Sanchari Vijay| ಮೃತ ಸಂಚಾರಿ ವಿಜಯ್‌ ಅಗಲಿಕೆಯ ಬೆನ್ನಿಗೆ ರೆಕ್ಕೆ ಬಿಚ್ಚಿದ ಸುಳ್ಳುಗಳು!

ಸಂಚಾರಿ ವಿಜಯ್ ಕಳೆದ 10 ವರ್ಷದಲ್ಲಿ ನಟಿಸಿದ್ದುಮ ಕೇವಲ 20 ಚಿಲ್ಲರೆ ಚಿತ್ರಗಳಲ್ಲಷ್ಟೇ ಆದರೂ, ಅವರಿಗೆ ಆರ್ಥಿಕ ಮುಗ್ಗಟ್ಟು ಕಾಡಿರಲಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಸಂಚಾರಿ ವಿಜಯ್‌ ಕಾರು ಮಾರಿಬಿಟ್ಟಿದ್ದರು, ಅವರ ಬಳಿ ಬಾಡಿಗೆ ಕಟ್ಟಲು ಹಣ ಇರಲಿಲ್ಲ ಎಂದು ಸುಳ್ಳು ಹರಡಲಾಗುತ್ತಿದೆ.

ಸಂಚಾರಿ ವಿಜಯ್.

ಸಂಚಾರಿ ವಿಜಯ್.

 • Share this:
  ಹಲವು ದಶಕಗಳ ನಂತರ ಕನ್ನಡಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಶ್ರೇಷ್ಠ ಕಲಾವಿದ ಸಂಚಾರಿ ವಿಜಯ್. ನಟ ವಿಜಯ್​ ಅವರ ಅಕಾಲಿಕ ಮರಣಕ್ಕೆ ಕರ್ನಾಟಕ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗ ಮರುಗಿತ್ತು. ರಂಗಭೂಮಿ ಹಿನ್ನೆಲೆಯ ಕಲಾವಿದನನ್ನು ಕಳೆದುಕೊಂಡ ದುಃಖ ಮಡುಗಟ್ಟಿತ್ತು. ಅಸಲಿಗೆ ಸಂಚಾರಿ ವಿಜಯ್ ಅವರ ಅಗಲಿಕೆಯ ನೋವು ಇನ್ನೂ ಮರೆಯಾಗಿಲ್ಲ. ಅಷ್ಟರಲ್ಲಾಗಲೇ ಅವರ ಬಗ್ಗೆ ಇಲ್ಲ-ಸಲ್ಲದ ಹತ್ತಾರು ಸುಳ್ಳುಗಳು ಸಮಾಜಿಕ ಜಾಲತಾಣಗಳಲ್ಲಿ ತಲೆ ಎತ್ತಿವೆ. ಸುಳ್ಳುಗಳನ್ನು ಅತಿರಂಜಕವಾಗಿ ಹರಡುವ ಮೂಲಕ ಸಂಚಾರಿ ವಿಜಯ್ ಆತ್ಮಕ್ಕೂ ಇರಿಸು ಮುರಿಸು ಉಂಟು ಮಾಡುವ ಕೆಲಸ ನಡೆಯುತ್ತಿರುವುದು ಮಾತ್ರ ವಿಪರ್ಯಾಸ.

  ಸಂಚಾರಿ ವಿಜಯ್ ಕಳೆದ 10 ವರ್ಷದಲ್ಲಿ ನಟಿಸಿದ್ದುಮ ಕೇವಲ 20 ಚಿಲ್ಲರೆ ಚಿತ್ರಗಳಲ್ಲಷ್ಟೇ ಆದರೂ, ಅವರಿಗೆ ಆರ್ಥಿಕ ಮುಗ್ಗಟ್ಟು ಕಾಡಿರಲಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಸಂಚಾರಿ ವಿಜಯ್‌ ಕಾರು ಮಾರಿಬಿಟ್ಟಿದ್ದರು, ಅವರ ಬಳಿ ಬಾಡಿಗೆ ಕಟ್ಟಲು ಹಣ ಇರಲಿಲ್ಲ, ಸಂಚಾರಿ ವಿಜಯ್‌ ಹೆಲ್ಮೆಟ್ ತೊಡದೆ ಅಜಾಗರೂಕತೆಯಿಂದ ವರ್ತಿಸುತ್ತಿದ್ದರು. ಹೀಗೆ ಹಲವು 'ಆರೋಪ'ಗಳು ವಿಜಯ್‌ ಬಗ್ಗೆ ಮಾಡಲಾಗುತ್ತಿವೆ. ವಿಜಯ್‌ರ ಹತ್ತಿರದ ಗೆಳೆಯರಲ್ಲಿ ಒಬ್ಬರಾದ ಸಿನಿಮಾ ಕರ್ಮಿ ವೀರೇಂದ್ರ ಮಲ್ಲಣ್ಣ ಫೇಸ್‌ಬುಕ್‌ನಲ್ಲಿ ವಿಜಯ್‌ ವ್ಯಕ್ತಿತ್ವದ ಬಗ್ಗೆ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

  ನಟ ವಿಜಯ್ ಕಾರು ಮಾರಿದ್ದು ಆರ್ಥಿಕ ಮುಗ್ಗಟ್ಟಿನಿಂದ ಅಲ್ಲ:

  ನಟ ವಿಜಯ್ ಬೈಕ್ ಅಪಘಾತವಾದ ಹಿನ್ನೆಲೆ ಅವರು ಹಣಕಾಸಿನ ಮುಗ್ಗಟ್ಟಿನ ಕಾರಣಕ್ಕೆ ಕಾರನ್ನು ಮಾರಿದ್ದರು ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಆದರೆ, ಇದಕ್ಕೆ ಉತ್ತರ ನೀಡಿರುವ ವೀರೇಂದ್ರ ಮಲ್ಲಣ್ಣ, "ವಿಜಯ್ ಬಳಿ ಕಾರು ಮಾರಿದ್ದು ನಿಜ ಆದರೆ ಆರ್ಥಿಕ ಮುಗ್ಗಟ್ಟಿನಿಂದ ಅವರು ಕಾರು ಮಾರಿರಲಿಲ್ಲ. ಅವರ ಬಳಿ ಇನ್ನೊಂದು ಕಾರಿತ್ತು. ವಿಜಯ್‌ ಬೈಕ್‌ಗಿಂತಲೂ ಹೆಚ್ಚಾಗಿ ಕಾರನ್ನೇ ಬಳಸುತ್ತಿದ್ದರು. ವಿಜಯ್‌ಗೆ ಯಾವುದೇ ಆರ್ಥಿಕ ಮುಗ್ಗಟ್ಟಿರಲಿಲ್ಲ. ದೊಡ್ಡ ಶ್ರೀಮಂತ ಅಲ್ಲದಿದ್ದರೂ ಸ್ಥಿತಿವಂತರೇ ಆಗಿದ್ದರು. ಆದರೆ ಹೃದಯದಿಂದ ದೊಡ್ಡ ಶ್ರೀಮಂತ ಆಗಿದ್ದರು" ಎಂದಿದ್ದಾರೆ.

  ಇದನ್ನೂ ಓದಿ: Mission 2024| ಮೋದಿ ವಿರುದ್ಧ ತೃತೀಯ ರಂಗದೊಂದಿಗೆ ಅಖಾಡಕ್ಕಿಳಿದ ಶರದ್ ಪವಾರ್; ಇಲ್ಲಿದೆ ತೃತೀಯ ರಂಗದ ಕಂಪ್ಲೀಟ್ ಚಿತ್ರಣ!

  ವಿಜಯ್ ಬಾಡಿಗೆ ಮನೆಯಲ್ಲಿ ವಾಸವಿರಲಿಲ್ಲ:

  ವೀರೇಂದ್ರ ಮಲ್ಲಣ್ಣ ''ವಿಜಯ್‌ ಬಾಡಿಗೆ ಮನೆಯಲ್ಲಿ ವಾಸವಿರಲಿಲ್ಲ ಬದಲಿಗೆ ಅವರು ಸಹೋದರರೊಟ್ಟಿಗೆ ಸೇರಿ ಮೂರಂತಸ್ಥಿನ ಮನೆ ಕಟ್ಟಿಕೊಂಡಿದ್ದರು. ಸಹೋದರರ ಜೊತೆಗೆ ಒಟ್ಟಿಗೆ ವಾಸವಿದ್ದರು'' ಎಂದಿದ್ದಾರೆ. ಆ ಮೂಲಕ ವಿಜಯ್‌ಗೆ ಬಾಡಿಗೆ ಕಟ್ಟಲು ಸಹ ಹಣವಿರಲಿಲ್ಲ ಎಂಬುದು ಸುಳ್ಳು ಎಂದಿದ್ದಾರೆ.

  ವಿಡಿಯೋ ಒಂದರಲ್ಲಿ ಸಂಚಾರಿ ವಿಜಯ್ ''ಈಗಿನ ಹುಡುಗಿಯರು ಬ್ಯಾಂಕ್‌ ಬ್ಯಾಲೆನ್ಸ್ ನೋಡಿ ಮದುವೆ ಆಗುತ್ತಾರೆ ನನ್ನಲ್ಲಿ ಬ್ಯಾಂಕ್‌ ಬ್ಯಾಲೆನ್ಸ್ ಇಲ್ಲ" ಎಂದಿದ್ದರು. ಮತ್ತೋರ್ವರು ಇದೇ ಕಾರಣಕ್ಕೆ ವಿಜಯ್​ಗೆ ಮದುವೆ ಆಗಿರಲಿಲ್ಲ ಎಂದು ಮರುಗಿದ್ದರು. ಆದರೆ, ಅಸಲಿಗೆ ನಟ ವಿಜಯ್ ತಮಾಷೆಗಾಗಿ ಆ ಹೇಳಿಕೆ ನೀಡಿದ್ದರೇ ವಿನಃ ಅದರಲ್ಲಿ ಎಳ್ಳಷ್ಟು ಸತ್ಯವಿಲ್ಲ. ಮತ್ತು ಶೀಘ್ರದಲ್ಲೇ ವಿಜಯ್ ಮದುವೆ ಆಗುವ ಯೋಚನೆಯಲ್ಲಿದ್ದರು. ಆದರೆ, ಅಷ್ಟರಲ್ಲಿ ಅವರ ಅವಧಿ ಮುಗಿದದ್ದು ಮಾತ್ರ ವಿಪರ್ಯಾಸವಷ್ಟೇ.

  ಇದನ್ನೂ ಓದಿ: ಇ-ಕಾಮರ್ಸ್ ತಾಣಗಳಲ್ಲಿ ಧಮಾಕಾ ಸೇಲ್‌ಗಳಿಗೆ ಬ್ರೇಕ್‌..? ನಿಷೇಧ ಪ್ರಸ್ತಾಪಿಸಿದ ಕೇಂದ್ರ ಸರ್ಕಾರ

  ವಿಜಯ್ ಹಾಗಾಗಿಯೇ ಅವರಿಕ್ಗೆಕೆ ಮದುವೆ ಆಗಿರಲಿಲ್ಲ'' ಎಂದು ಯುವತಿಯೊಬ್ಬರು ಕಣ್ಣೀರು ಹಾಕಿಕೊಂಡು ಹೇಳುತ್ತಿರುವ ವಿಡಿಯೋ ಹರಿದಾಡುತ್ತಿದೆ. ಆದರೆ ವಿಜಯ್‌ ಆ ವಿಷಯವನ್ನು ತಮಾಷೆಯಾಗಿ ಹೇಳಿದ್ದರೇ ಹೊರತು ಗಂಭೀರವಾಗಿ ಅಲ್ಲ ಎಂಬುದು ಆ ಯುವತಿಗೆ ಗೊತ್ತಾಗಿಲ್ಲ.

  ಹಿಂದಿನ ಸೀಟಿನಲ್ಲೂ ಕೂತರು ಬೆಲ್ಟ್ ಹಾಕಿಕೊಳ್ಳುತ್ತಿದ್ದರು'' ಇನ್ನು ವಿಜಯ್‌ ಹೆಲ್ಮೆಟ್ ಹಾಕದೆ ಬೇಜವಾಬ್ದಾರಿಯಿಂದ ಮೆರೆದು ಬಿಟ್ಟರು ಎಂದು ಕೆಲವು ಹಿರಿಯ ನಟರೂ ಸಹ ಹೇಳಿದ್ದಾರೆ. ವೀರೇಂದ್ರ ಮಲ್ಲಣ್ಣ ಬರೆದುಕೊಂಡಿರುವಂತೆ, ವಿಜಯ್‌ ಬಹಳ ಜವಾಬ್ದಾರಿಯುತ ವ್ಯಕ್ತಿ ಆಗಿದ್ದರು. ''ವಿಜಯ್ ಎಂದೂ ಹೆಲ್ಮೆಟ್ ಇಲ್ಲದೆ ಬೈಕ್ ಹತ್ತಿದ್ದನ್ನು ನಾನು ಕಂಡಿಲ್ಲ. ವೇಗವೆಂದರೆ ವಿಜಯ್‌ಗೆ ಬಹಳ ಭಯ. ಸುರಕ್ಷತೆಯನ್ನು ಸದಾ ಗಮನದಲ್ಲಿಟ್ಟುಕೊಳ್ಳುತ್ತಿದ್ದರು. ಕಾರಿನ ಹಿಂಬದಿಯ ಸೀಟಿನಲ್ಲಿ ಕೂತರೂ ಮರೆಯದೇ ಸೀಟ್‌ಬೆಲ್ಟ್ ಧರಿಸುತ್ತಿದ್ದರು. ಆದರೆ ಅಂದು ಹೆಲ್ಮೆಟ್ ಧರಿಸದೇ ತಪ್ಪು ಮಾಡಿಬಿಟ್ಟರು'' ಎಂದು ಬೇಸರಿಸಿಕೊಂಡಿದ್ದಾರೆ.
  Published by:MAshok Kumar
  First published: