ಪವರ್ ಸ್ಟಾರ್ (Power Star) ಪುನೀತ್ ರಾಜ್ಕುಮಾರ್ (Puneeth Rajkumar) ಅಭಿನಯದ ಕೊನೆಯ ಸಿನಿಮಾ (Cinema) ‘ಜೇಮ್ಸ್’ (James) ಅಬ್ಬರ ಮುಂದುವರೆದಿದೆ. ವಿಶ್ವದಾದ್ಯಂತ ‘ಅಪ್ಪು’ ಅಭಿಮಾನಿಗಳು ಜೇಮ್ಸ್ ಸಿನಿಮಾವನ್ನು ಅಪ್ಪಿ, ಬಾಚಿ, ತಬ್ಬಿಕೊಂಡಿದ್ದಾರೆ. ಮತ್ತೊಂದೆಡೆ ಕಾಶ್ಮೀರಿ ಪಂಡಿತರ ಹತ್ಯೆ ಕುರಿತಾದ ಬಾಲಿವುಡ್ (Bollywood) ಸಿನಿಮಾ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಕೂಡ ದೇಶದಾದ್ಯಂತ ಸದ್ದು ಮಾಡುತ್ತಿದೆ. ಬಾಕ್ಸ್ ಆಫೀಸ್ನಲ್ಲಿಯೂ (Box Office) ಧೂಳೆಬ್ಬಿಸುತ್ತಿದೆ. ಇದೀಗ 2 ಹಿಟ್ ಚಿತ್ರಗಳು (Hit Cinama) ಮುಖಾಮುಖಿಯಾಗುತ್ತಾ ಎನ್ನುವ ಪ್ರಶ್ನೆ ಮೂಡಿದೆ. ಕೊಪ್ಪಳದಲ್ಲಿ ಈ ಬಗ್ಗೆ ಖುದ್ದು ಜೇಮ್ಸ್ ಸಿನಿಮಾ ನಿರ್ಮಾಪಕರೇ (Producer) ಆತಂಕ ಹೊರಹಾಕಿದ್ದಾರೆ.
“ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಿಂದ ಸಮಸ್ಯೆ”
“ನಮಗೆ ಸಮಸ್ಯೆ ಆಗಿರೋದು ನಿಜ” ಅಂತ ಜೇಮ್ಸ್ ಸಿನಿಮಾ ನಿರ್ಮಾಪಕ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಹೇಳಿದ್ದಾರೆ. ಗಂಗಾವತಿಯಲ್ಲಿ ಮಾತನಾಡಿದ ಅವರು, ಒಂದು ಶೋ ಮಾತ್ರ ಬೇರೆ ಚಿತ್ರ ಹಾಕ್ತಿವಿ ಅಂತಾ ಕೇಳಿಕೊಂಡಿದ್ರು. ಎಲ್ಲಿ ಅನ್ನೋದು ಬೇಡಾ. ದಿ ಕಾಶ್ಮೀರ ಫೈಲ್ ಸಿನಿಮಾದಿಂದ ಸಮಸ್ಯೆ ಆಗಿದೆ. ನಾಲ್ಕು ಶೋ ನನಗೆ ಬೇಕೇ ಬೇಕು. ಈ ಬಗ್ಗೆ ನಾನಿನ್ನು ಫಿಲ್ಮ ಚೆಂಬರ್ ಗೆ ತಿಳಿಸಿಲ್ಲ.ಸಿನಿಮಾ ಸಕ್ಸಸ್ ಕಂಡಿದೆ ಎಲ್ಲರಿಗೂ ಧನ್ಯವಾದ ಎಂದರು.
ಪುನೀತ್ ರಾಜ್ಕುಮಾರ್ ಕೊನೆ ಸಿನಿಮಾಕ್ಕೆ ಸಪೋರ್ಟ್ ಮಾಡಿ
ಇನ್ನು ಕೆಲವು ಕಡೆ ಜೇಮ್ಸ್ ಪ್ರದರ್ಶನಕ್ಕೆ ಸಮಸ್ಯೆ ಆಗಿರೋದು ನಿಜ. ನನಗೆ ಚಿತ್ರಮಂದಿರದ ಮಾಲೀಕರು ಒಂದು ಶೋ ಹಾಕ್ತೀನಿ ಎಂದರು.ಆದ್ರೆ ನಾನು ಅದಕ್ಕೆ ಒಪ್ಪಲಿಲ್ಲ. ಅವರಿಗೆ ಯಾರು ಒತ್ತಡ ಹಾಕಿದಾರೆ ನನಗೆ ಗೊತ್ತಿಲ್ಲ. ನನ್ನ ಸಿನಿಮಾಗೆ ಡಿಸ್ಟರ್ಬ್ ಮಾಡಬೇಡಿ ಎಂದು ಹೇಳಿದ್ದೇನೆ.
ಸಿನಿಮಾ ಪ್ಲಾಫ್ ಆಗಿಲ್ಲ ಹಿಟ್ ಆಗಿದೆ. ಅದಕ್ಕೆ ನನಗೆ ಕಂಪ್ಲೀಟ್ ಶೋ ನಡಿಬೇಕು ಎಂದು ಥೇಟರ್ ಮಾಲೀಕರಿಗೆ ತಿಳಿಸಿದ್ದೇನೆ ಎಂದರು. ಅಣ್ಣನ ಕೊನೆಗೆ ಸಿನಿಮಾ ಗೆ ಸಪೋರ್ಟ್ ಮಾಡಬೇಕಿದೆ. ಮುಂದೆ ನಮಗೆ ಅಪ್ಪು ಜೊತೆ ಸಿನಿಮಾ ಮಾಡಲು ಆಗಲ್ಲ. ಸದ್ಯ ಜೇಮ್ಸ್ ಗೆ ಅವಕಾಶ ಕೊಡಬೇಕು ಎಂದರು.
ಇದನ್ನೂ ಓದಿ: Puneeth Rajkumar: ಪುನೀತ್ ಹೆಸರಲ್ಲಿ ಪ್ರತಿನಿತ್ಯ ನಡೀತಿದೆ ಅನ್ನದಾಸೋಹ! ಅಪ್ಪು ಎಂದಿಗೂ ನೀ ನಗುವಿನ ಶ್ರೀಮಂತ
ಸಿದ್ದರಾಮಯ್ಯಗೆ ಆಹ್ವಾನ ನೀಡಿದ್ದೇನೆ
ಜೇಮ್ಸ್ ಸಿನಿಮಾ ನೋಡಲು ಆಹ್ವಾನಿಸಲು ನಾನು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ. ಬೇರೆ ಯಾವುದೇ ಕಾರಣಕ್ಕೂ ಅಲ್ಲ ಎಂದು ಜೇಮ್ಸ್ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಹೇಳಿದರು. ಜೇಮ್ಸ್ ಚಿತ್ರ ಯಶಸ್ವಿ ಪ್ರದರ್ಶನ ನಡೆಯುತ್ತಿದೆ.
ಗಂಗಾವತಿ ಶಿವೆ ಚಿತ್ರಮಂದಿರದಲ್ಲಿ ನಿರಂತರ ಹೌಸ್ ಫುಲ್ ಪ್ರದರ್ಶನ ಹಿನ್ನೆಲೆಯಲ್ಲಿ ಚಿತ್ರದ ಪ್ರಮೋಷನ್ ಗಾಗಿ ಕೊಪ್ಪಳ ಜಿಲ್ಲೆ ಗಂಗಾವತಿಯ ಶಿವೆ ಚಿತ್ರಮಂದಿರಕ್ಕೆ ಭೇಟಿ ನೀಡಿದ ನಂತರ ಮಾತನಾಡಿ, ನಾನು ಭೇಟಿಯಾಗಿರೋ ಉದ್ದೇಶ, ಸಿನಿಮಾ ನೋಡಲು ಹೇಳೋಕೆ. ಅವರೇ ಸಿನಿಮಾ ಹೇಗೆ ನಡಿತಿದೆ ಎಂದು ಕೇಳಿದ್ರು. ಸಿದ್ದರಾಮಯ್ಯ ಬಹಳ ಖುಷಿ ಪಟ್ಟರು ಎಂದರು.
“ಅಪ್ಪು ಇಲ್ಲದ ದುಃಖ ಕಾಡುತ್ತಿದೆ”
ಇದೇ ವೇಳೆ ಮಾತನಾಡಿದ ಖಳನಟ ಶ್ರೀಕಾಂತ ಅಪ್ಪು ನಮ್ಮನ್ನು ಅಗಲಿರುವ ನೋವು ಮರೆಯಲು ಆಗುತ್ತಿಲ್ಲ. ಜೇಮ್ಸ್ ಜಾತ್ರೆ ತರಹ ನಡೆಯುತ್ತಿದೆ. 15 ದಿನಗಳ ಕಾಲ ಗಂಗಾವತಿಯಲ್ಲಿ ಶೂಟಿಂಗ್ ಮಾಡಲಾಗಿತ್ತು ಎಂದು ಹೇಳಿದರು.
ಇದನ್ನೂ ಓದಿ: Photo: ವೈರಲ್ ಆಗ್ತಿದೆ ಅಪ್ಪು-ಗಣೇಶನ ಮಣ್ಣಿನ ವಿಗ್ರಹದ ಫೋಟೋ! ಪುನೀತ್ ರಾಜ್ಕುಮಾರ್ ಬೆನ್ನ ಮೇಲೆ ಮೂಷಿಕ
ನಾನು ಮೊದಲಿನಿಂದಲೂ ರಾಜಕುಮಾರ್ ಫ್ಯಾಮೀಲಿ ಫ್ಯಾನ್, ನಾನು ಇಲ್ಲಿಂದಲೇ ತೆಲುಗು ಇಂಡಸ್ಟ್ರಿಗೆ ಹೋಗಿದ್ದು, ಜೇಮ್ಸ್ ಚಿತ್ರದಲ್ಲಿ ಅಪ್ಪು ಅವರ ಜೊತೆಗೆ ಆ್ಯಕ್ಟ್ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ, ಅದು ಅದೃಷ್ಟ ಅನ್ನಬೇಕೋ, ಅವರಿಲ್ಲದೆ ಫೀಲ್ಮಂ ರಿಲೀಜ್ ಆಗುತ್ತಿರುವುದಕ್ಕೆ ದುಃಖ ಪಡಬೇಕೋ ಗೊತ್ತಾಗುತ್ತಿಲ್ಲ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ