• Home
  • »
  • News
  • »
  • entertainment
  • »
  • The Kashmir Files: 'ದಿ ಕಾಶ್ಮೀರ್ ಫೈಲ್ಸ್' ಚಿತ್ರಕ್ಕೆ ಮತ್ತೆ ಕಂಟಕ; ಭಾರತದ ಹೆಸರನ್ನು ಕೆಡಿಸಲು ಸಂಚು ಎಂದ ನಿರ್ದೇಶಕ

The Kashmir Files: 'ದಿ ಕಾಶ್ಮೀರ್ ಫೈಲ್ಸ್' ಚಿತ್ರಕ್ಕೆ ಮತ್ತೆ ಕಂಟಕ; ಭಾರತದ ಹೆಸರನ್ನು ಕೆಡಿಸಲು ಸಂಚು ಎಂದ ನಿರ್ದೇಶಕ

ದಿ ಕಾಶ್ಮೀರ್ ಫೈಲ್ಸ್

ದಿ ಕಾಶ್ಮೀರ್ ಫೈಲ್ಸ್

ಬಹುಚರ್ಚಿತ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಈಗಾಗಲೇ ಭಾರತದಲ್ಲಿ ಯಶಸ್ವಿಗೊಂಡಿದ್ದು, ಈಗ ಸಿಂಗಾಪುರ್ ದಲ್ಲಿ ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತವಾಗುತ್ತಿದೆ. ಇದರಿಂದ ನಿರ್ದೇಶಕ ಅಗ್ನಿ ಹೋತ್ರಿ ಅವರಿಗೆ ಮತ್ತೆ ಕಂಟಕ ಎದುರಾದಂತೆ ಕಾಣುತ್ತಿದೆ.

  • Share this:

ಸಾಕಷ್ಟು ವಿವಾದಗಳನ್ನು ( Controversy) ಎದುರಿಸಿ ಕೊನೆಪಕ್ಷ ಬೆಳ್ಳಿತೆರೆ (Theaters) ಮೇಲೆ ಕಾಣಿಸಿಕೊಂಡಿದ್ದ ದಿ ಕಾಶ್ಮೀರ್ ಫೈಲ್ಸ್ ಚಿತ್ರ (The Kashmir Files Movie) ಈಗ ಮತ್ತೆ ವಿವಾದಕ್ಕೆ ಅಣಿಯಾಗುತ್ತಿದೆ. ಸಿಂಗಾಪುರ್ ದೇಶದಲ್ಲಿ (Singapore Country) ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಬಿಡುಗಡೆಗೆ (Release) ವಿರೋಧ (Oppose) ವ್ಯಕ್ತವಾಗುತ್ತಿದೆ. ಕೇವಲ ಒಂದೆ ಜನಾಂಗವನ್ನು ಗುರಿಯಾಗಿಸಿಕೊಂಡು ಮತ್ತು ಏಕಪಕ್ಷೀಯವಾಗಿ  ಈ ಚಿತ್ರವನ್ನು ರಚಿಸಲಾಗಿದೆ ಎಂದು ಆರೋಪಿಸಿ ಬ್ಯಾನ್ (Banned) ಮಾಡುವುದಾಗಿ ಸಿಂಗಾಪುರ್ ತಿಳಿಸಿದೆ. ಬಹುಚರ್ಚಿತ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಈಗಾಗಲೇ ಭಾರತದಲ್ಲಿ ಯಶಸ್ವಿಗೊಂಡಿದ್ದು, ಈಗ ಸಿಂಗಾಪುರ್ ದಲ್ಲಿ ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತವಾಗುತ್ತಿದೆ. ಇದರಿಂದ ನಿರ್ದೇಶಕ ಅಗ್ನಿ ಹೋತ್ರಿ ಅವರಿಗೆ ಮತ್ತೆ ಕಂಟಕ ಎದುರಾದಂತೆ ಕಾಣುತ್ತಿದೆ.


ಹೌದು ಸಿಂಗಾಪುರ್ ಚಲನ ಚಿತ್ರ ಮಂಡಳಿಯ ಮಾರ್ಗಸೂಚಿಗಳನ್ನು ಮೀರಿ ಈ ಚಿತ್ರವನ್ನು ರಚಿಸಲಾಗಿದೆ ಎಂದು ಇಲ್ಲಿಯ ಸರ್ಕಾರ ತಿಳಿಸಿದೆ. ಗೃಹ ಸಚಿವಾಲಯ, ಸಂಸ್ಕೃತಿ ಮತ್ತು ಯುವ ಸಚಿವಾಲಯ ಜಂಟಿ ಹೇಳಿಕೆ ನೀಡಿರೋದಾಗಿ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.


ಏಕ ಪಕ್ಷೀಯವಾಗಿ ಚಿತ್ರ ರಚನೆಯೇ  ವಿರೋಧಕ್ಕೆ ಕಾರಣ
ಇನ್ನು ಚಿತ್ರದಲ್ಲಿ ಬರೀ ಮುಸ್ಲಿಂ ಜನಾಂಗದ ಬಗ್ಗೆ ಪ್ರಚೋದನೆ ಮತ್ತು ಏಕ ಪಕ್ಷೀಯವಾಗಿ ಈ ಚಿತ್ರವನ್ನು ರಚಿಸಲಾಗಿದೆ. ಮತ್ತು ಸಿಂಗಾಪುರ್ ಚಿತ್ರ ಮಂಡಳಿಯ ಮಾರ್ಗಸೂಚಿಗಳನ್ನು ಮೀರಿ ಈ ಚಿತ್ರ ತಯಾರಿಸಲಾಗಿದೆ ಎಂದು ಆರೋಪಿಸಿ ಇಲ್ಲಿಯ ಸರ್ಕಾರ ಚಿತ್ರದ ಬಿಡುಗಡೆಗೆ ಅನುಮತಿ ನೀಡುತ್ತಿಲ್ಲಾ ಎಂದು ಖಾಸಗಿ ಮಾಧ್ಮಮವೊಂದು ವರದಿ ಮಾಡಿದೆ. ಇನ್ನು ನಮ್ಮ ದೇಶದಲ್ಲಿ ಹಲವು ಜಾತೀಯ ಜನಾಂಗದವರು ವಾಸಿಸುತ್ತಾರೆ. ಇಲ್ಲಿರುವ ಎಲ್ಲಾ ಜನಾಂಗದವರು ಒಂದೆ ಎಂದು ಭಾವಿಸುತ್ತಾರೆ. ಈ ಚಿತ್ರ ಏಕ ಪಕ್ಷೀಯವಾಗಿದ್ದು, ಜನರ ಮೇಲೆ ಕೆಟ್ಟ ಪರಿಣಾಮ ಬೀಳುವ ಸಾಧ್ಯತೆಯಿದೆ ಎಂದು ಸರ್ಕಾರ ತನ್ನ ಉತ್ತರದಲ್ಲಿ ತಿಳಿಸಿದೆ.


ಇದನ್ನೂ ಓದಿ: RIP Captain Chalapati Choudhary: ಹಿರಿಯ ಬಹುಭಾಷಾ ನಟ ಕ್ಯಾಪ್ಟನ್ ಚಲಪತಿ ಚೌದ್ರಿ ನಿಧನ


ನನ್ನ ಚಿತ್ರದ ವಿರುದ್ಧ ದೊಡ್ಡ ಸಂಚು ರೂಪಿಸಲಾಗುತ್ತಿದೆ
ನಿರ್ದೇಶಕ ವಿವೇಕ ಅಗ್ನಿಹೋತ್ರಿ ಹೇಳುವ ಪ್ರಕಾರ ನನ್ನ ಚಿತ್ರ ಯಾವುದೆ ಜನಾಂಗದ ಮೇಲೆ ಕೆಟ್ಟ ಪರಿಣಾಮ ಬೀರುವಂತಹ ಅಂಶಗಳನ್ನು ಒಳಗೊಂಡಿಲ್ಲಾ. ಅಂತರಾಷ್ಟ್ರೀಯ ಮಾಧ್ಯಮ ವರ್ಗವೊಂದು ನನ್ನ ಚಿತ್ರವನ್ನು ಮುಂದಿಟ್ಟುಕೊಂಡು ಅಂತರಾಷ್ಟ್ರೀಯಮಟ್ಟದಲಿ ರಾಜಕೀಯ ಅಭಿಯಾನ ನಡೆಸಿದ್ದಾರೆ ಎಂದು ಚಿತ್ರದ ನಿರ್ದೇಶಕ ಅಗ್ನಿಹೋತ್ರಿ ಆರೋಪಿಸಿದ್ದಾರೆ.


ಭಾರತದ ಹೆಸರನ್ನು ಕೆಡಿಸಲು ಸಂಚು
1990ರ ದಶಕದಲ್ಲಿ ಕಾಶ್ಮೀರ್ ಕಣಿವೆಯಲ್ಲಿ ಹಿಂದೂ ಪಂಡಿತರ ಮೇಲೆ ನಡೆದ ದೌರ್ಜನ್ಯದ ಸತ್ಯ ಸಂಗತಿಗಳನ್ನೆ ನಾನು ಚಿತ್ರದಲ್ಲಿ ಬಿಂಬಿಸಿದ್ದೇನೆ ಹೊರತು ಅಲ್ಲಿ ನಾನು ಎಲ್ಲೂ ಮುಸ್ಲಿಂ ಅಥವಾ ಪಾಕಿಸ್ತಾನ್ , ಪಾಕಿಸ್ತಾನಿ ಎಂದು ಪದ ಕೂಡ ಬಳಸಿಲ್ಲಾ.  ಹಾಗಾಗಿ ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಮುಂದಿಟ್ಟುಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ದಿ ಕಾಶ್ಮೀರ್ ಫೈಲ್ಸ್ರೂಪಿಸಿರುವಂತಹ ಒಂದು ಸಂಚು ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪ್ರತ್ರಿಕಾಗೋಷ್ಟಿಯೊಂದರಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ: Priyanka Chopra: ಪ್ರಿಯಾಂಕಾ ಚೋಪ್ರಾ ಅಭಿಮಾನಿಗಳಿಗೆ ಶಾಕ್, ನಿಜವಾಗ್ಲೂ ಪಿಗ್ಗಿಗೆ ಆಗಿದ್ದೇನು?


ಭಯೋತ್ಪಾದನೆ ಬಗ್ಗೆ ಈ ಚಿತ್ರ ರಚಿಸಲಾಗಿದೆ ಎಂದ ಅಗ್ನಿಹೋತ್ರಿ
ಕಾಶ್ಮೀರ್ ಕಣಿವೆಯಲ್ಲಿ ಭಯೋತ್ಪಾದನೆ ಚಟುವಟಿಕೆಗಳು ಹೆಚ್ಚು ಕಂಡುಬರುತ್ತವೆ. ಹೀಗಾಗಿ 1990ರ ದಶಕದಲ್ಲಿ ಕಣಿವೆಯಲ್ಲಿರುವ ಪಂಡಿತರ ಮೇಲೆ ಭಯೋತ್ಪಾದಕರು ನಡೆಸಿದ ದೌರ್ಜನ್ಯದ ಮೇಲೆಯೇ ಬೆಳಕು ಚೆಲ್ಲಲಾಗಿದೆ. ಇದನ್ನು ಅರಿಯದೆ, ಸತ್ಯಾಂಶವನ್ನು ಪರಿಶೀಲಿಸದೆ ಏಕಾಏಕಿ ಚಿತ್ರದ ಬಿಡುಗಡೆಗೆ ತಡೆಯೊಡ್ಡುತ್ತಿದ್ದು, ನಿಜಕ್ಕೂ ವಿಷಾದಕರ ಸಂಗತಿ ಎಂದು ತಿಳಿಸಿದ್ದಾರೆ.

Published by:shrikrishna bhat
First published: