The Family Man 2 Review: ಭರಪೂರ ಮನರಂಜನೆ ನೀಡುತ್ತಿದೆ ದ ಫ್ಯಾಮಿಲಿ ಮ್ಯಾನ್​ ಸೀಸನ್​ 2..!

The Family Man 2 Web Series: ದ ಫ್ಯಾಮಿಲಿ ಮ್ಯಾನ್​ ವೆಬ್​ ಸರಣಿಯ ಸೀಸನ್​ ಒಂದು ತೆರೆಕಂಡು ಹಿಟ್​ ಆದ ನಂತರ ಸೀಸನ್​ 2 ಬಗ್ಗೆ ಪ್ರೇಕ್ಷಕರಿಗೆ ದೊಡ್ಡ ಮಟ್ಟದ ನಿರೀಕ್ಷೆ ಇತ್ತು. ಇದೇ ಕಾರಣದಿಂದಾಗಿ ವೆಬ್​ ಸರಣಿ ತಂಡ ಸೀಸನ್​ 2 ಅನ್ನು ಒಂದು ದಿನ ಮುಂಚಿತವಾಗಿಯೇ ಯಾವುದೇ ಪ್ರಚಾರವಿಲ್ಲದೆ ರಿಲೀಸ್ ಮಾಡಿದೆ.

ದ ಫ್ಯಾಮಿಲಿ ಮ್ಯಾನ್​ 2 ವೆಬ್​ ಸರಣಿ

ದ ಫ್ಯಾಮಿಲಿ ಮ್ಯಾನ್​ 2 ವೆಬ್​ ಸರಣಿ

  • Share this:
ದ ಫ್ಯಾಮಿಲಿ ಮ್ಯಾನ್​ ಸೀಸನ್​ 2... ಮನೋಜ್​ ಬಾಜ್​ಪೇಯಿ, ಸಮಂತಾ ಅಕ್ಕಿನೇನಿ. ಪ್ರಿಯಾಮಣಿ ಅಭಿನಯದ ಈ ವೆಬ್​ ಸರಣಿ ಒಂದು ದಿನ ಮುಂಚಿತವಾಗಿಯೇ ರಿಲೀಸ್​ ಆಗಿದೆ. ಕೆಲವೇ ದಿನಗಳ ಹಿಂದೆಯಷ್ಟೆ ಸಿನಿಮಾದ ಟ್ರೇಲರ್​ ರಿಲೀಸ್​ ಆಗಿತ್ತು. ಸೀಸನ್​ ಒಂದು ರಿಲೀಸ್​ ಆಗಿ ಪ್ರೇಕ್ಷಕರ ಮನ ಗೆದ್ದಿತ್ತು,. ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ಸೀಸನ್​ ಒಂದರ ನಂತರ ರಿಲೀಸ್ ಆಗಲಿದ್ದ 2ನೇ ಸೀಸನ್​ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇತ್ತು. ಇದರಿಂದಾಗಿಯೇ ಪ್ರೇಕ್ಷರಕರು ದ ಫ್ಯಾಮಿಲಿ ಮ್ಯಾನ್​ ಸೀನಸ್​ 2ಗಾಗಿ ಕಾತರದಿಂದ ಕಾಯುತ್ತಿದ್ದರು. ಕೂ.4ರಂದು ಅಂದರೆ ಇಂದು ರಿಲೀಸ್​ ಆಗಬೇಕಿದ್ದ ವೆಬ್​ ಸರಣಿಯನ್ನು ನಿನ್ನೆಯೇ ರಿಲೀಸ್​ ಮಾಡುವ ಮೂಲಕ ವೀಕ್ಷಕರಿಗೆ ಸರ್ಪ್ರೈಸ್​ ಕೊಡಲಾಗಿದೆ.

ಸಮಂತಾ ಅಕ್ಕಿನೇನಿ ಈ ಸೀಸನ್​ನಲ್ಲಿ ನಟಿಸುವ ಮೂಲಕ ಡಿಜಿಟಲ್​ ದುನಿಯಾಗೆ ಕಾಲಿಟ್ಟಿದ್ದಾರೆ. ಸಮಂತಾ ಇದೇ ಮೊಲದ ಸಲ ವೆಬ್​ ಸರಣಿಯಲ್ಲಿ ನಟಿಸಿದ್ದು, ಪ್ರೇಕ್ಷಕರಿದ್ದ ಕುತೂಹಲಕ್ಕೆ ಇದೂ ಒಂದು ಕಾರಣವಾಗಿತ್ತು.

People watched Family Man 2 complete series on Amazon Prime from Midnight to morning.
ದ ಫ್ಯಾಮಿಲಿ ಮ್ಯಾನ್​ 2 ವೆಬ್​ ಸರಣಿ


ಎಂದಿನಂತೆ ನಟ ಮನೋಜ್​ ಬಾಜ್​ಪೇಯಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಳ್ಳೆಯ ಹಾಸ್ಯ, ಕಾಲವಿದರ ಅಭಿನಯ ಎಲ್ಲದಕ್ಕಿಂತ ಹೆಚ್ಚಾಗಿ ನಿರ್ದೇಶಕ ರಾಜ್​ ಹಾಗೂ ಡಿಕೆ ಪರಿಶ್ರಮ ಈ ಸರಣಿಯಲ್ಲಿ ಕಾಣಬಹುದಾಗಿದೆ. ಸೀಕ್ರೆಕ್​ ಏಜಂಟ್​ ಪಾತ್ರದಲ್ಲಿ ನಟಿಸಿರುವ ಮನೋಜ್​ ಯಾವ ಆ್ಯಂಗಲ್​ನಿಂದಲೂ ಏಜೆಂಟ್​ನಂತೆ ಕಾಣಿಸುವುದಿಲ್ಲ. ಅಷ್ಟರ ಮಟ್ಟಿಗೆ ನೈಜವಾಗಿ ಮನೋಜ್​ ಬಾಜ್​ಪೇಯಿ ನಟಿಸಿದ್ದಾರೆ.

ಇದನ್ನೂ ಓದಿ: Ariyana Glory - RGV: ಟಿವಿ ನಿರೂಪಕಿಯನ್ನು ಬಿಕಿನಿಯಲ್ಲಿ ನೋಡಬೇಕೆಂದಿದ್ದ ರಾಮ್​​ ಗೋಪಾಲ್​ ವರ್ಮಾ: ಈಗ ಆಕೆಯೊಂದಿಗೆ ಫೋಟೋಶೂಟ್​ಗೆ ಪೋಸ್​ ಕೊಟ್ಟ ನಿರ್ದೇಶಕ..!

ವಿಲನ್​ಗಳು ಎಂದಿನಂತೆ ತಮ್ಮ ಕೆಲಸ ತಾವು ಮಾಡುತ್ತಿರುತ್ತಾರೆ. ಅವರ ದಾರಿಯನ್ನು ಹೀರೋಗಳು ಬ್ಲಾಕ್​ ಮಾಡುತ್ತಾರೆ. ಇವುಗಳ ಮಧ್ಯೆ ವೀಕ್ಷಕರಿಗೆ ಬೇಕಾದ ಹಾಸ್ಯ, ಆ್ಯಕ್ಷನ್​, ಮನರಂಜನೆ ಹಾಗೂ ರಾಷ್ಟ್ರಭಕ್ತಿಯ ಅಂಶ ಕೊಂಚ ಹೆಚ್ಚಾಗಿಯೇ ಇದೆ. ಶ್ರೀಕಾಂತ್​ ತಿವಾರಿ ಮಡದಿ ಪಾತ್ರದಲ್ಲಿ ಪ್ರಿಯಾಮಣಿ ಕಾಣಿಸಿಕೊಂಡಿದ್ದಾರೆ. ಸಮಂತಾ ತುಂಬಾ ಅಪಾಯಕಾರಿಯಾದಂತಹ ಪಾತ್ರವನ್ನು ಅವರು ಇಷ್ಟಪಟ್ಟು ಮಾಡಿದ್ದಾರೆ. ಹಿನ್ನೆಲೆ ಸಂಗೀತ ಸಂಗೀತ ಪ್ರಿಯರನ್ನು ಹಿಡಿದಿಡುತ್ತದೆ. ಜೊತೆಗೆ ಇದು ಮನೋಜ್​ ಬಾಜ್​ಪೇಯಿ ಜೀವನದಲ್ಲಿ ಮಾಡಿರುವ ಉತ್ತಮ ಪಾತ್ರ ಎಂದೂ ಅಭಿಮಾನಿಗಳು ಹೇಳುತ್ತಿದ್ದಾರೆ. ಒಟ್ಟಾರೆ ಲಾಕ್​ಡೌನ್​ನಲ್ಲಿ ನೋಡಬಹುದಾದ ಹಾಗೂ ಮನರಂಜಿಸುವ ಸೀರೀಸ್​ ಇದಾಗಿದೆ ಎನ್ನಬಹುದು.

ಇದನ್ನೂ ಓದಿ: S P Balasubramanyam Birthday: ಆಂಧ್ರದಲ್ಲಿ ಹುಟ್ಟಿ ಬೆಳೆದರೂ ಎಸ್​ಪಿಬಿ ಹಾಡಿದ 2ನೇ ಹಾಡು ಕನ್ನಡದ್ದು!

ಈ ಹಿಂದೆ ವೆಬ್​ ಸರಣಿಯ ಟ್ರೇಲರ್​ ರಿಲೀಸ್ ಆದಾಗ ಸಮಂತಾ ನಟಿಸಿರುವ ಪಾತ್ರದಿಂದಾಗಿ ವಿವಾದವಾಗಿತ್ತು. ನಂತರ ರಾಜ್ ಮತ್ತು ಡಿಕೆ ಹೇಳಿಕೆಯನ್ನು ಬಿಡುಗಡೆ ಮಾಡಿದರು. ಟ್ರೇಲರ್‌ನಲ್ಲಿ ಕೇವಲ ಒಂದೆರಡು ದೃಶ್ಯಗಳನ್ನು ಆಧರಿಸಿ ಕೆಲವು ಊಹೆಗಳು ಮತ್ತು ಅನಿಸಿಕೆಗಳನ್ನು ಹೇಳಲಾಗಿದೆ. ನಮ್ಮ ಅನೇಕ ಪ್ರಮುಖ ಪಾತ್ರವರ್ಗದ ಸದಸ್ಯರು, ಸೃಜನಶೀಲ ಮತ್ತು ಬರವಣಿಗೆಯ ತಂಡದ ಪ್ರಮುಖ ಸದಸ್ಯರು ತಮಿಳರು. ನಾವು ತಮಿಳು ಜನರ ಭಾವನೆಗಳನ್ನು ಮತ್ತು ತಮಿಳು ಸಂಸ್ಕೃತಿಯನ್ನು ಬಹಳವಾಗಿ ತಿಳಿದುಕೊಂಡಿದ್ದೇವೆ ಮತ್ತು ನಮ್ಮ ತಮಿಳು ಜನರ ಬಗ್ಗೆ ಅತ್ಯಂತ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ನ್ಯೂಸ್18 ಕನ್ನಡ ಕಳಕಳಿ

ಕೊರೋನಾ ಪಾಸಿಟಿವ್ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Anitha E
First published: