• Home
  • »
  • News
  • »
  • entertainment
  • »
  • Salman-Pooja Hegde: ಸಲ್ಮಾನ್ ಖಾನ್-ಪೂಜಾ ಹೆಗ್ಡೆ ಡೇಟಿಂಗ್ ಸುದ್ದಿ​ ನಿಜನಾ? ಬಾಲಿವುಡ್​ ಬ್ಯಾಡ್​ ಬಾಯ್​ ಹೇಳೋದೇನು?

Salman-Pooja Hegde: ಸಲ್ಮಾನ್ ಖಾನ್-ಪೂಜಾ ಹೆಗ್ಡೆ ಡೇಟಿಂಗ್ ಸುದ್ದಿ​ ನಿಜನಾ? ಬಾಲಿವುಡ್​ ಬ್ಯಾಡ್​ ಬಾಯ್​ ಹೇಳೋದೇನು?

ಪೂಜಾ ಹೆಗ್ಡೆ, ಸಲ್ಮಾನ್​ ಖಾನ್​

ಪೂಜಾ ಹೆಗ್ಡೆ, ಸಲ್ಮಾನ್​ ಖಾನ್​

ಸಲ್ಮಾನ್ ಖಾನ್ ಅವರ ಹೆಸರು ಬೇರೊಬ್ಬ ನಟಿಯ ಹೆಸರಿನೊಂದಿಗೆ ಕೇಳಿ ಬರುವುದು ಸಲ್ಮಾನ್ ಖಾನ್ ಅವರಿಗೆ ಸ್ವಲ್ಪ ಮಟ್ಟಿಗೆ ಕೋಪ ತರಿಸಿದರೂ ಸಹ ಅವರ ಅಭಿಮಾನಿಗಳಿಗೆ ತುಂಬಾನೇ ಸಾಮಾನ್ಯವಾದ ವಿಷಯವಾಗಿ ಹೋಗಿದೆ.

  • Trending Desk
  • 3-MIN READ
  • Last Updated :
  • Karnataka, India
  • Share this:

ಬಾಲಿವುಡ್ ನಲ್ಲಿ (Bollywood) ಮದುವೆಯಾಗದೆ ಉಳಿದಿರುವ ನಟರ ಲಿಸ್ಟ್ ನಲ್ಲಿ ನಟ ಸಲ್ಮಾನ್ ಖಾನ್ (Salman Khan) ಅವರ ಹೆಸರೇ ಮೊದಲು ಬರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹಿಂದೆಯಿಂದಲೂ ಸಲ್ಮಾನ್ ಖಾನ್ ಅವರ ಹೆಸರು ಅನೇಕ ನಟಿಯರೊಂದಿಗೆ ಕೇಳಿ ಬಂದಿತ್ತು ಮತ್ತು ಅದರಲ್ಲಿ ಕೆಲವರ ಜೊತೆಗೆ ಸಲ್ಲು ಭಾಯ್ ನಿಜಕ್ಕೂ ಪ್ರೀತಿ ಮಾಡುತ್ತಿದ್ದರು. ಆದರೆ ಕಾರಣಾಂತರಗಳಿಂದ ಸಲ್ಮಾನ್ ರನ್ನ ಪ್ರೀತಿಸುತ್ತಿದ್ದವರು (Love) ಬೇರೆ ನಟರನ್ನು ಮದುವೆಯಾಗಿ ಹೋದರು. ಆದರೆ ಸಲ್ಮಾನ್ ಮಾತ್ರ ಇನ್ನೂ ಬ್ಯಾಚ್ಯುಲರ್ ಆಗಿಯೇ ಉಳಿದಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ.


ಇಷ್ಟಾದ ನಂತರವೂ ಆಗಾಗ್ಗೆ ಸಲ್ಮಾನ್ ಖಾನ್ ಅವರ ಹೆಸರು ಬೇರೊಬ್ಬ ನಟಿಯ ಹೆಸರಿನೊಂದಿಗೆ ಕೇಳಿ ಬರುವುದು ಸಲ್ಮಾನ್ ಖಾನ್ ಅವರಿಗೆ ಸ್ವಲ್ಪ ಮಟ್ಟಿಗೆ ಕೋಪ ತರಿಸಿದರೂ ಸಹ ಅವರ ಅಭಿಮಾನಿಗಳಿಗೆ ತುಂಬಾನೇ ಸಾಮಾನ್ಯವಾದ ವಿಷಯವಾಗಿದೆ ಅಂತ ಹೇಳಬಹುದು.


ಅಭಿಮಾನಿಗಳಿಗೆ ಟ್ವೀಟ್​ ಕೊಟ್ಟ ಶಾಕ್​


ಇತ್ತೀಚೆಗೆ ಸಲ್ಮಾನ್ ಖಾನ್ ಅವರ ಸ್ನೇಹಿತರು ಮತ್ತು ಅಭಿಮಾನಿಗಳು ಒಂದು ಯಾವುದೋ ಟ್ವೀಟ್ ನಿಂದ ತುಂಬಾನೇ ಖುಷಿಯಾಗಿದ್ದಾರೆ ಮತ್ತು ಕೆಲವರು ದಿಗ್ಭ್ರಮೆಗೊಂಡಿದ್ದಾರೆ ಅಂತ ಹೇಳಬಹುದು. ಏನಿದೆ ಅಂತದ್ದು ಆ ಟ್ವೀಟ್ ನಲ್ಲಿ ಅಂತ ನೀವು ಕೇಳಲು ತುಂಬಾನೇ ಕುತೂಹಲದಿಂದ ಕಾಯುತ್ತಿರಬೇಕಲ್ಲವೇ? ಬನ್ನಿ, ಹಾಗಾದರೆ ಈ ಟ್ವೀಟ್ ನಲ್ಲಿ ಏನಿದೆ ಅಂತ ನಿಮಗೆ ಹೇಳುತ್ತೇವೆ.




ಟ್ವೀಟ್ ನ ಪ್ರಕಾರ ಸಲ್ಮಾನ್ ಮತ್ತು ಪೂಜಾ ಡೇಟ್ ಮಾಡ್ತಿದ್ದಾರಂತೆ!


ಈ ಟ್ವೀಟ್ ಪ್ರಕಾರ, ಸಲ್ಮಾನ್ ಈಗ ಸುಂದರವಾದ ತೆಲುಗು-ತಮಿಳು-ಹಿಂದಿ ಚಿತ್ರೋದ್ಯಮದಲ್ಲಿ ನಟಿಸಿ ಅಭಿಮಾನಿಗಳಿಂದ ಸೈ ಎನಿಸಿಕೊಂಡಿರುವ ನಟಿ ಪೂಜಾ ಹೆಗ್ಡೆ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಈ ವಿಷಯ ಕೇಳಿದ ಸಲ್ಮಾನ್ ಅವರ ಒಬ್ಬ ಸ್ನೇಹಿತನಿಗೆ ನಗುವುದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲವಂತೆ. "ಇಂತಹ ಬೇಜವಾಬ್ದಾರಿ ವದಂತಿಗಳನ್ನು ಹರಡಿದವರಿಗೆ ಸ್ವಲ್ಪ ನಾಚಿಕೆಯಾಗಬೇಕು. ಆ ಹುಡುಗಿಗೆ (ಪೂಜಾ ಹೆಗ್ಡೆ) ಸಲ್ಮಾನ್ ಖಾನ್ ಅವರ ಮಗಳ ವಯಸ್ಸು.


ಅವರು ಒಟ್ಟಿಗೆ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಎಂಬ ಒಂದು ಚಲನಚಿತ್ರದಲ್ಲಿ ಅಭಿನಯಿಸಿದ ಕಾರಣ ಕೆಲವು ಮೂರ್ಖರು ಇದು ಚಿತ್ರಕ್ಕೆ ಉತ್ತಮ ಪ್ರಚಾರ ಎಂದು ಭಾವಿಸಬಹುದು. ಆದರೆ ಇದು ಮುಜುಗರದ ಸಂಗತಿ" ಎಂದು ಅವರು ಹೇಳಿದ್ದಾರೆ.


ಇಂತಹ ವದಂತಿಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲವಂತೆ ಸಲ್ಮಾನ್


ಸಲ್ಮಾನ್ ಖಾನ್ ಈ ಅಸಂಬದ್ಧ ವದಂತಿಯನ್ನು ಆರಂಭದಲ್ಲಿಯೇ ಏಕೆ ತೊಡೆದು ಹಾಕುವುದಿಲ್ಲ ಅಂತ ಕೇಳಿದ್ದಕ್ಕೆ, "ಸಲ್ಮಾನ್ ಖಾನ್ ಅವರಿಗೆ ಇದೆಲ್ಲದರ ಬಗ್ಗೆ ಅಷ್ಟೊಂದು ಕಾಳಜಿ ಇಲ್ಲ. ಅವರ ಕುರಿತಾದ ವದಂತಿಗಳಿಗೆ ಅವರು ಪ್ರತಿಕ್ರಿಯಿಸುವುದಿಲ್ಲ" ಎಂದು ಚಲನಚಿತ್ರ ನಿರ್ಮಾಪಕ ಸ್ನೇಹಿತರೊಬ್ಬರು ಹೇಳುತ್ತಾರೆ.


ಆದರೆ ಇದು ಕೇವಲ ಅವರ ಬಗ್ಗೆ ಇರುವ ವದಂತಿಯಲ್ಲ. ಸಲ್ಮಾನ್ ಖಾನ್ ಅವರು ಇದರ ಬಗ್ಗೆ ಸ್ವಲ್ಪ ಕಾಳಜಿ ವಹಿಸಬೇಕು, ಏಕೆಂದರೆ ಇದು ಯುವ ನಟಿ ಪೂಜಾ ಹೆಗ್ಡೆಯ ಸಿನಿ ಕರಿಯರ್ ನಲ್ಲಿ ಆಕೆಯ ಜನಪ್ರಿಯತೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಹಲವರ ಅಭಿಪ್ರಾಯ.


ಅಸಹ್ಯಕರ ವದಂತಿ ಹರಡಿದ ನಂತರ, ತೆಲುಗು ತಾರೆಯೊಬ್ಬರು ತಮ್ಮ ಮುಂದಿನ ಯೋಜನೆಗಾಗಿ ಸಂಭಾವ್ಯ ಪ್ರಮುಖ ಮಹಿಳೆಯರ ಬಗ್ಗೆ ಚರ್ಚಿಸುತ್ತಿದ್ದರಂತೆ. ಆಗ ಅಲ್ಲಿಯೇ ಇದ್ದವರೊಬ್ಬರು ನಟಿ ಪೂಜಾ ಹೆಗ್ಡೆ ಅವರ ಹೆಸರನ್ನು ಸೂಚಿಸಿದಾಗ ಅವರು "ಹೌದು, ಆದರೆ ಅವರು ಸಲ್ಮಾನ್ ಖಾನ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ನಾನು ಕೇಳಿದ್ದೇನೆ" ಎಂದು ಹೇಳಿದರಂತೆ ಅಂತ ಸಹ ಕೇಳುವುದಕ್ಕೆ ಬಂದಿದೆ ಎಂದಿದ್ದಾರೆ.


‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಚಿತ್ರವನ್ನು ಫರ್ಹಾದ್ ಸಮ್ಜಿ ನಿರ್ದೇಶಿಸುತ್ತಿದ್ದಾರೆ ಮತ್ತು ಕಿರುತೆರೆ ನಟಿ ಶ್ವೇತಾ ತಿವಾರಿ ಅವರ ಮಗಳು ಪಾಲಕ್ ತಿವಾರಿ ಸಹ ಇದರಲ್ಲಿ ಅಭಿನಯಿಸುತ್ತಿದ್ದಾರೆ ಮತ್ತು ಇದು 2023 ರ ಉತ್ತರಾರ್ಧದಲ್ಲಿ ಬಿಡುಗಡೆಯಾಗಲಿದೆ.

Published by:ಪಾವನ ಎಚ್ ಎಸ್
First published: