Urfi Javed: ಪೋರ್ನ್​ ವೆಬ್​ಸೈಟ್​ನಲ್ಲಿ ಈಕೆಯ ಫೋಟೋ ಹಾಕಿದ್ದ ದುರುಳರು! ಆಗಲೇ ಸಾಕಷ್ಟು ನೋವು ತಿಂದಿದ್ದಾರಂತೆ ಉರ್ಫಿ

ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ ತಮ್ಮ ಫ್ಯಾಶನ್ ಸೆನ್ಸ್ ಬಗ್ಗೆ ಯಾವಾಗಲೂ ಚರ್ಚೆಯಲ್ಲಿರುತ್ತಾರೆ. ಅವರ ಉರ್ಫಿ ಜಾವೇದ್ ಡ್ರೆಸ್ಸಿಂಗ್ ಸ್ಟೈಲ್ ಅಭಿಮಾನಿಗಳ ಹೃದಯವನ್ನು ಘಾಸಿಗೊಳಿಸುತ್ತದೆ

ಉರ್ಫಿ ಜಾವೇದ್​

ಉರ್ಫಿ ಜಾವೇದ್​

  • Share this:
ಉರ್ಫಿ ಜಾವೇದ್ (Urfi Javed) ಅಭಿಮಾನಿಗಳ ಎದೆಯಲ್ಲಿ ಸಂಚಲನ, ಸೋಷಿಯಲ್ ಮೀಡಿಯಾ (Social Media) ದಲ್ಲಿ ವೈರಲ್ ಆಗುವ ಹೆಸರು.ಸ್ವತಃ ಉರ್ಫಿ ಜಾವೇದ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರ ಪ್ರತಿಯೊಂದು ಶೈಲಿಯನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. ಬಿಗ್ ಬಾಸ್ ಒಟಿಟಿ (Biggboss OTT) ಖ್ಯಾತಿಯ ಉರ್ಫಿ ಜಾವೇದ್ ತಮ್ಮ ಫ್ಯಾಶನ್ ಸೆನ್ಸ್ ಬಗ್ಗೆ ಯಾವಾಗಲೂ ಚರ್ಚೆಯಲ್ಲಿರುತ್ತಾರೆ. ಅವರ ಉರ್ಫಿ ಜಾವೇದ್ ಡ್ರೆಸ್ಸಿಂಗ್ ಸ್ಟೈಲ್ (Urfi Javed Dressing Style) ಅಭಿಮಾನಿಗಳ ಹೃದಯವನ್ನು ಘಾಸಿಗೊಳಿಸುತ್ತದೆ. ಅವರ ವಿಧವಿಧದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಉರ್ಫಿ ಜಾವೇದ್ ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಮೂಲದವರು. ಅವರು 15 ಅಕ್ಟೋಬರ್ 1996 ರಂದು ಜನಿಸಿದರು.

ಫ್ಯಾಶನ್ ಮೂಲಕವೇ ಗಮನ ಸೆಳೆಯುತ್ತಿರುವ ಉರ್ಫಿ!

ಬಡೇ ಭಯ್ಯಾ ಕಿ ದುಲ್ಹನಿಯಾದಲ್ಲಿ, ಉರ್ಫಿ ಅವ್ನಿ ಪಂತ್ ಪಾತ್ರವನ್ನು ನಿರ್ವಹಿಸಿದರು, ಇದರಿಂದಾಗಿ ಅವರು ಸಾರ್ವಜನಿಕರ ಗಮನ ಸೆಳೆದಿದ್ದರು. 2016 ರಲ್ಲಿ ಉರ್ಫಿ ಕಿರುತೆರೆಗೆ ಚೊಚ್ಚಲ ಪ್ರವೇಶ ಮಾಡಿದರು. ಉರ್ಫಿ ಯಾವಾಗಲೂ ತಮ್ಮ ಫ್ಯಾಷನ್ ಮತ್ತು ಟ್ರೋಲ್​ಗಳಿಂದಲೇ  ಚರ್ಚೆಯಲ್ಲಿದ್ದಾಳೆ. ಈ ನಟಿ (Actress) ವರ್ಷ ಪೂರ್ತಿ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರುವ ಮತ್ತು ಅದರಲ್ಲೂ ಆಕೆ ಧರಿಸುವ ವಿಚಿತ್ರ ಬಟ್ಟೆಗಳಿಂದ (Dress) ಹೆಚ್ಚು ಸುದ್ದಿಯಲ್ಲಿರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

15ನೇ ವರ್ಷಕ್ಕೆ ಪಡಬಾರದ ಕಷ್ಟ ಅನುಬಭವಿಸಿದ್ದಾರಂತೆ!

ಉರ್ಫಿ ಜಾವೇದ್ ಅವರು ದುರ್ಗಾ, ಸಾತ್ ಫೆರೆ ಕಿ ಹೇರಾ ಫೆರಿ, ಬೇಪನ್ನಾಹ್, ಜಿಜಿ ಮಾ, ದಯಾನ್, ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ (ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ) ಮತ್ತು ಕಸೌತಿ ಜಿಂದಗಿ ಕೇ ಮುಂತಾದ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ನಟನೆಗೂ ಬರುವ ಮುನ್ನ ಇವರು 15 ವರ್ಷದವರಾಗಿದ್ದಾಗ ಈಕೆಯ ಫೋಟೋವನ್ನು ದುರುಳರು ಪೋರ್ನ್​ ವೆಬ್​ಸೈಟ್​ನಲ್ಲಿ ಹಾಕಿದ್ದರಂತೆ. ಇದರಿಂದ ಉರ್ಫಿ ಕುಗ್ಗಿ ಹೋಗಿದ್ದರಂತೆ. ಕೆಲ ದಿನಗಳ ಕಾಲ ಯಾರ ಜೊತೆಯೂ ಮಾತನಾಡದೇ ಒಬ್ಬರೇ ಇರುತ್ತಿದ್ದೆ ಎಂದು ಸ್ವತಃ ಉರ್ಫಿ ಹೇಳಿದ್ದಾರೆ.

ಇದನ್ನೂ ಓದಿ: ಬೇಬಿ ಬಂಪ್​ ಫೋಟೋಶೂಟ್​ನಲ್ಲಿ ಕಂಗೊಳಿಸಿದ ಸಂಜನಾ ಗಲ್ರಾನಿ!

ಫೇಸ್​ಬುಕ್​ನಿಂದ ಕದ್ದು ಪೋರ್ನ್​ ಸೈಟ್​ಗೆ ಅಪ್​ಲೋಡ್​!

ಚಿಕ್ಕ ವಯಸ್ಸಿನಿಂದಲೂ ಉರ್ಫಿಗೆ ಫ್ಯಾಶನ್​ ಮೇಲೆ ಹೆಚ್ಚು ಆಸಕ್ತಿ. ಈಕೆಗೆ ಆಗ 15 ವರ್ಷ, ಲಕ್ನೋದಲ್ಲಿ ವಾಸಿಸುತ್ತಿದ್ದರಂತೆ. ಆಗ ಇವರೇ ಡಿಸೈನ್​ ಮಾಡಿದ ಒಂದು ಟಿ ಶರ್ಟ್ ಧರಿಸಿ ಫೋಟೋ ತೆಗೆಸಿಕೊಂಡಿದ್ದರಂತೆ. ಆ ಫೋಟೋವನ್ನು ಫೇಸ್​ಬುಕ್​ನಲ್ಲಿ ಶೇರ್​ ಮಾಡಿಕೊಂಡಿದ್ದರಂತೆ. ಆ ಫೋಟೋ ಕದ್ದ ಕಿರಾತಕರು ಪೋರ್ನ್​ ವೆಬ್​ಸೈಟ್​ನಲ್ಲಿ ಹಾಕಿದ್ದರಂತೆ. ಆಗ ಎಲ್ಲರೂ ಈಕೆಯನ್ನು ದೂಷಿಸಿದ್ದರಂತೆ.ಈ ರೀತಿ ಬಟ್ಟೆ ಹಾಕಿಕೊಂಡರೇ ಇನ್ನೇನು ಮಾಡುತ್ತಾರೆ ಎಂದು ಕೇಳಿದ್ದರಂತೆ.

ಇದನ್ನೂ ಓದಿ: ಬೇಬಿ ಬಂಪ್​ ಫೋಟೋಶೂಟ್​ನಲ್ಲಿ ಕಂಗೊಳಿಸಿದ ಸಂಜನಾ ಗಲ್ರಾನಿ!

ಉರ್ಫಿ ಜಾವೇದ್​ ಆದಾಯ ಎಷ್ಟು ಗೊತ್ತಾ?
Published by:Vasudeva M
First published: