ವಡ ಚೆನ್ನೈ: ನಟ ಧನುಷ್​ ಅಭಿನಯದ ಲೋಕಲ್ ರೌಡಿಸಂ ಚಿತ್ರ

news18
Updated:July 28, 2018, 10:09 PM IST
ವಡ ಚೆನ್ನೈ: ನಟ ಧನುಷ್​ ಅಭಿನಯದ ಲೋಕಲ್ ರೌಡಿಸಂ ಚಿತ್ರ
news18
Updated: July 28, 2018, 10:09 PM IST
-ನ್ಯೂಸ್ 18 ಕನ್ನಡ

ನಟ ನಿರ್ದೇಶಕ ಧನುಷ್ ಅಭಿನಯದ ಚಿತ್ರವೊಂದು ಸದ್ದಿಲ್ಲದೆ ಬಂದು ಸಖತ್ ಸೌಂಡ್​ ಮಾಡಿದೆ. ಇಂದು (ಜುಲೈ28) 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಧನುಷ್​ಗೆ ಉಡುಗೊರೆಯಾಗಿ​ 'ವಡ ಚೆನ್ನೈ' ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದ್ದಾರೆ. 'ಆಡುಕಲಂ' ಮತ್ತು 'ವೀಸಾರಣೈ' ಚಿತ್ರ ಖ್ಯಾತಿಯ ನಿರ್ದೇಶಕ ವೆಟ್ರಿಮಾರನ್ ನಿರ್ದೇಶನದ ಈ ಚಿತ್ರವು ಚೆನ್ನೈನ ಪಕ್ಕಾ ಲೋಕಲ್​ ರೌಡಿಸಂ ತೋರಿಸಲಿದೆ.

ಸಂತೋಷ್​ ನಾರಾಯಣ್ ಹಿನ್ನಲೆ ಸಂಗೀತದಲ್ಲಿ ಮೂಡಿಬಂದಿರುವ 'ವಡ ಚೆನ್ನೈ'(ಉತ್ತರ ಚೆನ್ನೈ) ಟೀಸರ್​ ಸಿನಿ ಪ್ರೇಮಿಗಳ ಗಮನ ಸೆಳೆಯುತ್ತಿದೆ. ಇಲ್ಲಿ ಧನುಷ್ 80ರ ದಶಕದ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನಾಯಕನ​ ಪಾತ್ರವು ಮೂರು ಶೇಡ್​ಗಳಲ್ಲಿ ಮೂಡಿ ಬರಲಿದ್ದು, ನಟ ಸಮುದ್ರಖಣಿ ಕೂಡ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ರೆಟ್ರೊ ಲುಕ್​ನಲ್ಲಿ ಅಬ್ಬರಿಸಲಿದ್ದಾರೆ.

'ವಡಾ ಚೆನ್ನೈ'ನಲ್ಲಿ ಇಬ್ಬರು ನಾಯಕಿಯರಿದ್ದು, ನಟಿ ಐಶ್ವರ್ಯ ರಾಜೇಶ್ ಮತ್ತು ಆಂಡ್ರಿಯಾ ಬಣ್ಣ ಹಚ್ಚಿದ್ದಾರೆ. ಮೇಲ್ನೋಟಕ್ಕೆ ಧನುಷ್​ಗೆ ನಾಯಕಿಯಾಗಿ ಐಶ್ವರ್ಯ ಇರಲಿದ್ದು, ವಿವಾಹಿತ ಮೋಹಕ ಮಹಿಳೆಯಾಗಿ ಆಂಡ್ರಿಯಾ ಅಭಿನಯಿಸಿದ್ದಾರೆ.

ಚಿತ್ರವು ಗ್ಯಾಂಗ್​ವಾರ್ ಕಥೆ ಹೊಂದಿರುವುದು ಈ ಹಿಂದೆ ಸುದ್ದಿಯಾಗಿತ್ತು. ಆದರೆ ಟೀಸರ್​ನಲ್ಲಿ ಡ್ರಗ್ಸ್​ ಮಾಫಿಯಾ, ಲೋಕಲ್ ಹೊಡೆದಾಟ ಮತ್ತು ಬದುಕಲು ಹೋರಾಟ ಎಂಬ ಡೈಲಾಗ್​ಗಳು ಚಿತ್ರಕಥೆಯ ಎಳೆಯನ್ನು ಬಿಚ್ಚಿಟ್ಟಿದೆ. ವೆಟ್ರಿಮಾರನ್ ನಿರ್ದೇಶನದ 'ಆಡುಕಲಂ'ನಲ್ಲಿ ಕೋಳಿ ಕಾಳಗದಲ್ಲಿ ಮಿಂಚಿದ್ದ ಧನುಷ್​ ಇಲ್ಲೂ ಕೂಡ ಮತ್ತದೇ ರಗಡ್​ ಪಾತ್ರದಲ್ಲಿ ಕಾಣಿಸಿರುವುದು ವಿಶೇಷ. ನೈಜ ರೀತಿಯಲ್ಲಿ ಚಿತ್ರೀಕರಿಸಿರುವ ಈ ಸಿನಿಮಾ ಧನುಷ್​ ಪಾಲಿನ ಮತ್ತೊಂದು 'ಪುದುಪೇಟೈ' ಆಗುವ ನೀರಿಕ್ಷೆಯಿದೆ.

ಕನ್ನಡ ನಟ ಕಿಶೋರ್, ತಮಿಳು ನಿರ್ದೇಶಕ ಅಮೀರ್ ಸೇರಿದಂತೆ ಹಲವು ಪ್ರಸಿದ್ಧ ನಟರು 'ವಡ ಚೆನ್ನೈ'ನಲ್ಲಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಅಭಿನಯದ 'ಕಾಳ' ಚಿತ್ರದ ಬಳಿಕ ಧನುಷ್​ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದು, ರಕ್ತ ಚರಿತ ಕಥೆಯ 'ವಡ ಚೆನ್ನೈ' ಕಾಲಿವುಡ್​ನ ಬಿಗ್ ಹಿಟ್​ನಲ್ಲಿ ಸ್ಥಾನ ಪಡೆಯಲಿದೆ ಎನ್ನಲಾಗುತ್ತಿದೆ.
Loading...

First published:July 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...