ಒಳ್ಳೆ ಕೆಲಸ ಮಾಡೋಕೆ ಕಿರಿಕ್​ ಹುಡುಗಿ ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆಗೆ ಹೋಗಿದ್ದೇಕೆ..?

ಬೆಳಗೆದ್ದ ಕೂಡಲೇ ಒಂದು ಒಳ್ಳೆಯ ಕೆಲಸ ಮಾಡಬೇಕೆಂದು ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆಗೆ ಭೇಟಿ ನೀಡಿದ್ದಾರೆ. ಅದು ಅಲ್ಲಿಗೆ ಹೋಗಿ ರಶ್ಮಿಕಾ ಮಾಡಿದ್ದೇನು ಗೊತ್ತಾ?

Anitha E | news18
Updated:December 14, 2018, 3:37 PM IST
ಒಳ್ಳೆ ಕೆಲಸ ಮಾಡೋಕೆ ಕಿರಿಕ್​ ಹುಡುಗಿ ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆಗೆ ಹೋಗಿದ್ದೇಕೆ..?
ಬೆಳಗೆದ್ದ ಕೂಡಲೇ ಒಂದು ಒಳ್ಳೆಯ ಕೆಲಸ ಮಾಡಬೇಕೆಂದು ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆಗೆ ಭೇಟಿ ನೀಡಿದ್ದಾರೆ. ಅದು ಅಲ್ಲಿಗೆ ಹೋಗಿ ರಶ್ಮಿಕಾ ಮಾಡಿದ್ದೇನು ಗೊತ್ತಾ?
  • News18
  • Last Updated: December 14, 2018, 3:37 PM IST
  • Share this:
ಕಿರಿಕ್ ಸುಂದರಿ ರಶ್ಮಿಕಾ ಮಂದಣ್ಣ ಬೆಳ್ಳಂಬೆಳಗೆ ಎದ್ದು ಬೆಳ್ಳಂದೂರು ಕೆರೆಗೆ ಹೋಗಿದ್ದಾರೆ. ಅರೆ, ಆ ಕೆರೆ ಸುತ್ತಮುತ್ತ ಓಡಾಡೋಕೆ ಅಲ್ಲಿನ ಜನರೇ ಹೆದರುತ್ತಾರೆ. ಇನ್ನು ರಶ್ಮಿಕಾ ಯಾಕ್​ ಹೋಗಿದ್ದರು ಅಂತೀರಾ? ಒಂದೊಳ್ಳೆ ಕಾರಣಕ್ಕೆ ಹೋಗಿದ್ದರು. ಅದೇನು ಅಂತೀರಾ ಈ ವರದಿ ಓದಿ ನಿಮಗೆ ತಿಳಿಯುತ್ತೆ.

ರಶ್ಮಿಕಾ ಮಂದಣ್ಣ 'ಕಿರಿಕ್ ಪಾರ್ಟಿ' ಚಿತ್ರದ ಬಳಿಕ 'ಚಮಕ್' ಕೊಟ್ಟು ಕರ್ನಾಟಕದ ಕ್ರಷ್ ಅಂತಲೇ ಖ್ಯಾತರಾದ ಕನ್ನಡದ ಕನ್ನಡಕದ ಹುಡುಗಿ. ಇಂತಹ ರಶ್ಮಿಕಾ ಕೆಲ ದಿನಗಳಿಂದೀಚೆಗೆ ಬೇಡದ ಸುದ್ದಿಗಳಿಗೆ ಸದ್ದು ಮಾಡಿದ್ದೇ ಹೆಚ್ಚು. ರಕ್ಷಿತ್ ಶೆಟ್ಟಯಿಂದ ದೂರಾಗಿ, ಕನ್ನಡ ಚಿತ್ರವೊಂದಕ್ಕೆ ಗುಡ್‍ ಬೈ ಹೇಳಿ ವಿವಾದಕ್ಕೀಡಾಗಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು.

ಇದನ್ನೂ ಓದಿ: ಸೆಟ್ಟೇರಲಿದೆ ವಿದ್ಯಾ ಬಾಲನ್​ ಅಭಿನಯದ ಜಯಲಲಿತಾ ಜೀವನಾಧಾರಿತ ಸಿನಿಮಾ..!

ಆದರೆ ಈಗ ಆ ಎಲ್ಲ ವಿವಾದಗಳನ್ನು ಮರೆಸುವಂತಹ ಒಂದೊಳ್ಳೆ ಕೆಲಸ ಮಾಡಿದ್ದಾರೆ ಈ ಕಿರಿಕ್ ಸಾನ್ವಿ. ಹೌದು, ರಶ್ಮಿಕಾ ಮಂದಣ್ಣ ಬೆಂಗಳೂರಿನ ಕೆರೆಗಳಿಗೆ ಧ್ವನಿಯಾಗ ಹೊರಟಿದ್ದಾರೆ. ಅದಕ್ಕೆಂದೇ ಬೆಳ್ಳಂದೂರು ಕೆರೆಗೆ ಹೋಗಿ ಫೋಟೋಶೂಟ್ ಕೂಡ ಮಾಡಿದ್ದಾರೆ.ಮಲಿನ ನೀರು ಕೆರೆ, ಕಟ್ಟೆಗಳಿಗೆ ಸೇರುತ್ತಿರುವ ಕಾರಣ ಬೆಂಗಳೂರಿನ ಬಹುತೇಕ ಕೆರೆಗಳು ಮಲಿನಗೊಂಡಿವೆ. ಅದರಿಂದಾಗಿ ಸ್ವಚ್ಛ ಕುಡಿಯುವ ನೀರಿಲ್ಲದೇ ಸಿಲಿಕಾನ್ ಸಿಟಿ ಮಂದಿ ಪರದಾಡುವಂತಾಗಿದೆ. ಅದಕ್ಕೆ ಉತ್ತಮ ಉದಾಹರಣೆ ಬೆಳ್ಳಂದೂರು ಕೆರೆ ಮತ್ತು ಅದು ಮಲಿನಗೊಂಡಿರುವುದರಿಂದ ಪರಿತಪಿಸುತ್ತಿರುವ ಕೆರೆ ಸುತ್ತಮುತ್ತಲಿನ ಜನ.

ಹೀಗಾಗಿಯೇ ನಗರದ ಕೆರೆಕಟ್ಟೆಗಳನ್ನು ರಕ್ಷಿಸಿ, ಮಾಲಿನ್ಯ ತಡೆಗಟ್ಟಿ ಅಂತ ಹೇಳಲು ವಿಭಿನ್ನ ಫೋಟೋಶೂಟ್ ಮಾಡಿಸಿದ್ದಾರೆ ರಶ್ಮಿಕಾ. ಕಲುಷಿತಗೊಂಡ ನೀರಿನಲ್ಲಿ ಮುಳುಗುವ ಮೂಲಕ, ನೀರು ಮಾಲಿನ್ಯಗೊಂಡರೆ, ಅದರ ಜತೆಗೆ ನಾವೂ ಮುಳುಗಬೇಕಾಗುತ್ತೆ ಎಂದು ವಿಭಿನ್ನವಾಗಿ ನೀತಿಪಾಠ ಮಾಡುತ್ತಿದ್ದಾರೆ. 'ಬೆಳ್ಳಂದೂರು ಕೆರೆ ಬಗ್ಗೆ ನನಗೆ ಗೊತ್ತಿರಲಿಲ್ಲ. ಆದರೆ ಅಲ್ಲಿ ಹೋಗಿ ಶೂಟ್ ಮಾಡುತ್ತಿರುವಾಗ, ನಾವು ಎಷ್ಟು ಗಂಭೀರ ಸಮಸ್ಯೆ ಎದುರಿಸುತ್ತಿದ್ದೇವೆ ಎನ್ನುವುದರ ಅರಿವಾಯಿತು. ಬೆಳ್ಳಂದೂರು ಕೆರೆಯ ದುಸ್ಥಿತಿ ನೋಡಿ ನನಗೆ ತುಂಬಾ ದುಃಖವಾಯಿತು. ಈ ಪರಿಸ್ಥಿತಿ ಹೀಗೇ ಮುಂದುವರಿದರೆ, ಭವಿಷ್ಯದಲ್ಲಿ ಎಲ್ಲ ಕೆರೆಗಳೂ ಹೀಗೆ ಕಲುಷಿತಗೊಳ್ಳುತ್ತವಂತೆ. ಅಂತಹ ದಿನವನ್ನು ನೋಡುವುದಿರಲಿ, ಅದನ್ನು ಊಹಿಸಿಕೊಳ್ಳಲೂ ನನ್ನಿಂದ ಸಾಧ್ಯವಾಗುತ್ತಿಲ್ಲ' ಎಂದು ತಮ್ಮ ಟ್ವಿಟರ್​ನಲ್ಲಿ ಫೋಟೋಗಳೊಂದಿಗೆ ಬರೆದುಕೊಂಡಿದ್ದಾರೆ.

ಹೀಗೆ ದಿನೇ ದಿನೇ ಕಲುಷಿತಗೊಂಡು ಕಣ್ಮರೆಯಾಗುತ್ತಿರುವ ಬೆಂಗಳೂರಿನ ಕೆರೆಗಳ ಬಗ್ಗೆ, ಅದರಲ್ಲೂ ಹೆಚ್ಚಾಗಿ ಬೆಳ್ಳಂದೂರು ಕೆರೆಯ ದುಸ್ಥಿತಿಯನ್ನು ಕಂಡು ರಶ್ಮಿಕಾ ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಾಗಿಯೇ ಈಗಲಾದರೂ ಎಚ್ಚೆತ್ತುಕೊಂಡು ನೀರಿನ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು ಅಂತಲೂ ಕೇಳಿಕೊಂಡಿದ್ದಾರೆ. ಅದೇನೇ ಇರಲಿ, ರಶ್ಮಿಕಾ ಅವರ ಈ ಪರಿಸರ ಕಾಳಜಿ ನಿಜಕ್ಕೂ ಮೆಚ್ಚುವಂತದ್ದು.

First published:December 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ