The Kashmir Files: ಒಟಿಟಿಯಲ್ಲಿ ಹೊಸ ದಾಖಲೆ ಬರೆದ ಕಾಶ್ಮೀರ್​ ಫೈಲ್ಸ್ - 9 ಮಿಲಿಯನ್ ವೀಕ್ಷಣೆ ಪಡೆದ ಚಿತ್ರ

Bollywood: ವರದಿಗಳ ಪ್ರಕಾರ, ಕಾಶ್ಮೀರ ಫೈಲ್ಸ್ ಆರಂಭಿಕ ವಾರಾಂತ್ಯದಲ್ಲಿ ಅತಿ ಹೆಚ್ಚು ವೀಕ್ಷಣೆಗಳನ್ನು (6 ಮಿಲಿಯನ್) ಮತ್ತು 220 ಮಿಲಿಯನ್ ಸ್ಟ್ರೀಮಿಂಗ್ ನಿಮಿಷಗಳನ್ನು ಪಡೆದುಕೊಂಡಿದೆ.

ದಿ ಕಾಶ್ಮೀರ್​ ಫೈಲ್ಸ್​

ದಿ ಕಾಶ್ಮೀರ್​ ಫೈಲ್ಸ್​

  • Share this:
ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರ ವಿವಾದಾತ್ಮಕ ಚಲನಚಿತ್ರ, ಕಾಶ್ಮೀರ್​ ಫೈಲ್ಸ್ (The Kashmir Files) , ಬಾಕ್ಸ್ ಆಫೀಸ್ ಕಲೆಕ್ಷನ್‌ ವಿಚಾರದಲ್ಲಿ ದಾಖಲೆ ಮಾಡಿತ್ತು. ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ಈ ಚಿತ್ರ, ಹಲವು ಪರ- ವಿರೋಧ ಚರ್ಚೆಗಳಿಗೆ ಕಾರಣವಾಗಿತ್ತು. ಮಾರ್ಚ್ 11 ರಂದು ಬಿಡುಗಡೆಯಾದ ಕಾಶ್ಮೀರಿ ಪಂಡಿತರ ನಿರ್ಗಮನವನ್ನು ಆಧರಿಸಿದ ಚಲನಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 331 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿದೆ.

ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಶಿ ಮತ್ತು ಮಿಥುನ್ ಚಕ್ರವರ್ತಿ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಯಶಸ್ವಿ ಥಿಯೇಟ್ರಿಕಲ್ ರನ್ ನಂತರ ಚಲನಚಿತ್ರವು ಮೇ 13 ರಂದು OTT ಪ್ಲಾಟ್‌ಫಾರ್ಮ್ ZEE5 ನಲ್ಲಿ ಬಿಡುಗಡೆಯಾಗಿದೆ. ಇದೀಗ ಈ ಚಿತ್ರ ಥಿಯೇಟರ್ ಮಾತ್ರವಲ್ಲದೇ OTTಯಲ್ಲಿ ಸಹ ದಾಖಲೆ ಬರೆದಿದೆ. ಈ ಚಿತ್ರ ಒಂದು ವಾರದಲ್ಲಿ 9 ಮಿಲಿಯನ್ (90 ಲಕ್ಷ) ವೀಕ್ಷಣೆಗಳನ್ನು ಪಡೆದುಕೊಂಡಿದೆ.

9 ಮಿಲಿಯನ್ ವೀಕ್ಷಣೆ ಪಡೆದ ಚಿತ್ರ

ವರದಿಗಳ ಪ್ರಕಾರ, ಕಾಶ್ಮೀರ ಫೈಲ್ಸ್ ಆರಂಭಿಕ ವಾರಾಂತ್ಯದಲ್ಲಿ ಅತಿ ಹೆಚ್ಚು ವೀಕ್ಷಣೆಗಳನ್ನು (6 ಮಿಲಿಯನ್) ಮತ್ತು 220 ಮಿಲಿಯನ್ ಸ್ಟ್ರೀಮಿಂಗ್ ನಿಮಿಷಗಳನ್ನು ಪಡೆದುಕೊಂಡಿದೆ. ಮೊದಲ ವಾರದಲ್ಲಿ, ಇದು 9 ಮಿಲಿಯನ್ ವೀಕ್ಷಣೆಗಳನ್ನು ಮತ್ತು 300 ಮಿಲಿಯನ್ ಸ್ಟ್ರೀಮಿಂಗ್ ನಿಮಿಷಗಳನ್ನು ಗಳಿಸಿದೆ ಎಂದು ವರದಿಯಾಗಿದೆ. ಕಾಶ್ಮೀರ ಫೈಲ್ಸ್ ZEE5 ನಲ್ಲಿನ ಎಲ್ಲಾ ದಾಖಲೆಗಳನ್ನು ಮುರಿದಿದೆ ಎಂದು ಈ ಸಂಖ್ಯೆಗಳು ಸ್ಪಷ್ಟವಾಗಿ ಬಹಿರಂಗಪಡಿಸುತ್ತವೆ.

ಇನ್ನು ZEE5 ನಲ್ಲಿ ಈ ಚಿತ್ರ ಹಿಂದಿ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿಯೂ ಬಿಡುಗಡೆಯಾಗಿದೆ. ಕಳೆದ ವಾರ, ZEE5 ಮುಂಬೈನಲ್ಲಿ ಭಾರತೀಯ ಸಂಕೇತ ಭಾಷೆಯಲ್ಲಿ ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಿತ್ತು, ಇದರಲ್ಲಿ ಶ್ರವಣ ದೋಷವುಳ್ಳ 500 ಜನರು ಭಾಗವಹಿಸಿದ್ದರು. ಈ ಮೂಲಕ ಸಂಕೇತ ಭಾಷೆಯ ವ್ಯಾಖ್ಯಾನದೊಂದಿಗೆ ಚಲನಚಿತ್ರವನ್ನು ಬಿಡುಗಡೆ ಮಾಡುವ ಮೊದಲ OTT ವೇದಿಕೆ ಎಂಬ ಹೆಗ್ಗಳಿಕೆ ZEE5 ಪಾತ್ರವಾಗಿದೆ.

ಇದನ್ನೂ ಓದಿ: ಇತಿಹಾಸದ ಪುಟ ಸೇರಿದ ಮೈಸೂರಿನ ಮತ್ತೊಂದು ಥಿಯೇಟರ್​ - 73 ವರ್ಷಗಳ ಪ್ರದರ್ಶನ ನಿಲ್ಲಿಸಿದ ಒಲಂಪಿಯಾ

ವಿವೇಕ್ ಅಗ್ನಿಹೋತ್ರಿ ಅವರು ಮೇ 13 ರಂದು ಮುಂಬೈನಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿವೇಕ್ ಅಗ್ನಿಹೋತ್ರಿ ಮತ್ತು ಪಲ್ಲವಿ ಜೋಶಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಸಂಗೀತ ಕಚೇರಿಯ ಕುರಿತು ಟ್ವಿಟ್ ಮಾಡಿದ್ದ ವಿವೇಕ್ ಅಗ್ನಿಹೋತ್ರಿ, “ಇತಿಹಾಸದಲ್ಲಿ ಮೊದಲ ಬಾರಿಗೆ ಚಲನಚಿತ್ರದ ಹಿನ್ನೆಲೆ ಸಂಗೀತವು ತುಂಬಾ ಪ್ರಚಾರ ಪಡೆದಿದ್ದು, ನಾವು ಐಕಾನಿಕ್ ರಾಯಲ್ ಒಪೇರಾ ಹೌಸ್‌ನಲ್ಲಿ ಚಿತ್ರದ ಪ್ರಮುಖ ನಟರು ಹೇಳಿದ ಕಥೆಗಳೊಂದಿಗೆ #TheKashmirFiles ನ ವಿಶೇಷ ಸಂಗೀತ ಕಚೇರಿಯನ್ನು ಆಯೋಜಿಸಲು ನಿರ್ಧರಿಸಿದ್ದೇವೆ. ಎಲ್ಲರಿಗೂ ಮುಕ್ತವಾಗಿದೆ ಎಂದಿದ್ದಾರೆ.

ಮಾರ್ಚ್ 11ರಂದು ದೇಶದಾದ್ಯಂತ ಬಿಡುಗಡೆಯಾಗಿದ್ದ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ಭಾರೀ ಬೆಂಬಲ ವ್ಯಕ್ತವಾಗಿತ್ತು. 1990ರ ದಶಕದಲ್ಲಿ ಕಾಶ್ಮೀರದಲ್ಲಿ ಪಂಡಿತ ಸಮುದಾಯದ ಮೇಲೆ ನಡೆದಿದ್ದ ಮಾರಕ ಹಿಂಸಾಚಾರದ ಕಥೆಯನ್ನು ಇಟ್ಟುಕೊಂಡು ವಿವೇಕ್ ಅಗ್ನಿಹೋತ್ರಿ ಸಿನಿಮಾ ನಿರ್ದೇಶಿಸಿದ್ದಾರೆ. ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಅತಿರಥ ಮಹಾರಥ ತಾರಬಳಗ ನಟಿಸಿದ್ದರು.

1991ರ ಸಮಯದಲ್ಲಿ ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯೆ ಹಾಗೂ ವಲಸೆಯನ್ನು ಸಿನಿಮಾವನ್ನು ಕಟ್ಟಿಕೊಡಲಾಗಿತ್ತು. ಹೀಗಾಗಿ ಈ ಸಿನಿಮಾ ಬಗ್ಗೆ ವಿರೋಧವೂ ವ್ಯಕ್ತವಾಗಿತ್ತು. ವಿರೋಧ ನಡುವೆಯೂ ಕಾಶ್ಮೀರ್ ಫೈಲ್ಸ್ ಗೆಲುವಿನ ನಗೆ ಬೀರಿತ್ತು.

ಇದನ್ನೂ ಓದಿ: ಮನೆಯಲ್ಲೇ ಕುಳಿತು ಕನ್ನಡದಲ್ಲೇ ನೋಡಿ 'ದಿ ಕಾಶ್ಮೀರ್ ಫೈಲ್ಸ್‌'! ಎಲ್ಲಿ, ಯಾವಾಗ ಸ್ಟ್ರೀಮಿಂಗ್ ಇಲ್ಲಿದೆ

ಹೊಸ ಫೈಲ್ಸ್​ ರೆಡಿ ಮಾಡ್ತಿದ್ದಾರೆ ವಿವೇಕ್​

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತೆ ಫೈಲ್‌ಗಳ ಹಿಂದೆ ಬಿದ್ದಿದ್ದಾರೆ. ಈ ಹಿಂದೆ ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಿಗೂಢ ಸಾವಿನ ಕುರಿತಾದ ಕಥೆಯನ್ನೊಳಗೊಂಡ ದಿ ತಾಷ್ಕೆಂಟ್ ಫೈಲ್ ಎಂಬ ಸಿನಿಮಾ ಮಾಡಿದ್ದರು. 2019ರಲ್ಲಿ ರಿಲೀಸ್ ಆದ ಈ ಸಿನಿಮಾ ಸುದ್ದಿ ಮಾಡಿದ್ರೂ, ಅಷ್ಟೊಂದು ಯಶಸ್ಸು ಗಳಿಸಲಿಲ್ಲ. ಆದರೆ ಕಾಶ್ಮೀರ್​ ಫೈಲ್ಸ್ ಜನರ ಮನ್ನಣೆಗಳಿಸಿದೆ. ಇದೀಗ ಮತ್ತೊಂದು ಫೈಲ್ಸ್ ಮಾಡುತ್ತಿದ್ದು, ಡೆಲ್ಲಿ ಫೈಲ್ಸ್ ಎಂದು ಹೆಸರಿಡಲಾಗಿದೆ.
Published by:Sandhya M
First published: