ಜಪಾನ್‌ನಲ್ಲಿ ರಜನಿಕಾಂತ್‌ ಹವಾ; ಒಲಿಂಪಿಕ್ಸ್ ನಡುವೆ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ದರ್ಬಾರ್‌ ಚಿತ್ರ

ದರ್ಬಾರ್‌ ಚಲನಚಿತ್ರ ಜಪಾನ್‌ ಅಭಿಮಾನಿಗಳಲ್ಲಿ ಸಾಕಷ್ಟು ಅಬ್ಬರ ಸೃಷ್ಟಿಸಿದೆ. ಕ್ಯೋಟೋ, ನಾಗೋಯಾ, ಮತ್ತು ನಿಗಾಟಾದಂತಹ ಹೆಚ್ಚಿನ ನಗರಗಳಲ್ಲಿ ಈ ಚಿತ್ರ ಪ್ರದರ್ಶನವಾಗುವ ಸಾಧ್ಯತೆಯಿದೆ.

ರಜನಿಕಾಂತ್​ ದರ್ಬಾರ್ ಚಿತ್ರ

ರಜನಿಕಾಂತ್​ ದರ್ಬಾರ್ ಚಿತ್ರ

  • Share this:

ಟೋಕಿಯೊ ಒಲಿಂಪಿಕ್ಸ್ 2020ಯಲ್ಲಿ ಟೀಂ ಇಂಡಿಯಾ ಈವರೆಗೆ ಎರಡು ಪದಕ ಪಡೆದಿದ್ದು, ತನ್ನ ಪದಕದ ಪಟ್ಟಿಯನ್ನು ಸುಧಾರಿಸಲು ಹೆಣಗಾಡುತ್ತಿರುವಾಗಲೇ ಭಾರತೀಯ ತಾರೆಯೊಬ್ಬರು ಜಪಾನಿನಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಹೌದು, ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರ ದರ್ಬಾರ್ ಜಪಾನ್‌ನ ಬಾಕ್ಸ್ ಆಫೀಸ್‌ಗೆ ಬೆಂಕಿ ಹಚ್ಚುತ್ತಿದೆ. ಹಲವಾರು ಮಾಧ್ಯಮ ವರದಿಗಳ ಪ್ರಕಾರ, 2020ರ ತಮಿಳು ಚಲನಚಿತ್ರವನ್ನು ಜಪಾನ್‌ನ ಥಿಯೇಟರ್ ಸರಣಿ ಎಮ್‌ಕೆಸಿ ಪ್ಲೆಕ್ಸ್‌ನಲ್ಲಿ ಜುಲೈ 16 ರಂದು ಮರು ಬಿಡುಗಡೆ ಮಾಡಲಾಗಿದೆ. ಜುಲೈ 21 ರವರೆಗೆ ಪ್ರದರ್ಶನಗೊಳ್ಳಬೇಕಿದ್ದ ಚಲನಚಿತ್ರವನ್ನು ಜುಲೈ ಅಂತ್ಯದವರೆಗೆ ವಿಸ್ತರಿಸಲಾಯಿತು. ಕೆಲವು ನಗರಗಳಲ್ಲಿ ಇದು ಆಗಸ್ಟ್ ತಿಂಗಳವರೆಗೆ ಚೆನ್ನಾಗಿ ಓಡಬಹುದು ಎಂದು ಕೆಲವು ವರದಿಗಳು ಸೂಚಿಸುತ್ತವೆ. ಮಾಧ್ಯಮ ವರದಿಗಳ ಪ್ರಕಾರ, ಈ ಚಿತ್ರ ಇಲ್ಲಿಯವರೆಗೆ ಒಟ್ಟಾರೆ 230 ಮಿಲಿಯನ್ ಯೆನ್‌ ನಷ್ಟು ಹಣ ಗಳಿಸಿದೆ.


"ಜಪಾನ್‌ನಲ್ಲಿ ಸೂಪರ್ ಸ್ಟಾರ್ #ರಜನಿಕಾಂತ್ ದರ್ಬಾರ್‌ ಚಿತ್ರಗಳ ಪ್ರದರ್ಶನಗಳನ್ನು ಹೆಚ್ಚಿಸಲಾಗುತ್ತಿದ್ದು, ಟಿಕೆಟ್‌ಗಳಿಗೂ ಸಹ ಹೆಚ್ಚು ಬೇಡಿಕೆ ಇದೆ. ಈ ಹಿನ್ನೆಲೆ ವಿತರಕರು ಲಾಭದಿಂದ ತುಂಬಾ ಸಂತೋಷವಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ತಲೈವಾರ್ ಅನ್ನು ದೊಡ್ಡ ಪರದೆಯಲ್ಲಿ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ..! #DarbarBlockbusterInJapan'' ಎಂದು ಚಿತ್ರರಂಗದ ಟ್ರ್ಯಾಕರ್ ಮನೋಬಾಲ ವಿಜಯಬಾಲನ್ ಟ್ವೀಟ್ ಮಾಡಿದ್ದಾರೆ.

ರೇಜ್‌ ಸೃಷ್ಟಿಸಿದೆ
ದರ್ಬಾರ್‌ ಚಲನಚಿತ್ರ ಜಪಾನ್‌ ಅಭಿಮಾನಿಗಳಲ್ಲಿ ಸಾಕಷ್ಟು ಅಬ್ಬರ ಸೃಷ್ಟಿಸಿದೆ. ಕ್ಯೋಟೋ, ನಾಗೋಯಾ, ಮತ್ತು ನಿಗಾಟಾದಂತಹ ಹೆಚ್ಚಿನ ನಗರಗಳಲ್ಲಿ ಈ ಚಿತ್ರ ಪ್ರದರ್ಶನವಾಗುವ ಸಾಧ್ಯತೆಯಿದೆ.


ಇದನ್ನೂ ಓದಿ:ದೇಶದಲ್ಲಿ ಅತೀ ಕಡಿಮೆ ಮೀನು ತಿನ್ನುವುದು ಈ ರಾಜ್ಯದ ಜನರಂತೆ..! ಹಾಗಿದ್ರೆ ಮೊದಲನೇ ಸ್ಥಾನದಲ್ಲಿ ಯಾರಿದ್ದಾರೆ?

ಸೂಪರ್ ಸ್ಟಾರ್ ರಜನಿಕಾಂತ್ ಜಪಾನ್‌ನಲ್ಲಿ ಸಾಕಷ್ಟು ಆರಾಧಕರನ್ನು ಹೊಂದಿದ್ದಾರೆ. 1998ರಲ್ಲಿ ರಜನಿಕಾಂತ್ ಅವರ ತಮಿಳು 'ಮುತ್ತು' ಚಿತ್ರವನ್ನು ಮುತ್ತು - ಓಡೂರು ಮಹಾರಾಜ (ನೃತ್ಯ ಮಹಾರಾಜ) ಆಗಿ ಬಿಡುಗಡೆಯಾದಾಗ ಈ ಚಿತ್ರ ಸಖತ್‌ ಹಿಟ್‌ ಆಗಿ ಹೆಚ್ಚು ಅಭಿಮಾನಗಳನ್ನು ಸೃಷ್ಟಿಸಿದೆ.


ಈ ಚಿತ್ರ ಬ್ಲಾಕ್‌ಬಸ್ಟರ್‌ ಆಗಿ ಹೊರಹೊಮ್ಮಿತು, ಆ ಸಮಯದವರೆಗೆ ದೊಡ್ಡ ಸ್ವಾಗತವನ್ನು ಪಡೆದ ಮೊದಲ ಹಾಲಿವುಡ್ ಅಲ್ಲದ ಚಲನಚಿತ್ರ ಎನಿಸಿಕೊಂಡಿತ್ತು. ಈ ಚಲನಚಿತ್ರ ಜಪಾನ್‌ನಲ್ಲಿ 23 ವಾರಗಳ ಕಾಲ ಓಡಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ 1.6 ಮಿಲಿಯನ್ ಡಾಲರ್‌ ಗಳಿಸಿತು.


ಇದು ಜಪಾನ್‌ನಲ್ಲಿ ರಜನಿಕಾಂತ್‌ಗೆ ಅಭಿಮಾನಿ ಬಳಗವನ್ನು ಸೃಷ್ಟಿಸಿತು, ನಂತರ ಅವರ ಹಲವಾರು ಚಿತ್ರಗಳಾದ ಎಜಮಾನ್, ಬಾದ್‌ಶಾ ಮತ್ತು ಪಡಯಪ್ಪ ಬಿಡುಗಡೆಯಾಯಿತು. ರಜನಿಕಾಂತ್‌ ಅವರ ಜಪಾನ್‌ನ ಹಲವು ಅಭಿಮಾನಿಗಳು ಅವರ ಚಿತ್ರಗಳನ್ನು ನೋಡಲು ಚೆನ್ನೈಗೆ ಬರುವುದನ್ನು ನೋಡಲು ಹಾಗೂ ತಮ್ಮ ನೆಚ್ಚಿನ ನಟನ ದರ್ಶನ ಪಡೆಯುವುದು ಸಾಮಾನ್ಯವಾಗಿದೆ.


ಟೋಕಿಯೊದಲ್ಲಿರುವ ರಜನಿಕಾಂತ್ ಅಭಿಮಾನಿಗಳ ಸಂಘವು ಸುಮಾರು 3,000 ಸದಸ್ಯರನ್ನು ಹೊಂದಿದೆ ಎಂದು ಕೆಲವು ವರದಿಗಳು ಹೇಳುತ್ತವೆ. ಒಸಾಕಾ ಮತ್ತು ಕೋಬೆಯಂತಹ ನಗರಗಳಲ್ಲಿ ಅಭಿಮಾನಿ ಸಂಘಗಳಿವೆ.


ಇದನ್ನೂ ಓದಿ:Karnataka PU Result: ಪಿಯು ರಿಸಲ್ಟ್​ ತಿರಸ್ಕರಿಸಿದ 878 ವಿದ್ಯಾರ್ಥಿಗಳು; ಆಗಸ್ಟ್ 19ಕ್ಕೆ ಪರೀಕ್ಷೆ

ಎ.ಆರ್. ಮುರುಗದಾಸ್ ನಿರ್ದೇಶಿಸಿದ ಮತ್ತು ಲೈಕಾ ಪ್ರೊಡಕ್ಷನ್ಸ್‌ನಿಂದ ಬಂಡವಾಳ ಹೂಡಲ್ಪಟ್ಟ ದರ್ಬಾರ್ ಜನವರಿ 2020 ರಲ್ಲಿ ಪೊಂಗಲ್ (ಸಂಕ್ರಾಂತಿ) ಸಮಯದಲ್ಲಿ ಭಾರತದಲ್ಲಿ ಬಿಡುಗಡೆಯಾಯಿತು. ಕೋವಿಡ್ -19 ಸಾಂಕ್ರಾಮಿಕದಿಂದ ದೇಶದಾದ್ಯಂತ ಚಿತ್ರಮಂದಿರಗಳನ್ನು ಮುಚ್ಚುವ ಕೆಲವೇ ತಿಂಗಳುಗಳ ಮೊದಲು ಭಾರತೀಯ ದೊಡ್ಡ ಪರದೆಯನ್ನು ಪ್ರವೇಶಿಸಿತ್ತು.
ಭಾರತದಲ್ಲಿ ಹೆಚ್ಚು ಸದ್ದು ಮಾಡದ ದರ್ಬಾರ್‌
27 ವರ್ಷಗಳ ನಂತರ ರಜನಿಕಾಂತ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರಿಂದ ಚಿತ್ರವು ಭಾರಿ ಪ್ರಚಾರದ ನಡುವೆ ಬಿಡುಗಡೆಯಾಯಿತು. ಆದರೆ, ಚಲನಚಿತ್ರವು ಪ್ರೇಕ್ಷಕರ ನಿರೀಕ್ಷೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಭಾರತದ ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಹಣ ಮಾಡಲು ವಿಫಲವಾಯಿತು.

Published by:Latha CG
First published: