿಮಾನಿಗಳು ಇರುವವರೆಗೂ ಕಲಾವಿದನಿಗೆ ಸಾವಿಲ್ಲ. ಚಿಕ್ಕ ವಯಸ್ಸಿನಿಂದಲೂ ಅಪ್ಪನನ್ನೇ ನೋಡಿ ಕಲಿತ ಅಪ್ಪು, ಹೇಳದೆ , ಕೇಳದೇ  ಇಹಲೋಕ ತ್ಯಜಿಸಿದ್ದಾರೆ. ಡಾ.ರಾಜ್​ಕುಮಾರ್​ ನಿಧನಕ್ಕೂ, ಮಗ ಪುನೀತ್​ ನಿಧನಕ್ಕೂ ಕೆಲ ಸಾಮ್ಯತೆ(Similarity)ಗಳಿವೆ. ಅಪ್ಪನಂತೆ ಮಗನು ಕೂಡ ವಿಧಿವಶರಾಗಿದ್ದಾರೆ. ಅಪ್ಪು ಸಾವಿಗೂ ಮುನ್ನ ನಡೆದಿರುವ ಘಟನೆಗಳು, ಡಾ.ರಾಜ್​ಕುಮಾರ್​ ಅವರ ಸಾವಿಗೂ ಕೆಲ ಹೋಲಿಕೆಗಳಿವೆ. 

ಮರುಕಳಿಸಿದ 12 ಏಪ್ರಿಲ್​ 2006ರ ಕರಾಳ ದಿನ

ಕರುನಾಡು ಮಾತ್ರವಲ್ಲ, ಬೇರೆ ರಾಜ್ಯದ ಅಭಿಮಾನಿಗಳು ಕೂಡ ಅಪ್ಪುಗಾಗಿ ಕಂಬನಿ ಮಿಡಿಯುತ್ತಿದ್ದಾರೆ. ಅಸಖ್ಯಾಂತ ಸಂಖ್ಯೆಯಲ್ಲಿ ಅಭಿಮಾನಿಗಳು ಅಪ್ಪು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ನಿನ್ನೆ ರಾತ್ರಿಯಿಂದ ಕಂಠೀರವ ಸ್ಟೇಡಿಯಂನಲ್ಲಿ ಅಭಿಮಾನಿಗಳು ಸೇರಿದ್ದಾರೆ. ತಮ್ಮ ನೆಚ್ಚಿನ ನಟನ ಅಂತಿಮ ದರ್ಶನ ಪಡೆಯಲು ಕಾತುರದಿಂದ ಕಾಯುತ್ತಿದ್ದಾರೆ. ಇದನ್ನು ನೋಡಿದಾಗ 12 ಏಪ್ರಿಲ್​ 2006 ದಿನ ನಡೆದ ಕಹಿ ಘಟನೆಗಳು ಕಣ್ಮುಂದೆ ಬರುತ್ತಿವೆ. ಅದು ಅಣ್ಣಾವ್ರು ನಮ್ಮನ್ನೆಲ್ಲ ಬಿಟ್ಟು ಹೊದ ದಿನ. ಅಂದೂ ಕೂಡ ಅಣ್ಣಾವ್ರ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳು ಬಂದಿದ್ದನ್ನು ನಿಜಕ್ಕೂ ನಾಲ್ಕು ಸಾಲಿನಲ್ಲಿ ಬರೆಯಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಅಂದು ಉದ್ಭವಿಸಿದ್ದ ಪರಿಸ್ಥಿತಿ ಮತ್ತೆ ಮರುಕಳಿಸಿದೆ. ಅಂದು ನಡೆದ ಕಹಿ ಘಟನೆಗಳು ನಡೆಯದಿದ್ದರೂ, ಕೆಲ ಹೋಲಿಕೆಗಳು ಕಾಣಿಸುತ್ತಿವೆ.


ಹೃದಯಾಘಾತದಿಂದ ಮೃತಪಟ್ಟ ಅಣ್ಣಾವ್ರು-ಅಪ್ಪು

ಡಾ.ರಾಜ್​ಕುಮಾರ್​ ಹಾಗೂ ಅವರ ಕಿರಿಯ ಪುತ್ರ ಪುನೀತ್​ ರಾಜ್​ಕುಮಾರ್​ ಇಬ್ಬರೂ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಪುನೀತ್​ ವರ್ಕೌಟ್​ನಿಂದ ಬಂದ ನಂತರ ಕುಸಿದು ಬಿದ್ದಿದ್ದರು. ಡಾ.ರಾಜ್​ಕುಮಾರ್ ಕೂಡ ಮುಂಜಾನೆಯೆ ವಾಕಿಂಗ್​ ಮುಗಿಸಿ ಮನೆಗೆ ಬಂದಿದ್ದರು. ಸುಮಾರು 1:30ಕ್ಕೆ ರಾಜಣ್ಣ ಮನೆಯ ಸೋಫಾ ಮೇಲೆ ಕುಸಿದು ಬಿದ್ದಿದ್ದರು. ಆರಾಮಾಗಿ ಕುಳಿತಿದ್ದ ರಾಜ್​, ಫ್ಯಾನ್​ ಸ್ಪೀಡ್​ ಕಡಿಮೆ ಮಾಡುವಂತೆ ಹೇಳಿದ್ದರು. ಬಳಿಕ ತಕ್ಷಣವೇ ಕುಸಿದು ಬಿದ್ದಿದ್ದರು.​

ಡಾ.ರಮಣ ರಾವ್​ ಅವರಿಂದಲೇ ಅಣ್ಣಾವ್ರ ಕೊನೆಯ ಪರೀಕ್ಷೆ

ರಾಜ್​ಕುಮಾರ್​ ಅವರು ಕುಸಿದು ಬಿಳುತ್ತಿದ್ದಂತೆ, ವೈದ್ಯ ​ ಡಾ.ರಮಣ ರಾವ್​ ಅವರನ್ನು ಕರೆಸಲಾಯಿತು. ವಿಷಯ ತಿಳಿದ ಮೂರೇ ನಿಮಿಷದಲ್ಲಿ ರಮಣ ರಾವ್​ ಅಣ್ಣಾವ್ರ ಮನೆಗೆ ಬಂದಿದ್ದರು. ರಾಜ್​ಕುಮಾರ್ ಅವರ ಹೃದಯ ಬಡಿತ ಕಡಿಮೆಯಾಗಿತ್ತು.ಹೃದಯವನ್ನು ಪುನರುಜ್ಜೀವನಗೊಳಿಸಲು ಸಾಮಾನ್ಯ ಸಿಪಿಆರ್ ರೂಟೀನ್ ಅನ್ನು ಕೂಡ ರಮಣ್​ರಾವ್​ರವರು ಪ್ರಯತ್ನಿಸಿದರು. ಇದಾದ ಬಳಿಕ ಅವರನ್ನುಎಂಎಸ್ ರಾಮಯ್ಯ ಮೆಮೋರಿಯಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಡಾ.ರಾಜ್​ಕುಮಾರ್​ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ.

ಮಧ್ಯಾಹ್ನ 2:05ಕ್ಕೆ ಕೊನೆಯುಸಿರೆಳೆದಿದ್ದ `ಬಹದ್ಧೂರ್​ ಗಂಡು’

2006, ಏಪ್ರಿಲ್ 12ರಂದು ಮಧ್ಯಾಹ್ನ 2.05ಕ್ಕೆ ಡಾ.ರಾಜ್​ಕುಮಾರ್ ​ಅವರ ನಿಧನದ ಸುದ್ದಿಯನ್ನು ಘೋಷಿಸಲಾಯಿತು.ಅದಗಿ 15 ವರ್ಷಗಳ ಬಳಿಕ, ಅಂತದ್ದೇ ಕರಾಳ ದಿನವೊಂದು ಮರುಕಳಿಸಿದೆ. ಅದೇ ಕುಟುಂಬದಲ್ಲಿ, ಮತ್ತೆ ಅಂತದ್ದೇ ಅಗಾಧ ನೋವಿನ ಘಟನೆ. ಫಿಟ್‍ನೆಸ್ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ನೋವು ಅವರ ಉಸಿರನ್ನೇ ಕಸಿದುಬಿಟ್ಟಿದೆ. ನಿನ್ನೆ ಮಧ್ಯಾಹ್ನ 2:25ಕ್ಕೆ ಪುನೀತ್​ ನಮ್ಮನೆಲ್ಲ ಅಗಲಿರುವ ವಿಚಾರವನ್ನು ಘೋಷಿಸಲಾಯಿತು.


ಮರಣಾನಂತರ ಕಣ್ಣು ದಾನ ಮಾಡಿದ ಅಪ್ಪ-ಮಗ

ಡಾ.ರಾಜ್​ಕುಮಾರ್​ ನಿಧನದ ನಂತರ ಅವರ ಕಣ್ಣುಗಳನ್ನ ದಾನ ಮಾಡಲಾಗಿತ್ತು. ಇದೀಗ ಅಪ್ಪು ಅವರ ಕಣ್ಣುಗಳನ್ನ ಕೂಡ ದಾನಬಮಾಡಲಾಗಿದೆ. ನಾವು ಇಹಲೋಕ ತ್ಯಜಿಸಿದರೂ, ಮತ್ತೊಬ್ಬರಿಗೆ ಬೆಳಕಾಗಾಬೇಕೆಂದು ಅಣ್ಣಾವ್ರು ಸದಾ ಹೇಳುತ್ತಿದ್ದರು. ನಟನೆ, ಫೈಟ್, ಎಲ್ಲದರಲ್ಲೂ ಅಪ್ಪನನ್ನೇ ನೋಡಿ ಕಲಿತುಕೊಂಡು ಬಂದ ಅಪ್ಪು, ಸಾವಿನ ನಂತರ ಕಣ್ಣು ದಾನ ಮಾಡಿರುವುದು ಅದೆಷ್ಟೋ ಮಂದಿಗೆ ಸ್ಪೂರ್ತಿಯಾಗಿದ್ದಾರೆ. ಅಪ್ಪು ಅವರ ಅಗಲಿಕೆಯ ನೋವು ಎಂದಿಗೂ ಮಾಸುವುದಿಲ್ಲ.
First published: