ಮೂವರ ಕಾಟದಿಂದ ಬೇಸತ್ತು ಆತ್ಮಹತ್ಯೆ!; ಕಿರುತೆರೆ ಸುಂದರಿಯ ಸೂಸೈಡ್​​ಗೆ ಹೊಸ ಟ್ವಿಸ್ಟ್!

Kondapalli Sravani: ಟಿಕ್​ಟಾಕ್​ನಲ್ಲಿ ಪರಿಚಯವಾದ ದೇವರಾಜ್ ಎಂಬಾತನೇ ಶ್ರಾವಣಿಯ ಆತ್ಮಹತ್ಯೆಗೆ ಪ್ರಮುಖ ಕಾರಣ ಎನ್ನಲಾಗಿತ್ತು. ಆದರೆ ಈಗ ದಿನಕಳೆದಂತೆ, ಪೊಲೀಸರ ತನಿಖೆ ಮುಂದುವರೆದಂತೆ ಹೊಸ ಹೊಸ ಆಯಾಮಗಳು ತೆರೆದುಕೊಳ್ಳುತ್ತಿವೆ.

news18-kannada
Updated:September 15, 2020, 10:52 PM IST
ಮೂವರ ಕಾಟದಿಂದ ಬೇಸತ್ತು ಆತ್ಮಹತ್ಯೆ!; ಕಿರುತೆರೆ ಸುಂದರಿಯ ಸೂಸೈಡ್​​ಗೆ ಹೊಸ ಟ್ವಿಸ್ಟ್!
ಶ್ರಾವಣಿ ಕೊಂಡಪಲ್ಲಿ
  • Share this:
ಖ್ಯಾತ ಕಿರುತೆರೆ ನಟಿ ಶ್ರಾವಣಿ ಕೊಂಡಪಲ್ಲಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಮೊದಲು ಟಿಕ್​ಟಾಕ್​ನಲ್ಲಿ ಪರಿಚಯವಾದ ದೇವರಾಜ್ ಎಂಬಾತನೇ ಶ್ರಾವಣಿಯ ಆತ್ಮಹತ್ಯೆಗೆ ಪ್ರಮುಖ ಕಾರಣ ಎನ್ನಲಾಗಿತ್ತು. ಆದರೆ ಈಗ ದಿನಕಳೆದಂತೆ, ಪೊಲೀಸರ ತನಿಖೆ ಮುಂದುವರೆದಂತೆ ಹೊಸ ಹೊಸ ಆಯಾಮಗಳು ತೆರೆದುಕೊಳ್ಳುತ್ತಿವೆ.

ಹೌದು, ಮೂಲತಃ ಆಂಧ್ರ ಪ್ರದೇಶದ ಗೋದಾವರಿಯವರಾದ ಶ್ರಾವಣಿ ಕೊಂಡಪಲ್ಲಿ ಅವರು ಎಂಟು ವರ್ಷಗಳ ಹಿಂದೆ ಕಿರುತೆರೆಯಲ್ಲಿ ಬದುಕು ಕಟ್ಟಿಕೊಳ್ಳಲು ಹೈದರಾಬಾದ್​ಗೆ ಬಂದಿದ್ದರು. ಆಡಿಷನ್ಸ್ ಕೊಡುತ್ತಾ, ಅವಕಾಶಕ್ಕಾಗಿ ಹುಡುಕಾಡುತ್ತಿರುವಾಗಲೇ ಅವರಿಗೆ ಸಾಯಿಕೃಷ್ಣ ರೆಡ್ಡಿ ಎಂಬಾತನ ಪರಿಚಯವಾಗಿತ್ತು. ನಂತರ ಗೆಳೆತನವಾಗಿ, ಇಬ್ಬರೂ ಪರಸ್ಪರ ಪ್ರೀತಿಸತೊಡಗಿದ್ದರು. ಆದರೆ ಮೂರು ವರ್ಷಗಳ ಇವರ ಪ್ರೀತಿ ಕಾರಣಾಂತರಗಳಿಂದ 2018ರಲ್ಲಿ ಮುರಿದುಬಿದ್ದಿತ್ತು.

ಅದೇ ಸಂದರ್ಭದಲ್ಲಿ ಶ್ರಾವಣಿ ಬದುಕಿಗೆ ಬಂದಿದ್ದೇ ಅಶೋಕ್ ರೆಡ್ಡಿ. ಆತ ನಿರ್ಮಾಣದ ಧಾರಾವಾಹಿಯೊಂದರಲ್ಲಿ ಶ್ರಾವಣಿಗೆ ನಟಿಸಲು ಅವಕಾಶ ಕೊಟ್ಟಿದ್ದ. ಆದರೆ ಕೆಲ ತಿಂಗಳಲ್ಲೇ ಈ ಸಂಬಂಧವೂ ಮುರಿದುಬಿದ್ದಿತ್ತು. ಆ ಸಮಯದಲ್ಲಿ ಟಿಕ್​ಟಾಕ್​ನಲ್ಲಿ ದೇವರಾಜ್ ಪರಿಚಿತನಾದ. ಇಬ್ಬರ ನಡುವಿನ ಸಲುಗೆ ಸಾಯಿಕೃಷ್ಣ ರೆಡ್ಡಿಯ ಕಣ್ಣು ಕುಕ್ಕಿತ್ತು. ಜೊತೆಗೆ ಅಶೋಕ್ ರೆಡ್ಡಿಯಲ್ಲೂ ಅಸೂಯೆ ಮೂಡಿತ್ತು. ದೇವರಾಜ್, ಶ್ರಾವಣಿಯ ಗೆಳೆತನವನ್ನು ವಿರೋಧಿಸಿದ ಸಾಯಿಕೃಷ್ಣ ಮತ್ತು ಅಶೋಕ್, ಶ್ರಾವಣಿ ಕುಟುಂಬಕ್ಕೆ ಈ ಬಗ್ಗೆ ದೂರಿದ್ದರು ಕೂಡ.

ಆರ್ಥಿಕವಾಗಿ ಆಗಾಗ ಸಹಾಯ ಮಾಡುತ್ತಿದ್ದ ಕಾರಣ, ಶ್ರಾವಣಿ ಕುಟುಂಬದವರೂ ಸಾಯಿಕೃಷ್ಣ ರೆಡ್ಡಿಯ ಮಾತು ಕೇಳಿ ದೇವರಾಜ್​ನಿಂದ ದೂರ ಇರುವಂತೆ ಶ್ರಾವಣಿ ಮೇಲೆ ಒತ್ತಡ ಹೇರಿದ್ದರು. ಮತ್ತೊಂದೆಡೆ ಶ್ರಾವಣಿ, ಅಶೋಕ್ ಮತ್ತು ಸಾಯಿಕೃಷ್ಣರ ವಿಷಯಗಳು ಗೊತ್ತಾಗಿ, ಇತ್ತ ದೇವರಾಜ್ ಕೂಡ ಆಕೆಯಿಂದ ದೂರಾಗಿದ್ದ.

ನಟಿ ಶ್ರಾವಣಿ ಕೊಂಡಪಲ್ಲಿ


ಹೀಗೆ ‘ಮನಸು ಮಮತ’, ‘ಮೌನರಾಗಂ’ ಸೇರಿದಂತೆ ಹಲವು ಹಿಟ್ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಶ್ರಾವಣಿಯ ವೈಯಕ್ತಿಕ ಜೀವನದಿಂದ ತುಂಬಾ ನೊಂದಿದ್ದರು. ಸಾಯಿಕೃಷ್ಣ ರೆಡ್ಡಿ ಹಾಗೂ ಅಶೋಕ್ ರೆಡ್ಡಿ ಮದುವೆಯಾಗುವುದಾಗಿ ಹೇಳಿ ನಂತರ ದೂರವಾಗಿದ್ದರೆ, ಮತ್ತೊಂದೆಡೆ ತಾವೇ ಪ್ರೀತಿಸಿ ಮದುವೆಯಾಗಲು ಹೊರಟ ದೇವರಾಜ್ ಕೂಡ ತಮ್ಮಿಂದ ದೂರಾದ ನೋವು ಅವರಿಗೆ ಅರಗಿಸಿಕೊಳ್ಳಲಾಗಲಿಲ್ಲ. ಮಾತ್ರವಲ್ಲ ಮನೆಯಲ್ಲೇ ಮಾನಸಿಕ ಹಿಂಸೆ ಹೆಚ್ಚಾಗಿತ್ತು. ಈ ಎಲ್ಲ ವಿಷಯಗಳ ಬಗ್ಗೆ ಸುದೀರ್ಘವಾಗಿ ದೇವರಾಜ್ ಜೊತೆ ಮಾತನಾಡಿದ ಶ್ರಾವಣಿ ಸೆಪ್ಟೆಂಬರ್ 8ರಂದು ಆತ್ಮಹತ್ಯೆಗೆ ಶರಣಾಗಿದರು.

ನಟಿ ಶ್ರಾವಣಿ ಕೊಂಡಪಲ್ಲಿ
ಪ್ರಾರಂಭದಲ್ಲಿ ದೇವರಾಜ್ ಕಾರಣ ಎಂದು ಹೈದರಾಬಾದ್ ಪೊಲೀಸರು ಆತನನ್ನು ಬಂಧಿಸಿದ್ದರು. ಆದರೆ ಕ್ರಮೇಣ ಶ್ರಾವಣಿ ಸಾವಿಗೆ ಕೇವಲ ಒಬ್ಬರಲ್ಲ ಮೂವರು ಕಾರಣ ಎಂಬುದು ಗೊತ್ತಾದ ಕಾರಣ ಈಗಾಗಲೇ ಸಾಯಿಕೃಷ್ಣ ರೆಡ್ಡಿಯನ್ನು ಬಂಧಿಸಿದ್ದು, ಸದ್ಯ ಅಶೋಕ್ ರೆಡ್ಡಿ ತಲೆಮರೆಸಿಕೊಂಡಿದ್ದಾನೆ.
Published by: Harshith AS
First published: September 15, 2020, 10:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading