ಜನಪ್ರಿಯ ಸಿನಿಮಾ ನಟ-ನಟಿಯರನ್ನ ಸಾಮಾನ್ಯವಾಗಿ ತಾರೆಯರು ಎಂದು ಕರೆಯುತ್ತಾರೆ. ಆಕಾಶದಲ್ಲಿ ಮಿನುಗುವ ನಕ್ಷತ್ರದಂತೆ ಅವರಿಗೆ ಯಾವುದೇ ಕಷ್ಟ ಕಾರ್ಪಣ್ಯಗಳಿರೋದಿಲ್ಲ ಅಂದುಕೊಂಡವರು ಹಲವರು. ಅದಕ್ಕೆ ತಕ್ಕಂತೆ ಸ್ಟಾರ್ ನಟ-ನಟಿಯರು ಐಶಾರಾಮಿ ಕಾರು, ಕಣ್ಮನ ಸೆಳೆಯುವ ಫ್ಲಾಟ್ನಲ್ಲಿ ವಾಸಿಸುತ್ತಾ ತಾವು ಸಾಮಾನ್ಯರಿಗಿಂತ ಭಿನ್ನ ಅಂತ ತೋರಿಸಿಕೊಳ್ಳುತ್ತಾರೆ.
ಆದರೆ, ಕೊರೊನಾ ಕಾಲದಲ್ಲಿ ಎಲ್ಲರೂ ಒಂದೇ ಆಗಿ ಹೋಗಿದ್ದಾರೆ. ದಿನಕ್ಕೆ 200-300 ರುಪಾಯಿ ಸಂಪಾದಿಸುವವರ ಪಾಡು ಒಂದೆಡೆಯಾದರೆ, ದಿನಕ್ಕೆ ಲಕ್ಷಾಂತರ ದುಡಿಯೋ ತಾರೆಯರ ಗೋಳು ಮತ್ತೊಂದು ಥರ ಎಂಬ ಹಾಗೆ ಆಗಿದೆ.
ಹೌದು, ಸೌತ್ ಇಂಡಿಯಾದ ಫೇಮಸ್ ನಟಿ ಶೃತಿ ಹಾಸನ್ ಕೊರೋನಾ ಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಎರಡು ತಿಂಗಳಲ್ಲಿ ಯಾವುದೇ ದುಡಿಮೇ ಇಲ್ಲದೆ, ಯಾವುದೇ ಹಣ ಬ್ಯಾಂಕ್ ಅಕೌಂಟ್ಗೆ ಸೇರದೆ, ಇ.ಎಂ.ಐ ಕಟ್ಟಲು ಪರದಾಡುತ್ತಿದ್ದಾರಂತೆ. ಇದು ಕೇವಲ ಶೃತಿ ಹಾಸನ್ ಕಥೆಯಷ್ಟೇ ಅಲ್ಲ. ಹಲವು ನಟನಟಿಯರದ್ದು ಇದೇ ಸಂಕಟವಾಗಿದೆ.
ತೆಲುಗಿನಲ್ಲಿ ಸದ್ಯ ಚಾಲ್ತಿಯಲ್ಲಿರುವ ಮತ್ತೊಬ್ಬ ನಟಿ ಕೂಡ ಹೈದರಾಬಾದ್ನಲ್ಲಿ ಇತ್ತೀಚಿಗೆ ಫ್ಲಾಟ್ ಖರೀದಿಸಿದ್ದಾರಂತೆ! ತಿಂಗಳಿಗೆ ಆರು ಲಕ್ಷ ಇ.ಎಂ.ಐ ಕಟ್ಟಬೇಕಂತೆ! ಆದರೆ ಹಣಕ್ಕೆ ಪರದಾಡುವಂತಹ ಪರಿಸ್ಥಿತಿ ಎದುರಾಗಿರುವುದರಿಂದ ಒಂದಷ್ಟು ನಿರ್ಮಾಪಕರಿಗೆ ಕರೆ ಮಾಡಿ ಸಹಾಯಕ್ಕೆ ಕೈ ಚಾಚಿದ್ದರಂತೆ.
ಇತ್ತೀಚೆಗೆ ಲಾಕ್ಡೌನ್ ಸಮಯದಲ್ಲಿ ನಟಿ ಸೋನಲ್ ಬೆಂಗುರ್ಲೇಕರ್ ಆರ್ಥಿಕ ಸಂಕಷ್ಟದಲ್ಲಿದ್ದರು. ಈ ವೇಳೆ ಆಕೆಯ ಮೇಕಪ್ ಮ್ಯಾನ್ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದರು.
ಸೋನಲ್ ಬೆಂಗುರ್ಲೇಕರ್ ಈ ಬಗ್ಗೆ ತನ್ನ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ನನ್ನ ಬಳಿ ಹೆಚ್ಚು ಹಣವಿಲ್ಲ. ಮುಂದಿನ ತಿಂಗಳು ಜೀವನ ನಡೆಸಲು ನನಗೆ ಕಷ್ಟವಾಗಲಿದೆ. ನನಗೆ ಹಣ ಕೊಡಬೇಕಾಗಿದ್ದ ನಿರ್ಮಾಪಕರ, ಸ್ನೇಹಿತರು ನನ್ನ ಕರೆಯನ್ನು ಸ್ವೀಕರಸುತ್ತಿಲ್ಲ. ನಾನು ತೀವ್ರವಾಗಿ ಆರ್ಥಿಕ ಸಂಕಷ್ಟಕ್ಕೆ ಎದುರಾಗಿದ್ದೇನೆ. ಕೆಲಸವಿಲ್ಲದ ಕಾರಣ ಸಂಪಾದನೆ ಇಲ್ಲ ಎಂದು ದುಃಖ ತೋಡಿಕೊಂಡಿದ್ದರು. ಈ ವಿಚಾರ ತಿಳಿದು ಅವರ ಮೇಕಪ್ ಮ್ಯಾನ್ 15 ಸಾವಿರ ರೂಪಾಯಿ ನೀಡಿ ಸಹಾಯ ಮಾಡಿದ್ದಾರೆ.
TikToK; ಟಿಕ್ಟಾಕ್ ಬಿಟ್ಟು ಯೂಟ್ಯೂಬ್ ಮೊರೆ ಹೋದ ಜನರು; ಕಾರಣವೇನು?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ