Diganth Exclusive: ಅಷ್ಟಕ್ಕೂ ದಿಗಂತ್ ಈಗ ಹೇಗಿದ್ದಾರೆ, ಇಲ್ಲಿದೆ ಎಕ್ಸ್​ಕ್ಲೂಸಿವ್ ಫೋಟೋ

ಸ್ಯಾಂಡಲ್​ವುಡ್​ ನಟ ದುದ್​ ಪೇಡಾ ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಗೋವಾ ಪ್ರವಾಸದಲ್ಲಿರುವ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಿಗಂತ್

ದಿಗಂತ್

  • Share this:
ಸ್ಯಾಂಡಲ್​ವುಡ್​ ನಟ ದುದ್​ ಪೇಡಾ ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಗೋವಾ ಪ್ರವಾಸದಲ್ಲಿರುವ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋವಾದ ಸಮುದ್ರದ ತೀರದಲ್ಲಿ ಸಮ್ಮರ್​ ಶಾಟ್ ಮಾಡುವ ವೇಳೆ ಈ ಅಚಾತುರ್ಯ ನಡೆದಿದೆ. ಕುಟುಂಬದ ಜೊತೆ ನಟ ದಿಗಂತ್ ಗೋವಾ ಪ್ರವಾಸಕ್ಕೆ (Goa Tour) ತೆರಳಿದ್ದರು. ಈ ವೇಳೆ ದಿಗಂತ್ (Actor Diganth) ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ. HAL ಏರ್ ಪೋರ್ಟ್ ಮೂಲಕ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. iನ್ನು, ಸದ್ಯದ ಮಾಹಿತಿ ಪ್ರಕಾರ ಬೆನ್ನು ಮೂಳೆ , ಮತ್ತು ಸ್ಪೈನಲ್ ಕಾರ್ಡ್ ಗೆ ಗಂಭೀರ ಪೆಟ್ಟು ಬಿದ್ದಿದೆ ಎಂದು ತಿಳಿದುಬಂದಿದೆ. ಹೀಗಾಗಿ ಅಪರೇಷನ್ ಮಾಡಲೇ ಬೇಕು ಎಂದು ಗೋವಾ ವೈದ್ಯರು ಹೇಳಿದ್ದಾರೆ.

ದಿಗಂತ್ ಗೆ ಸಂಜೆಗೆ ಚಿಕ್ಕ ಆಪರೇಷನ್:

ಗೋವಾ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲು ಬೇಕಾದ ವ್ಯವಸ್ಥೆ ಇಲ್ಲದ ಕಾರಣ ಅವರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ದಿಗಂತ್ ಸಹೋದರ ಅಕಾಶ್ ಖಾಸಗಿ ಜೆಟ್ ಮೂಲಕ ದಿಗಂತ್ ಅವರನ್ನು ಕರೆದುಕೊಂಡು ಬರಲಾಗಿದ್ದು, ಜೊತೆಯಲ್ಲಿ ದಿಗಂತ್ ಪತ್ನಿ ಐದ್ರಿತಾ ಸಹ ಇದ್ದಾರೆ. ಬೆಂಗಳೂರಿನಲ್ಲಿ ವೈದ್ಯರು ದಿಗಂತ್ ಗೆ ಇಂದು ಸಂಜೆಗೆ ಆಪರೇಷನ್ ಮಾಡಲಾಗುತ್ತದೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಆಪರೇಷನ್ ಮಾಡೊಕೆ ಎಲ್ಲಾ ಸಿದ್ದತೆಗಳನ್ನು ಮಣಿಪಾಲ್ ವೈದ್ಯರು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

ದಿಗಂತ್​ ಅವರನ್ನು ಆಸ್ಪತ್ರೆಗೆ ದಾಖಲಿಸುತ್ತಿರುವ ಪೋಟೋ


ಕೆಲವೇ ಕ್ಷಣಗಳಲ್ಲಿ ಚಿಕಿತ್ಸೆ ಆರಂಭ:

ಇನ್ನು, ನಟ ದಿಗಂತ್ ಅವರಿಗೆ ಸಮ್ಮರ್​ ಶಾಟ್ ಮಾಡುವಾಗ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ. ಈ ಹಿನ್ನಲೆ ಅವರ ಸ್ಪೈನಲ್ ಕಾರ್ಡ್ ಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ತಿಳಿದುಬಂದಿದ್ದು, ವೈದ್ಯರು ಈಗಾಗಲೇ ದಿಗಂತ್ ಅವರಿಗೆ ಅಫರೇಷನ್ ಮಾಡಬೇಕೆಂದು ತಿಳಸಿದ್ದಾರೆ. ಈ ಹಿನ್ನಲೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಚಿಕಿತ್ಸೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ಪತ್ನಿ ಐಂದ್ರಿತಾ, ದಿಗಂತ್ಅವರ ತಂದೆ, ತಾಯಿ ಸೇರಿದಂತೆ ಯೋಗರಾಜ್​ ಭಟ್ ಎಲ್ಲರೂ ಆಸ್ಪತ್ರಗೆ ದಾವಿಸಿದ್ದಾರೆ. ವೈದ್ಯ ವಿದ್ಯಾಧರ್ ರಿಂದ ನಟ ದಿಗಂತ್ ಗೆ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ಸದ್ಯ ದಿಗಂತ್ ಅವರನ್ನು ಸರ್ಜರಿ ವಾರ್ಡ್​ಗೆ ದಾಖಲಿಸಲಾಗಿದೆ.

ಮೊದಲಿನಿಂದಲೂ ಸ್ಟಂಟ್​ ಮಾಡುತ್ತಿದ್ದ ದೂದ್​ಪೇಡಾ:

ನಟ ದಿಗಂತ್ ಇದೇ ಮೊದಲ ಬಾರಿ ಸಮ್ಮರ್​ ಶಾಟ್ ಸ್ಟಂಟ್​ ಮಾಡಿದವರಲ್ಲ. ಇದಕ್ಕೂ ಮೊದಲು ಅನೇಕ ಬಾರಿ ಅವರು ಈ ರೀತಿಯ ಸ್ಟಂಟ್​ ಗಳನ್ನು ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗದುಕೊಳ್ಳದೇ ಮಾಡುತ್ತಿದ್ದರು. ಅಲ್ಲದೇ ಇದರ ಸಂಬಂಧಿಸಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಹಂಚಿಕೊಳ್ಳುತ್ತಿದ್ದರು.


ಸಮ್ಮರ್​ ಶಾಟ್ ಮಾಡುತ್ತಿದ್ದ ದಿಗಂತ್​:

ಇನ್ನು, ಸಮ್ಮರ್ ಶಾಟ್​ ಸ್ಟಂಟ್​ ಮಾಡುವುದನ್ನು ನಟ ದಿಗಂತ್ ಮೊದಲಿನಿಂದಲೂ ರೂಡಿಸಿಕೊಂಡಿದ್ದರು. ಅದಲ್ಲದೇ ಚಿತ್ರದ ಸಲುವಾಘಿ ಈ ರಿತಿಯ ಅನೇಕ ರಿಸ್ಕಿ ಸ್ಟಂಟ್​ಗಳನ್ನೂ ಸಹ ಅವರು ಕಲಿತಿದ್ದರು. ಆಧರೆ ಇಂದು ಸಮ್ಮರ್ ಶಾಟ್ ಮಾಡುವಾಗ ನಡೆದ ಅಚಾತುರ್ಯ ನಡೆದ ಹಿನ್ನಲೆ ಅವರು ಕುತ್ತಿಗೆಗೆ ಪೆಟ್ಟಾಗಿದೆ.


ಇದಕ್ಕೂ ಮೊದಲು ಅವರ ಕಣ್ಣಿಗೆ ಚಿತ್ರಿಕರಣದ ವೇಳೆ ಪೆಟ್ಟಾಗಿತ್ತು. 'ಟಿಕೆಟ್ ಟು ಬಾಲಿವುಡ್'. ಈ ಚಿತ್ರದ ಶೂಟಿಂಗ್ ವೇಳೆ ನಾಯಕಿ ಎಸೆದ ಚೂರಿ ದಿಗಂತ್ ಕಣ್ಣಿಗೆ ಬಿದ್ದ ಪರಿಣಾಮ ದೃಷ್ಟಿ ಕಳೆದುಕೊಂಡರು ಎಂಬ ಸುದ್ದಿ ಹೊರಬಿದ್ದಿತ್ತು. ಇದಾದ ನಂತರ ನಟ ದಿಗಂತ್​ ಅವರ ಒಂದು ಕಣ್ಣಿನ ದೃಷ್ಟಿ ಕಡಿಮೆಯಾಗಿದೆಯಂತೆ
Published by:shrikrishna bhat
First published: