The Last Case: ದಿ ಲಾಸ್ಟ್ ಕೇಸ್ ಎಂಬ ಇಂಟ್ರೆಸ್ಟಿಂಗ್ ಸಿನಿಮಾ, ಇದು ದೊಡ್ಡ ಫಿಲ್ಮ್​ ಅಲ್ಲ ಪುಟ್ಟ ಸಿನಿಮಾ

The Last Case ಅನ್ನೋ ಕನ್ನಡ ಸಿನಿಮಾ ನಿಜಕ್ಕೂ ನಿಮಗೆ ಫ್ರೀಯಾಗಿಯೇ ವಿಭಿನ್ನವಾಗಿಯೇ ಖುಷಿ ಕೊಡುತ್ತದೆ. ಕಲಾತ್ಮಕ ಸ್ಪರ್ಶ ಈ ಚಿತ್ರಕ್ಕಿದೆ. ಕುತೂಹಲ ಮೂಡಿಸೋ ಕೆಲಸವೂ ಇಲ್ಲಾಗಿದೆ.

ದಿ ಲಾಸ್ಟ್ ಕೇಸ್

ದಿ ಲಾಸ್ಟ್ ಕೇಸ್

  • Share this:
ಪುಟ್ಟ ಕಥೆ, ಪುಟ್ಟ ಸಿನಿಮಾ, ಪುಟ್ಟ ಡ್ರಾಮಾ. ಇವೆಲ್ಲ ಈಗ ಟ್ರೆಂಡ್. ಈ ಹಿನ್ನೆಲೆಯಲ್ಲಿ ಕನ್ನಡದಲ್ಲೂ 20 ನಿಮಿಷ (Short Films) ಸಿನಿಮಾಗಳು ಅದ್ಭುತವಾಗಿಯೇ ರೆಡಿ ಆಗುತ್ತಿವೆ. ಕನ್ನಡದ್ದೇ ಆದ The Last Case ಹೆಸರಿನ ಸಿನಿಮಾ ಕೂಡ ಒಂದು. ಇದರಲ್ಲಿ ಹೆಚ್ಚಿನ ಕ್ಯಾರೆಕ್ಟರ್ಸ್ ಇಲ್ಲ. ಲೋಕೇಷನ್ (Location) ಕೂಡ ಹೆಚ್ಚೇನೂ ಇಲ್ಲ. ಹೆಚ್ಚು ಕಡಿಮೆ ಇಡೀ 20.27 ಸೆಕೆಂಡ್​ನ ಸಿನಿಮಾ ಕೇವಲ ಮೂರು ಪಾತ್ರದ ಮೇಲೆನೆ ಹೋಗುತ್ತದೆ. ಹಾಗಂತ ಇದು ಬೋರ್ ಹೊಡೆಸೋದಿಲ್ಲ. ಪಾತ್ರಧಾರಿಗಳ ಪ್ರತಿ ಮಾತು ನಿಮ್ಮಲ್ಲಿ ಕುತೂಹಲ ಕೆರಳಿಸುತ್ತಲೇ ಸಾಗುತ್ತದೆ. ಅಂತಹ ಈ ಸಿನಿಮಾ ರಿಲೀಸ್ ಆಗಿದೆ. ಇದರ ಒಂದು ರಿವ್ಯೂ ಇಲ್ಲಿದೆ.

The Last Case: ಅನ್ನೋ ಸಿನಿಮಾ ನಿಜಕ್ಕೂ ನಿಮಗೆ ಫ್ರೀಯಾಗಿಯೇ ವಿಭಿನ್ನವಾಗಿಯೇ ಖುಷಿ ಕೊಡುತ್ತದೆ. ಕಲಾತ್ಮಕ ಸ್ಪರ್ಶ ಈ ಚಿತ್ರಕ್ಕಿದೆ. ಕುತೂಹಲ ಮೂಡಿಸೋ ಕೆಲಸವೂ ಇಲ್ಲಾಗಿದೆ. ಸಿನಿಮಾ ನೋಡೋಕೆ ಕುಳಿತರೇ ಜಾಸ್ತಿ ಟೈಮ್ ಏನೂ ಹೋಗೋದಿಲ್ಲ. 20 ನಿಮಿಷದಲ್ಲಿ ಎಲ್ಲವೂ ಮುಗಿದು ಹೋಗುತ್ತದೆ. ಆದರೆ ಸಿನಿಮಾ ನಿಮ್ಮಲ್ಲಿ ಹಲವು ಪ್ರಶ್ನೆಗಳನ್ನೂ ಉಳಿಸಿ ಹೋಗುತ್ತದೆ.

ಬಣ್ಣದ ಲೋಕದ ಮಂದಿಯ ನೈಜ ಕಥೆ ಹೇಳಿದಂತಿದೆ ಈ ಸಿನಿಮಾ
ಬಣ್ಣದ ಲೋಕ ನಿಜಕ್ಕೂ ಕಲರ್​ಫುಲ್. ಆದರೆ ಇಲ್ಲಿ ಕೆಲಸ ಅನ್ನೋದು ಅತಂತ್ರ. ಸಕ್ಸಸ್ ಅನ್ನೋದು ಕೂಡ ಮಾಯಾಮೃಗ.ಇಂತಹ ಲೋಕದಲ್ಲಿ ಸಿನಿಮಾ ರೈಟರ್ ಕಾಮತ್ ಇರ್ತಾರೆ. ಇವರೂ ಒಂದು ಕಾಲದಲ್ಲಿ ಫೇಮಸ್. ಆದರೆ, ಇವರ ನೆಚ್ಚಿನ ಶಿಷ್ಯ ಆನಂದ್ ಇವರ ಮುಂದೆ ಬೆಳೆದು ಬಿಡುತ್ತಾನೆ. ಆಗಲೇ ನೋಡಿ ಕಾಮತ್​ಗೆ ಸೋಲಿನ ಅನುಭವ ಆಗುತ್ತದೆ. ಹೊಟ್ಟೆ ಕಿಚ್ಚು ಕೂಡ ಶುರು ಆಗುತ್ತದೆ. ಕಾಮತ್​ ತಪ್ಪು ಹೆಜ್ಜೆ ಇಡಲು ಕಾರಣವೂ ಆಗುತ್ತದೆ.

ಹೌದು. ಇದೇ ಮನಸ್ಥಿಯಲ್ಲಿಯೇ ಒಂದು ಕೊಲೆ ಕೂಡ ನಡೆದಿರುತ್ತದೆ. ಆದರೆ ಇದನ್ನ ಮಾಡಿದವ್ರು ಯಾರು ? ಇದನ್ನ ತನಿಖೆ ಮಾಡೋಕೆ ಬರುವವರೇ ಪೊಲೀಸ್ ಆಫೀಸರ್ ನಾಗರಾಜಯ್ಯ. ನಾಗರಾಜಯ್ಯ ನವರ ಮುಂದೆ ರೈಟರ್ ಕಾಮತ್ ಏನೂ ಹೇಳೋದಿಲ್ಲ. ಆದರೆ ನಾಗರಾಜಯ್ಯನವ್ರು ಸತ್ಯವನ್ನ ಕಾಮತ್ ಮೂಲಕವೇ ಬಾಯಿ ಬಿಡಿಸುತ್ತಾರೆ. ಅದು ಇಲ್ಲಿ ನಿಜಕ್ಕೂ ವಿಶೇಷವಾಗಿಯೇ ಇದೆ. ಕಥೆಯಲ್ಲಿ ಮತ್ತೊಂದು ಕಥೆ ಅನ್ನೋ ಹಾಗೆ ಕ್ರೈಮ್ ಕಥೆಯನ್ನ ಇನ್ಸೆಪಕ್ಟರ್ ಹೇಳ್ತಾರೆ. ಕಾಮತ್ ಇಲ್ಲಿ ಕಾಲ್ಪನಿಕ ಕಥೆ ಹೇಳ್ತಾ ಹೇಳ್ತಾ ಅಸಲಿ ಸತ್ಯವನ್ನೂ ಹೇಳಿ ಬಿಡ್ತಾರೆ.

ಇನ್ಸಪೆಕ್ಟರ್ ನಾಗರಾಜಯ್ಯ ಮಾತಿಗೆ ರೈಟರ್ ಕಾಮತ್ ಆತ್ಮಸಾಕ್ಷಿ ಜಾಗೃತಿ
ನಾಗರಾಜಯ್ಯ ಪಾತ್ರಧಾರಿಯಾಗಿ ಶಂಕರ್ ಅಶ್ವಥ್ ಅಭಿನಯಿಸಿದ್ದಾರೆ. ರೈಟರ್ ರೋಲ್​ ನಲ್ಲಿ ರಮೇಶ್ ಪಂಡಿತ್ ನಟಿಸಿದ್ದಾರೆ. ನಾಗರಾಜಯ್ಯ ಹೇಳಿದ ಆತ್ಮಸಾಕ್ಷಿಯ ತಿಳುವಳಿಕೆಯ ಮಾತಿಗೆ ರೈಟರ್ ಕಾಮತ್ ಬದಲಾಗುತ್ತಾರೆ. ಪೊಲೀಸ್ ಸ್ಟೇಷನ್​ಗೆ ಬಂದು ಶರಣಾಗುತ್ತಾರೆ. ಸಾಕ್ಷಿನೇ ಇಲ್ಲದ ಕೇಸ್​ಗೆ ತಾವೇ ಸಾಕ್ಷಿ ಕೊಡ್ತರೆ. ಇಂತಹ ಈ ಚಿತ್ರದಲ್ಲಿ ಕೊನೆಗೊಂದು ಟ್ವಿಸ್ಟ್ ಇದೆ. ಅದನ್ನ ಸಿನಿಮಾದಲ್ಲಿಯೇ ನೋಡಿ. ಅಂದ್ಹಾಗೆ ಈ ಚಿತ್ರವನ್ನ ಕ್ಯಾಮೆರಾಮೆನ್ ಸತ್ಯ ಹೆಗಡೆ ಸ್ಟುಡಿಯೋಸ್ ಪ್ರಸ್ತುತ ಪಡಿಸಿದೆ.

ಪುಟ್ಟ ಚಿತ್ರದ ಹಿಂದೆ ದೊಡ್ಡ ತಂಡದ ಪರಿಶ್ರಮ
ದಿ ಲಾಸ್ಟ್ ಕೇಸ್ ಚಿತ್ರದ ಇತರ ಪಾತ್ರಗಳಲ್ಲಿ ಆನಂದ್ ಪಾತ್ರ, ಪೊಲೀಸ್ ಪಾತ್ರದಲ್ಲಿ ಪುನಿತ್ ಬಾಬು,ಪ್ರದೀಪ್ ಅಂಚೆ ಅಭಿನಯಿಸಿದ್ದಾರೆ. ಕ್ಯಾಮೆರಾಮನ್ ರಂಗನಾಥ್ ಸಿ.ಎಂ.ಕ್ಯಾಮೆರಾವರ್ಕ್ ಮಾಡಿದ್ದಾರೆ. ವಾಸುದೇವ ಮೂರ್ತಿಗಳ ಕಥೆಗೇನೆ ಪ್ರದೀಪ್ ಕೃಷ್ಣಮೂರ್ತಿ ಇಲ್ಲಿ ಚಿತ್ರಕಥೆ,ಡೈಲಾಗ್ ಮಾಡಿದ್ದಾರೆ. ನಿರ್ದೇಶನ ಕೂಡ ಮಾಡಿದ್ದಾರೆ. ಗಿರೀಶ್ ಸಂಗೀತ ಇಲ್ಲಿದೆ. ಇಲ್ಲಿ ಬರೋ ಹಾಡಿಗೆ ಅಜೀತ್ ಕೇಶವ್ ಹಾಡು ಬರೆದಿದ್ದಾರೆ. ಈಗ ಈ ಸಿನಿಮಾ ರಿಲೀಸ್ ಆಗಿದೆ. ಸತ್ಯ ಹೆಗಡೆ ಸ್ಟುಡಿಯೋ ಯುಟ್ಯೂಬ್ ಚಾನೆಲ್​ ನಲ್ಲೂ ಇದನ್ನ ನೋಡಬಹುದು.
First published: