ಜನರಲ್ಲಿ ಭಯ ಹುಟ್ಟಿಸಿಯೇ 900 ಕೋಟಿ ದೋಚಿಕೊಂಡ ದ ನನ್​

news18
Updated:September 12, 2018, 4:46 PM IST
ಜನರಲ್ಲಿ ಭಯ ಹುಟ್ಟಿಸಿಯೇ 900 ಕೋಟಿ ದೋಚಿಕೊಂಡ ದ ನನ್​
  • News18
  • Last Updated: September 12, 2018, 4:46 PM IST
  • Share this:
ನ್ಯೂಸ್​ 18 ಕನ್ನಡ

ಹಾಲಿವುಡ್​ನ ಹಾರರ್​ ಸಿನಿಮಾಗಳು ಭಾರತದಲ್ಲಿ ತೆರೆ ಕಂಡಂತೆಯೇ ಮಾಯವಾಗಿ ಬಿಡುತ್ತವೆ. ಆದರೆ ಕಳೆದ ಶುಕ್ರವಾರವಷ್ಟೆ (ಸೆ.7) ತೆರೆಕಂಡಿರುವ ಹಾರರ್​ ಸಿನಿಮಾ 'ದ ನನ್​' ವಾರ ಪೂರ್ತಿಯಾಗುವ ಹೊತ್ತಿಗೇ 900 ಕೋಟಿ ಬಾಚಿಕೊಂಡಿದೆ.

ಕಂಜೂರಿಂಗ್​ ಫ್ರಾಂಚೈಸಿಯ ಐದನೇ ಸಿನಿಮಾ ಇದಾಗಿದ್ದು, ಎಲ್ಲೆಡೆ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಟ್ರೇಲರ್​ನಿಂದಲೇ ಚಿತ್ರಮಂದಿರಲ್ಲಿ ಎಲ್ಲರ ಬೆವರಿಳಿಸಿದ್ದ 'ದ ನನ್​' ಈಗ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ.

ಈ ಸಿನಿಮಾದ ಕಥೆ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುತ್ತಿದ್ದು, ತೆರೆಕಂಡ ಮೊದಲ ವಾರದಲ್ಲೇ ಹಾಕಿರುವ ಹಣಕ್ಕಿಂತ ಆರು ಪಟ್ಟು ಲಾಭ ಮಾಡಿಕೊಂಡಿದೆ. ಫೋಬ್ಸ್​ ನಿಯತಕಾಲಿಕೆಯ ವರದಿ ಪ್ರಕಾರ ಈ ಸಿನಿಮಾವನ್ನು 158.4 ಕೋಟಿ ಬಜೆಟ್​ನಲ್ಲಿ ನಿರ್ಮಿಸಲಾಗಿದ್ದು, ತೆರೆ ಕಂಡ ಮೊದಲ ವಾರದಲ್ಲೇ ಈ ಸಿನಿಮಾ 943.2 ಕೋಟಿ ಗಳಿಸಿದೆಯಂತೆ. ಮೊದಲ ವಾರಾಂತ್ಯದಲ್ಲಿ 385.2 ಕೋಟಿ ಹಣ ಮಾಡಿದ್ದರೆ, ಭಾರತದಲ್ಲಿ 8 ಕೋಟಿ ಹಣ ಮಾಡಿದೆ.

ನೀವೂ ಇನ್ನೂ ಸಿನಿಮಾ ನೋಡಿಲ್ಲವಾದರೆ, ಮೊದಲು ಅದರ ಟ್ರೇಲರ್​ ನೋಡಿ...

First published:September 12, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading