• Home
  • »
  • News
  • »
  • entertainment
  • »
  • The Kashmir Files: ಫಸ್ಟ್​ ಡೇ ಕಲೆಕ್ಷನ್​ ನೋಡಿ ಫ್ಲಾಪ್​ ಅಂದ್ರು, ಆಮೇಲೆ ನಡೆದಿದ್ದು ಜಾದೂ! ಎಲ್ರೂ ಈ ಸಿನಿಮಾ ನೋಡ್ಲೇ ಬೇಕು..

The Kashmir Files: ಫಸ್ಟ್​ ಡೇ ಕಲೆಕ್ಷನ್​ ನೋಡಿ ಫ್ಲಾಪ್​ ಅಂದ್ರು, ಆಮೇಲೆ ನಡೆದಿದ್ದು ಜಾದೂ! ಎಲ್ರೂ ಈ ಸಿನಿಮಾ ನೋಡ್ಲೇ ಬೇಕು..

ದಿ ಕಾಶ್ಮೀರ್​ ಫೈಲ್ಸ್​ ಪೋಸ್ಟರ್​

ದಿ ಕಾಶ್ಮೀರ್​ ಫೈಲ್ಸ್​ ಪೋಸ್ಟರ್​

ತಾ ಮುಂದು ನಾ ಮುಂದು ಅಂತ ಜನ ಈ ಸಿನಿಮಾ ನೋಡುತ್ತಿದ್ದಾರೆ. ರಿಲೀಸ್​ ಆದ ಚಿತ್ರಮಂದಿರಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ಬಗ್ಗೆ ಪ್ರೇಕ್ಷಕರು ಆಸಕ್ತಿ ತೋರಿಸುತ್ತಿದ್ದಾರೆ.

  • Share this:

ಗಲ್ಲಾಪೆಟ್ಟಿಗೆಯಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ (The Kashmir Files Movie) ಭಾರಿ ಕಮಾಲ್​ ಮಾಡಿದೆ. ರಿಲೀಸ್​ ಆದ ದಿನ ಜನ ಈ ಚಿತ್ರವನ್ನು ನೋಡಲು ಚಿತ್ರಮಂದಿರಕ್ಕೆ ಬರಲಿಲ್ಲ. ಸಿನಿಮಾ ಫ್ಲಾಪ್​ ಅಂತಾಣೆ ಬಿಂಬಿಸಲಾಗಿತ್ತು. ಇದಾದ ಬಳಿಕ ಒಬ್ಬಾರದ ಮೇಲೆ ಒಬ್ಬರು ಈ ಸಿನಿಮಾವನ್ನು ನೋಡಲು ಶುರುಮಾಡಿದರು. ಮೊದಲ ದಿನ ಈ ಸಿನಿಮಾ ಈ ಗಳಿಸಿದ್ದು ಕೇವಲ 3.5 ಕೋಟಿ ರೂಪಾಯಿ. ಸಿನಿಮಾ ಸೋತಿದೆ ಎಂದು ಸಿನಿಮಾ ಪಂಡಿತರು ಹೇಳಿದ್ದರು. ಆದರೆ, ಎರಡನೇ ದಿನ ಈ ಸಿನಿಮಾ ಬರೋಬ್ಬರಿ 8.5 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಜೊತೆಗೆ ಸಿಕ್ಕಾಪಟ್ಟೆ ಒಳ್ಳೆಯ ರೆಸ್ಪಾನ್ಸ್​ ಪಡೆದುಕೊಂಡಿದೆ. ತಾ ಮುಂದು ನಾ ಮುಂದು ಅಂತ ಜನ ಈ ಸಿನಿಮಾ ನೋಡುತ್ತಿದ್ದಾರೆ. ರಿಲೀಸ್​ ಆದ ಚಿತ್ರಮಂದಿರಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ಬಗ್ಗೆ ಪ್ರೇಕ್ಷಕರು ಆಸಕ್ತಿ ತೋರಿಸುತ್ತಿದ್ದಾರೆ. ಮೂರನೇ ದಿನ ಕೂಡ ದೇಶದೆಲ್ಲೆಡೆ ಹೌಸ್​ಫುಲ್​ ಪ್ರದರ್ಶನ ಕಂಡಿದೆ. ಜನರು ಮುಗಿಬಿದ್ದು ಈ ಚಿತ್ರವನ್ನು ನೋಡುತ್ತಿದ್ದಾರೆ.


ಹಲವು ರಾಜ್ಯಗಳಲ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿ!


‘ದಿ ಕಾಶ್ಮೀರ್​ ಫೈಲ್ಸ್’ ಸಿನಿಮಾದ ಬಗ್ಗೆ ಚರ್ಚೆ ನಿಧಾನಕ್ಕೆ ಕಾವೇರುತ್ತಿರುವ ಹೊತ್ತಿನಲ್ಲಿಯೇ ಕರ್ನಾಟಕದಲ್ಲಿ ಸಿನಿಮಾಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ದೊರೆತಿದೆ. ವಿವೇಕ್​ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾಗೆ ನಿರ್ಮಾಪಕ ಅಭಿಷೇಕ್​ ಅಗರ್​ವಾಲ್ ಅವರು ಬಂಡವಾಳ ಹೂಡಿದ್ದಾರೆ. ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಮಾರ್ಚ್​ 13 ರಂದು ಸಿನಿಮಾ ವೀಕ್ಷಿಸಿದ ಸಿಎಂ ಬಸವರಾಜ ಬೊಮ್ಮಾಯಿ ಸಿನಿಮಾಕ್ಕೆ ರಾಜ್ಯದ ಸಿನಿಮಾ ಮಂದಿರಗಳಲ್ಲಿ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.


ಇದನ್ನೂ ಓದಿ: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಗ್ಗೆ ಮೋದಿ ಮೆಚ್ಚುಗೆ! ಈ Movie ನೋಡ್ತಾರಾ ಪ್ರಧಾನಿ?


ಕಾಶ್ಮೀರಿ ಪಂಡಿತರ ಹತ್ಯೆಯ  ಕಥೆ!


‘ದಿ ಕಾಶ್ಮೀರ್ ಫೈಲ್ಸ್‘ ಸಿನಿಮಾವು 1990 ರಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆಯ ಕುರಿತಾದ ಕತೆಯನ್ನು ಒಳಗೊಂಡಿದೆ. ಕಾಶ್ಮೀರಿ ಪಂಡಿತರು ಏಕೆ ಮತ್ತು ಹೇಗೆ ಜಮ್ಮು ಕಾಶ್ಮೀರ ಬಿಟ್ಟು ತೆರಳಿದರು ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಈ ಹಿಂದೆಯೂ ಇದೆ ರೀತಿಯ ಕಥೆಗಳನ್ನು ಹೊಂದಿರುವ ಸಿನಿಮಾಗಳು ಬಂದಿವೆ. ಆದರೂ, ದಿ ಕಾಶ್ಮೀರಿ ಫೈಲ್ಸ್ ಜನರ ಗಮನ ಸೆಳೆದಿದೆ. ಈ ಸಿನಿಮಾವನ್ನು ‘ಪ್ರೊಪಾಗಾಂಡ’ ಎಂದೂ ಸಹ ಕರೆಯಲಾಗುತ್ತಿದೆ.


ಇದನ್ನೂ ಓದಿ : ಕ್ಷಮೆ ಕೋರಿದ್ದೇಕೆ ಪ್ರಕಾಶ್ ಬೆಳವಾಡಿ? ಸಿನಿಮಾಗೂ-ಸಾರಿಗೂ ಏನು ಲಿಂಕ್​? ನೀವೇ ನೋಡಿ


ಶನಿವಾರ (ಮಾ.12) ಸಂಜೆ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ತಂಡವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತ್ತು. ಭೇಟಿ ಸಮಯದಲ್ಲಿ ಈ ಸಿನಿಮಾ ಬಗ್ಗೆ ಮೋದಿ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಈ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಚಿತ್ರತಂಡದವರು ಪೋಸ್ಟ್​ ಮಾಡಿಕೊಂಡಿದ್ದಾರೆ. ಆ ಬಳಿಕ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಬಗ್ಗೆ ಜನರಿಗೆ ಆಸಕ್ತಿ ಹೆಚ್ಚಿದೆ. ಅನುಪಮ್​ ಖೇರ್, ದರ್ಶನ್​ ಕುಮಾರ್​, ಪಲ್ಲವಿ ಜೋಶಿ, ಪ್ರಕಾಶ್​ ಬೆಳವಾಡಿ, ಮಿಥುನ್​ ಚಕ್ರವರ್ತಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.


ಹಿಂದು-ಮುಸ್ಲಿಂ ನಡುವೆ ದ್ವೇಷ ಹೆಚ್ಚಿಸುವ ಕಾರ್ಯವನ್ನು ಮಾಡಲೆಂದೇ ಈ ಸಿನಿಮಾ ನಿರ್ಮಿಸಲಾಗಿದೆ. ಸಿನಿಮಾದಲ್ಲಿ ಒಂದು ಕೋಮನ್ನು ಕೆಟ್ಟವರೆಂದು ಇನ್ನೊಂದು ಕೋಮನ್ನು ಅಮಾಯಕರೆಂದು ಚಿತ್ರಿಸಲಾಗಿದೆ ಎಂಬ ಆರೋಪಗಳು ಸಹ ಕೇಳಿ ಬರುತ್ತದೆ.

Published by:ವಾಸುದೇವ್ ಎಂ
First published: