ಭಾರೀ ವಿವಾದ ಸೃಷ್ಟಿಸಿದ ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಮೇ 5ರಂದು ರಿಲೀಸ್ ಆಗಿದೆ. ಟ್ರೈಲರ್ ಮೂಲಕವೇ ವಿವಾದ ಹುಟ್ಟಿಸಿದ ಸಿನಿಮಾ ರಿಲೀಸ್‍ಗೆ ಹಲವೆಡೆ ವಿರೋಧ ವ್ಯಕ್ತವಾಗಿತ್ತು. ಸುದಿಪ್ತೋ ಸೆನ್ ನಿರ್ದೇಶನದ ಸಿನಿಮಾದಲ್ಲಿ ಬಾಲಿವುಡ್ ನಟಿ ಆದಾ ಶರ್ಮಾ (Adah Sharma) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಲವ್ ಜಿಹಾದ್ ಮೂಲಕ ಹಿಂದೂ (Hindu) ಯುವತಿಯರನ್ನು ಮತಾಂತರ ಮಾಡಿ ಐಸಿಸ್ ಸೇರಿಸುವ ಕುರಿತಾದ ಸಿನಿಮಾ ಇದಾಗಿದೆ. ನಿರ್ದೇಶಕ ಸುದಿಪ್ತೋ ಸೆನ್ ಹಾಗೂ ವಿಪುಲ್ ಅಮೃತ್‍ಲಾಲ್ ಶಾ ಅವರು ಸಿನಿಮಾದಲ್ಲಿ ಕೇರಳದಿಂದ ನಾಪತ್ತೆಯಾದ 32000 ಯುವತಿಯರ ಕಥೆ ಇದು ಎಂದು ಹೇಳಿದ್ದರು. ಈ ನಡುವೆ ಎಆರ್ ರೆಹಮಾನ್ (AR Rahman) ಮನುಷ್ಯತ್ವಕ್ಕಾಗಿ ಪ್ರೀತಿ ಎಂದು ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.
ಎಆರ್ ರೆಹಮಾನ್ ಟ್ವಿಟ್ಟರ್
ಆಸ್ಕರ್ ಪ್ರಶಸ್ತಿ ವಿಜೇತ ಸಂಯೋಜಕ ಎಆರ್ ರೆಹಮಾನ್ ಅವರು ಗುರುವಾರ ಟ್ವಿಟ್ಟರ್‍ನಲ್ಲಿ ಕೇರಳ ಸ್ಟೋರಿಗೆ ಪ್ರತಿಕ್ರಿಯಿಸುವಾಗ ಕೋಮು ಸೌಹಾರ್ದತೆಯನ್ನು ಎತ್ತಿ ತೋರಿಸಿದರು. ಮಾನವೀಯತೆಯ ಮೇಲಿನ ಪ್ರೀತಿ ಬೇಷರತ್ತಾಗಿರಬೇಕು ಎಂದು ಪ್ರಖ್ಯಾತ ಸಂಯೋಜಕ ಹಿಂದೂ ದಂಪತಿಗಳನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಹಿಂದೂ ಜೋಡಿಗಳು ಕೇರಳದ ಮಸೀದಿಯಲ್ಲಿ ಮದುವೆಯಾಗಿರುವ ವಿಡಿಯೋವೊಂದನ್ನು ಎಆರ್ ರೆಹಮಾನ್ ಅವರು ಹಂಚಿಕೊಂಡಿದ್ದು, ʼಮಾನವೀಯತೆ ಮೇಲಿನ ಪ್ರೀತಿ ನಿರಂತರವಾಗಿರಬೇಕು ಮತ್ತು ಆರೋಗ್ಯಕರವಾಗಿರಬೇಕುʼ ಎಂದು ಬರೆದುಕೊಂಡಿದ್ದಾರೆ.
ಕೇರಳದ ಮಸೀದಿಯಲ್ಲಿ ಗಂಟು ಕಟ್ಟುವುದು. ಮೈಕ್ರೋಬ್ಲಾಗಿಂಗ್ ಸೈಟ್‍ನಲ್ಲಿ ಪುಟವೊಂದು ಹಂಚಿಕೊಂಡಿರುವ "ಇಲ್ಲಿ ಮತ್ತೊಂದು #ಕೇರಳ ಕಥೆ" ಎಂಬ ಶೀರ್ಷಿಕೆಯೊಂದಿಗೆ ರೆಹಮಾನ್ ವೀಡಿಯೊವನ್ನು ಮರುಟ್ವೀಟ್ ಮಾಡಿದ್ದಾರೆ.
ಮಾನವೀಯತೆ ಮೇಲಿನ ಪ್ರೀತಿ
"ಬ್ರಾವೋ, ಮಾನವೀಯತೆಯ ಮೇಲಿನ ಪ್ರೀತಿ ಬೇಷರತ್ತಾದ ಮತ್ತು ಗುಣಪಡಿಸುವಂತಿರಬೇಕು" ಎಂದು ರೆಹಮಾನ್ ಅವರು ತಮ್ಮ 24 ಮಿಲಿಯನ್ ಟ್ವಿಟರ್ ಅನುಯಾಯಿಗಳೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
Here is another #KeralaStory pic.twitter.com/lBUojZ0K3T
— Comrade From Kerala 🌹 (@ComradeMallu) May 3, 2023
ಸಿನಿಮಾ ಕಲೆಕ್ಷನ್ ಎಷ್ಟು?
ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್ ಆದ ಮೊದಲ ದಿನ 8.03 ಕೋಟಿ ರೂಪಾಯಿ ಗಳಿಸಿದೆ. ಎರಡನೇ ದಿನ 11.22 ಕೋಟಿ ರೂಪಾಯಿ ಬಾಚಿಕೊಂಡಿದ್ದು, 3ನೇ ದಿನ 16 ಕೋಟಿ ರೂಪಾಯಿಗಳಿಸಿದೆ. ಅಲ್ಲಿಗೆ, ಈ ಸಿನಿಮಾದ ಒಟ್ಟು ಕಲೆಕ್ಷನ್? 35.25 ಕೋಟಿ ರೂಪಾಯಿ ಆಗಿದೆ.
ನಿರ್ದೇಶಕರು ಹೇಳಿದ್ದೇನು?
ನಿರ್ದೇಶಕ ಸುದಿಪ್ತೋ ಸೆನ್ ಹಾಗೂ ವಿಪುಲ್ ಅಮೃತ್‍ಲಾಲ್ ಶಾ ಅವರು ಸಿನಿಮಾದಲ್ಲಿ ಕೇರಳದಿಂದ ನಾಪತ್ತೆಯಾದ 32000 ಯುವತಿಯರ ಕಥೆ ಇದು ಎಂದು ಹೇಳಿದ್ದರು. ಇಸ್ಲಾಂಗೆ ಮತಾಂತರಗೊಂಡು ನಂತರ ಅಫ್ಘಾನಿಸ್ತಾನ, ಟರ್ಕಿ, ಸಿರಿಯಾದಲ್ಲಿ ಐಸಿಸ್ ಸೇರಲ್ಪಟ್ಟ ಯುವತಿಯರ ಕಥೆ ಎಂದು ಹೇಳಿದ್ದರು.
ಇದನ್ನೂ ಓದಿ: The Kerala Story ಸಿನಿಮಾ ಕಾಶ್ಮೀರ ಫೈಲ್ಸ್‌ನ ಮತ್ತೊಂದು ಭಾಗವೇ? ಈ ಬಗ್ಗೆ ನಿರ್ದೇಶಕ ಹೇಳಿದ್ದೇನು?
ಇದರ ಸತ್ಯಾಸತ್ಯತೆ ಬಗ್ಗೆ ಪ್ರಶ್ನೆ ಏಳುತ್ತಿದ್ದಂತೆ 32,000 ಯುವತಿಯರು ಎಂಬಲ್ಲಿ ಮೂವರು ಯುವತಿಯರ ಕಥೆ ಎಂದು ಬಲಾಯಿಸಲಾಯಿತು. ಹಲವಾರು ಕೇರಳ ಥಿಯೇಟರ್ಗಳು ದಿ ಕೇರಳ ಸ್ಟೋರಿ ಸಿನಿಮಾವನ್ನು ರಿಲೀಸ್ ಮಾಡಲು ಹಿಂದೇಟು ಹಾಕಿವೆ. ಸಿನಿಮಾ ವಿರುದ್ಧ ಪ್ರತಿಭಟನೆ ಭಯ ಇರುವುದರಿಂದ ಸಿನಿಮಾ ಪ್ರದರ್ಶನಕ್ಕೆ ಚಿತ್ರಮಂದಿರಗಳು ಮನಸು ಮಾಡಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ