ಬಹುಭಾಷಾ ನಟಿ ಆದಾ ಶರ್ಮಾ (Adah Sharma) ಅವರ ಸಿನಿಮಾದ (Cinema) ಟೀಸರ್ (Teaser) ಒಂದು ವೈರಲ್ ಆಗುತ್ತಿದೆ. ದಿ ಕೇರಳ ಸ್ಟೋರಿ (The Kerala Story) ಎನ್ನುವ ಸಿನಿಮಾದ ಬಗ್ಗೆ ಚರ್ಚೆ ಜೋರಾಗಿದೆ. ಮಾಮೂಲಿಯಾಗಿ ಎಲ್ಲರಂತೆ ಕಾಲೇಜಿಗೆ ಹೋಗುತ್ತಿದ್ದ ನಾಲ್ವರು ವಿದ್ಯಾರ್ಥಿನಿಯರು (Students) ಜಗತ್ತಿನಲ್ಲಿಯೇ ಅತ್ಯಂತ ಕ್ರೂರವಾದ, ಡೇಂಜರಸ್ ಆದ ಐಸಿಸ್ (ISIS) ಎನ್ನುವ ಉಗ್ರ ಸಂಘಟನೆಯನ್ನು ಸೇರಿದ್ದು ಹೇಗೆ? ಇದುವೇ ಈ ದಿ ಕೇರಳ ಸ್ಟೋರಿಯ ಜಿಸ್ಟ್.
ಎಕ್ಸ್ಪ್ಲೋಸಿವ್ ಟೀಸರ್ ಒಂದು ರಿಲೀಸ್ ಆದ ನಂತರ ದಿ ಕೇರಳ ಸ್ಟೋರಿ ಎನ್ನುವ ಸಿನಿಮಾದ ಕುರಿತು ಚರ್ಚೆ ಜೋರಾಗಿದೆ. ಈ ಸಿನಿಮಾದ ಟ್ರೈಲರ್ ಹೊರಬಿದ್ದಾಗಿನಿಂದ ಇದರ ಸುತ್ತಮುತ್ತಲಿನ ಕಥೆ, ಅಸಲಿ ಬಗ್ಗೆ ಮಾತಕತೆ ನಡೆಯುತ್ತಿದೆ. ಕಾಶ್ಮೀರ್ ಫೈಲ್ಸ್ನಂತೆ ಸ್ವಲ್ಪಮಟ್ಟಿಗೆ ರಿಲೀಸ್ಗು ಮುನ್ನವೇ ವಿವಾದಾತ್ಮಕ ವಿಚಾರಗಳಿಂದ ಹೈಲೈಟ್ ಆಗಿರುವ ದಿ ಕೇರಳ ಸ್ಟೋರಿ ಬಗ್ಗೆ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.
ಎಲ್ಲ ಪ್ರಮುಖ ಸೋಷಿಯಲ್ ಮೀಡಿಯಾ ಫ್ಲಾಟ್ಫಾರ್ಮ್ಗಳಲ್ಲಿಯೂ ದಿ ಕೇರಳ ಸ್ಟೋರಿಯ ಟ್ರೈಲರ್ ಶೇರ್ ಮಾಡಲಾಗಿದ್ದು ಇದು ರಿಲೀಸ್ ಆಗಿ ಕೆಲವೇ ಹೊತ್ತಿನಲ್ಲಿ ಟ್ರೆಂಡ್ ಆಗಿದೆ. ಆದಾ ಶರ್ಮಾ ಸಣ್ಣ ಗ್ಯಾಪ್ ನಂತರ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
ನಿಜ ಘಟನೆಯಾಧಾರಿತ ಸಿನಿಮಾ
ಬಾಲಿವುಡ್ ನಟಿ ಆದಾ ಶರ್ಮಾ ನಟಿಸಿರುವ ದಿ ಕೇರಳ ಸ್ಟೋರಿ ಸಿನಿಮಾ ವಿಶೇಷವಾದ ಕಥೆಯೊಂದನ್ನು ಹೇಳುತ್ತದೆ. ಸರಿಯಾಗಿ 32 ಸಾವಿರಕ್ಕೂ ಹೆಚ್ಚ ಯುವತಿಯರು ದಕ್ಷಿಣಭಾರತದ ಪುಟ್ಟ ರಾಜ್ಯ ಕೇರಳದಿಂದ ಹೇಗೆ ನಾಪತ್ತೆಯಾದರು, ಹೇಗೆ ಅವರ ಬ್ರೈನ್ ವಾಶ್ ಮಾಡಲಾಯಿತು, ಯಾವ ರೀತಿ ಮತಾಂತರಕ್ಕೊಳಗಾದರು, ಭಾರತದಲ್ಲಿ ಉಗ್ರ ಚಟುವಟಿಕೆಗಳಿಗೆ ನಿಯೋಜಿಸಲ್ಪಟ್ಟರು ಎನ್ನುವುದನ್ನು ಈ ಸಿನಿಮಾ ರಿವೀಲ್ ಮಾಡುತ್ತದೆ.
ಚಿತ್ರತಂಡ ಮಾತ್ರವಲ್ಲದೆ ಬುಧವಾರ ನಟಿ ಆದಾ ಶರ್ಮಾ ಅವರು ಇನ್ಸ್ಟಾಗ್ರಾಮ್ನಲ್ಲಿ ಸಿನಿಮಾದ ಅಫೀಶಿಯಲ್ ಟ್ರೈಲರ್ ಶೇರ್ ಮಾಡಿದ್ದಾರೆ. ದಿ ಕೇರಳ ಸ್ಟೋರಿ ಟ್ರೈಲರ್ನ್ನು ತಮ್ಮ ಅಭಿಮಾನಿಗಳು ಹಾಗೂ ಫಾಲೋವರ್ಸ್ ಜೊತೆ ಶೇರ್ ಮಾಡಿಕೊಂಡಿದ್ದಾರೆ.
ಸುದಿಪ್ಟೋ ಸೆನ್ ನಿರ್ದೇಶಿಸಿದ, ಬಹು ನಿರೀಕ್ಷಿತ ಸಿನಿಮಾ ದಿ ಕೇರಳ ಸ್ಟೋರಿಯಲ್ಲಿ ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ಸಿದ್ಧಿ ಇದ್ನಾನಿ ಜೊತೆ ಆದಾ ಶರ್ಮಾ ಅವರೂ ನಟಿಸಿದ್ದಾರೆ. ಸುದಿಪ್ಟೋ ಸೆನ್ ಅವರ ಮುಂಬರುವ ಸಿನಿಮಾದಲ್ಲಿ ಆದಾ ಶರ್ಮಾ ಅವರು ಫಾತಿಮಾ ಬಾ ಅವರ ಪಾತ್ರವನ್ನು ಮಾಡಿದ್ದಾರೆ.
ಫಾತಿಮಾ ಬಾ ಕೇರಳದಲ್ಲಿ ನಾಪತ್ತೆಯಾಗಿ ಇಸ್ಲಾಂಗೆ ಬಲವಂತವಾಗಿ ಮತಾಂತರಿಸಲ್ಪಟ್ಟು ಐಸಿಸ್ನಲ್ಲಿ ಸೇರಿಸಲ್ಪಟ್ಟ 32 ಸಾವಿರ ಮಹಿಳೆಯರಲ್ಲಿ ಒಬ್ಬರು. ಈ ಸಿನಿಮಾದ ಟೀಸರ್ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಇದಕ್ಕೆ ಪಾಸಿಟಿವ್ ಹಾಗೂ ನೆಗೆಟಿವ್ ರೆಸ್ಪಾನ್ಸ್ ಕೂಡಾ ಬಂದಿದೆ. ಈ ಸಿನಿಮಾವನ್ನು ಬಹಳಷ್ಟು ಜನರು ಬ್ರೇವ್ ಎಂದು ಕರೆದಿದ್ದಾರೆ.
ಹೇಗಿದೆ ಟ್ರೈಲರ್?
ಶಾಲಿನಿ ಎನ್ನುವು ಮುಗ್ಧ ಹಿಂದೂ ಹುಡುಗಿ ಯಾವ ರೀತಿ ಇಸ್ಲಾಂ ಸೇರಿಕೊಳ್ಳುತ್ತಾಳೆ, ಹೇಗೆ ಮುಸ್ಲಿಂ ಹುಡುಗನ ಪ್ರೀತಿಯಲ್ಲಿ ಬೀಳುತ್ತಾಳೆ, ಯಾವ ರೀತಿ ತನ್ನ ಧರ್ಮದ ಮೇಲೆ ನಂಬಿಕೆ ಕಳೆದುಕೊಂಡು ಇಸ್ಲಾಂ ಮೋಹಕ್ಕೆ ಬೀಳುತ್ತಾಳೆ, ಕುಟುಂಬ, ಮನೆ, ಊರು, ಧರ್ಮ ಧಿಕ್ಕರಿಸಿ ಮುಸ್ಲಿಂ ಯುವಕನನ್ನು ಮದುವೆಯಾಗಿ ದೇಶ ಬಿಟ್ಟು ಹೋಗುತ್ತಾಳೆ ಎನ್ನುವುದನ್ನು ಇದರಲ್ಲಿ ರಿವೀಲ್ ಮಾಡಲಾಗಿದೆ.
View this post on Instagram
ಈ ಸಿನಿಮಾಗೆ ನಿರ್ಮಾಪಕ ಅಮೃತ್ಲಾಲ್ ಶಾ ಬಂಡವಾಳ ಹೂಡುತ್ತಿದ್ದಾರೆ. ಅವರು ಸಿನಿಮಾ ಬಗ್ಗೆ ಮಾತನಾಡಿ ಈ ಸಿನಿಮಾ ಹಲವಾರು ವರ್ಷಗಳ ಸಂಶೋಧನೆ, ನಿಜ ಘಟನೆಗಳ ಸಮ್ಮಿಶ್ರ. ಈ ಕಥೆಯನ್ನು ಹೇಳುವ ಧೈರ್ಯವನ್ನು ಯಾರೂ ಈ ಹಿಂದೆ ಮಾಡಿಲ್ಲ.
ಇದನ್ನೂ ಓದಿ: Bhumika Chawla: ಬಾಲಕನ ಜೊತೆ ರೊಮ್ಯಾನ್ಸ್ ಮಾಡಬೇಕು ಎಂದ 44ರ ನಟಿ! ಅಯ್ಯೋ ಮೇಡಂ ನಿಮಗೇನಾಗಿದೆ ಎಂದ ನೆಟ್ಟಿಗರು
ಈ ಸಿನಿಮಾದಲ್ಲಿ ಮುಚ್ಚಿಟ್ಟ ಹಲವಾರು ಸತ್ಯಗಳು ರಿವೀಲ್ ಆಗಲಿವೆ. ಭಾರತದ ವಿರುದ್ಧ ನಡೆದ ಕುತಂತ್ರದ ಕಥೆಯನ್ನು ಈ ಸಿನಿಮಾ ರಿವೀಲ್ ಮಾಡುತ್ತದೆ. ಉಗ್ರ ಚಟುವಟಿಕೆ, ಭಯೋತ್ಪಾದನೆಗಾಗಿ ಜಗತ್ತಿನಾದ್ಯಂತ ಶೋಷಣೆಗೊಳಗಾದ ಸಾವಿರಾರು ಮಹಿಳೆಯರ ಕಥೆಯನ್ನು ಈ ಸಿನಿಮಾ ಹೇಳುತ್ತದೆ ಎಂದಿದ್ದಾರೆ.
ಈ ಸಿನಿಮಾಗೆ ಸನ್ಶೈನ್ ಪಿಕ್ಚರ್ಸ್ ಪ್ರೈವೆಟ್ ಲಿಮಿಟೆಡ್ ಬಂಡವಾಳ ಹೂಡಿದೆ. ವಿಪುಲ್ ಅಮೃತ್ಲಾಲ್ ಒಡೆತನದಲ್ಲಿದೆ ಈ ಕಂಪನಿ. ಅವರೇ ಈ ಸಿನಿಮಾಗೆ ಪ್ರೊಡ್ಯೂಸರ್, ಕ್ರಿಯೇಟಿವ್ ಡೈರೆಕ್ಟರ್, ಕೋ ರೈಟರ್ ಆಗಿ ಕೆಲಸ ಮಾಡಿದ್ದಾರೆ. ಈ ಸಿನಿಮಾ ವಿಶ್ವಾದ್ಯಂತ ಮೇ 5ರಂದು ರಿಲೀಸ್ ಆಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ