• Home
 • »
 • News
 • »
 • entertainment
 • »
 • Dollu Movie: ನಿಮ್ಮ ಮನೆಗೇ ಬರುತ್ತಿದೇೆ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ, ಅಮೆಜಾನ್ ಪ್ರೈಮ್‌ನಲ್ಲಿ ನೋಡಿ ಡೊಳ್ಳು!

Dollu Movie: ನಿಮ್ಮ ಮನೆಗೇ ಬರುತ್ತಿದೇೆ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ, ಅಮೆಜಾನ್ ಪ್ರೈಮ್‌ನಲ್ಲಿ ನೋಡಿ ಡೊಳ್ಳು!

ಡೊಳ್ಳು ಸಿನಿಮಾ

ಡೊಳ್ಳು ಸಿನಿಮಾ

ಈಗ ನಿರ್ದೇಶಕ ಪವನ್ ಒಡೆಯರ್ ತಮ್ಮ ಚೊಚ್ಚಲ ನಿರ್ಮಾಣದ ಡೊಳ್ಳು ಸಿನಿಮಾ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಜೊತೆಗೆ ಅಂತರಾಷ್ಟ್ರೀಯ ಮನ್ನಣೆ ಪಡೆದುಕೊಂಡಿದೆ. ಡೊಳ್ಳು ಸಿನಿಮಾ ಈಗ ಒಟಿಟಿಗೂ ಲಗ್ಗೆ ಇಟ್ಟಿದೆ.

 • News18 Kannada
 • Last Updated :
 • Karnataka, India
 • Share this:

  ಜಾನಪದ (Folklore) ಈ ನೆಲದ ಸೊಗಡು (Sogadu). ಬಾಯಿಂದ ಬಾಯಿಗೆ, ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದಿರುವ ವಿಶಿಷ್ಟ ಸಂಪ್ರದಾಯಗಳಲ್ಲಿ (Unique Tradition) ಜಾನಪದ ಒಂದಾಗಿದೆ. ಜನರ (People) ಬಾಯಿಂದ ಬಾಯಿಗೆ ಹರಿದು ಬಂದಿದೆ ಜಾನಪದ. ಒಂದೊಂದು ಪ್ರದೇಶ ಒಂದೊಂದು ರೀತಿಯ ವಿಶೇಷತೆ ಹೊಂದಿರುತ್ತದೆ. ಜಾನಪದದಲ್ಲಿ ಗೀಗೀ ಪದ, ಜಾನಪದ ಗೀತೆ, ಭಾವಗೀತೆ, ಹೆಜ್ಜೆ ಕುಣಿತ, ಡೊಳ್ಳು (Dollu) ಕುಣಿತ, ಗೆಜ್ಜೆ ಹೀಗೆ ಹಲವು ತರಹದ ಸೊಗಡು ಜನಮಾನಸದಲ್ಲಿ ಬೆರೆತಿದೆ. ಇದು ಕರುನಾಡಿನ ಸೌಂದರ್ಯ ಮತ್ತು ಜಾನಪದದ ವೈಶಾಲ್ಯತೆಯನ್ನು ಎತ್ತಿ ಹಿಡಿದಿದೆ. ಏನಿದು ಇಷ್ಟೊಂದು ಜಾನಪದದ ಬಗ್ಗೆ ಪೀಠಿಕೆ ಅಂತೀರಾ ಅದಕ್ಕೆ ಮುಖ್ಯ ಹಾಗೂ ಹೆಮ್ಮೆ ಪಡುವ ಕಾರಣವಿದೆ.


  ಡೆಲ್ಲಿಗೆ ಹೋದ್ರೂ ಡೊಳ್ಳಿಗೆ ಒಂದೇ ಪೆಟ್ಟು


  ಡೆಲ್ಲಿಗೆ ಹೋದ್ರೂ ಡೊಳ್ಳಿಗೆ ಒಂದೇ ಪೆಟ್ಟು ಎಂಬ ಗಾದೆ ಮಾತು ಪ್ರಚಲಿತವಾಗಿದೆ. ಡೊಳ್ಳಿನ ನಾದ ಅದರ ಲಯ ತಾಳ ಮತ್ತು ಸದ್ದಿಗೆ ಕುಣಿಯದವರಿಲ್ಲ, ತಲೆ ಬಾಗದವರಿಲ್ಲ. ಡೊಳ್ಳಿನ ಬಡಿತದ ನಡುವೆ ನಿರ್ದಿಷ್ಟ ಅಂತರದ ಲಯ ಇದ್ದೇ ಇದೆ. ನಾವು ಸಾಮಾನ್ಯವಾಗಿ ಹಬ್ಬ, ಸಮಾರಂಭ, ರಾಷ್ಟ್ರ ಹಬ್ಬಗಳಲ್ಲಿ ಜಾನಪದ ವಿವಿಧ ಪ್ರದರ್ಶನಗಳಿಗೆ ಹೆಚ್ಚು ಅವಕಾಶ ನೀಡಲಾಗುತ್ತದೆ.


  ಜಾನಪದದಲ್ಲಿ ಡೊಳ್ಳು ಕುಣಿತವನ್ನೂ ಸಹ ನಾವು ದಸರಾ, ದೀಪಾವಳಿ ಹೀಗೆ ಹಬ್ಬಗಳ ಸಂದರ್ಭಗಳಲ್ಲಿ ಹಳ್ಳಿ ಮತ್ತು ನಗರಗಳಲ್ಲಿ ಕಾಣುತ್ತಿದ್ದೇವೆ. ಈ ಹಿಂದೆ ಸದೃಢ ಮೈಕಟ್ಟಿನ ಪುರುಷರಿಗಷ್ಟೇ ಡೊಳ್ಳು ಕುಣಿತ ಮೀಸಲು ಎಂಬ ನಂಬಿಕೆ ಇತ್ತು. ಈಗ ಆ ನಂಬಿಕೆ ಹುಸಿಯಾಗಿದೆ. ಯಾಕಂದ್ರೆ ಮಹಿಳೆಯರೂ ಸಹ ಡೊಳ್ಳು ಕುಣಿತ ಆಡುತ್ತಾರೆ.


  ಇದನ್ನೂ ಓದಿ: ಆಸ್ಕರ್ ಅಂಗಳಕ್ಕೆ ಹೋಗುತ್ತಾ ಕಾಂತಾರ? ಅಭಿಮಾನಿಗಳಿಂದ ಶುರುವಾಗಿದೆ ಕ್ಯಾಂಪೇನ್!


  ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ‘ಡೊಳ್ಳು’ ಸಿನಿಮಾ


  ಸ್ಯಾಂಡಲ್ ವುಡ್ ಪ್ರತಿಭಾವಂತ ನಿರ್ದೇಶಕ ಪವನ್ ಒಡೆಯರ್, ಗೂಗ್ಲಿ, ರಣವಿಕ್ರಮ, ನಟ ಸಾರ್ವಭೌಮ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಕೊಡುಗೆ ನೀಡಿದ್ದಾರೆ. ನಿರ್ದೇಶನ, ಬರವಣಿಗೆ ಜೊತೆಗೆ ಸಿನಿಮಾ ನಿರ್ಮಾಣ ಕೂಡ ಆರಂಭಿಸಿದ್ದಾರೆ. ನಿರ್ದೇಶಕ ಪವನ್ ಒಡೆಯರ್ ಇವರು ನಿರ್ಮಾಣ ಮಾಡಿದ ಮೊದಲ ಸಿನಿಮಾದಲ್ಲೇ ಸಂಚಲನ ಸೃಷ್ಟಿಸಿದ್ದರು.


  ಅಂತರಾಷ್ಟ್ರೀಯ ಮನ್ನಣೆ ಪಡೆದುಕೊಂಡ ‘ಡೊಳ್ಳು’ ಸಿನಿಮಾ


  ಈಗ ನಿರ್ದೇಶಕ ಪವನ್ ಒಡೆಯರ್, ತಮ್ಮ ಚೊಚ್ಚಲ ನಿರ್ಮಾಣದ ‘ಡೊಳ್ಳು’  ಸಿನಿಮಾ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಜೊತೆಗೆ ಅಂತರಾಷ್ಟ್ರೀಯ ಮನ್ನಣೆ ಪಡೆದುಕೊಂಡಿದೆ. ‘ಡೊಳ್ಳು’ ಸಿನಿಮಾ ಹಲವು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಕನ್ನಡಿಗರ ಕೀರ್ತಿ ಹೆಚ್ಚಿಸಿತ್ತು.


  ಒಟಿಟಿಗೂ ಲಗ್ಗೆಯಿಟ್ಟ ‘ಡೊಳ್ಳು’ ಸಿನಿಮಾ


  ಎಲ್ಲರ ಹೆಮ್ಮೆಗೆ ಪಾತ್ರವಾಗಿರುವ ‘ಡೊಳ್ಳು’ ಸಿನಿಮಾ ಚಿತ್ರ ಮಂದಿರದಲ್ಲಿ ಪ್ರದರ್ಶನಗೊಂಡು ಎಲ್ಲಾ ಸಿನಿ ಪ್ರೇಮಿಗಳ ಮನ ಗೆದ್ದಿತ್ತು. ಇದೀಗ ‘ಡೊಳ್ಳು’ ಸಿನಿಮಾ ಒಟಿಟಿಗೂ ಲಗ್ಗೆ ಇಟ್ಟಿದೆ. ಇದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಆಗಿದೆ.


  ‘ಡೊಳ್ಳು’ ಸಿನಿಮಾ ಹೆಸರೇ ಹೇಳುವಂತೆ ಡೊಳ್ಳು ಕುಣಿತದ ಸುತ್ತಮುತ್ತ ಹಾಗೂ ನಮ್ಮ ನೆಲದ ಜಾನಪದ ಸೊಗಡನ್ನು ಮುಖ್ಯವಾಗಿ ಇರಿಸಿ ಹೆಣೆದ ಕಥೆ ಇದಾಗಿದೆ. ಜಾನಪದ ಸೊಗಡೇ ‘ಡೊಳ್ಳು’ ಸಿನಿಮಾ ಚಿತ್ರದ ಜೀವಾಳ ಆಗಿದೆ. ಒಡೆಯರ್ ಮೂವೀಸ್ ಬ್ಯಾನರ್ ನಲ್ಲಿ ನಿರ್ಮಾಣವಾದ ಈ ಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದಿದೆ.


  ಸಾಗರ್ ಪುರಾಣಿಕ್ ನಿರ್ದೇಶನದ ಮೊದಲ ಸಿನಿಮಾ ‘ಡೊಳ್ಳು’ ಸಿನಿಮಾ


  ‘ಡೊಳ್ಳು’ ಸಿನಿಮಾ ಈಗಾಗಲೇ ಹಲವು ಅಂತರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡಿದೆ. ಮಾಮೂಲಿ ಕಮರ್ಶಿಯಲ್ ಸಿನಿಮಾಗಳ ನಡುವೆ ಜಾನಪದ ಕಲೆಯ ಕಾಳಜಿ ಕುರಿತು ನಿರ್ಮಾಣ ಮಾಡಲಾದ ‘ಡೊಳ್ಳು’ ಸಿನಿಮಾ ಈ ಚಿತ್ರ ಸಾಗರ್ ಪುರಾಣಿಕ್ ನಿರ್ದೇಶನದ ಮೊದಲ ಸಿನಿಮಾ ಆಗಿದೆ.


  ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಿರುತೆರೆ ನಟ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ ನಟಿಸಿದ್ದಾರೆ. ಉಳಿದಂತೆ ಬಾಬು ಹಿರಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್ ಒಳಗೊಂಡ ಕಲಾವಿದರು ನಟಿಸಿದ್ದಾರೆ.


  ಈಗ ಅಮೆಜಾನ್ ಪ್ರೈಮ್ ನಲ್ಲಿ ಡೊಳ್ಳು ಸಿನಿಮಾ ಲಭ್ಯವಿದ್ದು ನೋಡಬಹುದು. ಅನಂತ್ ಕಾಮತ್ ಎಂ ಸಂಗೀತ, ಅಭಿಲಾಶ್ ಕಲಥಿ ಕ್ಯಾಮೆರಾ ನಿರ್ದೇಶನ, ಬಿ ಎಸ್ ಕೆಂಪರಾಜು ಸಂಕಲನ ಡೊಳ್ಳು ಚಿತ್ರಕ್ಕಿದೆ.


  ಇದನ್ನೂ ಓದಿ: Kantara-Rishab Shetty: ನಾನು ನನ್ನ ಮಗಳು! ರಾಧ್ಯ ಜೊತೆ ಫೋಟೋ ಹಂಚಿಕೊಂಡ ರಿಷಬ್


  ವಿವಿಧ ಸಮುದಾಯದ ಜನರು ತಂಡ ರಚಿಸಿಕೊಂಡು ಡೊಳ್ಳು ಕುಣಿತ ಪ್ರದರ್ಶನ ನೀಡುವ ಪದ್ಧತಿ ಇದೆ. ಡೊಳ್ಳು ಮೇಳಗಳು ಹಲವು ಭಾಗಗಳಲ್ಲಿ ನಡೆಯುತ್ತವೆ. ಇನ್ನು ಈ ಡೊಳ್ಳು ಕುಣಿತದ ಹಿಂದೆ ಹಲವು ದಂತ ಕಥೆಗಳಿವೆ.

  Published by:renukadariyannavar
  First published: