HOME » NEWS » Entertainment » THE PRODUCERS BROKE SILENCE ON SALMAN KAHN STARRER RADHE MOVIE OTT RELEASE AE

ಸಲ್ಮಾನ್​ ಖಾನ್​ ಅಭಿನಯದ ರಾಧೆ ಚಿತ್ರದ ಒಟಿಟಿ ರಿಲೀಸ್​ ಬಗ್ಗೆ ಮೌನ ಮುರಿದ ನಿರ್ಮಾಪಕರು..!

ಸಲ್ಮಾನ್​ ಖಾನ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ ರಾಧೆ. ಈ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಲಾಕ್​ಡೌನ್​ಗೂ ಮೊದಲೇ ಈ ಸಿನಿಮಾದ ಶೂಟಿಂಗ್​ ನಡೆದಿತ್ತು. 

Anitha E | news18-kannada
Updated:November 21, 2020, 1:35 PM IST
ಸಲ್ಮಾನ್​ ಖಾನ್​ ಅಭಿನಯದ ರಾಧೆ ಚಿತ್ರದ ಒಟಿಟಿ ರಿಲೀಸ್​ ಬಗ್ಗೆ ಮೌನ ಮುರಿದ ನಿರ್ಮಾಪಕರು..!
ರಾಧೆ ಸಿನಿಮಾದಲ್ಲಿ ಸಲ್ಮಾನ್​ ಖಾನ್​
  • Share this:
ಕೊರೋನಾ ಲಾಕ್​ಡೌನ್​ ನಂತರ ಸ್ಟಾರ್ ನಟರ ಸಿನಿಮಾಗಳೇ ಒಟಿಟಿ ವೇದಿಕೆಯಲ್ಲಿ ರಿಲೀಸ್​ ಆಗಲಾರಂಭಿಸಿವೆ. ಇತ್ತೀಚೆಗಷ್ಟೆ ಅಕ್ಷಯ್​ ಕುಮಾರ್ ಅಭಿನಯದ ಲಕ್ಷ್ಮಿ ಬಾಂಬ್​ ಸಿನಿಮಾ ಒಟಿಟಿ ಮೂಲಕ ರಿಲೀಸ್​ ಆಗಿದೆ. ಇನ್ನು ಸಿನಿಮಾಗೆ ಊಹಿಸಿದಷ್ಟು ಯಶಸ್ಸು ಸಿಗಲಿಲ್ಲ. ಕಾಲಿವುಡ್​ ನಟ ಸೂರ್ಯ ಅಭಿನಯದ ಸೂರರೈ ಪೊಟ್ರು ಚಿತ್ರ ಸಹ ಕೆಲವೇ ದಿನಗಳ ಹಿಂದೆಯಷ್ಟೆ ಒಟಿಟಿ ಯಲ್ಲಿ ರಿಲೀಸ್​ ಆಗಿದೆ. ಇದರ ಜೊತೆಗೆ ಕನ್ನಡ, ತೆಲುಗು ಹಾಗೂ ತಮಿಳು ಸಿನಿಮಾಗಳೂ ಡಿಜಿಟಲ್​ ವೇದಿಕೆ ಮೂಲಕ ಬಿಡುಗಡೆಯಾಗುತ್ತಿವೆ. ಚಿತ್ರಮಂದಿರಗಳು ತೆರೆದಿದ್ದರೂ ಹೊಸ ಸಿನಿಮಾಗಳು ಮಾತ್ರ ಒಟಿಟಿ ಮೂಲಕ ತೆರೆ ಕಾಣುತ್ತಿಲ್ಲ. ಹೀಗಿರುವಾಗಲೇ ಬಿ-ಟೌನ್​ ಸ್ಟಾರ್ ನಟರ ಕೆಲವು ಸಿನಿಮಾಗಳು ಒಟಿಟಿ ರಿಲೀಸ್​ ಆಗಲಿವೆ ಅನ್ನೋ ಸುದ್ದಿ ದಟ್ಟವಾಗಿದೆ. ಅದರಲ್ಲೂ ಪ್ರಮುಖವಾಗಿ ಸಲ್ಮಾನ್​ ಖಾನ್​, ರಣಬೀರ್ ಕಪೂರ್​ ಅವರ ಚಿತ್ರಗಳು ಡಿಜಿಟಲ್​ ವೇದಿಕೆ ಮೂಲಕ ತೆರೆ ಕಾಣಲಿವೆ ಎಂದೂ ಹೇಳಲಾಗುತ್ತಿದೆ. 

ಸಲ್ಮಾನ್​ ಖಾನ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ ರಾಧೆ. ಈ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಲಾಕ್​ಡೌನ್​ಗೂ ಮೊದಲೇ ಈ ಸಿನಿಮಾದ ಶೂಟಿಂಗ್​ ನಡೆದಿತ್ತು.

ಈಗ ಈ ಸಿನಿಮಾ ಒಟಿಟಿ ಮೂಲಕ ರಿಲೀಸ್ ಆಗಲಿದೆ ಅನ್ನೋ ಸುದ್ದಿ ಸಹ ಹರಿದಾಡುತ್ತಿದೆ. ಈ ಕುರಿತಂತೆ ಕೊನೆಗೂ ಸಿನಿಮಾದ ನಿರ್ಮಾಪಕರು ಮೌನ ಮುರಿದಿದ್ದಾರೆ. ಯಾವುದೇ ಕಾರಣಕ್ಕೂ ರಾಧೆ ಸಿನಿಮಾ ಒಟಿಟಿ ಮೂಲಕ ತೆರೆ ಕಾಣುವುದಿಲ್ಲ. ಚಿತ್ರಮಂದಿರಗಳಲ್ಲೇ ರಾಧೆ ಅಬ್ಬರಿಸಲಿದ್ದಾನೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಪ್ರಮುಖ ಸಿನಿಮಾ ವ್ಯವಹಾರಗಳ ವಿಶ್ಲೇಷಕ ತರನ್​ ಆದರ್ಶ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
View this post on Instagram


A post shared by Taran Adarsh (@taranadarsh)


ಪ್ರಭುದೇವ ನಿರ್ದೇಶನದ ರಾಧೆ ಸಿನಿಮಾದಲ್ಲಿ ದಿಶಾ ಪಟಾನಿ ಸಲ್ಮಾನ್​ ಖಾನ್​ಗೆ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾದ ಕ್ಲೈಮ್ಯಾಕ್ಸ್​ ಚಿತ್ರೀಕರಣಕ್ಕೆ ಕೋಟಿ ಕೋಟಿ ಖರ್ಚು ಮಾಡುವ ವಿಷಯದಿಂದಾಗಿ ರಾಧೆ ಸಿನಿಮಾ ಚರ್ಚೆಯಲ್ಲಿತ್ತು. ಲಾಕ್​ಡೌನ್​ ಸಡಿಲಗೊಂಡ ನಂತರ ಅಂದರೆ, ಅಕ್ಟೋಬರ್​ನಲ್ಲಿ  ಮತ್ತೆ ಈ ಸಿನಿಮಾ ಚಿತ್ರೀಕರಣ ಆರಂಭವಾಗಿತ್ತು. ಈ ಬಗ್ಗೆ ಸಲ್ಮಾನ್​ ಖಾನ್​ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
Published by: Anitha E
First published: November 21, 2020, 1:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading