Raj Kundra: ಬಸ್ ಕಂಡಕ್ಟರ್ ಮಗನಾಗಿ ರಾಜ್ ಕುಂದ್ರಾ ದೊಡ್ಡ ಉದ್ಯಮಿಯಾಗಿದ್ದೇಗೆ?

ರಾಜ್‌ ಕುಂದ್ರಾ ಈವರೆಗೆ ಎರಡು ಬಾರಿ ಮದುವೆಯಾಗಿದ್ದಾರೆ. ಕವಿತಾ ಕುಂದ್ರಾ ಮೊದಲ ಪತ್ನಿಯಾಗಿದ್ದು, ಅವರಿಗೆ ಒಬ್ಬಳು ಮಗಳಿದ್ದಾಳೆ. ನಂತರ ಕವಿತಾರಿಂದ ವಿಚ್ಛೇದನ ಪಡೆದ ರಾಜ್‌ ಕುಂದ್ರಾ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯನ್ನು ನವೆಂಬರ್ 22, 2009ರಂದು ವಿವಾಹವಾದರು.

ರಾಜ್​ ಕುಂದ್ರಾ

ರಾಜ್​ ಕುಂದ್ರಾ

 • Share this:

  ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಕೆಲವು ಆ್ಯಪ್‌ಗಳ ಮೂಲಕ ಅವುಗಳನ್ನು ಜನರಿಗೆ ತಲುಪುವಂತೆ ಮಾಡಿದ ಆರೋಪಕ್ಕೆ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾರನ್ನು ಈಗಾಗಲೇ ಬಂಧಿಸಲಾಗಿದ್ದು, ಮುಂಬೈನ ನ್ಯಾಯಾಲಯವು ಅವರ ಪೊಲೀಸ್ ಕಸ್ಟಡಿಯನ್ನು ಜುಲೈ 27 ರವರೆಗೆ ವಿಸ್ತರಿಸಿದೆ. ಜುಲೈ 19 ರ ರಾತ್ರಿ ಮುಂಬೈ ನಗರ ಪೊಲೀಸ್ ಅಪರಾಧ ವಿಭಾಗವು ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ ನಂತರ ರಾಜ್‌ ಕುಂದ್ರಾರನ್ನು ಬಂಧಿಸಲಾಯಿತು. ಇಂಗ್ಲೆಂಡ್‌ನ ಲಂಡನ್‌ನಲ್ಲಿ ಜನಿಸಿದ ಬಸ್‌ ಕಂಡಕ್ಟರ್‌ ಪುತ್ರ ರಾಜ್‌ ಕುಂದ್ರಾ ದೊಡ್ಡ ಉದ್ಯಮಿಯಾಗಿ ಬೆಳೆದಿದ್ದು ಹೇಗೆ ಎಂಬ ಅನುಮಾನ ಹಲವರಲ್ಲಿ ಇರುತ್ತದೆ. ಇದಕ್ಕೆ ವಿವರ ಹೀಗಿದೆ ನೋಡಿ..


  ಕುಂದ್ರಾ ಜೀವನ ಮತ್ತು ವ್ಯವಹಾರ ಉದ್ಯಮಿಯಾಗಿ ಅವರ ಹಾದಿ ಇಲ್ಲಿದೆ..


  ರಾಜ್ ಕುಂದ್ರಾ ಜನಿಸಿದ್ದು ಲಂಡನ್‌ನಲ್ಲಿ. ಅವರ ತಂದೆ ಬಾಲ್ ಕ್ರಿಶನ್ ಕುಂದ್ರಾ ಮೊದಲು ಲಂಡನ್‌ನಲ್ಲಿ ಬಸ್ ಕಂಡಕ್ಟರ್ ಆಗಿದ್ದರು. ಅವರ ತಾಯಿ ಉಷಾ ರಾಣಿ ಕುಂದ್ರಾ ಅಂಗಡಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ನಂತರ ಬಾಲ್ ಕ್ರಿಶನ್ ಕುಂದ್ರಾ ಸಣ್ಣ ಉದ್ಯಮವನ್ನು ಪ್ರಾರಂಭಿಸಿದ್ದರು.


  ಇನ್ನು, ರಾಜ್‌ ಕುಂದ್ರಾ ಫ್ಯಾಶನ್ ಚಿಲ್ಲರೆ ವ್ಯಾಪಾರಿಗಳಿಗೆ ಪಾಶ್ಮಿನಾ ಶಾಲು ಮಾರಾಟಗಾರನಾಗಿ ತನ್ನ ವ್ಯವಹಾರ ವೃತ್ತಿಜೀವನವನ್ನು ಬ್ರಿಟನ್‌ನಲ್ಲಿ ಪ್ರಾರಂಭಿಸಿದರು, ಮತ್ತು ಆ ವ್ಯಾಪಾರದಲ್ಲಿಯೇ ಮಿಲಿಯನ್‌ಗಟ್ಟಲೆ ಹಣ ಸಂಪಾದಿಸಿದರು. 2007ರಲ್ಲಿ, ದುಬೈಗೆ ತೆರಳಿ ಎಸೆನ್ಷಿಯಲ್ ಜನರಲ್ ಟ್ರೇಡಿಂಗ್ ಎಲ್ಎಲ್‌ಸಿಯನ್ನು ಸ್ಥಾಪಿಸಿದರು. ಈ ಕಂಪನಿ ಅಮೂಲ್ಯವಾದ ಲೋಹಗಳು, ನಿರ್ಮಾಣ, ಗಣಿಗಾರಿಕೆ ಮತ್ತು ನವೀಕರಿಸಬಹುದಾದ ಇಂಧನ ಯೋಜನೆಗಳ ವ್ಯವಹಾರ ನಡೆಸುತ್ತದೆ. ಅದೇ ಸಮಯದಲ್ಲಿ, ರಾಜ್‌ ಕುಂದ್ರಾ ಬಾಲಿವುಡ್ ಚಿತ್ರಗಳಿಗೆ ಹಣಕಾಸು ನೆರವು ಮತ್ತು ನಿರ್ಮಾಣ ಪ್ರಾರಂಭಿಸಿದರು.


  ಇದನ್ನೂ ಓದಿ:Actress Jayanthi Passed Away: ನಟಿ ಜಯಂತಿ ನಿಧನ; ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ

  2004ರಲ್ಲೇ ಬ್ರಿಟಿಷ್‌ ಏಷಿಯನ್‌ ಬೈ ಸಕ್ಸಸ್‌ ಎಂಬ ಬ್ಯುಸಿನೆಸ್‌ ಮ್ಯಾಗಜೀನ್‌ನಲ್ಲಿ ರಾಜ್‌ ಕುಂದ್ರಾ 198ನೇ ಶ್ರೀಮಂತ ಬ್ರಿಟಿಷ್ ಏಷ್ಯನ್ ಸ್ಥಾನ ಪಡೆದರು.


  ರಾಜ್‌ ಕುಂದ್ರಾ ಈವರೆಗೆ ಎರಡು ಬಾರಿ ಮದುವೆಯಾಗಿದ್ದಾರೆ. ಕವಿತಾ ಕುಂದ್ರಾ ಮೊದಲ ಪತ್ನಿಯಾಗಿದ್ದು, ಅವರಿಗೆ ಒಬ್ಬಳು ಮಗಳಿದ್ದಾಳೆ. ನಂತರ ಕವಿತಾರಿಂದ ವಿಚ್ಛೇದನ ಪಡೆದ ರಾಜ್‌ ಕುಂದ್ರಾ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯನ್ನು ನವೆಂಬರ್ 22, 2009ರಂದು ವಿವಾಹವಾದರು. ಅವರಿಗೆ ಮಗ ಮತ್ತು ಮಗಳು ಸೇರಿ ಇಬ್ಬರು ಮಕ್ಕಳಿದ್ದಾರೆ.


  ರಾಜ್ ಕುಂದ್ರಾ ಎಸೆನ್ಷಿಯಲ್ ಸ್ಪೋರ್ಟ್ಸ್ ಮತ್ತು ಮೀಡಿಯಾದೊಂದಿಗೆ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಮತ್ತು ಸತ್ಯುಗ್ ಗೋಲ್ಡ್, ಸೂಪರ್ ಫೈಟ್ ಲೀಗ್ ಹಾಗೂ ಮುಂಬೈನ ರೆಸ್ಟೋರೆಂಟ್ ಸರಪಳಿಯಾದ ಬಾಸ್ಟಿಯನ್ ಹಾಸ್ಪಿಟಾಲಿಟಿ ಉದ್ಯಮದೊಂದಿಗೂ ಸಂಬಂಧ ಹೊಂದಿದ್ದಾರೆ.


  2009ರಲ್ಲಿ ಕುಂದ್ರಾ ಮತ್ತು ಪತ್ನಿ ಶಿಲ್ಪಾ ಶೆಟ್ಟಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ತಂಡ ರಾಜಸ್ಥಾನ್ ರಾಯಲ್ಸ್‌ನಲ್ಲಿ ಹೂಡಿಕೆ ಮಾಡಿದರು. ಆದರೆ, ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್ ಹಗರಣ ಬೆಳಕಿಗೆ ಬಂದ ಬೆನ್ನಲ್ಲೇ ಜುಲೈ 2015ರಲ್ಲಿ ಭಾರತದ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ರಾಜ್‌ ಕುಂದ್ರಾರಿಗೆ ಕ್ರಿಕೆಟ್ ಸಂಬಂಧಿತ ಚಟುವಟಿಕೆಯಿಂದ ಜೀವಾವಧಿ ನಿಷೇಧ ವಿಧಿಸಿತು.


  ಇದನ್ನೂ ಓದಿ:Bengaluru Power Cut: ಇಂದಿನಿಂದ ಜು.31ರವರೆಗೆ ಬೆಂಗಳೂರಿನ ಈ ಏರಿಯಾಗಳಲ್ಲಿ ಪವರ್ ಕಟ್..!

  ಇನ್ನು, ರಾಜ್‌ ಕುಂದ್ರಾ ಅಕ್ಟೋಬರ್ 14, 2013 ರಂದು ಪ್ರಕಟವಾದ 'ಹೌ ನಾಟ್ ಟು ಮೇಕ್‌ ಮನಿ' ಎಂಬ ಪುಸ್ತಕವನ್ನೂ ಬರೆದಿದ್ದಾರೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:Latha CG
  First published: