• Home
  • »
  • News
  • »
  • entertainment
  • »
  • The Kashmir Files ನಿರ್ದೇಶಕ ಈಗ 'ದೆಹಲಿ'ಯ ಕರಾಳ ಕಥೆ ಹೇಳ್ತಾರಾ? ವಿವೇಕ್‌ ಅಗ್ನಿಹೋತ್ರಿ next ಸಿನಿಮಾ ಯಾವುದು?

The Kashmir Files ನಿರ್ದೇಶಕ ಈಗ 'ದೆಹಲಿ'ಯ ಕರಾಳ ಕಥೆ ಹೇಳ್ತಾರಾ? ವಿವೇಕ್‌ ಅಗ್ನಿಹೋತ್ರಿ next ಸಿನಿಮಾ ಯಾವುದು?

ವಿವೇಕ್ ಅಗ್ನಿಹೋತ್ರಿ ಮುಂದಿನ ಸಿನಿಮಾ 'ದಿ ದೆಹಲಿ ಫೈಲ್ಸ್'

ವಿವೇಕ್ ಅಗ್ನಿಹೋತ್ರಿ ಮುಂದಿನ ಸಿನಿಮಾ 'ದಿ ದೆಹಲಿ ಫೈಲ್ಸ್'

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತೆ ‘ಕಡತ’ಗಳ (Files) ಹಿಂದೆ ಬಿದ್ದಿದ್ದಾರೆ. ಈ ಹಿಂದೆ 2019ರಲ್ಲಿ ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಿಗೂಢ ಸಾವಿನ ಕುರಿತಾದ ಕಥೆಯನ್ನೊಳಗೊಂಡ ‘ದಿ ತಾಷ್ಕೆಂಟ್ ಫೈಲ್ಸ್’ ಎಂಬ ಸಿನಿಮಾ ಮಾಡಿದ್ದರು. ಅದಾದ ಬಳಿಕ ಬಂದಿದ್ದೇ ‘ದಿ ಕಾಶ್ಮೀರ್ ಫೈಲ್ಸ್’. ಇದರ ಅಭೂತಪೂರ್ವ ಯಶಸ್ಸಿನ ನಂತರ ‘ದೆಹಲಿ ಫೈಲ್ಸ್’ ಹಿಡಿದು ಅಗ್ನಿಹೋತ್ರಿ ಬರುತ್ತಿದ್ದಾರೆ!

ಮುಂದೆ ಓದಿ ...
  • Share this:

ಸದ್ಯ ‘ದಿ ಕಾಶ್ಮೀರ್ ಫೈಲ್ಸ್’ (The Kashmir File) ಸಿನಿಮಾ (Cinema) ಸದ್ದು ಹಾಗೂ ಸುದ್ದಿ ನಿಂತಿಲ್ಲ. ಬರೀ ಚಿತ್ರರಂಗದಲ್ಲಷ್ಟೇ (Film Industry) ಅಲ್ಲ, ರಾಜಕೀಯದಲ್ಲೂ ‘ದಿ ಕಾಶ್ಮೀರ್ ಫೈಲ್ಸ್’ ಕೋಲಾಹಲ ಎಬ್ಬಿಸುತ್ತಿದೆ. ಅನೇಕ ರಾಜ್ಯಗಳಲ್ಲಿ ಸಿನಿಮಾಕ್ಕೆ ತೆರಿಗೆ (Tax) ವಿನಾಯಿತಿ ನೀಡಲಾಗಿದೆ. ಜೊತೆಗೆ ಸಿನಿಮಾ ವೀಕ್ಷಣೆಗೆ ಕೆಲವೆಡೆ ಪೊಲೀಸರು (Police) ಹಾಗೂ ವಿದ್ಯಾರ್ಥಿಗಳಿಗೆ (Students) ರಜೆಯನ್ನೂ ನೀಡಲಾಗಿದೆ. ಕಾಶ್ಮೀರಿ ಪಂಡಿತರ (Kashmir Pandit) ಹತ್ಯಾಕಾಂಡದ (The massacre) ಕುರಿತಂತೆ ತಯಾರಾದ ಈ ಸಿನಿಮಾ ನೋಡಿ ಬಹುತೇಕರ ಕಣ್ಣೀರು ಹಾಕಿದ್ದಾರೆ, ಆಕ್ರೋಶಗೊಂಡಿದ್ದಾರೆ, ಹಿಡಿ ಶಾಪ ಹಾಕಿದ್ದಾರೆ, ಕಾಶ್ಮೀರಿ ಪಂಡಿತರ ಸ್ಥಿತಿ ನೆನೆದು ಕರಗಿದ್ದಾರೆ. ಕೆಲವರು “ಇದೊಂದು ರಾಜಕೀಯ ಅಜೆಂಡಾದ (Political agenda) ಸಿನಿಮಾ” ಅಂತ ಬೆರಳು ತೋರಿದ್ದಾರೆ. ಚಿತ್ರದ ನಿರ್ದೇಶಕ (Director) ವಿವೇಕ್ ಅಗ್ನಿಹೋತ್ರಿ (Vivek Agnihotri) ರಾತಿ ಬೆಳಗಾಗುವಷ್ಟರಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಅವರಿಗೆ ಬೆದರಿಕೆ ಕರೆ ಬರುತ್ತಿದ್ದು, ವೈ ಶ್ರೇಣಿಯ ಭದ್ರತೆಯನ್ನೂ (Y range security) ನೀಡಲಾಗಿದೆ. ಈ ನಿರ್ದೇಶಕನ ಮುಂದಿನ ಸಿನಿಮಾ ಯಾವುದು? ಯಾರು ನಟಿಸ್ತಾರೆ ಅಂತ ಅಭಿಮಾನಿಗಳು ತಲೆ ಕೆರೆದುಕೊಂಡಿದ್ದಾರೆ. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ…


ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಕಾಶ್ಮೀರಿ ಪಂಡಿತರ ಕಥೆ


ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾ 1990ರ ದಶಕದಲ್ಲಿ ಕಾಶ್ಮೀರದಲ್ಲಿ ನಡೆದ ಪಂಡಿತರ ಕುಟುಂಬಗಳ ಮೇಲಿನ ದೌರ್ಜನ್ಯದ ಕಥೆ ಹೊಂದಿದೆ. ಪುಷ್ಕರ್ ನಾಥ್ ಪಂಡಿತ್‌ ಎಂಬ ಕಾಶ್ಮೀರಿ ಪಂಡಿತರ ಪಾತ್ರದ ಸುತ್ತ ಕಥೆ ಸುತ್ತುತ್ತದೆ.


ಪ್ರಸ್ತುತ ಕಾಲಘಟ್ಟದಲ್ಲಿ ವಿಶ್ವವಿದ್ಯಾನಿಲಯವೊಂದರಲ್ಲಿ ಕಲಿಯುತ್ತಿರುವ ಪುಷ್ಕರ್ ನಾಥ್ ಪಂಡಿತ್‌ ಮೊಮ್ಮಗ ಕೃಷ್ಣ ಪಂಡಿತ್‌ಗೆ ತನ್ನ ಕುಟುಂಬದ ಇತಿಹಾಸವನ್ನು ತಿಳಿಸುತ್ತ ಸಾಗುವ ಕಥೆ ಇದು.


ಕಾಶ್ಮೀರಿ ಪಂಡಿತರಿಗೆ 'ಮತಾಂತರವಾಗಿ, ಓಡಿ ಹೋಗಿ ಅಥವಾ ಸಾಯಿರಿ..' ಎಂದು ಭಯೋತ್ಪಾದಕರು ಬೆದರಿಕೆ ಹಾಕುತ್ತಾರೆ. ನಂತರ ನಡೆದ ಕಾಶ್ಮೀರಿ ಪಂಡಿತ ಕುಟುಂಬಗಳ ಹತ್ಯಾಕಾಂಡವನ್ನು ಸವಿಸ್ತಾರವಾಗಿ ತೋರಿಸಲಾಗಿದೆ.


ಇದನ್ನೂ ಓದಿ: Explained: 'The Kashmir Files' ಸಿನಿಮಾದಲ್ಲಿ ತೋರಿಸಿದ್ದು ಟ್ರೇಲರ್ ಅಷ್ಟೇ! ಕಾಶ್ಮೀರಿ ಪಂಡಿತರ ಬದುಕಿನ ಕರಾಳ ಕಥೆ ಇಲ್ಲಿದೆ ಓದಿ


ಮತ್ತೆ ಫೈಲ್‌ ಹಿಂದೆ ಬಿದ್ದ ಅಗ್ನಿಹೋತ್ರಿ


ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತೆ ಫೈಲ್‌ಗಳ ಹಿಂದೆ ಬಿದ್ದಿದ್ದಾರೆ. ಈ ಹಿಂದೆ ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಿಗೂಢ ಸಾವಿನ ಕುರಿತಾದ ಕಥೆಯನ್ನೊಳಗೊಂಡ ದಿ ತಾಷ್ಕೆಂಟ್ ಫೈಲ್ ಎಂಬ ಸಿನಿಮಾ ಮಾಡಿದ್ದರು. 2019ರಲ್ಲಿ ರಿಲೀಸ್ ಆದ ಈ ಸಿನಿಮಾ ಸುದ್ದಿ ಮಾಡಿದ್ರೂ, ಅಷ್ಟೊಂದು ಯಶಸ್ಸು ಗಳಿಸಲಿಲ್ಲ. ಅದಾದ ಬಳಿಕ ಬಂದಿದ್ದೇ ದಿ ಕಾಶ್ಮೀರ್ ಫೈಲ್ಸ್.


ದೆಹಲಿಯ ಕರಾಳ ಕಥೆ ತೋರಿಸಲು ಸಜ್ಜಾದ ಅಗ್ನಿಹೋತ್ರಿ


ವಿವೇಕ್​ ಅಗ್ನಿಹೋತ್ರಿ ಮುಂದಿನ ಸಿನಿಮಾ ‘ದಿ ದಿಲ್ಲಿ ಫೈಲ್ಸ್​’ ಅಂತ ಘೋಷಣೆಯಾಗಿದೆ. 2021ರ ಸೆ.13ರಂದು ಅವರು ಈ ಸಿನಿಮಾ ಅನೌನ್ಸ್​ ಮಾಡಿದ್ದರು. ‘ದಿ ತಾಷ್ಕೆಂಟ್​ ಫೈಲ್ಸ್​’ ಹಾಗೂ ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರಗಳಿಗಿಂತಲೂ ‘ದಿ ದಿಲ್ಲಿ ಫೈಲ್ಸ್​’ ಹೆಚ್ಚು ಭಯಾನಕ ಆಗಿರಲಿದೆ ಎನ್ನಲಾಗಿದೆ.


ಇದನ್ನೂ ಓದಿ: Explained: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ಅಂತ್ಯದಲ್ಲಿ ಯಾವ ಸತ್ಯವನ್ನು ಕೃಷ್ಣ ಪಂಡಿತ್ ನಂಬುತ್ತಾರೆ?


ಮತ್ತೆ ಸದ್ದು ಮಾಡುತ್ತಾರಾ ವಿವೇಕ್ ಅಗ್ನಿಹೋತ್ರಿ?


ಟೈಟಲ್​ ಅನೌನ್ಸ್​ ಮಾಡುವುದರ ಜೊತೆಗೆ ಅವರು ಒಂದು ಮೋಷನ್​ ಪೋಸ್ಟರ್ ಸಹ ರಿಲೀಸ್​ ಮಾಡಿದ್ದರು. ರಾಷ್ಟ್ರ ಲಾಂಚನದ ನಡುವೆ ಸಿಖ್​ ಬಾಲಕನೊಬ್ಬ ಅಸಹಾಯಕತೆಯಿಂದ ಅಳುತ್ತಿರುವ ಪೋಸ್ಟರ್​ ಅದಾಗಿದೆ. ಹಿನ್ನೆಲೆಯಲ್ಲಿ ಬೂಟಿನ ಶಬ್ದ ಕೇಳಿಸುತ್ತದೆ. ಈ ಸಿನಿಮಾದಲ್ಲಿ ‘ಜೀವಿಸುವ ಹಕ್ಕು’ ಬಗ್ಗೆ ವಿವರಿಸುವುದಾಗಿ ವಿವೇಕ್​ ಅಗ್ನಿಹೋತ್ರಿ ಹೇಳಿದ್ದಾರೆ.

Published by:Annappa Achari
First published: