Modi: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಗ್ಗೆ ಮೋದಿ ಮೆಚ್ಚುಗೆ! ಈ Movie ನೋಡ್ತಾರಾ ಪ್ರಧಾನಿ?

'ದಿ ಕಾಶ್ಮೀರ್ ಫೈಲ್ಸ್' ವಿವಾದದ ಜೊತೆಗೆ ಜನರ ಮೆಚ್ಚುಗೆಯನ್ನೂ ಪಡೆಯುತ್ತಿರುವ ಸಿನಿಮಾ. ಬಾಕ್ಸ್ ಆಫೀಸ್‌ನಲ್ಲೂ ಸಹ ಸಖತ್ ಸದ್ದು ಮಾಡುತ್ತಿದೆ. ಈ ಸಿನಿಮಾ ಟೀಂ ಪ್ರಧಾನಿಯವರನ್ನು ಭೇಟಿಯಾಗಿದ್ದು ಏಕೆ? ಅವರ ನಡುವೆ ನಡೆದ ಮಾತುಕತೆ ಏನು? ಹಾಗಿದ್ರೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಪ್ರಧಾನಿಯವರು ನೋಡುತ್ತಾರಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ…

ಚಿತ್ರ ತಂಡದಿಂದ ಪ್ರಧಾನಿ ಭೇಟಿ

ಚಿತ್ರ ತಂಡದಿಂದ ಪ್ರಧಾನಿ ಭೇಟಿ

  • Share this:
ದೆಹಲಿ: ಸದ್ಯ ಬರೀ ಬಾಲಿವುಡ್ (Bollywood) ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲೇ (Indian Film Industry) ಸದ್ದು, ಸುದ್ದಿ ಮಾಡುತ್ತಿರುವ ಸಿನಿಮಾ (Cinema) ‘ದಿ ಕಾಶ್ಮೀರ್ ಫೈಲ್ಸ್’ (The Kashmir Files). 1990ರಲ್ಲಿ ಕಾಶ್ಮೀರಿ ಪಂಡಿತರ ನರಮೇಧದ ಸುತ್ತ ಕಥೆ ಹೆಣೆದಿರುವ ಈ ಸಿನಿಮಾವನ್ನು 'ದಿ ತಾಷ್ಕೆಂಟ್ ಫೈಲ್ಸ್' ಸಿನಿಮಾ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ನಿರ್ದೇಶನ (Direction) ಮಾಡಿದ್ದಾರೆ. ವಿವಾದದ ಜೊತೆ ಜೊತೆಗೆ ದೇಶಾದದ್ಯಂತ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್‌ನಲ್ಲೂ (Box Office) ಸದ್ದು ಮಾಡುತ್ತಿದೆ. ಇದೀಗ ಈ ಸಿನಿಮಾ ತಂಡ (Team) ಪ್ರಧಾನಿ (PM) ನರೇಂದ್ರ ಮೋದಿಯವರನ್ನು (Narendra Modi) ಭೇಟಿಯಾಗಿದೆ. ದೆಹಲಿಯಲ್ಲಿ (Delhi) ಪ್ರಧಾನಿಯವರನ್ನು ಭೇಟಿಯಾದ ಟೀಂ, ಅವರೊಂದಿಗೆ ಮಾತುಕತೆ ನಡೆಸಿದೆ. ಹಾಗಿದ್ರೆ ಸಿನಿಮಾ ಟೀಂ ಪ್ರಧಾನಿಯವರನ್ನು ಭೇಟಿಯಾಗಿದ್ದು ಏಕೆ? ಅವರ ನಡುವೆ ನಡುವೆ ನಡೆದ ಮಾತುಕತೆ ಏನು? ಹಾಗಿದ್ರೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಪ್ರಧಾನಿಯವರು ನೋಡುತ್ತಾರಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ…

ಕಾಶ್ಮೀರಿ ಪಂಡಿತರ ನರಮೇಧದ ಕಥೆ ಹೇಳುವ ಸಿನಿಮಾ

1990ರಲ್ಲಿ ಕಾಶ್ಮೀರಿ ಪಂಡಿತರ ನರಮೇಧದ ಸುತ್ತ ಕಥೆ ಹೆಣೆದಿರುವ ಕಥೆಯ ಸಿನಿಮಾವೇ ದಿ ಕಾಶ್ಮೀರ್ ಫೈಲ್ಸ್. ಜಮ್ಮು ಮತ್ತು ಕಾಶ್ಮೀರದಲ್ಲಿನ ಕಾಶ್ಮೀರಿ ಪಂಡಿತರ ಒತ್ತಾಯದ ವಲಸೆ ಹಾಗೂ ಆ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು, ಅನ್ಯಾಯವನ್ನು ಬಿಂಬಿಸುವ ಕಥಾ ಹಂದರವನ್ನು ಈ  ಸಿನಿಮಾ ಹೊಂದಿದೆ.

ಅಷ್ಟಕ್ಕೂ 1990ರಲ್ಲಿ ನಡೆದಿದ್ದೇನು?

1984ರಲ್ಲಿ ಫಾರೂಕ್ ಅಬ್ದುಲ್ಲಾ ಸರ್ಕಾರ ಉರುಳಿಸಿ ಅಧಿಕಾರಕ್ಕೆ ಬಂದ ಗುಲಾಮ್ ಮೊಹಮ್ಮದ್ ಷಾ ಅವರು ಸರ್ವಾಧಿಕಾರತ್ವದಿಂದ ಸರ್ಕಾರ ನಡೆಸಿದರು. ಇದನ್ನು ಕಂಡು ಅಲ್ಲಿದ್ದವರು ವಲಸೆ ಹೋಗಲು ಶುರು ಮಾಡಿದರು. 1987ರಲ್ಲಿ ಫಾರೂಕ್ ಅಬ್ದುಲ್ಲಾ ಅವರು, ಕಾಂಗ್ರೆಸ್ ಜೊತೆ ಸೇರಿ ಜೆಕೆಎಲ್‌ಎಫ್ ಶುರು ಮಾಡಿದರು.

ಫಾರೂಕ್ ರಾಜೀನಾಮೆ ಕೊಟ್ಟ ನಂತರ ರಾಷ್ಟ್ರಪತಿ ಆಳ್ವಿಕೆ ಅಸ್ತಿತ್ವಕ್ಕೆ ಬಂದು, ಧಾರ್ಮಿಕ ಸಂಘರ್ಷ, ಕೋಮು ದ್ವೇಷ ಹರಡಿತ್ತು.. 1990ರಿಂದ ಕಾಶ್ಮೀರಿ ಪಂಡಿತರ ಮೇಲೆ ಸಾಕಷ್ಟು ಹಿಂಸೆಗಳು ನಡೆಯುತ್ತಿದ್ದವು.

ಇದನ್ನೂ ಓದಿ: Gangubai Kathiawadi: 100 ಕೋಟಿ ಕ್ಲಬ್ ಸೇರಿದ 'ಗಂಗೂಬಾಯಿ'! ಇದುವರೆಗೂ ಸಿನಿಮಾ ಗಳಿಸಿದ್ದೆಷ್ಟು?

ಸಿನಿಮಾದ ಬಗ್ಗೆ ಪ್ರಧಾನಿ ಹೇಳಿದ್ದೇನು?

ನಿನ್ನೆ ಸಂಜೆ ದಿ ಕಾಶ್ಮೀರ್ ಫೈಲ್ ಸಿನಿಮಾ ಪ್ರಧಾನಿಯವರನ್ನು ಭೇಟಿಯಾಗಿದೆ. ನಿರ್ದೇಶಕ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ,  ನಿರ್ಮಾಪಕ ಅಭಿಷೇಕ್​ ಅಗರ್​ವಾಲ್​, ವಿವೇಕ್​ ಅಗ್ನಿಹೋತ್ರಿ ಪತ್ನಿ ಪಲ್ಲವಿ ಜೋಶಿ ಸೇರಿದಂತೆ ಚಿತ್ರದ ಪ್ರಮುಖರ ಈ ವೇಳೆ ಇದ್ದರು.

ಸಿನಿಮಾದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆಯ ಮಾತನ್ನು ಆಡಿದ್ದಾರೆ ಅಂತ ಚಿತ್ರ ತಂಡ ಹೇಳಿದೆ. ದಂಗೆಯ ಸಮಯದಲ್ಲಿ ಕಾಶ್ಮೀರಿ ಹಿಂದೂಗಳ ವಲಸೆಯ ಬಗ್ಗೆ ಚಲನಚಿತ್ರ ಮಾಡಲು ಧೈರ್ಯಮಾಡಿದಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೇನೆ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದರು ಎನ್ನಲಾಗಿದೆ.

ಚಿತ್ರ ತಂಡದ ಸಂತಸ

ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಅವರು ಪ್ರಧಾನಿಯವರನ್ನು ಅಭಿನಂದಿಸಿದರು. ಸಾಂದರ್ಭಿಕವಾಗಿ ಅಲ್ಲ, ಒಬ್ಬ ಪ್ರಧಾನಿ ಚಲನಚಿತ್ರವನ್ನು ಮೆಚ್ಚುತ್ತಾರೆ ಆದರೆ ಇದು ತಂಡಕ್ಕೆ ಅದ್ಭುತವಾದ ಸಾಧನೆಯಾಗಿದೆ ಅಂತ ಅವರು ಹೇಳಿ ಕೊಂಡಿದ್ದಾರೆ.

ಇನ್ನು ಇದಕ್ಕೆ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಭಾರತದ ಅತ್ಯಂತ ಸವಾಲಿನ ಸತ್ಯವನ್ನು ಇಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡಲು ಧೈರ್ಯ ತೋರಿಸಿದ್ದಾಗಿ ನಿಮಗೆ ಧನ್ಯವಾದಗಳು’ ಎಂದು ನಿರ್ಮಾಪಕರಿಗೆ ಅವರು ಧನ್ಯವಾದ ತಿಳಿಸಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲೂ ಸದ್ದು ಮಾಡುತ್ತಿರುವ ಸಿನಿಮಾ

ಮತ್ತೊಂದೆಡೆ, ಒಮ್ಮತದ ಸಕಾರಾತ್ಮಕ ವರದಿಗಳನ್ನು ಪಡೆದ 'ದಿ ಕಾಶ್ಮೀರ್ ಫೈಲ್ಸ್' ಕೂಡ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಬ್ಯುಸಿನೆಸ್ ಮಾಡುತ್ತಿದೆ. ಚಿತ್ರದ ಎರಡು ದಿನದ ಸಂಖ್ಯೆಗಳು ಮೊದಲ ದಿನಕ್ಕಿಂತ ದೊಡ್ಡದಾಗಿದೆ ಎಂದು ನಿರೀಕ್ಷಿಸಲಾಗಿದೆ, ಪ್ರೋತ್ಸಾಹಿಸುವ ಮೌತ್ ಟಾಕ್‌ಗೆ ಧನ್ಯವಾದಗಳು.

ಇದನ್ನೂ ಓದಿ: Modi: ಅಮ್ಮನೊಂದಿಗೆ ಅಪರೂಪದ ಕ್ಷಣ ಕಳೆದ ಮೋದಿ! ಮಗನಿಗೆ ಊಟ ಬಡಿಸಿ, ಆಶೀರ್ವದಿಸಿದ ತಾಯಿ

ಸಿನಿಮಾದಲ್ಲಿದ್ದಾರೆ ಘಟಾನುಘಟಿ ಕಲಾವಿದರು

ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್ ಮತ್ತು ಪಲ್ಲವಿ ಜೋಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Published by:Annappa Achari
First published: