The Kashmir Files: ಮನೆಯಲ್ಲಿ ಕುಳಿತು ನೋಡಿ ದಿ ಕಾಶ್ಮೀರ್ ಫೈಲ್ಸ್​ - ಎಲ್ಲಿ, ಯಾವಾಗ? ಇಲ್ಲಿದೆ ಫುಲ್​ ಡೀಟೈಲ್ಸ್​

The Kashmir Files: ಮಾರ್ಚ್ 11ರಂದು ದೇಶದಾದ್ಯಂತ ಬಿಡುಗಡೆಯಾಗಿದ್ದ ಕಾಶ್ಮೀರ್ ಫೈಲ್ಸ್​ ಚಿತ್ರಕ್ಕೆ ಭಾರೀ ಬೆಂಬಲ ವ್ಯಕ್ತವಾಗಿತ್ತು. 1990ರ ದಶಕದಲ್ಲಿ ಕಾಶ್ಮೀರದಲ್ಲಿ ಪಂಡಿತ ಸಮುದಾಯದ ಮೇಲೆ ನಡೆದಿದ್ದ ಮಾರಕ ಹಿಂಸಾಚಾರದ ಕಥೆಯನ್ನು ಇಟ್ಟುಕೊಂಡು ವಿವೇಕ್ ಅಗ್ನಿಹೋತ್ರಿ ಸಿನಿಮಾ ನಿರ್ದೇಶಿಸಿದ್ದರು.

ದಿ ಕಾಶ್ಮೀರ್​ ಫೈಲ್ಸ್​

ದಿ ಕಾಶ್ಮೀರ್​ ಫೈಲ್ಸ್​

  • Share this:
ಭಾರತದಾದ್ಯಂತ (India) ಹೊಸ ಸಂಚಲನವನ್ನೇ ಮೂಡಿಸಿದ್ದ ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಚಿತ್ರ (The Kashmir Files) ದೇಶದಾದ್ಯಂತ ಹೆಸರುಗಳಿಸಿತ್ತು. ಹಲವಾರು ವಿವಾದಗಳನ್ನು ಹುಟ್ಟಿ ಹಾಕಿದ್ದ ಸಿನಿಮಾ ದಾಖಲೆಗಳನ್ನು ಬರೆದಿತ್ತು. ಬಿಡುಗಡೆಯಾದ ಒಂದೇ ವಾರಕ್ಕೆ ನೂರು ಕೋಟಿ ಕ್ಲಬ್ ಸೇರಿದ್ದ ಈ ಸಿನಿಮಾ ಓಟಿಟಿಯಲ್ಲಿ ಸಹ ಲಭ್ಯವಿತ್ತು. ಥೀಯೇಟರ್​ನಲ್ಲಿ ಹಾಗೂ ಓಟಿಟಿಯಲ್ಲಿ ಸಹ ನೋಡಲಾಗದೇ ನಿರಾಸೆಗೊಂಡಿದ್ದ ಜನರಿಗೆ ಇದೀಗ ಸಂತಸದ ಸುದ್ದಿಯೊಂದಿದೆ.  

ಟಿವಿಯಲ್ಲಿ ಸಿನಿಮಾ ಬರಲಿದೆ

ವಿಚಾರ ಏನಪ್ಪ ಎಂದರೆ ಈ ಸಿನಿಮಾ ಇದೀಗ ಟಿವಿಯಲ್ಲಿ ಬರುತ್ತಿದೆ. ಯಾರೆಲ್ಲಾ ನೋಡಲು ಸಾಧ್ಯವಾಗಿಲ್ಲವೋ, ಅವರೆಲ್ಲರೂ ಈ ಸಿನಿಮಾವನ್ನು ಇದೇ ಆಗಸ್ಟ್​ 15ರಂದು ನೋಡಬಹುದಾಗಿದೆ. ಅದು ಕನ್ನಡದಲ್ಲಿ ಎಂಬುದು ಮತ್ತೊಂದು ವಿಶೇಷ. ಈ ಸಿನಿಮಾವನ್ನು ಆಗಸ್ಟ 15ರಂದು ಸ್ವಾತಂತ್ರ ದಿನದಂದು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಗ್ಗೆ ಚಾನೆಲ್​ ಮಾಹಿತಿ ನೀಡಿದೆ.

ಸೋಷಿಯಲ್​ ಮೀಡಿಯಾದಲ್ಲಿ ಸಹ ಪ್ರೋಮೋ​ ಹಂಚಿಕೊಂಡಿರುವ ವಾಹಿನಿ, ಕನ್ನಡ ಕಿರುತೆರೆಯಲ್ಲಿ ಮೊಟ್ಟಮೊದಲ ಬಾರಿಗೆ ಕಾಶ್ಮೀರಿ ಪಂಡಿತರ ವಲಸೆ ಕಥೆ. ಆಗಸ್ಟ್ 15ರಂದು ಮಧ್ಯಾಹ್ನ 3ಕ್ಕೆ ಎನ್ನುವ ಮಾಹಿತಿಯನ್ನು ತಿಳಿಸಿದೆ. ಇದು ಸಿನಿಮಾ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಅದರಲ್ಲೂ ಸ್ವಾತಂತ್ರ ದಿನದಂದು ಸಿನಿಮಾ ನೋಡಲು ಅವಕಾಶ ಸಿಗುತ್ತಿರುವುದು ಇನ್ನೂ ಹೆಚ್ಚಿನ ಸಂತೋಷಕ್ಕೆ ಕಾರಣವಾಗಿದೆ.
View this post on Instagram


A post shared by Zee Kannada (@zeekannada)


ಸಂಚಲನ ಮೂಡಿಸಿದ್ದ ಸಿನಿಮಾ

ಮಾರ್ಚ್ 11ರಂದು ದೇಶದಾದ್ಯಂತ ಬಿಡುಗಡೆಯಾಗಿದ್ದ ಕಾಶ್ಮೀರ್ ಫೈಲ್ಸ್​ ಚಿತ್ರಕ್ಕೆ ಭಾರೀ ಬೆಂಬಲ ವ್ಯಕ್ತವಾಗಿತ್ತು. 1990ರ ದಶಕದಲ್ಲಿ ಕಾಶ್ಮೀರದಲ್ಲಿ ಪಂಡಿತ ಸಮುದಾಯದ ಮೇಲೆ ನಡೆದಿದ್ದ ಮಾರಕ ಹಿಂಸಾಚಾರದ ಕಥೆಯನ್ನು ಇಟ್ಟುಕೊಂಡು ವಿವೇಕ್ ಅಗ್ನಿಹೋತ್ರಿ ಸಿನಿಮಾ ನಿರ್ದೇಶಿಸಿದ್ದರು.

ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್, ಹೂ ಮಳೆ ಸುರಿಸಿದ ಅಭಿಮಾನಿಗಳು

1991ರ ಸಮಯದಲ್ಲಿ ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯೆ ಹಾಗೂ ವಲಸೆಯನ್ನು ಸಿನಿಮಾವನ್ನು ಕಟ್ಟಿಕೊಡಲಾಗಿತ್ತು. ಹೀಗಾಗಿ ಈ ಸಿನಿಮಾ ಬಗ್ಗೆ ವಿರೋಧವೂ ವ್ಯಕ್ತವಾಗಿತ್ತು. ವಿರೋಧ ನಡುವೆಯೂ ಕಾಶ್ಮೀರ್ ಫೈಲ್ಸ್ ಗೆಲುವಿನ ನಗೆ ಬೀರಿತ್ತು.

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತೆ ಫೈಲ್‌ಗಳ ಹಿಂದೆ ಬಿದ್ದಿದ್ದಾರೆ. ಈ ಹಿಂದೆ ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಿಗೂಢ ಸಾವಿನ ಕುರಿತಾದ ಕಥೆಯನ್ನೊಳಗೊಂಡ ದಿ ತಾಷ್ಕೆಂಟ್ ಫೈಲ್ ಎಂಬ ಸಿನಿಮಾ ಮಾಡಿದ್ದರು. 2019ರಲ್ಲಿ ರಿಲೀಸ್ ಆದ ಈ ಸಿನಿಮಾ ಸುದ್ದಿ ಮಾಡಿದ್ರೂ, ಅಷ್ಟೊಂದು ಯಶಸ್ಸು ಗಳಿಸಲಿಲ್ಲ. ಆದರೆ ಕಾಶ್ಮೀರ್​ ಫೈಲ್ಸ್ ಜನರ ಮನ್ನಣೆಗಳಿಸಿದೆ. ಇದೀಗ ಮತ್ತೊಂದು ಫೈಲ್ಸ್ ಮಾಡುತ್ತಿದ್ದು, ಡೆಲ್ಲಿ ಫೈಲ್ಸ್ ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ: ನೀಳ ಕೇಶರಾಶಿಯಲ್ಲಿ ಸೌಂದರ್ಯ ಮರೆ ಮಾಚಿಕೊಂಡ ಸುಂದರಿ ಉರ್ಫಿ, ಹೊಸ ಅವತಾರ ಫುಲ್ ಧಗ ಧಗ

ಚಿತ್ರದ ಬಿಡುಗಡೆಗೂ ಮುನ್ನ ವಿವೇಕ್ ಅಗ್ನಿಹೋತ್ರಿ ಅವರು ಕಾಶ್ಮೀರ್ ಫೈಲ್ಸ್‌ಗೆ ಬಿಡುಗಡೆ ಮಾಡದಂತೆ ಕೆಲವ ಬೆದರಿಕೆಗಳು ಬಂದಿದ್ದವು. ಈ ಹಿನ್ನಲೆ ಅವರು ತಮ್ಮ ಟ್ವಿಟ್ಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರು. ಅಷ್ಟೇ ಅಲ್ಲದೇ, ಚಿತ್ರದ ಶೂಟಿಂಗ್‌ನ ಕೊನೆಯ ದಿನದಂದು ತಮ್ಮ ವಿರುದ್ಧ ಫತ್ವಾ ಹೊರಡಿಸಲಾಗಿದೆ ಎಂದು ಅಗ್ನಿಹೋತ್ರಿ ಅವರ ಹೆಂಡತಿ ನಿರ್ಮಾಪಕ ಮತ್ತು ನಟಿ ಪಲ್ಲವಿ ಜೋಶಿ ತಿಳಿಸಿದ್ದರು
Published by:Sandhya M
First published: