ಪುಸ್ತಕ ಬಿಡುಗಡೆಗೂ ಬಂತು ಟ್ರೇಲರ್: ಕುತೂಹಲ ಮೂಡಿಸುವ ಮರ್ಡರ್ ಮಿಸ್ಟರಿ ಕಾದಂಬರಿ

news18
Updated:September 3, 2018, 7:45 PM IST
ಪುಸ್ತಕ ಬಿಡುಗಡೆಗೂ ಬಂತು ಟ್ರೇಲರ್: ಕುತೂಹಲ ಮೂಡಿಸುವ ಮರ್ಡರ್ ಮಿಸ್ಟರಿ ಕಾದಂಬರಿ
news18
Updated: September 3, 2018, 7:45 PM IST
-ನ್ಯೂಸ್ 18 ಕನ್ನಡ

ಸಿನಿಮಾ ಬಿಡುಗಡೆಗೆ ಮುನ್ನಾ ಟ್ರೇಲರ್​ ಬಿಡುಗಡೆಯಾಗುವುದು ಸಾಮಾನ್ಯ. ಚಿತ್ರದ ಮೇಲೆ ಕುತೂಹಲ ಮೂಡಿಸಲು ಸಾಮಾನ್ಯವಾಗಿ ಸಿನಿಮಾದ ಕುತೂಹಲಕಾರಿ ಸನ್ನಿವೇಶಗಳ ವಿಡಿಯೋ ತುಣುಕುಗಳನ್ನು ಟ್ರೇಲರ್​ನಲ್ಲಿ ತೋರಿಸಲಾಗುತ್ತದೆ. ಆದರೆ ಇದೇ ಮೊದಲ ಬಾರಿ ಪುಸ್ತಕವೊಂದರ ಬಿಡುಗಡೆಗೆ ಟ್ರೇಲರ್​ ಮಾಡಲಾಗಿದೆ.

ಭಾರತದ ಖ್ಯಾತ ಇಂಗ್ಲೀಷ್ ಕಾದಂಬರಿಕಾರ ಚೇತನ್ ಭಗತ್ ಬರೆದಿರುವ 'ಗರ್ಲ್​ ಇನ್ ರೂಮ್ 105' ಪುಸ್ತಕಕ್ಕಾಗಿ ಟ್ರೇಲರ್ ನಿರ್ಮಿಸಲಾಗಿದೆ. ಈ ಟ್ರೇಲರ್​ನಲ್ಲಿ ತಮ್ಮ ಹೊಸ ಕಾದಂಬರಿಯ ಸನ್ನಿವೇಶಗಳನ್ನು ಮತ್ತು ಪಾತ್ರಗಳ ಬಗ್ಗೆ ತಿಳಿಸಲಾಗಿದೆ.

ಇಂತಹದೊಂದು ಪ್ರಯತ್ನ ವಿಶ್ವದಲ್ಲೇ ಇದೇ ಮೊದಲ ಬಾರಿ ಮಾಡಲಾಗಿದೆ ಎಂದು ಟ್ವೀಟ್​ ಮಾಡುವ ಮೂಲಕ ಲೇಖಕ ಚೇತನ್ ಭಗತ್ ತಿಳಿಸಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ಈ ಕಾದಂಬರಿ ಇದೇ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಮೇಲ್ನೋಟಕ್ಕೆ ಇದು ಹಿಂದೂ-ಮುಸ್ಲಿಂ ನಡುವಿನ ಪ್ರೇಮ ಕತೆಯಾಗಿದೆ ಎಂದೆನಿಸಿದರೂ ಟ್ರೇಲರ್​ನಲ್ಲೇ ಇದು ಪ್ರೇಮ ಕಹಾನಿ ಮಾತ್ರವಲ್ಲ ಎಂದು ತಿಳಿಸಲಾಗಿದೆ.  ಕೇಶವ್ ಮತ್ತು ಝಾರಾ ನಡುವೆ ನಡೆಯುವ ಪ್ರೀತಿ ಪ್ರೇಮ ಕಾಮದ ಕಥೆ ಇದರಲ್ಲಿದ್ದು, ಪುಸ್ತಕ ಓದುತ್ತಾ ಹೋದಂತೆ ಕಥೆಯು ಮತ್ತೊಂದು ಮಜಲನ್ನು ತಲುಪುತ್ತದೆ. ನಂತರ ಸಾವು ನೋವಿನ ಮರ್ಡರ್ ಮಿಸ್ಟರಿಯ ಕಥೆಯ ಅನಾವರಣವಾಗಲಿದೆ ಎಂದು ಲೇಖಕರು ತಿಳಿಸಿದ್ದಾರೆ.

ಚೇತನ್ ಭಗತ್ ಬರೆದಿರುವ ಐದು ಕಾದಂಬರಿಗಳು ಈ ಹಿಂದೆ ಸಿನಿಮಾಗಳಾಗಿದ್ದು, ಈ ಬಾರಿ ಅವರೇ ತಮ್ಮ ಪುಸ್ತಕಕ್ಕೆ ಟ್ರೇಲರ್ ಮಾಡಿರುವುದು ವಿಶೇಷವಾಗಿದೆ. ಬಾಲಿವುಡ್​ನ ಬ್ಲಾಕ್ ಬ್ಲಸ್ಟರ್ '3 ಈಡಿಯಟ್ಸ್' (3 ಈಡಿಯಟ್ಸ್ ಕಾದಂಬರಿ), 'ಹಲೋ'( ಒನ್ ನೈಟ್ ಅಟ್ ಕಾಲ್​ಸೆಂಟರ್), 'ಕಹಿ ಪೊ ಚೆ' ( 3ಮಿಸ್ಟೇಕ್ಸ್ ಆಫ್ ಮೈ ಲೈಫ್), '2 ಸ್ಟೇಟ್ಸ್' (2 ಸ್ಟೇಟ್ಸ್), 'ಹಾಫ್ ಗರ್ಲ್​ಫ್ರೆಂಡ್' ( ಹಾಫ್ ಗರ್ಲ್​ಫ್ರೆಂಡ್) ಸಿನಿಮಾಗಳು ಚೇತನ್ ಭಗತ್ ಬರೆದಿರುವ ಕಾದಂಬರಿ ಆಧರಿಸಿದ ಚಿತ್ರಗಳಾಗಿತ್ತು.

ಇದೀಗ 'ಗರ್ಲ್​ ಇನ್ ರೂಮ್ 105' ಪುಸ್ತಕಕ್ಕೆ ಟ್ರೇಲರ್ ಮಾಡಿರುವುದರಿಂದ ಚಿತ್ರದ ಅನುಭವ ಸಿನಿ ಪ್ರಿಯರಿಗೆ ಲಭಿಸಿದಂತಾಗಿದೆ. ಹೀಗಾಗಿ ಈ ಕಾದಂಬರಿ ಕೂಡ ಮುಂದಿನ ದಿನಗಳಲ್ಲಿ ಸಿನಿಮಾವಾಗುವ ಸಾಧ್ಯತೆಯಿದೆ.
Loading...

First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ