ಇದು ಫಾಸ್ಟ್ ಫುಡ್ (Fast Food) ಯುಗ.. ಊಟ ಆರ್ಡರ್ ಮಾಡಿದ ಕೂಡಲೇ ಹೇಗೆ ಫಾಸ್ಟಾಗಿ ಡೆಲಿವರಿ ಆಗುತ್ತೋ ಹಾಗೇ ಇಲ್ಲಿ ಯಾರು ಬೇಕಾದರೂ ಕ್ಷಣ ಮಾತ್ರದಲ್ಲಿ ಫೇಮಸ್ (Famous) ಆಗಬಹುದು. ಇಂಟರ್ನೆಟ್ (Internet) ಮೂಲಕ ಹಲವು ಪ್ರತಿಭೆಗಳು ಬೆಳಕಿಗೆ ಬಂದಿವೆ. ತೇರಿ ಮೇರಿ ಹಾಡಿದ್ದ ರಾನು ಮಂಡಲ್ (Ranu Mondal), ಬಚಪನ್ ಕಾ ಪ್ಯಾರ್ (Bachpan Ka Pyaar) ಹಾಡಿದ್ದ ಬಾಲಕ ಎಲ್ಲರೂ ದಿನ ಬೆಳಗಾಗುವುದರೊಳಗಾಗಿ ಸ್ಟಾರ್ ಆಗಿ ಬಳಿಕ ಮುಂದೆ ಕಳೆದು ಹೋದರು. ಇಲ್ಲಿ ಎಷ್ಟು ಬೇಗ ಫೇಮಸ್ ಆಗುತ್ತಿವೋ, ಅಷ್ಟು ಬೇಗ ಹೆಸರು ಕೆಡಿಸಿಕೊಳ್ಳಬಹುದು. ಅದಕ್ಕೆ ಉತ್ತಮ ಉದಾಹರಣೆ ರಾನು ಮಂಡಲ್. ಇನ್ನೂ ಯಾರ ಫೋನ್ (Phone) ನೋಡಿದರು ಈಗ ಒಂದು ಹಾಡಿನದ್ದೇ ಸದ್ದು. ಫೇಸ್ಬುಕ್ (Facebook) ನೋಡಿದರೂ ಕಚ್ಚಾ ಬಾದಾಮ್ (Kaccha Badam), ವಾಟ್ಸ್ಆ್ಯಪ್ (Whatsapp) ನೋಡಿದರು ಕಚ್ಚಾ ಬದಾಮ್, ಇನ್ಸ್ಟಾಗ್ರಾಂ(Instagram)ನಲ್ಲಂತೂ ಕೇಳಲೇ ಬೇಡಿ ಅದರಲ್ಲೇ ಈ ಹಾಡು ಇಷ್ಟು ಫೇಮಸ್ ಆಗಿದ್ದು. ಮೊದಲ ಬಾರಿಗೆ ಕೇಳಿದಾಗ ವಿಚಿತ್ರವೆನ್ನಿಸುವ ಈ ಹಾಡು, ಬಳಿಕ ಪದೇ ಪದೇ ಕೇಳಿಸಿಕೊಳ್ಳಬೇಕು ಎನ್ನಿಸುತ್ತೆ. ಎಲ್ಲ ಭಾಷೆಯ ಸೆಲೆಬ್ರಿಟಿಗಳು (Celebrity) ಕೂಡ ಈ ಹಾಡಿಗೆ ರೀಲ್ಸ್ (Reels) ಮಾಡಿ ಅಪ್ಲೋಡ್ ಮಾಡಿದ್ದಾರೆ. ರಿಂಗ್ಟೂನ್, ಕಾಲರ್ ಟೂನ್ ಕೂಡ ಕಚ್ಚಾ ಬಾದಾಮ್ ಅನ್ನುತ್ತೆ. ಅಷ್ಟಕ್ಕೂ ಈ ಹಾಡು ಹುಟ್ಟಿದ್ದಾದರೂ ಎಲ್ಲಿ? ಈ ಹಾಡು ಹಾಡಿದವರಾದರೂ ಯಾರು? ಇಷ್ಟೋಂದು ಈ ಹಾಡು ಫೇಮಸ್ ಆಗಲು ಅದರಲ್ಲಿ ಏನಿದೆ ಅಂತೀರಾ ಮುಂದೆ ನೋಡಿ..
ಹಾಡು ಹಾಡಿದೋರು ಯಾರು? ಎಲ್ಲಿಯವರು?
ಭುವನ್ ಬದ್ಯಕರ್ ಎಂಬುವವರು ಬೈಕ್ನಲ್ಲಿ ಶೇಂಗಾ (ಬಡವರ ಬಾದಾಮಿ)ಯನ್ನು ಊರು ಊರಿಗೆ ತೆರಳಿ ಅಲ್ಲಿನ ದೇವಸ್ಥಾನ, ಅಂಗಡಿಗಳಲ್ಲಿ ಮಾರುತ್ತಾರೆ. ಹೀಗೆ ಮಾರುವಾಗ ಅವರು ಒಂದು ಹಾಡು ಹಾಡಿದ್ದರು. ಅದನ್ನೇ ಯಾರೋ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಲಕ್ಷ್ಮೀನಾರಾಯಣಪುರ ಪಂಚಾಯತ್ಗೆ ಒಳಪಟ್ಟ ಕುರಲ್ಜುರಿ ಗ್ರಾಮದ ನಿವಾಸಿ ಭುವನ್ಗೆ ಪತ್ನಿ, ಇಬ್ಬರು ಪುತ್ರರು, ಒಬ್ಬಳು ಮಗಳು ಇದ್ದಾಳೆ. ಕಚ್ಚಾ ಬಾದಾಮ್ ಹಾಡು ಫೇಮಸ್ ಆಗುತ್ತಿದ್ದಂತೆ ಇವರ ಕಡಲೆಕಾಯಿ ವ್ಯಾಪಾರ ಜೋರಾಗಿ ನಡೆಯುತ್ತಿದೆಯಂತೆ.
This kacha badam vendor deserves
Thousands of likes ! pic.twitter.com/Q5owPRGTHf
— MotaBhai (@Motabhai4U) January 26, 2022
ಸಖತ್ ಫೇಮಸ್ ಈ ಕಚ್ಛಾ ಬಾದಾಮ್ ವ್ಯಾಪಾರಿ!
ಫೇಮಸ್ಸು ಹೆಚ್ಚಿನ ದಿನ ಉಳಿಯುವುದಿಲ್ಲ. ಎಲ್ಲವೂ ನಾಲಿಗೆ ಮೇಲಿನ ಗುಳ್ಳೆ. ಒಡೆದರೆ ಖಲ್ಲಾಸ್. ಈ ಹಾಡು ಕೇಳಿ ಯಾವ ಭಾಷೆಯ ಹಾಡಿದು ಅಂಥ ಹುಡುಕಿ ಜನ ತಲೆಕಡಿಸಿಕೊಂಡಿದ್ದರು. ಇದು ಇಂಥ ಹಾಡು, ಇಲ್ಲಿಂದ ಹುಟ್ಟಿ ಬಾಂಗ್ಲಾ ನಾಡಿಗೆ ಕಾಲಿಟ್ಟು ಅಲ್ಲಿಂದ ರಿಮಿಕ್ಸ್ ಡಿಜೆಯಾಗಿ ಅಲ್ಲಿಂದ ಎಲ್ಲೆಡೆ ಹರಡಿ ಬಾದಾಮ್ ಬಾದಾಮ್ ಆದ ಈ ಹಾಡು ಓರ್ವ ಶೇಂಗಾ ವ್ಯಾಪಾರಿಯ ಬಾಯಿಂದ ಹೊರಬಿದ್ದ ಅಪ್ಪಟ ದೇಸಿತನದ ತುಣುಕು. ಆತ ಶೇಂಗಾವನ್ನು ಬದಾಮ್ ಕಾಚಾ ಬದಾಮ್ ಅಂದಿದ್ದಾನೆ. ಏನೇನೋ ವಿಶೇಷತೆ ಕೊಟ್ಟು ಬಿಕರಿಗಿಳಿದಿದ್ದಾನೆ. ತನ್ನ ಜೀವನ ನೋಡಿಕೊಳ್ಳಲು ಕಡಲೆಕಾಯಿ ಮಾರುವಾಗ ಹೇಳಿದ ಹಾಡು ಇಷ್ಟು ಫೇಮಸ್ ಆಗುತ್ತೆ ಎಂದ ಆತ ಅಂದುಕೊಂಡಿರಲಿಲ್ಲ ಅನ್ನಿಸುತ್ತೆ.
Kacha Badaam Dance is a Nationwide Craze. It should Go International!! 😂😂 #kachabadam pic.twitter.com/mBGA9c7odH
— Rosy (@rose_k01) January 29, 2022
ಇದನ್ನೂ ಓದಿ: ಇಲ್ಲಿಗೆ ನಿಂತಿಲ್ಲ ಅಖಂಡನ ಅಬ್ಬರ, ಮುಂದೈತೆ ಬಾಲಯ್ಯನ ಮಾರಿಹಬ್ಬ
ರಿಯಾಲಿಟಿ ಶೋ ಸ್ಪರ್ಧಿಯಾದ ವ್ಯಾಪಾರಿ ಭುವನ್!
‘ನಾನು ಈಗ ಕೇವಲ ಶೇಂಗಾ ಮಾರುವವನಲ್ಲ. ಜನರು ನನ್ನನ್ನು ಸಂಗೀತಗಾರನಾಗಿ ನೋಡುತ್ತಿದ್ದಾರೆ. ನನಗೆ ಮಾತ್ರವಲ್ಲದೇ ನನ್ನ ಹಳ್ಳಿಯ ಜನರಿಗೂ ಇದು ಹೆಮ್ಮೆಯ ವಿಷಯ. ಕೆಲ ವಾರಗಳಿಂದ ಜನರು ನನ್ನ ಕಡೆಗೆ ತುಂಬಾ ನೋಡುತ್ತಿದ್ದಾರೆ, ಇದನ್ನು ಕಂಡಾಗ ನನಗೆ ಒಂಥರಾ ಅನ್ನಿಸುತ್ತದೆ. ಈ ಮೊದಲು ಇಂತಹ ಜನಪ್ರಿಯತೆ ಸಿಕ್ಕಿರಲಿಲ್ಲ. ಮುಂದಿನ ದಿನಗಳಲ್ಲಿ ನನ್ನ ಹಾಗೂ ನನ್ನ ಕುಟುಂಬದ ಭವಿಷ್ಯ ಚೆನ್ನಾಗಿರುತ್ತದೆ ಎಂದು ಭಾವಿಸುತ್ತೇನೆ’ ಎಂದು ಕಡಲೆಕಾಯಿ ವ್ಯಾಪಾರಿ ಭುವನ್ ಹೇಳಿದ್ದಾರೆ. ಈ ಹಾಡು ಇಟ್ಟುಕೊಂಡು ಯುಟ್ಯೂಬ್ನಲ್ಲಿ ಅಪ್ಲೋಡ್ ಮಾಡಿ ಕೆಲವರು ಹಣ ಮಾಡಿಕೊಂಡಿದ್ದಾರೆ. ಆದ್ದರಿಂದ ತನಗೆ ಸ್ವಲ್ಪ ಹಣ ನೀಡಿ ಎಂದು ಭುವನ್ ಈಗಾಗಲೇ ಅಧಿಕೃತವಾಗಿಯೇ ಕೇಳಿಕೊಂಡಿದ್ದಾರಂತೆ. ಸೌರವ್ ಗಂಗೂಲಿ ಜೊತೆಗೆ 'Dadagiri Unlimited 9' ರಿಯಾಲಿಟಿ ಶೋನಲ್ಲಿ ಭುವನ್ ಭಾಗವಹಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.
ಇದನ್ನೂ ಓದಿ: 23 ಕೋಟಿ ರೂ.ಗೆ ಸೇಲ್ ಆಯ್ತು ಬಿಗ್ ಬಿ ದೆಹಲಿ ಮನೆ
ಬೆಂಗಾಲಿ ಬಾಬು ತರಹದ ಲಕ್ಕು ಎಲ್ಲರಿಗೂ ಹೊಡೆಯಲ್ಲ. ಹೊಡೆದ್ರೆ ಹಿಂಗೆ ಹೊಡೆಯತ್ತೆ. ಹೊಡೆಸಿಕೊಳ್ಳೋ ತಾಳ್ಮೆಇರಬೇಕಷ್ಟೇ. ಕಸುಬು ನೆಟ್ಟಗೆ ಮಾಡುವವನು ಯಾವತ್ತೂ ಹೆಸರಿನ ಹಿಂದೆ ಬೀಳಬಾರದು. ಬಾಯಿ ಚಪಲಕ್ಕೆ ಬೀಳಬಾರದು. ಹಾಡೋನಿಗೆ ಹಾದಿ ಖಂಡಿತ ಸಿಗತ್ತೆ. ಓದಿದವನಿಗೆ ಓಣಿಯೂ ಸಿಗುತ್ತೆ ಎಂಬುದಕ್ಕೆ ಇದೇ ಸಾಕ್ಷಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ