ಸುದಿಪ್ತೋ ಸೆನ್ (Sudipto Sens) ಅವರ ಲೇಟೆಸ್ಟ್ ರಿಲೀಸ್ ದಿ ಕೇರಳ ಸ್ಟೋರಿ (The Kerala Story) ಟ್ರೈಲರ್ ಮೂಲಕವೇ ಭಾರೀ ವಿವಾದ ಹುಟ್ಟಿಸಿದ ಸಿನಿಮಾ (Cinema). ಕೇರಳದ ಲವ್ ಜಿಹಾದ್ ಕಾನ್ಸೆಪ್ಟ್ ಇಟ್ಟುಕೊಂಡು ಮಾಡಲಾಗಿರುವ ಈ ಸಿನಿಮಾವನ್ನು ಎಲ್ಲರೂ ಒಮ್ಮತದಿಂದ ಒಪ್ಪಿಕೊಂಡಿಲ್ಲ. ಒಂದಷ್ಟು ಜನರು ಬೆಂಬಲಿಸಿದರೆ, ಸಿನಿಮಾವನ್ನು ವಿರೋಧಿಸುವ ಜನರೂ ಇದ್ದಾರೆ. ಹಿಂದೂ ಹಾಗೂ ಕ್ರಿಶ್ಚಿಯನ್ ಯುವತಿ ಇಸ್ಲಾಂಗೆ ಮತಾಂತರವಾಗುವುದನ್ನು ಈ ಸಿನಿಮಾ ತೋರಿಸುತ್ತದೆ. ಮುಸ್ಲಿಂ ಸಮುದಾಯದ ವಿರೋಧಕ್ಕೆ ಒಳಗಾದ ಈ ಸಿನಿಮಾ ಮಾಡಿದ ಸುದಿಪ್ತೋ ಹಾಗೂ ತಂಡ ಈ ಸಿನಿಮಾಗಾಗಿ ಸಾಕಷ್ಟು ವಿರೋಧವನ್ನೂ ಎದುರಿಸಿದೆ.
ಕೇರಳ ಸ್ಟೋರಿ ಒಂದು ಸಿನಿಮ್ಯಾಟಿಕ್ ಆರ್ಟ್ ವರ್ಕ್ ಆಗಿ ಕ್ವಾಲಿಫೈ ಆಗುವುದಿಲ್ಲ. ಶಾಲಿನಿ ಉಣ್ಣಿಕೃಷ್ಣನ್ ಆಗಿ ಅಭಿನಯಿಸಿದ ಆದಾ ಶರ್ಮಾ ತಮ್ಮ ಪಾತ್ರದ ಮೂಲಕ ಒಂದು ಹಂತದ ತನಕ ಪರಿಣಾಮ ಬೀರುತ್ತದೆ. ಉಳಿದ ನಟಿಯರೂ ಬೆಸ್ಟ್ ಆಗಿಯೇ ನಟಿಸಿದ್ದಾರೆ. ಸಿನಿಮಾದ ಸಂಭಾಷಣೆ ಎವರೇಜ್ ಆಗಿದ್ದರೆ, ಮ್ಯೂಸಿಕ್ ಪ್ರೇಕ್ಷಕರನ್ನು ನಿರಾಸೆಗೊಳಿಸುತ್ತದೆ.
ಆದರೂ ಕೂಡಾ ಈ ಸಿನಿಮಾ ಮಸ್ಟ್ ವಾಚ್ ಎನಿಸುವ ಕ್ವಾಲಿಟಿ ಹೊಂದಿದೆ. ಬಹಳ ಸೂಕ್ಷ್ಮ ವಿಚಾರವನ್ನು ಪ್ರಸ್ತುತಪಡಿಸುವ ಈ ಸಿನಿಮಾವನ್ನು ನೋಡಲು ಬಯಸುವ ಪ್ರತಿ ಪ್ರಬುದ್ಧ ಪ್ರೇಕ್ಷಕನಿಗೂ ತಲುಪುವಂತಿದೆ ಈ ಮೂವಿ. ಹಾಗೆಯೇ ಸಿನಿಮಾ ಎಂದ ಮೇಲೆ ಪರ ವಿರೋಧ ಇದ್ದೇ ಇರುತ್ತದೆ. ಕೆಲವರು ಮುಕ್ತವಾಗಿ ಸ್ವೀಕರಿಸಿದರೆ ಇನ್ನು ಕೆಲವರು ವಿರೋಧ ವ್ಯಕ್ತಪಡಿಸುವುದು ತುಂಬಾ ಕಾಮನ್.
ಚಿಕ್ಕ ಸಿನಿಮಾ-ಹಾಗೆಯೇ ಸಕ್ಸಸ್ಫುಲ್ ಸಿನಿಮಾ
ದಿ ಕೇರಳ ಸ್ಟೋರಿ ವಿವಾದ ಹುಟ್ಟುಹಾಕಿತು. ಈ ಸಿನಿಮಾ ಮೊದಲ ದಿನವೇ 8 ಕೋಟಿ ಗಳಿಸಿತು. ಸುಮಾರು 16 ಕೋಟಿಯಷ್ಟು ಗಳಿಕೆ ಎರಡನೇ ದಿನ ಕಂಡುಬಂತು. ಮೊದಲ ಸೋಮವಾರ 10 ಕೋಟಿ ಗಳಿಸಿತು. ಸ್ಯಾಂಡಲ್ವುಡ್ನಲ್ಲಿ ರಿಷಬ್ ಶೆಟ್ಟಿ ಅವರ ಕಾಂತಾರ, ಹಿಂದಿಯಲ್ಲಿ ವಿವೇಕ್ ರಂಜನ್ ಅಗ್ನಿಹೋತ್ರಿ ಅವರ ದಿ ಕಾಶ್ಮೀರ್ ಫೈಲ್ಸ್ನಂತೆ ದಿ ಕೇರಳ ಸ್ಟೋರಿಯೂ ವಿಶೇಷವಾದ ಹೆಜ್ಜೆ ಇಡುತ್ತಿದೆ. ಹಾಗಾಗಿ ಇದರ ಬಾಕ್ಸ್ ಆಫೀಸ್ ನಂಬರ್ಸ್ ಈಗಲೇ ಊಹಿಸಲು ಸಾಧ್ಯವಿಲ್ಲ. ಸಿನಿಮಾ ಈಗಾಗಲೇ ಹಿಟ್ ಎನಿಸಿಕೊಂಡಿದೆ.
ಕಳೆದ ವರ್ಷ ನವೆಂಬರ್ನಲ್ಲಿ ದಿ ಕೇರಳ ಸ್ಟೋರಿಯ ಟೀಸರ್ ರಿಲೀಸ್ ಆದಾಗ ವಿವಾದ ಹುಟ್ಟಿಕೊಂಡಿತು. ಇದರಲ್ಲಿ ಕೇರಳದ 32 ಸಾವಿರ ಯುವತಿಯರು ಇಸ್ಲಾಂಗೆ ಮತಾಂತರವಾಗಿ ಐಸಿಸ್ ಸೇರಲ್ಪಟ್ಟರು ಎಂದು ಹೇಳಲಾಗಿತ್ತು. ಆದರೆ 32 ಸಾವಿರ ಎನ್ನುವ ಸಂಖ್ಯೆ ಎಲ್ಲರ ಗಮನ ಸೆಳೆಯಿತು. ಇದರ ಸತ್ಯಾಸತ್ಯತೆ ಬಗ್ಗೆ ಚರ್ಚೆ ಶುರುವಾಯಿತು. ಈ ಸಿನಿಮಾವನ್ನು ಸಿಬಿಎಫ್ಸಿ ಪಾಸ್ ಮಾಡಿರುವಾಗ ಅದನ್ನು ನಿಷೇಧಿಸುವ ಅಥವಾ ಹಿಂಪಡೆಯುವ ಪ್ರಶ್ನೆ ಹೇಗೆ ಉದ್ಭವಿಸುತ್ತದೆ ಎನ್ನುತ್ತದೆ ಇನ್ನೊಂದು ವಾದ.
ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ದಿ ಕೇರಳ ಸ್ಟೋರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೊಂದು ಬೋಗಸ್ ಸ್ಟೋರಿ ಎಂದಿದ್ದಾರೆ. ಇದು ಸಂಘ ಪರಿವಾರದ ಸುಳ್ಳಿನ ಕಾರ್ಖಾನೆಯ ಪ್ರಾಡಕ್ಟ್ ಎಂದಿದ್ದಾರೆ ಕೇರಳ ಸಿಎಂ. ಪಶ್ಚಿಮ ಬಂಗಾಳ ಈ ಸಿನಿಮಾವನ್ನು ನಿಷೇಧಿಸಿದೆ. ರಾಜ್ಯದಲ್ಲಿ ಯಾವುದೇ ರೀತಿಯ ದ್ವೇಷ, ಗಲಾಟೆ, ಹಿಂದೆಯನ್ನು ಅವಾಯ್ಡ್ ಮಾಡಿ ರಾಜ್ಯದ ಶಾಂತಿ ಕಾಪಾಡಲು ಈ ನಿರ್ಧಾರ ಎಂದು ಹೇಳಿದೆ ಪಶ್ಚಿಮ ಬಂಗಾಳ.
ಸಿನಿಮಾ ರಿಲೀಸ್ ಬಗ್ಗೆ ಸರ್ಕಾರ ಹೈ ಅಲರ್ಟ್ ಇಟ್ಟ ನಂತರ ತಮಿಳುನಾಡಿನ ಥಿಯೇಟರ್ನಲ್ಲಿಯೂ ಸಿನಿಮಾ ರಿಲೀಸ್ ಹಿಂಪಡೆಯಲಾಯಿತು. ಈ ಸಿನಿಮಾದ ವಿರುದ್ಧ ಇರುವ ದೊಡ್ಡ ಆರೋಪ ಏನೆಂದರೆ ಇದು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಹುಟ್ಟಿಸುತ್ತದೆ ಎಂಬುದಾಗಿತ್ತು.
ಭಾರತದಲ್ಲಿ ಬ್ಯಾನ್ ಆಗಿರುವ ಸಿನಿಮಾಗಳ ಲಿಸ್ಟ್ ದೊಡ್ಡದಿದೆ. ಗುಲ್ಜರ್ 1975ರ ರಾಜಕೀಯ ಕುರಿತ ಸಿನಿಮಾ ಆಂಧಿ ಕೂಡಾ ಒಂದು. ಇದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕುರಿತಾಗಿದೆ. ಈ ಸಿನಿಮಾ ತುಂಬಾ ಕಡಿಮೆ ವ್ಯಾಪ್ತಯಲ್ಲಿ ರಿಲೀಸ್ ಆಯಿತು. ಇದು ರಾಷ್ಟ್ರೀಯ ಎಮರ್ಜೆನ್ಸಿ ಸಮಯದಲ್ಲಿ ಬ್ಯಾನ್ ಆಯಿತು. ಜನತಾ ಪಾರ್ಟಿ ಅಧಿಕಾರಕ್ಕೆ ಬಂದ ಮೇಲಷ್ಟೇ 1977ರಲ್ಲಿ ಸಿನಿಮಾ ಬಿಡುಗಡೆಯಾಯಿತು. ಸಿನಿಮಾ ದೊಡ್ಡಮಟ್ಟದಲ್ಲಿ ಗಮನ ಸೆಳೆಯಿತು.
ಪ್ರತಿಭಟನೆ ಸಿನಿಮಾ ಖ್ಯಾತಿಯನ್ನು ಹೆಚ್ಚಿಸುತ್ತದೆ
ಇತ್ತೀಚಿನ ದಿನಗಳಲ್ಲಿ ಸಿನಿಮಾಗಳ ಕುರಿತು ವಿವಾದ ಏಳುವುದು ತುಂಬಾ ಸಾಮಾನ್ಯವಾಗಿದೆ. ಪಠಾಣ್ನಲ್ಲಿ ದೀಪಿಕಾ ಕೇಸರಿ ಬಿಕಿನಿ ಧರಿಸಿದ್ದಕ್ಕೆ ವಿವಾದ ಶುರುವಾಯಿತು. ಕಾಶ್ಮೀರ್ ಫೈಲ್ಸ್ ಸಿನಿಮಾ ಕೂಡಾ ವಿರೋಧಕ್ಕೆ ಒಳಗಾಯಿತು. ಇಸ್ಲಾಮೋಫೋಬಿಯಾವನ್ನು ಹರಡುತ್ತದೆ ಎಂದು ಈ ಸಿನಿಮಾ ಬಗ್ಗೆ ವಿರೋಧ ವ್ಯಕ್ತವಾಯಿತು. ಬ್ಯಾನ್ ಕರೆ ಇದ್ದರೂ ಪಠಾನ್ ಬಾಲಿವುಡ್ನ ಆಲ್ಟೈಮ್ ಬ್ಲಾಕ್ಬಸ್ಟರ್ ಆಯಿತು.
ಸದ್ಯ ದಿ ಕೇರಳ ಸ್ಟೋರಿ ಸಿನಿಮಾ ಥಿಯೇಟರ್ನಲ್ಲಿ ಸಕ್ಸಸ್ ಆಗಿದೆ. ಈ ಸಿನಿಮಾದ ಮೇಲೆ ಸ್ಟೇ ತರಲು ನಿರಾಕರಿಸಿ ಕೇರಳ ಹೈಕೋರ್ಟ್ ಕೊಟ್ಟ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು ಇದರ ವಿಚಾರಣೆ ಮೇ 15ರಂದು ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ