• Home
 • »
 • News
 • »
 • entertainment
 • »
 • Akul Balaji Birthday: ಕನ್ನಡ ಕಿರುತೆರೆ ಲೋಕದ ಜನಪ್ರಿಯ ನಿರೂಪಕ ಅಕುಲ್ ಬಾಲಾಜಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ

Akul Balaji Birthday: ಕನ್ನಡ ಕಿರುತೆರೆ ಲೋಕದ ಜನಪ್ರಿಯ ನಿರೂಪಕ ಅಕುಲ್ ಬಾಲಾಜಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ

ಅಕುಲ್ ಬಾಲಾಜಿ

ಅಕುಲ್ ಬಾಲಾಜಿ

ಕನ್ನಡ ಕಿರುತೆರೆ ಲೋಕದ ಜನಪ್ರಿಯ ನಿರೂಪಕ ಅಕುಲ್ ಬಾಲಾಜಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಇಂದು ಅಕುಲ್ ಬಾಲಾಜಿ 43ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

 • Share this:

  ಅಕುಲ್ ಬಾಲಾಜಿ (Akul Balaji) ಎಂದ ಕೂಡಲೇ ನಮಗೆಲ್ಲಾ ನೆನಪಾಗುವುದು ಅವರ ನಗುಮುಖ, ಹಾಸ್ಯ (Comedy) ಚಟಾಕಿ. ನಗು ನಗುತ್ತಲೇ ಎಲ್ಲರನ್ನೂ ನಗಿಸುವ ಅವರ ಕಲೆ ಇಂದು ರಾಜ್ಯದ ಮನೆ ಮಾತು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಅಕುಲ್ ಬಾಲಾಜಿ ಹೆಸರು ಹೇಳಿದ್ರೆ ಸಾಕು ಇವರು ಟಿವಿ ಆ್ಯಂಕರ್ (Television Anchor) ಅಂತಾ ಥಟ್ ಅಂತ ಹೇಳಿ ಬಿಡ್ತಾರೆ. ಅಕುಲ್ ಬಾಲಾಜಿ ಕನ್ನಡ ಕಿರುತೆರೆ ಲೋಕದ ಜನಪ್ರಿಯ ನಿರೂಪಕ. ಕನ್ನಡ (Kannada) ಮತ್ತು ತೆಲುಗು ಭಾಷೆಗಳಲ್ಲಿ ನಿರೂಪಕರಾಗಿ, ನಟರಾಗಿ ಕೆಲಸ ಮಾಡಿದ್ದಾರೆ. ಇವತ್ಯಾಕೆ ಅಕುಲ್ ಬಾಲಾಜಿ ಬಗ್ಗೆ ಹೇಳ್ತಿದಾರೆ ಅನ್ಕೊಂಡ್ರಾ ಯಾಕೆಂದರೆ ಇಂದು ಟಿವಿ ನಿರೂಪಕ ಅಕುಲ್ ಬಾಲಾಜಿ ಅವರ ಹುಟ್ಟಹಬ್ಬ. ಇಂದು ಅಕುಲ್ ಬಾಲಾಜಿ 43 ನೇ ಹುಟ್ಟು ಹಬ್ಬದ (Birthday) ಸಂಭ್ರಮದಲ್ಲಿದ್ದಾರೆ.


  ಅಕುಲ್ ಬಾಲಾಜಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ


  ಫೆಬ್ರವರಿ 23, 1979 ರಂದು ಆಂಧ್ರಪ್ರದೇಶದ ಕಡಪ ಜಿಲ್ಲೆಯ ರೇಲ್ವೆ ಕೋಡೂರಿನಲ್ಲಿ ಜನಿಸಿದ ಅಕುಲ್ ಬಾಲಾಜಿ ಇಂದು 43ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಕುಲ್ ಅವರಿಗೆ ಕುಟುಂಬ ಸದಸ್ಯರು, ಅಭಿಮಾನಿಗಳು, ಸಹೋದ್ಯೋಗಿಗಳು, ನಟ-ನಟಿಯರು ಬರ್ತಡೇಗೆ ವಿಶ್ ಮಾಡಿದ್ದಾರೆ.


  ಅಕುಲ್ ಬಾಲಾಜಿ ವೃತ್ತಿ ಜೀವನ


  ತಮ್ಮ 16ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದ ಅಕುಲ್ ಬಾಲಾಜಿ ಶ್ರೀ. ಉಷಾ ದಾತಾರ್ ಅವರಿಂದ ಭರತನಾಟ್ಯ ತರಬೇತಿ ಪಡೆದರು. ಆಮೇಲೆ ಮಧು ನಟರಾಜ್ ನೇತೃತ್ವದ ‘ನಾಟ್ಯ ಎಸ್ಟಿಮ್ ಡ್ಯಾನ್ಸ್ ಕಂಪೆನಿ’ ಗೆ ಸೇರಿಕೊಂಡು ಶ್ರೀ. ಮಯಾ ರಾವ್ ಅವರಿಂದ ಕತಕ್ ನೃತ್ಯ ಕಲಿತರು. ಮಹೇಶ್ ದತ್ತಾಣಿ ಅವರಿಂದ ನಟನಾ ತರಬೇತಿ ಪಡೆದರು.


  ಇದನ್ನೂ ಓದಿ: ಸಾಮಿ ಸಾಮಿ ಖ್ಯಾತಿಯ ಜನಪದ ಗಾಯಕಿಯ ಸ್ಟೈಲಿಷ್ ಫೋಟೋಶೂಟ್


  ಮುಂದೆ ದೂರದರ್ಶನ ಕಾರ್ಯಕ್ರಮಗಳ ನಿರೂಪಣೆ ಮೂಲಕ ತಮ್ಮ ವೃತ್ತಿ ರಂಗಕ್ಕೆ ಪ್ರವೇಶಿಸಿದರು. ಅಕುಲ್ ಅವರಿಗೆ “ಪ್ಯಾಟೆ ಹುಡುಗೀರ್ ಹಳ್ಳಿ ಲೈಫ್” ರಿಯಾಲಿಟಿ ಶೋ ಹೆಸರು, ಖ್ಯಾತಿ ತಂದು ಕೊಟ್ಟಿತು. ಇದರ ಮೂಲಕ ಅಕುಲ್ ರಾಜ್ಯದ ಮನೆಮಾತಾದರು. 2008 ರಲ್ಲಿ ಜ್ಯೋತಿ ಸಮರ್ಥಿ ಎಂಬುವವರನ್ನು ಕೈಹಿಡಿದ ಅಕುಲ್ ಗೆ ಒಬ್ಬ ಪುತ್ರನಿದ್ದಾನೆ.


  30ಕ್ಕೂ ಹೆಚ್ಚು ಟಿವಿ ಕಾರ್ಯಕ್ರಮಗಳ ನಿರೂಪಣೆ


  ಹಳ್ಳಿ ಹೈದ ಪ್ಯಾಟೆಗ್ ಬಂದ, ಪ್ಯಾಟೆ ಮಂದಿ ಕಾಡಿಗ ಬಂದ್ರು ಸೇರಿದಂತೆ 30ಕ್ಕೂ ಹೆಚ್ಚು ಟಿವಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಅಗಥ, ಗುಪ್ತ ಗಾಮಿನಿ, ಯಾವ ಜನ್ಮದ ಮೈತ್ರಿ, ಜಗಳಗಂಟಿಯರು ಸೇರಿದಂತೆ ಕೆಲ ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. 2007 ರಲ್ಲಿ ತೆರೆಕಂಡ `ಮಿಲನ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ಸಿನಿಪಯಣ ಆರಂಭಿಸಿದರು.  2008 ರಲ್ಲಿ ತೆರೆಕಂಡ `ಆತ್ಮೀಯ' ಚಿತ್ರದ ಮೂಲಕ ನಾಯಕ ನಟನಾಗಿ ಅಭಿನಯಿಸಿದ್ದಾರೆ. ವಾಸ್ತವ, ನೆರಮು, ಬನ್ನಿ, ಮೈನ, ಪ್ಯಾರ್ಗೆ ಆಗ್ಬಿಟ್ಟೈತೆ, ಲೂಸ್ಗಳು, ಕ್ರೇಜಿಸ್ಟಾರ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.


  ಅಕುಲ್ ಬಾಲಾಜಿಗೆ ಸಂದ ಪ್ರಶಸ್ತಿಗಳು


  ಕನ್ನಡ ಕಿರುತೆರೆಯ ಖ್ಯಾತ ನಿರೂಪಕ ಮತ್ತು ಚಿತ್ರನಟ ಆಗಿರುವ ಅಕುಲ್ ಬಾಲಾಜಿ ಕನ್ನಡದ ಜನಪ್ರಿಯ ಶೋ 2014 ರ “ಬಿಗ್‌ಬಾಸ್ ಕನ್ನಡ ಸೀಸನ್ 2” ರ ವಿಜೇತರು ಆಗಿದ್ದಾರೆ. 2010 ರಲ್ಲಿ “ಬಿಗ್ ಎಫ್ಎಮ್ ಬಿಗ್ ಟಿವಿ "ಅತ್ಯಂತ ಜನಪ್ರಿಯ ಆ್ಯಂಕರ್" ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಡ ಎಲ್ಲಾ ಪ್ರಮುಖ ವಾಹಿನಿಗಳಲ್ಲಿ ನಿರೂಪಕರಾಗಿ ಕೆಲಸ ಮಾಡಿದ್ದಾರೆ.


  ಇದನ್ನೂ ಓದಿ: ಪ್ರಭಾಸ್​ರ ಮತ್ತೊಂದು ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್​, `ರಾಧೆ ಶ್ಯಾಮ್’​ ಕಥೆ ಹೇಳಲಿದ್ದಾರೆ ಬಿಗ್​ಬಿ!


  ಅಕುಲ್ ಬಾಲಾಜಿ ನಿರೂಪಣೆ ಮಾಡಿದ ಶೋಗಳು ಕುಣಿಯೊಣು ಬಾರಾ, ಕಾಮಿಡಿ ಕಿಲಾಡಿಗಳು, ಕುಣಿಯೊಣು ಬಾರಾ, ಹೊಸ ಲವ್ ಸ್ಟೋರಿ, ಪ್ಯಾಟೆ ಮಂದಿ ಕಾಡಿಗೆ ಬಂದ್ರು, ನೋಡಿ ಸ್ವಾಮಿ ನಾವಿರೋದೇ ಹೀಗೆ, ಮನೆ ಮುಂದೆ ಮಹಾಲಕ್ಷ್ಮಿ, ಸೈ ಅಂತೆ ಸೈ(ತೆಲುಗು), ಇಂಡಿಯನ್, ತಕ ದಿಮಿ ತಾ ಡ್ಯಾನ್ಸಿಂಗ್ ಸ್ಟಾರ್, ಡ್ಯಾನ್ಸಿಂಗ್ ಸ್ಟಾರ್ ಮತ್ತು ಇತರೆ.

  Published by:renukadariyannavar
  First published: