Thank God ಸಿನಿಮಾದಲ್ಲಿ ಚಿತ್ರಗುಪ್ತನಾದ ಅಜಯ್ ದೇವಗನ್! ಟ್ರೈಲರ್ ಹೇಗಿದೆ ಗೊತ್ತಾ?

ನಟ ಸಿದ್ದಾರ್ಥ್ ಮತ್ತೊಮ್ಮೆ ತಮ್ಮ ಅಭಿಮಾನಿಗಳನ್ನು ‘ಥ್ಯಾಂಕ್ ಗಾಡ್’ ಚಿತ್ರದ ಮೂಲಕ ರಂಜಿಸಲು ಸಜ್ಜಾಗಿದ್ದಾರೆ. ಇದರಲ್ಲಿ ಇನ್ನೊಬ್ಬ ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಥ್ಯಾಂಕ್ ಗಾಡ್’ ಚಿತ್ರ

‘ಥ್ಯಾಂಕ್ ಗಾಡ್’ ಚಿತ್ರ

  • Share this:
ನೀವು ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ (Siddharth Malhotra) ಅವರ ದೊಡ್ಡ ಅಭಿಮಾನಿಯಾಗಿದ್ದರೆ, ಅವರ ಮುಂಬರುವ ಚಿತ್ರಕ್ಕೆ ತುಂಬಾನೇ ಕಾತುರತೆಯಿಂದ ಕಾಯುತ್ತಿರುತ್ತೀರಿ. ಯಾವುದು ಅವರ ಮುಂದಿನ ಚಿತ್ರ ಅಂತ ಈಗಾಗಲೇ ಬಹುತೇಕ ಅಭಿಮಾನಿಗಳಿಗೆ ಮತ್ತು ಸಿನಿ ಪ್ರೇಕ್ಷಕರಿಗೆ ಗೊತ್ತಾಗಿರುತ್ತದೆ. ಹೌದು.. ನಟ ಸಿದ್ದಾರ್ಥ್ ಮತ್ತೊಮ್ಮೆ ತಮ್ಮ ಅಭಿಮಾನಿಗಳನ್ನು ‘ಥ್ಯಾಂಕ್ ಗಾಡ್’ (Thank God) ಚಿತ್ರದ ಮೂಲಕ ರಂಜಿಸಲು ಸಜ್ಜಾಗಿದ್ದಾರೆ, ಇದರಲ್ಲಿ ಇನ್ನೊಬ್ಬ ಬಾಲಿವುಡ್ ನಟ ಅಜಯ್ ದೇವಗನ್ (ಅಜಯ್ ದೇವಗನ್) ಮತ್ತು ನಟಿ ರಾಕುಲ್ ಪ್ರೀತ್ ಸಿಂಗ್ Rakul Preet Singh) ಅವರು ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಥ್ಯಾಂಕ್ ಗಾಡ್’ ಸಿನೆಮಾ ರಿಲೀಸ್ ಯಾವಾಗ?
ಟಿ ಸಿರೀಸ್ ಮತ್ತು ಮಾರುತಿ ಇಂಟರ್ನ್ಯಾಷನಲ್ ನಿರ್ಮಾಣದ ಈ ಹಾಸ್ಯ ಚಿತ್ರವನ್ನು ಇಂದ್ರ ಕುಮಾರ್ ಬರೆದು ನಿರ್ದೇಶಿಸಿದ್ದಾರೆ. ‘ಥ್ಯಾಂಕ್ ಗಾಡ್’ ಚಿತ್ರ ಇದೇ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಎಂದರೆ 25ನೇ ತಾರೀಖಿನಂದು ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗಲಿದೆ.

ಅಜಯ್ ದೇವಗನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಬಹು ನಿರೀಕ್ಷಿತ ಚಿತ್ರ
ಅಭಿಮಾನಿಗಳು ಈ ಚಿತ್ರದ ಪ್ರತಿಯೊಂದು ಅಪ್ಡೇಟ್ ಗಳಿಗಾಗಿ ತುಂಬಾನೇ ಕಾತುರದಿಂದ ಕಾಯುತ್ತಿದ್ದಾರೆ ಮತ್ತು ಇತ್ತೀಚೆಗಷ್ಟೇ ಸಿದ್ಧಾರ್ಥ್ ಅವರು ‘ಥ್ಯಾಂಕ್ ಗಾಡ್’ ಚಿತ್ರದಲ್ಲಿ ಅವರ ಫಸ್ಟ್ ಲುಕ್ ವೊಂದನ್ನು ಅನಾವರಣಗೊಳಿಸಿದ್ದರು. ನಟ ಅಜಯ್ ದೇವಗನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಬಹು ನಿರೀಕ್ಷಿತ ಚಿತ್ರದ ಟ್ರೈಲರ್ ಹೊರ ಬಂದಿದೆ ನೋಡಿ. ಇದೊಂದು ಕುಟುಂಬ ಸಮೇತ ಎಲ್ಲರೂ ಕೂತು ನೋಡುವ ಮನೋರಂಜನೆಯ ಸಿನೆಮಾ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Akshay Kumar: ಕಿಲಾಡಿ ಅಕ್ಷಯ್ ಮುಂದೆಯಾದರೂ ನೀಡಲಿದ್ದಾರಾ ಹಿಟ್ ಸಿನಿಮಾ?

ಅಜಯ್ ಮತ್ತು ಸಿದ್ಧಾರ್ಥ್ ಅವರ ಫಸ್ಟ್ ಲುಕ್ ಪೋಸ್ಟರ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸಿದ್ದವು ಮತ್ತು ಪ್ರೇಕ್ಷಕರು ತಮ್ಮ ನೆಚ್ಚಿನ ತಾರೆಗಳನ್ನು ಬೆರಗುಗೊಳಿಸುವ ಅವತಾರದಲ್ಲಿ ನೋಡಲು ತಮ್ಮ ಉತ್ಸಾಹವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಟ್ರೈಲರ್ ಅನ್ನು ಹಂಚಿಕೊಂಡಿರುವ ‘ಶೆರ್ಶಾಹ್’ ಚಿತ್ರದ ನಟ "ಈ ದೀಪಾವಳಿ ಹಬ್ಬಕ್ಕೆ, ನಾವು ‘ದ ಗೇಮ್ ಆಫ್ ಲೈಫ್’ ಅನ್ನು ಪ್ರಾರಂಭಿಸಲು ಸಜ್ಜಾಗಿದ್ದೇವೆ, ಅಲ್ಲಿ ಆಗುತ್ತೆ ಎಲ್ಲರ ಕರ್ಮದ ಲೆಕ್ಕಾಚಾರ! ಈಗ ‘ಥ್ಯಾಂಕ್ ಗಾಡ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ” ಎಂದು ಬರೆದಿದ್ದಾರೆ.

ಈ 3 ನಿಮಿಷದ ಟ್ರೈಲರ್ ನಲ್ಲಿಏನೇನಿದೆ?
3 ನಿಮಿಷದ ಟ್ರೈಲರ್ ನಲ್ಲಿ ನಟ ಸಿದ್ಧಾರ್ಥ್ ಅವರು ಸಾಮಾನ್ಯ ವ್ಯಕ್ತಿಯ ಪಾತ್ರವಾದ ಆಯಾನ್ ಕಪೂರ್ ಎಂಬ ಹೆಸರಿನ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ, ಮತ್ತೊಂದೆಡೆ ಅಜಯ್ ಅವರು ಚಿತ್ರಗುಪ್ತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ನಟಿ ರಾಕುಲ್ ಅವರು ಸಿದ್ಧಾರ್ಥ್ ಅವರ ಪತ್ನಿ ಆರುಹಿ ಕಪೂರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಲಂಕಾದ ಗಾಯಕ ಯೋಹಾನಿ ಅವರ ಜನಪ್ರಿಯ ಹಾಡು ‘ಮಣಿಕೆ ಮಾಗೆ ಹಿತೆ’ ಅವರ ಅಧಿಕೃತ ಹಿಂದಿ ರಿಮೇಕ್ ಆಗಿರುವ ಹಾಡಿನಲ್ಲಿ ನೋರಾ ಫತೇಹಿ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

[embed]https://youtu.be/x-sgnhYJGOA[/embed]

'ಥ್ಯಾಂಕ್ ಗಾಡ್' ಒಂದು ಉಲ್ಲಾಸಭರಿತ ಸ್ಲೈಸ್-ಆಫ್-ಲೈಫ್ ಚಿತ್ರವಾಗಿದ್ದು, ಇದು ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗಲಿದೆ. ಈ ಚಿತ್ರವು ನಿಮ್ಮನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವುದಂತೂ ಗ್ಯಾರೆಂಟಿ ಅಂತ ಹೇಳಲಾಗುತ್ತಿದೆ. ಇಷ್ಟೇ ಅಲ್ಲದೆ ಈ ಚಿತ್ರ ಕೊನೆಯಲ್ಲಿ ಒಂದು ಸುಂದರವಾದ ಸಂದೇಶವನ್ನು ಸಹ ನೀಡುತ್ತದೆ.

ರಾಕುಲ್ ಅವರೊಂದಿಗೆ ಅಜಯ್ ನಟಿಸುತ್ತಿರುವ ಮೂರನೇ ಸಿನಿಮಾವಂತೆ 
ಏತನ್ಮಧ್ಯೆ, ಇದು ರಾಕುಲ್ ಅವರೊಂದಿಗೆ ಅಜಯ್ ನಟಿಸುತ್ತಿರುವ ಮೂರನೇ ಚಿತ್ರವಾಗಿದೆ. ಈ ಹಿಂದೆ ಇವರಿಬ್ಬರು ‘ದೇ ದೇ ಪ್ಯಾರ್ ದೇ’ ಮತ್ತು ‘ರನ್ ವೇ 34’ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಸಿದ್ಧಾರ್ಥ್ ಮತ್ತು ರಾಕುಲ್ ಅವರಿಬ್ಬರು ಈ ಹಿಂದೆ ‘ಐಯಾರಿ’ ಮತ್ತು ‘ಮಾರ್ಜಾವ’ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಸಿದ್ಧಾರ್ಥ್, ರಾಕುಲ್ ಮತ್ತು ಅಜಯ್ ಅವರು ಒಂದು ಚಿತ್ರಕ್ಕಾಗಿ ಒಟ್ಟಿಗೆ ಕೆಲಸ ಮಾಡುತ್ತಿರುವುದು ಎಂದು ಹೇಳಬಹುದು.

ಇದನ್ನೂ ಓದಿ:  Surya 42: ಇವ್ರು ಒನ್​ ಮ್ಯಾನ್​ ಆರ್ಮಿ; ಸೂರ್ಯ 42 ಸಿನಿಮಾ ಮೋಷನ್ ಪೋಸ್ಟರ್ ರಿಲೀಸ್!​

ಅಕ್ಟೋಬರ್ 24 ರಂದು ಬಿಡುಗಡೆಯಾಗಲಿರುವ ನಟ ಅಕ್ಷಯ್ ಕುಮಾರ್ ಅಭಿನಯದ ‘ರಾಮ್ ಸೇತು’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ‘ಥ್ಯಾಂಕ್ ಗಾಡ್’ ಚಿತ್ರದ ಜೊತೆ ಸೆಣಸಾಡಲಿದೆ.
Published by:Ashwini Prabhu
First published: