Pawan Kalyan: ಭೀಮ್ಲಾ ನಾಯಕ್​ ಪಂಚೆ ಎತ್ತಿ ಕಟ್ಟುವ ಸ್ಟೈಲ್​ಗೆ ಅಭಿಮಾನಿಗಳು ಫಿದಾ..!

Bheemla Nayak First Glimpse: ಭೀಮ್ಲಾ ನಾಯಕ್​ ಪಾತ್ರದಲ್ಲಿ ನಟಿಸಿರುವ ಪವನ್ ಕಲ್ಯಾಣ್​ ಪಂಚೆ ಎತ್ತಿ ಕಟ್ಟಿ, ಮಾಡಿರುವ ಆ್ಯಕ್ಷನ್​ ಅಭಿಮಾನಿಗಳನ್ನು ಫಿದಾ ಆಗಿದ್ದಾರೆ. ಇನ್ನು ಈ ವಿಡಿಯೋ ರಿಲೀಸ್ ಆದಾಗಿನಿಂದ ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್​ನಲ್ಲಿದೆ. ಜೊತೆಗೆ ಈ ಸಿನಿಮಾದಲ್ಲಿ ಪವನ್ ಕಲ್ಯಾಣ್​ ಪೊಲೀಸ್ ಆದರೆ, ರಾಣಾ ದಗ್ಗುಬಾಟಿ ಸಿರಿವಂತ ಕುಡುಕನ ಪಾತ್ರದಲ್ಲಿ ನಟಿಸಲಿದ್ದಾರಂತೆ. 

ಭೀಮ್ಲಾ ನಾಯಕ್​ ಸಿನಿಮಾದಲ್ಲಿ ಪವನ್ ಕಲ್ಯಾಣ್​

ಭೀಮ್ಲಾ ನಾಯಕ್​ ಸಿನಿಮಾದಲ್ಲಿ ಪವನ್ ಕಲ್ಯಾಣ್​

  • Share this:
ಟಾಲಿವುಡ್​ ಪವರ್ ಸ್ಟಾರ್​ ಪವನ್ ಕಲ್ಯಾಣ್​  (Pawan Kalyan)ರಿಮೇಕ್​ ಚಿತ್ರದಲ್ಲಿ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಭೀಮ್ಲಾ ನಾಯಕ್ (Bheemla Nayak)​ ಸಿನಿಮಾ ಶೂಟಿಂಗ್​ ಭರ್ಜರಿಯಾಗಿ ನಡೆಯುತ್ತಿದೆ. ಲಾಕ್​ಡೌನ್​ ಬಳಿಕ ಸಿನಿಮಾ ಶೂಟಿಂಗ್​ ಆರಂಭಿಸಿದ ಚಿತ್ರತಂಡ ಫಸ್ಟ್​ಲುಕ್ ಪೋಸ್ಟರ್​ ಹಂಚಿಕೊಳ್ಳುವ ಮೂಲಕ ಸಿನಿಪ್ರಿಯರಿಗೆ ಸಿಹಿ ಸುದ್ದಿ ನೀಡಿತ್ತು. ಈಗ ಇದೇ ತಂಡ ಸ್ವಾತಂತ್ರ್ಯ ದಿನಾಚರಣೆಯಂದು ಭೀಮ್ಲಾ ನಾಯಕ್​ ಚಿತ್ರ ಪುಟ್ಟ ಪ್ರೋಮೊ ಒಂದು ರಿಲೀಸ್​ ಆಗಿದೆ. ಈ ಸಿನಿಮಾದಲ್ಲಿ ಪವನ್ ಕಲ್ಯಾಣ್​ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಪವನ್ ಕಲ್ಯಾಣ್​ ಲುಕ್ಸ್​ಗೆ ಅಭಿಮಾಣಿಗಳು ಫಿದಾ ಆಗಿದ್ದಾರೆ. ಪವನ್ ಕಲ್ಯಾಣ್​ ಅವರ ಸಿನಿಮಾದ ಯಾವುದೇ ಅಪ್ಡೇಟ್​ ಸಿಕ್ಕರೂ ಅವರ ಅಭಿಮಾನಿಗಳು ಅದನ್ನು ಟ್ರೆಂಡ್​ ಮಾಡದೆ ಬಿಡುವುದಿಲ್ಲ. ಈಗಲೂ ಈ ವಿಡಿಯೋ ಟ್ರೆಂಡಿಂಗ್​ನಲ್ಲಿದೆ. 

ಪವರ್​ ಸ್ಟಾರ್ ಪವನ್​ ಕಲ್ಯಾಣ್​ ಅಭಿನಯದ ಬಹುನಿರೀಕ್ಷಿತ ಚಿತ್ರ ಭೀಮ್ಲಾ ನಾಯಕ್. ​ಮಲಯಾಳಂನ ಖ್ಯಾತ ಚಿತ್ರ ಅಯ್ಯಪ್ಪನೂಮ್​ ಕೊಶಿಯಮ್​ ಚಿತ್ರದ ರಿಮೇಕ್​ ಇದಾಗಿದ್ದು, ಇದರಲ್ಲಿ ರಾಣ ದುಗ್ಗುಬಾಟಿ ಸಹ ನಟಿಸಿದ್ದಾರೆ. ಸಿಡುಕು ಪೊಲೀಸ್ ಅಧಿಕಾರಿಯಾಗಿ ಪವನ್​ ಕಲ್ಯಾಣ್​ ನಟಿಸಿದ್ದು, ಈಗ ರಿಲೀಸ್​ ಆಗಿರುವ ಫಸ್ಟ್​ ಗ್ಲಿಂಪ್ಸ್​ ವಿಡಿಯೋದಲ್ಲಿ ಪವನ್ ಕಲ್ಯಾಣ್​ ಲುಕ್ಸ್ ನೋಡಿದ ಅಭಿಮಾನಿಗಳು ಹುಚ್ಚೆದು ಕುಣಿಯುತ್ತಿದ್ದಾರೆ.ಭೀಮ್ಲಾ ನಾಯಕ್​ ಪಾತ್ರದಲ್ಲಿ ನಟಿಸಿರುವ ಪವನ್ ಕಲ್ಯಾಣ್​ ಪಂಚೆ ಎತ್ತಿ ಕಟ್ಟಿ, ಮಾಡಿರುವ ಆ್ಯಕ್ಷನ್​ ಅಭಿಮಾನಿಗಳನ್ನು ಫಿದಾ ಆಗಿದ್ದಾರೆ. ಇನ್ನು ಈ ವಿಡಿಯೋ ರಿಲೀಸ್ ಆದಾಗಿನಿಂದ ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್​ನಲ್ಲಿದೆ. ಜೊತೆಗೆ ಈ ಸಿನಿಮಾದಲ್ಲಿ ಪವನ್ ಕಲ್ಯಾಣ್​ ಪೊಲೀಸ್ ಆದರೆ, ರಾಣಾ ದಗ್ಗುಬಾಟಿ ಸಿರಿವಂತ ಕುಡುಕನ ಪಾತ್ರದಲ್ಲಿ ನಟಿಸಲಿದ್ದಾರಂತೆ.

ಇದನ್ನೂ ಓದಿ: Pooja Hegde: ಕ್ಯಾಮೆರಾ ಹಿಡಿದು ಫೋಟೊಶೂಟ್​ಗೆ ಪೋಸ್​ ಕೊಟ್ಟ ಕರಾವಳಿ ಸುಂದರಿ ಪೂಜಾ ಹೆಗ್ಡೆ

ಸಾಗರ್ ಕೆ ಚಂದ್ರ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಅಡಿಯಲ್ಲಿ ಸೂರ್ಯದೇವರ ನಾಗವಂಶಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ಸಂಭಾಷಣೆಯನ್ನು ಬರೆಯುತ್ತಿದ್ದು, ಗೀತೆರಚನೆಯನ್ನೂ ಮಾಡಲಿದ್ದಾರೆ. ಅಲಾ ವೈಕುಂಠಾಪುರಂಲೋ ಚಿತ್ರದಲ್ಲಿ ಕೊನೆಯ ಬಾರಿಗೆ ಪವನ್ ವಿರುದ್ಧ ಪಾತ್ರದಲ್ಲಿ ಕಾಣಿಸಿಕೊಂಡಿರುವ ತಮಿಳು ಚಿತ್ರರಂಗದ ನಟ ಸಮುತಿರಕಣಿ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಎಸ್ ಎಸ್ ತಮನ್ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ.ಇದನ್ನೂ ಓದಿ: Dhruva Sarja: ಮಾರ್ಟಿನ್​ ನಾನಲ್ಲ ಎಂದಿದ್ದೇಕೆ ಧ್ರುವ ಸರ್ಜಾ: ಮಾರಾಟವಾಯ್ತು ಆಡಿಯೋ ರೈಟ್ಸ್​

ಮಲಯಾಳಂ ಚಿತ್ರವಾದ ಅಯ್ಯಪ್ಪನುಮ್ ಕೋಶಿಯುಮ್ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ಮತ್ತು ಬಿಜು ಮೆನನ್ ನಟಿಸಿದ್ದರು. ಸಚಿ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಬಿಜೆ ಮೆನನ್ ಪತ್ನಿ ಪಾತ್ರದಲ್ಲಿ ಗೌರಿ ನಂದಾ ನಟಿಸಿದ್ದರು.

ಈ ಸಿನಿಮಾ 2020ರ ಫೆಬ್ರವರಿ 7ರಂದು ತೆರೆಕಂಡಿದ್ದು ಹಿಟ್ ಆಗಿತ್ತು. ಈಗ ಅದೇ ಚಿತ್ರವನ್ನು ತೆಲುಗಿನಲ್ಲಿ ರಿಮೇಕ್ ಆಗುತ್ತಿದೆ. ತೆಲುಗಿನ ಭೀಮ್ಲಾ ನಾಯಕ್​ ಮುಂದಿನ ವರ್ಷ ಅಂದರೆ 2022ರ ಜನವರಿ 12ರಂದು ರಿಲೀಸ್ ಆಗಲಿದೆ.ಇದನ್ನೂ ಓದಿ: Kichcha Sudeep: ಕಿಚ್ಚನ ಡಿಜಿಟಲೈಸ್ಡ್ ಅಕ್ಷರ ಕ್ರಾಂತಿ: ಶಾಲಾ ಮಕ್ಕಳಿಗೆ ಸುದೀಪ್ ಕಡೆಯಿಂದ ಉಡುಗೊರೆನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು. 
Published by:Anitha E
First published: