ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಮೇ. 5ರಂದು ರಿಲೀಸ್ ಆಗಿದೆ. ಟ್ರೈಲರ್ (Trailer) ಮೂಲಕವೇ ವಿವಾದ ಸೃಷ್ಟಿಸಿದ್ದ ಈ ಸಿನಿಮಾ ಬಿಡುಗಡೆಗೆ ವಿಶೇಷವಾಗಿ ಕೇರಳದಲ್ಲಿ (Kerala) ತೀವ್ರ ವಿರೋಧ (Oppose) ವ್ಯಕ್ತವಾಗಿತ್ತು. ಕೇರಳದಲ್ಲಿ ಕೆಲವೇ ಥಿಯೇಟರ್ಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ (Release). ಸಿನಿಮಾ ನೋಡಿದ ಜನರು ಏನಂದಿದ್ದಾರೆ? ಟ್ವಿಟರ್ ರಿವ್ಯೂ (Twitter Review) ಹೇಗಿದೆ? ಇಲ್ಲಿದೆ ಡೀಟೆಲ್ಸ್. ನಿರ್ದೇಶಕ ಸುದಿಪ್ಟೋ ಸೆನ್ ಹಾಗೂ ವಿ.ಪುಲ್ ಅಮೃತ್ಲಾಲ್ ಶಾ ಅವರು ಸಿನಿಮಾದಲ್ಲಿ ಕೇರಳದಿಂದ ನಾಪತ್ತೆಯಾದ 32000 ಯುವತಿಯರ ಕಥೆ ಇದು ಎಂದು ಹೇಳಿದ್ದರು. ಇಸ್ಲಾಂಗೆ (Islam) ಮತಾಂತರಗೊಂಡು (Conversion) ನಂತರ ಅಫ್ಘಾನಿಸ್ತಾನ (Afghanistan), ಟರ್ಕಿ, ಸಿರಿಯಾದಲ್ಲಿ ಐಸಿಸ್ ಸೇರಲ್ಪಟ್ಟ ಯುವತಿಯರ ಕಥೆ ಎಂದು ಹೇಳಿದ್ದರು. ಇದರ ಸತ್ಯಾಸತ್ಯತೆ ಬಗ್ಗೆ ಪ್ರಶ್ನೆ ಏಳುತ್ತಿದ್ದಂತೆ 32,000 ಯುವತಿಯರು ಎಂಬಲ್ಲಿ ಮೂವರು ಯುವತಿಯರ ಕಥೆ ಎಂದು ಬಲಾಯಿಸಲಾಯಿತು. ಈಗ ಸಿನಿಮಾ ರಿಲೀಸ್ ಆಗಿದ್ದು ಅಸಲಿಗೆ ಸಿನಿಮಾ (Cinema) ಕಥೆ ಏನು? ಏನು ಹೇಳಲಾಗಿದೆ? ಏನನ್ನು ತೋರಿಸಲಾಗಿದೆ ಎನ್ನುವ ವಿಚಾರ ಇಲ್ಲಿದೆ.
ಸಿನಿಮಾ ಚೆನ್ನಾಗಿ ಮಾಡಿಲ್ಲ, ಇದರಲ್ಲಿ ನಟಿಸಿದ ಕಲಾವಿದರು ಕೂಡಾ ಚೆನ್ನಾಗಿ ನಟಿಸಿಲ್ಲ. ಬಹು-ಧಾರ್ಮಿಕ, ಬಹು-ಜನಾಂಗೀಯ ಗುರುತಿನಿಂದಲೇ ಹೆಮ್ಮೆಪಡುವ ದಕ್ಷಿಣದ ಚಿಕ್ಕ ರಾಜ್ಯವಾದ ಕೇರಳದ ಸಾಮಾಜಿಕ ಸಂಕೀರ್ಣತೆಗಳನ್ನು ಪ್ರಶ್ನಿಸಲು ಆಸಕ್ತಿಯಿಲ್ಲದೆ ಕಳಪೆಯಾಗಿ ಸಿನಿಮಾ ಮಾಡಲಾಗಿದೆ ಎಂದಿದ್ದಾರೆ ನೆಟ್ಟಿಗರು.
ಕೇರಳದ ಮುಗ್ಧ ನಿಷ್ಕಲ್ಮಷ ಮನಸಿನ ಹಿಂದೂ ಮತ್ತು ಕ್ರಿಶ್ಚಿಯನ್ ಯುವತಿಯರು ಮುಸ್ಲಿಮ್ ಪುರುಷರಿಂದ ಓಲೈಸಲ್ಪಡುತ್ತಿದ್ದಾರೆ. ಅವರು ನಂತರ ಇಸ್ಲಾಂಗೆ ಮತಾಂತರವಾಗುತ್ತಿದ್ದಾರೆ. ಆ ಕಾರಣದಿಂದ ಕೇರಳವು ಅಪಾಯದಲ್ಲಿದೆ ಎಂದು ಹೇಳಲು ಅತ್ಯಂತ ಹೊರಟಿರುವ ಸಿನಿಮಾದಲ್ಲಿ ಅಷ್ಟಾಗಿ ಪರಿಣಾಮಕಾರಿಯಲ್ಲದ ಪಾತ್ರಗಳನ್ನು ಸೃಷ್ಟಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: The Kerala Story: ರೂಲಿಂಗ್ ಪಾರ್ಟಿಯಿಂದ ಸಪೋರ್ಟ್ ಇಲ್ಲ! ಪ್ರತಿಭಟನೆ ಭಯ, ಸಿನಿಮಾ ರಿಲೀಸ್ಗೆ ಹಿಂದೇಟು
ಶಾಲಿನಿ ಉಣ್ಣಿಕೃಷ್ಣನ್ ಎನ್ನುವ ಯುವತಿ ಕಾಸರಗೋಡಿನಲ್ಲಿ ನರ್ಸಿಂಗ್ ಕಾಲೇಜಿಗೆ ಸೇರುತ್ತಾಳೆ. ಅವರ ಮೂವರು ರೂಮ್ ಮೇಟ್ಗಳಲ್ಲಿ ಒಬ್ಬರು ಹಿಂದು, ಇನ್ನೊಬ್ಬರು ಕ್ರಿಶ್ಚಿಯನ್ ಹಾಗೂ ಮೂರನೆಯಾಕೆ ಮುಸ್ಲಿಂ ಆಗಿರುತ್ತಾಳೆ. ಈ ರೀತಿಯ ಒಂದು ಮಿಕ್ಸಿಂಗ್ ಕೇರಳದಲ್ಲಿ ತುಂಬಾ ಕಾಮನ್. ಇದರಲ್ಲಿ ಆಸಿಫಾ ಎನ್ನುವಾಕೆ ಉಳಿದ ಮೂವರನ್ನು ಬ್ರೈನ್ ವಾಶ್ ಮಾಡಲು ಆರಂಭಿಸುತ್ತಾಳೆ. ಹಿಜಾಬ್ ಧರಿಸುವ ಯುವತಿಯರು ಪುರುಷರ ಕೆಟ್ಟ ಕಣ್ಣುಗಳಿಂದ ರಕ್ಷಿಸಲ್ಪಡುತ್ತಾರೆ, ಉಳಿದ ದೇವರು ದುರ್ಬಲರು, ಅಲ್ಲಾ ಶಕ್ತಿಶಾಲಿ ಎನ್ನುತ್ತಾಳೆ. ಬಹಳ ಬೇಗನೆ ಮೂವರು ಯುವತಿಯರು ಆಸಿಫಾ ಖೆಡ್ಡಾಗಿ ಬೀಳುತ್ತಾರೆ.
ಕೇರಳದಲ್ಲಿರುವ ಮುಸ್ಲಿಂ ಜನರನ್ನು ಡಾರ್ಕ್ ಶೇಡ್ನಲ್ಲಿ ತೋರಿಸಲಾಗಿದ್ದು ಲವ್ ಜಿಹಾದ್ ಅನ್ನು ಅವರ ಆಯುಧವಾಗಿ ತೋರಿಸಲಾಗಿದೆ. ಕೇರಳದಿಂದ ಶ್ರೀಲಂಕಾಕ್ಕೆ ತಾಲಿಬಾನ್ ಆಳ್ವಿಕೆಯಲ್ಲಿರುವ ಐಸಿಸ್ ಶಿಬಿರಗಳಿಗೆ ಶಾಲಿನಿ ಪ್ರಯಾಣವು ಅತ್ಯಂತ ಭಯಾನಕ ದೃಶ್ಯಗಳಿಂದ ತುಂಬಿದೆ.
ಪುರುಷರು ಮತ್ತು ಮಹಿಳೆಯರು ದಯೆಯೇ ಇಲ್ಲದೆ ತುಂಡು ತುಂಡಾಗಿ ಕತ್ತರಿಸಲಾಗುತ್ತದೆ. ಮಹಿಳೆಯರನ್ನು ಲೈಂಗಿಕ ಗುಲಾಮರು ಅಥವಾ ಆತ್ಮಹತ್ಯಾ ಬಾಂಬರ್‌ಗಳಾಗಿ ಬದಲಾಯಿಸಲಾಗುತ್ತದೆ.
ಹಲವಾರು ಕೇರಳ ಥಿಯೇಟರ್ಗಳು ದಿ ಕೇರಳ ಸ್ಟೋರಿ ಸಿನಿಮಾವನ್ನು ರಿಲೀಸ್ ಮಾಡಲು ಹಿಂದೇಟು ಹಾಕುತ್ತಿವೆ. ಸಿನಿಮಾ ವಿರುದ್ಧ ಪ್ರತಿಭಟನೆ ಭಯ ಇರುವುದರಿಂದ ಸಿನಿಮಾ ಪ್ರದರ್ಶನಕ್ಕೆ ಚಿತ್ರಮಂದಿರಗಳು ಮನಸು ಮಾಡುತ್ತಿಲ್ಲ.
ಮುಖ್ಯವಾಗಿ ರೂಲಿಂಗ್ ಪಾರ್ಟಿಯಿಂದ ಸಿನಿಮಾಗೆ ಬೆಂಬಲ ಸಿಗದೆ ಇರುವ ಕಾರಣ ಪ್ರಮುಖ ಚಿತ್ರಮಂದಿರಗಳು ಸಿನಿಮಾ ರಿಲೀಸ್ ಮಾಡುವ ಬಗ್ಗೆ ಯೋಚನೆ ಮಾಡುತ್ತಿವೆ. ಕೇವಲ ಒಂದೇ ಥಿಯೇಟರ್ ಸಿನಿಮಾ ರಿಲೀಸ್ ಖಚಿತಪಡಿಸಿದ್ದು ಉಳಿದ ಥಿಯೇಟರ್ ಇನ್ನೂ ಯಾವುದೇ ಅಪ್ಡೇಟ್ ಕೊಟ್ಟಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ