ಬಾಕ್ಸ್​ ಆಫೀಸ್​ ಕೊಳ್ಳೆ! 100 ಕೋಟಿ ಕ್ಲಬ್ ಸೇರಿದ The Kashmir Files!

ಈಕುರಿತು ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಖಚಿತಪಡಿಸಿದ್ದಾರೆ.

ದಿ ಕಾಶ್ಮೀರ್​ ಫೈಲ್ಸ್​ ಪೋಸ್ಟರ್​

ದಿ ಕಾಶ್ಮೀರ್​ ಫೈಲ್ಸ್​ ಪೋಸ್ಟರ್​

  • Share this:

ಭಾರತದಾದ್ಯಂತ ಹೊಸ ಸಂಚಲನವನ್ನೇ ಮೂಡಿಸಿರುವ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಚಿತ್ರ (The Kashmir Files) ಬಾಕ್ಸ್ ಆಫೀಸನ್ನೂ ಕೊಳ್ಳೆ ಹೊಡೆಯುತ್ತಿದೆ. ಬಿಡುಗಡೆಯಾದ ಒಂದೇ ವಾರಕ್ಕೆ  ನೂರು ಕೋಟಿ ಕ್ಲಬ್ ಸೇರಿದ ಕಾಶ್ಮೀರ್ ಫೈಲ್ಸ್ ಚಿತ್ರ. ಅನುಪಮ್ ಖೇರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಶಿ ಮುಂತಾದ ತಾರಾಗಣವನ್ನು ಹೊಂದಿರುವ ಚಿತ್ರ ನೂರು ಕೋಟಿ ಕ್ಲಬ್ (100 Crore Club) ಸೇರಿದೆ. ಈಕುರಿತು ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Director Vivek Agnihotri) ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ (Instagram) ಹಂಚಿಕೊಳ್ಳುವ ಮೂಲಕ ಖಚಿತಪಡಿಸಿದ್ದಾರೆ.


ಮಾರ್ಚ್ 11ರಂದು ದೇಶದಾದ್ಯಂತ ಬಿಡುಗಡೆಯಾಗಿದ್ದ ಕಾಶ್ಮೀರ್ ಫೈಲ್ಸ್​ ಚಿತ್ರಕ್ಕೆ ಭಾರೀ ಬೆಂಬಲ ವ್ಯಕ್ತವಾಗಿತ್ತು. 1990ರ ದಶಕದಲ್ಲಿ ಕಾಶ್ಮೀರದಲ್ಲಿ ಪಂಡಿತ ಸಮುದಾಯದ ಮೇಲೆ ನಡೆದಿದ್ದ ಮಾರಕ ಹಿಂಸಾಚಾರದ ಕಥೆಯನ್ನು ಇಟ್ಟುಕೊಂಡು ವಿವೇಕ್ ಅಗ್ನಿಹೋತ್ರಿ ಸಿನಿಮಾ ನಿರ್ದೇಶಿಸಿದ್ದಾರೆ.


ತೆರಿಗೆ ವಿನಾಯಿತಿ!
ಕರ್ನಾಟಕ, ಉತ್ತರ ಪ್ರದೇಶ, ತ್ರಿಪುರಾ, ಗೋವಾ, ಹರಿಯಾಣ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ಸಹ ಘೋಷಿಸಲಾಗಿತ್ತು. ಅಲ್ಲದೇ ಬಿಜೆಪಿ ಜನಪ್ರತಿನಿಧಿಗಳು ಈ ಚಿತ್ರ ವೀಕ್ಷಿಸುವಂತೆ ಜನತೆಗೆ ಕರೆ ನೀಡಿದ್ದರಲ್ಲದೇ ಉಚಿತ ಪ್ರದರ್ಶನಗಳನ್ನು ಸಹ ಸ್ವಂತ ಖರ್ಚಿನಲ್ಲಿ ಏರ್ಪಡಿಸಿದ್ದರು.

ದೇಶಾದ್ಯಂತ ಚಿತ್ರಕ್ಕೆ ಪ್ರಶಂಸೆ
ಇನ್ನು ಈ ಚಿತ್ರವನ್ನು ಮೆಚ್ಚು ಕರ್ನಾಟಕ, ಗುಜರಾತ್​, ಮಧ್ಯಪ್ರದೇಶ ಹಾಗೂ ತ್ರಿಪುರ ಸರ್ಕಾರಗಳು ತೆರಿಗೆ ವಿನಾಯಿತಿ ನೀಡಿದೆ. ಇನ್ನು ರಾಜ್ಯದಲ್ಲಿ ಈ ಸಿನಿಮಾ ವೀಕ್ಷಣೆಗೆ ವಿಧಾನಸಭಾ ಸದಸ್ಯರಿಗೆ ವಿಶೇಷ ಪ್ರದರ್ಶನ ಕಾರ್ಯಕ್ರಮವನ್ನು ಕೂಡ ವಿಧಾನಸಭಾಧ್ಯಕ್ಷರು ನಡೆಸಿದ್ದರು. ಕಳೆದ ಮೂರು ದಿನಗಳ ಹಿಂದೆ, ಮಂತ್ರಿಮಾಲ್​ನಲ್ಲಿ ಸಂಜೆ ಪ್ರದರ್ಶನಕ್ಕೆ ಆಡಳಿತ ಹಾಗೂ ವಿಪಕ್ಷ ಸದಸ್ಯರಿಗೆ ಪ್ರದರ್ಶನಕ್ಕೆ ಏರ್ಪಡು ಮಾಡಲಾಗಿತ್ತು. ಆದರೆ, ಈ ಪ್ರದರ್ಶನಕ್ಕೆ ಕಾಂಗ್ರೆಸ್ ನಾಯಕರು ಗೈರಾಗಿದ್ದರು.

ನಿರ್ದೇಶಕರಿಗೆ ಜೀವ ಬೆದರಿಕೆ!
ಚಿತ್ರದ ಬಿಡುಗಡೆಗೂ ಮುನ್ನ ವಿವೇಕ್ ಅಗ್ನಿಹೋತ್ರಿ ಅವರು ಕಾಶ್ಮೀರ್ ಫೈಲ್ಸ್‌ಗೆ ಬಿಡುಗಡೆ ಮಾಡದಂತೆ ಕೆಲವ ಬೆದರಿಕೆಗಳು ಬಂದಿದ್ದವು. ಈ ಹಿನ್ನಲೆ ಅವರು ತಮ್ಮ ಟ್ವಿಟ್ಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರು. ಅಷ್ಟೇ ಅಲ್ಲದೇ, ಚಿತ್ರದ ಶೂಟಿಂಗ್‌ನ ಕೊನೆಯ ದಿನದಂದು ತಮ್ಮ ವಿರುದ್ಧ ಫತ್ವಾ ಹೊರಡಿಸಲಾಗಿದೆ ಎಂದು ಅಗ್ನಿಹೋತ್ರಿ ಅವರ ಹೆಂಡತಿ ನಿರ್ಮಾಪಕ ಮತ್ತು ನಟಿ ಪಲ್ಲವಿ ಜೋಶಿ ತಿಳಿಸಿದ್ದರು.

ಪೈರಸಿ ಲಿಂಕ್​ ಓಪನ್​ ಮಾಡೋ ಮುನ್ನ ಹುಷಾರ್!
‘ದಿ ಕಾಶ್ಮೀರ ಫೈಲ್ಸ್’ ಎಂಬ ಚಲನಚಿತ್ರಕ್ಕೆ ಸಂಬಂಧಿಸಿದ ವಾಟ್ಸ್‌ಆ್ಯಪ್‌ನಲ್ಲಿ ಸ್ವೀಕರಿಸಬಹುದಾದ ಲಿಂಕ್‌ಗಳ ಬಗ್ಗೆ ಜಾಗರೂಕರಾಗಿರಿ ಎಂದು ಪೊಲೀಸರು ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.

ಇದನ್ನೂ ಓದಿ: 'The Kashmir Files' ಚಿತ್ರ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿಗೆ 'ವೈ' ಕೆಟಗರಿ ಭದ್ರತೆ

ಕಾಶ್ಮೀರ ಫೈಲ್ಸ್ ಚಲನಚಿತ್ರವನ್ನು ಉಚಿತವಾಗಿ ಡೌನ್‌ಲೋಡ್ ಮಾಡುವಂತೆ ಆಮಿಷವೊಡ್ಡುವ ಮೂಲಕ ಹ್ಯಾಕರ್‌ಗಳು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಮಾಲ್‌ವೇರ್ ಅನ್ನು ಸ್ಥಾಪಿಸಲು ಜನರನ್ನು ಮರುಳು ಮಾಡಲು ಪ್ರಯತ್ನಿಸಬಹುದು ಎಂದೂ ಪೊಲೀಸರು ಎಚ್ಚರಿಸಿದ್ದಾರೆ.

ಇನ್ನು ಕಳೆದ ವಾರ ದೇಶಾದ್ಯಂತ ಬಿಡುಗಡೆಯಾದ ದಿ ಕಾಶ್ಮೀರ್​ ಪಂಡಿತ್​ ಚಿತ್ರಕ್ಕೆ ಭಾರೀ ಮೆಚ್ಚುಗೆ ಪಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರ ಜನಮನ್ನಣೆ ಪಡೆದಿದೆ.

ಇದನ್ನೂ ಓದಿ: Puneeth Rajkumar: ಮೊದಲ ದಿನವೇ 'ಕೆಜಿಎಫ್‌' ದಾಖಲೆ ಮುರಿದ 'ಜೇಮ್ಸ್'! 'ಪವರ್ ಸ್ಟಾರ್' ಅಬ್ಬರಕ್ಕೆ ಬಾಕ್ಸ್ ಆಫೀಸ್ ಶೇಕ್!

1990ರ ದಶಕದಲ್ಲಿ ಪಾಕಿಸ್ತಾನದ ಬೆಂಬಲಿತ ಭಯೋತ್ಪಾದಕರಿಂದ ಹೇಗೆ ಸಮುದಾಯದ ಜನರನ್ನು ವ್ಯವಸ್ಥಿತವಾಗಿ ಹತ್ಯೆ ಮಾಡಿದ ನಂತರ ಕಾಶ್ಮೀರಿ ಹಿಂದೂಗಳು ರಾಜ್ಯದಿಂದ ವಲಸೆ ಕಳುಹಿಸಲಾಯಿತು. ಹೇಗೆ ಕಾಶ್ಮೀರಿ ಪಂಡಿತರು ತಮ್ಮ ಮೂಲ ನೆಲೆ ತೊರೆದು ಬಂದರು ಎಂಬ ಕಥಾವಸ್ತುವನ್ನು ಚಿತ್ರ ಹೊಂದಿದೆ.
Published by:guruganesh bhat
First published: