• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • The Family Man Season 2: ಫ್ಯಾಮಿಲಿ ಮ್ಯಾನ್-2 ವೆಬ್​ ಸರಣಿಯ ಬಿಡುಗಡೆ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ

The Family Man Season 2: ಫ್ಯಾಮಿಲಿ ಮ್ಯಾನ್-2 ವೆಬ್​ ಸರಣಿಯ ಬಿಡುಗಡೆ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ

ಮನೋಜ್ ಬಾಜಪೇಯಿ.

ಮನೋಜ್ ಬಾಜಪೇಯಿ.

The Family Man Season 2: ಫ್ಯಾಮಿಲಿ ಮ್ಯಾನ್ ಸೀಸನ್ 2ನ ಟ್ರೈಲರ್‌ನಲ್ಲಿ ನಟಿ ಸಮಂತಾ ಅಕ್ಕಿನೇನಿ ಕಾಣಿಸಿಕೊಂಡ ಮೊದಲ ಟ್ರೈಲರ್​ ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿದ್ದರೂ, ತಯಾರಕರು ಸಮಂತಾ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 • Share this:

ಮನೋಜ್ ಬಾಜಪೇಯಿ, ಸಮಂತಾ ಅಕ್ಕಿನೇನಿ, ಪ್ರಿಯಮಣಿ, ಶರೀಬ್ ಹಶ್ಮಿ, ಸೀಮಾ ಬಿಸ್ವಾಸ್, ದರ್ಶನ್ ಕುಮಾರ್, ಶರದ್ ಕೇಲ್ಕರ್, ಸನ್ನಿ ಹಿಂದೂಜಾ, ಶ್ರೇಯಾ ಧನ್ವಂತರಿ, ಶಹಾಬ್ ಅಲಿ, ವೇದಾಂತ್ ಸಿನ್ಹಾ, ಮಹೇಕ್ ಠಾಕಿ, ದೇವರಾಪಿ , ಆನಂದಮಿ ಮತ್ತು ಎನ್.ಅಲಗಂಪೇರುಮಾಲ್ ನಟನೆಯ ಬಹು ನಿರೀಕ್ಷಿತ ಫ್ಯಾಮಿಲಿ ಮ್ಯಾನ್ ಸೀಸನ್ 2 ವೆಬ್​ ಸೀರಿಸ್​ ಅಮೆಜಾನ್ ಪ್ರೈಮ್ ವಿಡಿಯೋ ದಲ್ಲಿ ಬಿಡುಗಡೆ ಮಾಡಲಾಗಿದೆ. ಎರಡನೇಯ ಸೀಸನ್​ನಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿ ಸಮಂತಾ ಅಕ್ಕಿನೇನಿ ಅಭಿನಯಿಸುತ್ತಿದ್ದು, ಇದು ಅವರ ಚೊಚ್ಚಲ ಡಿಜಿಟಲ್ ವೆಬ್​ ಸೀರಿಸ್​ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.


ಫ್ಯಾಮಿಲಿ ಮ್ಯಾನ್ ಸೀಸನ್ 2ನ ಟ್ರೈಲರ್‌ನಲ್ಲಿ ನಟಿ ಸಮಂತಾ ಅಕ್ಕಿನೇನಿ ಕಾಣಿಸಿಕೊಂಡ ಮೊದಲ ಟ್ರೈಲರ್​ ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿದ್ದರೂ, ತಯಾರಕರು ಸಮಂತಾ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು,“ಈ ಪಾತ್ರವನ್ನು ಮಾಡಲು ಅವರು ಸಾಕಷ್ಟು ಅಪಾಯಗಳನ್ನು ಎದುರಿಸುವಂತಾಗಿತ್ತು" ಎಂದು ತಿಳಿಸಿದ್ದಾರೆ.


ಈ ಬಗ್ಗೆ ಮಾತನಾಡಿರುವ ವೆಬ್​ ಸೀರಿಸ್​ ನಿರ್ದೇಶಕ ರಾಜ್ ನಿಡ್ಮೊರು, "ದಿ ಫ್ಯಾಮಿಲಿ ಮ್ಯಾನ್ 2 ವೆಬ್​ ಸೀರಿಸ್​ಗೆ ಸಮಂತಾ ಅವರ ಆಯ್ಕೆ ಅತ್ಯಂತ ಅಪಾಯಕಾರಿ, ಅದರಲ್ಲೂ ಅವರ ಅಭಿಮಾನಿಗಳು ಅವರ ಕೆಲಸವನ್ನು ಎಷ್ಟು ಉತ್ಸಾಹದಿಂದ ಅನುಸರಿಸುತ್ತಾ ಎಂಬುದನ್ನು ನೋಡಿದರೆ. ‘ನಮ್ಮ ಸುಂದರ ಸಮಂತಾಗೆ ನೀವು ಏನು ಮಾಡಿದ್ದೀರಿ?’ ಎಂದು ಈಗಾಗಲೇ ಕೆಲವು ಕಾಮೆಂಟ್‌ಗಳು ಸದ್ದು ಮಾಡುತ್ತಿವೆ. ಅವರು ಇನ್ನೂ ಸುಂದರವಾಗಿದ್ದಾರೆ, ಆದರೆ ಈ ವೆಬ್​ ಸೀರಿಸ್​ನಲ್ಲಿ ವಿಭಿನ್ನ ಪಾತ್ರದಲ್ಲಿದ್ದಾರೆ" ಎಂದು ತಿಳಿಸಿದ್ದಾರೆ.


ಅಲ್ಲದೆ, "ತುಂಬಾ ಅಪಾಯಕಾರಿಯಾದಂತಹ ಪಾತ್ರವನ್ನು ಅವರು ಇಷ್ಟಪಟ್ಟು ಮಾಡಿದ್ದಾರೆ. ಸಮಂತಾ ಪಾತ್ರದಲ್ಲಿ ಜನ ನಿರೀಕ್ಷೆ ಮಾಡುವ ಎಲ್ಲಾ ಸಂಗತಿಗಳನ್ನು ನಾನು ಇಲ್ಲಿ ನೀಡಲಿದ್ದೇನೆ. ಸಂಪೂರ್ಣವಾಗಿ ವಿಭಿನ್ನವಾದ, ವ್ಯತಿರಿಕ್ತವಾದ ಪಾತ್ರವನ್ನು ಸ್ವೀಕರಿಸುತ್ತೇನೆ ಮತ್ತು ಅದರೊಂದಿಗೆ ನನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತೇನೆ" ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: Bird Flu: ವಿಶ್ವದಲ್ಲೇ ಮೊದಲ ಬಾರಿಗೆ ಚೀನಾದ ಮನುಷ್ಯನಲ್ಲಿ H10N3 ಹಕ್ಕಿ ಜ್ವರ ಪತ್ತೆ; ಏನಿದು ಹೊಸ ರೋಗ?


ದಿ ಫ್ಯಾಮಿಲಿ ಮ್ಯಾನ್ ಸೀಸನ್ 2 ರಲ್ಲಿ ತಮಿಳು ಜನರ ಚಿತ್ರಣ ಮತ್ತು ಅವರ ಸಂಸ್ಕೃತಿಯ ಕುರಿತಾದ ವಿವಾದವು ಸ್ಫೋಟಗೊಂಡ ನಂತರ, ರಾಜ್ ಮತ್ತು ಡಿಕೆ ಹೇಳಿಕೆಯನ್ನು ಬಿಡುಗಡೆ ಮಾಡಿದರು, "ಟ್ರೈಲರ್‌ನಲ್ಲಿ ಕೇವಲ ಒಂದೆರಡು ದೃಶ್ಯಗಳನ್ನು ಆಧರಿಸಿ ಕೆಲವು ಊ ಹೆಗಳು ಮತ್ತು ಅನಿಸಿಕೆಗಳನ್ನು ಹೇಳಲಾಗಿದೆ. ನಮ್ಮ ಅನೇಕ ಪ್ರಮುಖ ಪಾತ್ರವರ್ಗದ ಸದಸ್ಯರು, ಸೃಜನಶೀಲ ಮತ್ತು ಬರವಣಿಗೆಯ ತಂಡದ ಪ್ರಮುಖ ಸದಸ್ಯರು ತಮಿಳರು. ನಾವು ತಮಿಳು ಜನರ ಭಾವನೆಗಳನ್ನು ಮತ್ತು ತಮಿಳು ಸಂಸ್ಕೃತಿಯನ್ನು ಬಹಳವಾಗಿ ತಿಳಿದುಕೊಂಡಿದ್ದೇವೆ ಮತ್ತು ನಮ್ಮ ತಮಿಳು ಜನರ ಬಗ್ಗೆ ಅತ್ಯಂತ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದೇವೆ" ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ಅಶ್ಲೀಲ ಮಾರ್ಪ್​ ವಿಡಿಯೋ ಹರಿಬಿಟ್ಟ ಕಿಡಿಗೇಡಿಗಳು; ಸಾಮಾಜಿಕ ಜಾಲತಾಣದಲ್ಲಿ ಮಲಯಾಳಂ ನಟಿಯ ಅಳಲು!


ಮನೋಜ್ ಬಾಜಪೇಯಿ ಸಹ ಈ ಬಗ್ಗೆ ಮಾತನಾಡಿದ್ದು, "ಫ್ಯಾಮಿಲಿ ಮ್ಯಾನ್ ಸೀಸನ್ ಒಂದರಲ್ಲಿ ಸೃಜನಶೀಲವಾದ ಅದ್ಭುತ ಸೀರಿಸ್ ಅನ್ನು ರಚಿಸಲಾಗಿತ್ತು. ಆದರೂ, ಮೊದಲ ಸೀಸನ್ ಗೆಲುವು ಎರಡನೇ ಸೀಸನ್ ವೆಬ್ ಸೀರಿಸ್ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಆದರೂ, ಈ ಸೀರಿಸ್​ ಅನ್ನು ಉತ್ತಮವಾಗಿ ನಿರ್ಮಿಸಲಾಗಿದೆ" ಎಂದು ತಿಳಿಸಿದ್ದಾರೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

top videos
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು