Pranitha Subhash Exclusive Interview: ಉದಯಪುರ ಹತ್ಯೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ ನಟಿ ಪ್ರಣಿತಾ

ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಅವರನ್ನು ಸಿಎನ್‌ಎನ್-ನ್ಯೂಸ್ 18 ವರದಿಗಾರರಾದ ಹರೀಶ್ ಉಪಾಧ್ಯ ಸಂದರ್ಶಿಸಿದ ವೇಳೆ ಉದಯ್‌ಪುರ ಹತ್ಯೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಣಿತಾ ಸುಭಾಷ್

ಪ್ರಣಿತಾ ಸುಭಾಷ್

  • Share this:
ರಾಜಸ್ಥಾನದ (Rajasthan) ಉದಯಪುರದಲ್ಲಿ (Udaipur) ನಡೆದ ಹಿಂದೂ (Hindu) ಟೈಲರ್‌ನ ಹತ್ಯೆಗೆ ಇದೀಗ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳು ವರೆಗೂ ಸಹ ಈ ಭೀಕರ ಹತ್ಯೆಯನ್ನು ಖಂಡಿಸಿದ್ದಾರೆ. ಅಲ್ಲದೇ ಈ ಹತ್ಯೆಯ ಕುರಿತು ದೇಶದಾದ್ಯಂತ ವಿಭಿನ್ನ ರೀತಿಯ ಅಭಿಯಾನಗಳು ಪ್ರಾರಂಭವಾಗಿದೆ. ಇದೀಗ ಈ ಅಭಿಯಾನಕ್ಕೆ ಬಹುಭಾಷಾ ನಟಿ ಕನ್ನಡತಿ ಪ್ರಣಿತಾ ಸುಭಾಶ್​ (Pranitha Subhash) ಸಹ ಸಾಥ್ ನೀಡಿದ್ದಾರೆ. ಹಿಂದೂ ಲಿವ್ಸ್ ಮ್ಯಾಟರ್ (ಹಿಂದೂ ಜೀವ ಮುಖ್ಯ) ಎಂಬ ಫಲಕವನ್ನು ಹಿಡಿದು ಉದಯಪುರದ ಹತ್ಯೆಯ ವಿರುದ್ಧ ಧ್ವನಿ ಎತ್ತಿದ್ದಾರೆ. ಇದೀಗ ಈ ಸಂಬಂಧ ಸಿಎನ್‌ಎನ್-ನ್ಯೂಸ್ 18 ನ ಹರೀಶ್ ಉಪಾಧ್ಯ ಅವರು ನಟಿ ಪ್ರಣಿತಾ ಸುಭಾಷ್ ಅವರ ಸಂದರ್ಶನ ಮಾಡಿದ್ದು, ಉದಯಪುರ ಹತ್ಯೆಯ ಕುರಿತು ಸುದೀರ್ಘವಾಗಿ ಮಾತನಾಡಿದ್ದಾರೆ.

ಪ್ರಣಿತಾ ಸುಭಾಷ್ ಸಂದರ್ಶನ:

ಪ್ರಣಿತಾ ಸುಭಾಷ್ ಸಿಎನ್‌ಎನ್-ನ್ಯೂಸ್ 18 ವರದಿಗಾರರಾದ ಹರೀಶ್ ಉಪಾಧ್ಯ ಅವರೊಂದಿಗೆ ಮಾತನಾಡುತ್ತಾ ಉದಯ್‌ಪುರ ಹತ್ಯೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ರೀತಿಯ ಹತ್ಯೆ ಸಂಭವಿಸಿರುವುದು ನನಗೆ ಆಘಾತವಾಗಿದೆ. ರಾಜಸ್ಥಾನದಂತಹ ಬಹುಸಂಖ್ಯಾತ ಹಿಂದೂ ರಾಜ್ಯದಲ್ಲಿ ಈ ರೀತಿಯ ಹತ್ಯೆ ಆಗಿರುವುದು ಭಯವನ್ನು ಹುಟ್ಟಿಸುತ್ತದೆ. ಇದನ್ನೆಲ್ಲಾ ನೋಡಿದ ಮೇಲೆ ನಾವು ಅಪಾಯದಲ್ಲಿದ್ದೇವೆ ಎಂದು ನಾನು ಭಾವಿಸಿದೆ. ಅಲ್ಲದೇ ಇಲ್ಲಿ ಅಮಾಯಕ ಟೇಲರ್​ ಅವರ ಯಾವುದೇ ತಪ್ಪಿಲ್ಲ. ಚಲನಚಿತ್ರೋದ್ಯಮವು ಉದಾರವಾದಿ, ಜಾತ್ಯತೀತ ಮತ್ತು ಇತರದ ವಿಷಯಗಳಲ್ಲಿ ಮೌನವಾಗಿದೆ.

ಇದಲ್ಲದೇ ಸಮುದಾಯವು ಅನ್ಯಾಯವನ್ನು ಎದುರಿಸಿದ ಕಾರಣ ಕೆಲವರು ಮೌನವಾಗಿದ್ದಾರೆ. ಆದರೆ ಎಲ್ಲಾ ಜೀವಗಳು ಮುಖ್ಯ. ಆದರೆ ಈ ಕ್ಷಣದಲ್ಲಿ ಈ ಘಟನೆ (ಉದಯಪುರ) ಬೆಳಕಿಗೆ ಬರುವುದು ಬಹಳ ಮುಖ್ಯವಾಗಿದೆ. ಈ ಪ್ರಕರಣದ ಎಲ್ಲಾ ಅಪರಾಧಿಗಳನ್ನು ಪ್ರಶ್ನಿಸುವುದು ಬಹಳ ಮುಖ್ಯವಾಗಿದೆ. ಯಾವುದೇ ತರ್ಕಬದ್ಧ ಶಿಕ್ಷಣದ ಕೊರತೆಯು ಬಹುಶಃ ಇದಕ್ಕೆಲ್ಲ ಕಾರಣವಾಗಿದೆ. ಇನ್ನು, 2014 ರಿಂದ ಜನರು ಧರ್ಮವನ್ನು ರಕ್ಷಣೆಯ ಬಗ್ಗೆ ಧ್ವನಿ ಎತ್ತಿದ್ದಾರೆ. ಒಂದು ರೀತಿಯಲ್ಲಿ ಈ ರೀತಿಯ ಪೋಸ್ಟ್ ಮಾಡಲು ಆತ್ಮವಿಶ್ವಾಸವನ್ನು ಗಳಿಸಲು ಸಹಾಯ ಮಾಡಿದೆ. ಈ ಘಟನೆಯಿಂದ ಪ್ರಭಾವಿಯಾಗಿ ನಾನು ಈ ರೀತಿ ಮಾಡಿದೆ. ಆದರೆ ಯಾವುದೇ ರೀತಿಯ ರಾಜಕೀಯ ಮಹತ್ವಾಕಾಂಕ್ಷೆ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Pranitha Subhash: ಹಿಂದುಗಳ ಜೀವ ಕೂಡ ಮುಖ್ಯ ಅಂದ ಪ್ರಣಿತಾ, ಉದಯಪುರ್​ ಘಟನೆ ವಿರುದ್ದ ಸಿಡಿದೆದ್ದ ನಟಿ

ಹಿಂದೂ ಜೀವ ಮುಖ್ಯ ಎಂದ ಪ್ರಣಿತಾ:

ಇಸ್ ಎನಿವನ್ ಲಿಸನಿಂಗ್? (ಯಾರಾದರೂ ಕೇಳಿಸಿಕೊಳ್ಳುತ್ತಿದ್ದೀರಾ?) ಎಂಬ ಕ್ಯಾಪ್ಶನ್‌ ಹಾಕಿರುವ ಫೋಟೋವೊಂದನ್ನು ನಟಿ ಶೇರ್ ಮಾಡಿಕೊಂಡಿದ್ದು ಅದರಲ್ಲಿ ಅವರು ಹಿಂದೂ ಲಿವ್ಸ್ ಮ್ಯಾಟರ್(ಹಿಂದೂ ಜೀವ ಮುಖ್ಯ) ಎಂದು ಬರೆದಿರುವ ಫಲಕ ಹಿಡಿದುಕೊಂಡಿದ್ದಾರೆ. ಮತಾಂಧರ ಹುಚ್ಚುಗೆ ಬಲಿಯಾದ ಹಿಂದೂ ಟೈಲರ್‌ನ ಹತ್ಯೆಗೆ ನ್ಯಾಯ ಕೇಳಿದ್ದಾರೆ.

ಈ ಕೃತ್ಯವನ್ನು "ಸಂಪೂರ್ಣ ಭಯೋತ್ಪಾದನೆ" ಎಂದು ಕರೆದಿರುವ ನಟಿ, "ನಾನು ಉದಯಪುರ ವಿಡಿಯೋವನ್ನು ನೋಡಬಾರದಿತ್ತು ಎಂದು ಅನಿಸುತ್ತಿದೆ. ಆ ನೋವಿನ ಕಿರುಚಾಟ ನಮ್ಮ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತವೆ ಮತ್ತು ದೀರ್ಘಕಾಲದವರೆಗೆ ನಮ್ಮನ್ನು ಕಾಡುತ್ತವೆ. #JusticeForKanhaiyaLal."  ಎಂದು ಒತ್ತಾಯಿಸಿದ್ದಾರೆ. ಇನ್ನು ಕರ್ನಾಟಕದಲ್ಲಿ ಸಹ ಈ ಹತ್ಯೆಯನ್ನು ವಿರೋಧಿಸಿ ಹ;ಲವಾರು ಪ್ರತಿಭಟನೆಗಳು ನಡೆದಿವೆ. ನಂಜನಗೂಡಿನಲ್ಲೂ ಕೆಲ ವ್ಯಾಪಾರಿಗಳು ನನ್ನ ಕತ್ತು ಸೀಳಬೇಡಿ ಎಂದು ಬೋರ್ಡ್ ಹಿಡಿದುಕೊಂಡು ಹತ್ಯೆಯ ವಿರುದ್ದ ಅಭಿಯಾನ ಆರಂಭಿಸಿದ್ದು, ನಾನು ಸತ್ಯ ಹೇಳಲ್ಲ. ಹೇಳಿದವರ ಪರ ನಿಲ್ಲುವುದೂ ಇಲ್ಲ ಎಂಬೆಲ್ಲಾ ಪೋಸ್ಟರ್ ಹಿಡಿದು ನ್ಯಾಯ ಕೇಳುತ್ತಿದ್ದಾರೆ.
Published by:shrikrishna bhat
First published: